ಸಿದ್ಧವಾಯ್ತು ವಿಶ್ವದ ಮೊದಲ ಕೊರೊನಾ ಲಸಿಕೆ, ಮಾನವನ ಮೇಲೆ ಪ್ರಯೋಗ ಯಶಸ್ವಿ

ದೆಹಲಿ: ಇಡೀ ವಿಶ್ವ ಕೊರೊನಾ ನರ್ತನಕ್ಕೆ ನಲುಗಿ ಹೋಗಿದೆ. ಎಷ್ಟೋ ಮಂದಿ ಮಹಾಮಾರಿಗೆ ಪ್ರಾಣ ಬಿಟ್ಟಿದ್ದಾರೆ. ಎಷ್ಟೋ ಜನರ ಜೀವನ ಬೀದಿಗೆ ಬಿದ್ದಿದೆ. ಇಂತಹ ಸಮಯದಲ್ಲಿ ಎಲ್ಲರಲ್ಲೂ ಉದ್ಭವಿಸುವ ಪ್ರಶ್ನೆ ಕೊರೊನಾಗೆ ಲಸಿಕೆ ಯಾವಾಗ ಕಂಡು ಹಿಡಿತಾರೆ ಎಂಬುವುದು. ಸದ್ಯ ಕೊರೊನಾ ವೈರಸ್​ಗೆ ವಿಶ್ವದ ಹಲವು ರಾಷ್ಟ್ರಗಳು ಔಷಧಿ ಕಂಡುಹಿಡಿಯಲು ಪ್ರಯತ್ನ ನಡೆಸುತ್ತಿವೆ ಈ ನಡುವೆ ರಷ್ಯಾದ ವಿಶ್ವವಿದ್ಯಾನಿಲಯದ ವಿಶ್ವದ ಮೊದಲ ಕೋವಿಡ್ ಲಸಿಕೆ ಪ್ರಯೋಗ ಯಶಸ್ವಿಯಾಗಿದೆ. ರಷ್ಯಾದ ಸೆಚೆನೋವ್ ವಿಶ್ವವಿದ್ಯಾಲಯ ಕೊರೊನಾ ಲಸಿಕೆಯನ್ನು ಅಭಿವೃದ್ಧಿಗೊಳಿಸಿದೆ. ಆ […]

ಸಿದ್ಧವಾಯ್ತು ವಿಶ್ವದ ಮೊದಲ ಕೊರೊನಾ ಲಸಿಕೆ, ಮಾನವನ ಮೇಲೆ ಪ್ರಯೋಗ ಯಶಸ್ವಿ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Jul 13, 2020 | 1:07 PM

ದೆಹಲಿ: ಇಡೀ ವಿಶ್ವ ಕೊರೊನಾ ನರ್ತನಕ್ಕೆ ನಲುಗಿ ಹೋಗಿದೆ. ಎಷ್ಟೋ ಮಂದಿ ಮಹಾಮಾರಿಗೆ ಪ್ರಾಣ ಬಿಟ್ಟಿದ್ದಾರೆ. ಎಷ್ಟೋ ಜನರ ಜೀವನ ಬೀದಿಗೆ ಬಿದ್ದಿದೆ. ಇಂತಹ ಸಮಯದಲ್ಲಿ ಎಲ್ಲರಲ್ಲೂ ಉದ್ಭವಿಸುವ ಪ್ರಶ್ನೆ ಕೊರೊನಾಗೆ ಲಸಿಕೆ ಯಾವಾಗ ಕಂಡು ಹಿಡಿತಾರೆ ಎಂಬುವುದು. ಸದ್ಯ ಕೊರೊನಾ ವೈರಸ್​ಗೆ ವಿಶ್ವದ ಹಲವು ರಾಷ್ಟ್ರಗಳು ಔಷಧಿ ಕಂಡುಹಿಡಿಯಲು ಪ್ರಯತ್ನ ನಡೆಸುತ್ತಿವೆ ಈ ನಡುವೆ ರಷ್ಯಾದ ವಿಶ್ವವಿದ್ಯಾನಿಲಯದ ವಿಶ್ವದ ಮೊದಲ ಕೋವಿಡ್ ಲಸಿಕೆ ಪ್ರಯೋಗ ಯಶಸ್ವಿಯಾಗಿದೆ.

ರಷ್ಯಾದ ಸೆಚೆನೋವ್ ವಿಶ್ವವಿದ್ಯಾಲಯ ಕೊರೊನಾ ಲಸಿಕೆಯನ್ನು ಅಭಿವೃದ್ಧಿಗೊಳಿಸಿದೆ. ಆ ಲಸಿಕೆಯನ್ನು ಮನುಷ್ಯನ ಮೇಲೆ ಕ್ಲಿನಿಕಲ್ ಪ್ರಯೋಗಗಳನ್ನು ಮಾಡಲಾಗಿತ್ತು. ಈಗ ಅದು ಯಶಸ್ವಿಯಾಗಿ ಪೂರ್ಣಗೊಂಡಿದೆ. ಜೂನ್ 18ರಂದು 18 ಮಂದಿಯ ಮೇಲೆ ಮೊದಲ ಹಂತದ ಪ್ರಯೋಗ ಮಾಡಲಾಗಿತ್ತು. ಜೂನ್ 23ರಂದು 20 ಸ್ವಯಂಸೇವಕರ ಮೇಲೆ ಎರಡನೇ ಹಂತದ ಪ್ರಯೋಗ ನಡೆದಿದೆ. ಸದ್ಯ ಎರಡು ಪ್ರಯೋಗಗಳು ಯಶಸ್ವಿಯಾಗಿದೆ ಎಂದು ರಷ್ಯಾದ ವಿಶ್ವವಿದ್ಯಾನಿಲಯ ತಿಳಿಸಿದೆ.

ಪ್ರಯೋಗಕ್ಕೆ ಒಳಪಟ್ಟ ಸ್ವಯಂಸೇವಕರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳಾಗಿಲ್ಲ.ಮೊದಲ ಹಂತದ ಸ್ವಯಂ ಸೇವಕರನ್ನು ಜುಲೈ 15 ಕ್ಕೆ ಬಿಡುಗಡೆ ಮಾಡಲಾಗುತ್ತೆ. 2ನೇ ಹಂತದ ಸ್ವಯಂಸೇವಕರು ಜುಲೈ‌20ಕ್ಕೆ ಬಿಡುಗಡೆಯಾಗುತ್ತಾರೆ.

ಇದು ನಿಜವಾದ್ರೆ ಇದು ಕೊರೊನಾ ವೈರಸ್‌ಗೆ ಮೊದಲ ಲಸಿಕೆಯಾಗಲಿದೆ. ಜೊತೆಗೆ ಜನರನ್ನು ಹಿಂಡಿ ಹಿಪ್ಪೆ ಮಾಡಿರುವ ಕಿಲ್ಲರ್ ಕೊರೊನಾಗೆ ಆದಷ್ಟು ಬೇಗ ಮುಕ್ತಿ ಸಿಗಲಿದೆ. ಆದ್ರೆ ವಿಶ್ವದಲ್ಲಿ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೊರೊನಾಗೆ ಲಸಿಕೆಗಳನ್ನು ತಯಾರಿಸುವಲ್ಲಿ ನಿರಂತರವಾಗಿ ಪ್ರಯತ್ನ ಪಡುತ್ತಿದ್ದಾವೆ. ಪ್ರಾಯೋಗಿಕ ಹಂತದಲ್ಲಿ ಅನೇಕ ಪ್ರಯೋಗಗಳು ವಿಫಲವಾಗಿವೆ, ಆದರೆ ರಷ್ಯಾ ತನ್ನ ಮೊದಲ ಲಸಿಕೆ ಪ್ರಯೋಗ ಯಶಸ್ವಿಗೊಳಿಸಿದೆ. ಇದು ಇದೇ ರೀತಿ ಸಾಗಿದರೆ ಕೊರೊನಾವನ್ನು ಹಿಮ್ಮೆಟ್ಟಿಸುವ ಅಸ್ತ್ರ ಕೈ ಸೇರಲಿದೆ.

Published On - 10:06 am, Mon, 13 July 20