AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಸಂಸ್ಥೆ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ: ಹೊಸ ಜಾಗತಿಕ ನಕ್ಷೆ ಅಂಗೀಕಾರವಾಗುತ್ತಿದ್ದಂತೆ ಕೆಂಡವಾದ ಅಮೆರಿಕ

ವಿಶ್ವಸಂಸ್ಥೆ ಹೊಸ 'ಈಕ್ವಲ್ ಅರ್ಥ್' ಭೂಪಟವನ್ನು ಅಂಗೀಕರಿಸಿದ್ದು, 16ನೇ ಶತಮಾನದ ಮರ್ಕೇಟರ್ ನಕ್ಷೆಯನ್ನು ಬದಲಿಸಿದೆ. ಇದು ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ಖಂಡಗಳ ನೈಜ ವಿಸ್ತೀರ್ಣವನ್ನು ನಿಖರವಾಗಿ ಬಿಂಬಿಸುತ್ತದೆ. ಅಮೆರಿಕ ಈ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ವಿಶ್ವಸಂಸ್ಥೆ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ ಎಂದಿದೆ. ಆದರೂ, 164 ರಾಷ್ಟ್ರಗಳು ಬೆಂಬಲಿಸಿದ್ದು, ಶೈಕ್ಷಣಿಕ ಪಠ್ಯಗಳಲ್ಲಿ ಇದರ ಬಳಕೆಗೆ ಶಿಫಾರಸು ಮಾಡಲಾಗಿದೆ.

ವಿಶ್ವಸಂಸ್ಥೆ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ: ಹೊಸ ಜಾಗತಿಕ ನಕ್ಷೆ ಅಂಗೀಕಾರವಾಗುತ್ತಿದ್ದಂತೆ ಕೆಂಡವಾದ ಅಮೆರಿಕ
ನಕ್ಷೆImage Credit source: NDTV
ನಯನಾ ರಾಜೀವ್
|

Updated on: Sep 05, 2026 | 9:39 AM

Share

ನ್ಯೂಯಾರ್ಕ್, ಸೆಪ್ಟೆಂಬರ್ 05: ಉತ್ತರ ಅಮೆರಿಕ ಮತ್ತು ಯುರೋಪ್ ಭಾಗಗಳನ್ನು ಸಂಕುಚಿತಗೊಳಿಸಿ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕ ಖಂಡಗಳ ನೈಜ ವಿಸ್ತೀರ್ಣವನ್ನು ನಿಖರವಾಗಿ ಬಿಂಬಿಸುವ ನೂತನ ‘ಈಕ್ವಲ್ ಅರ್ಥ್’ ವಿಶ್ವ ಭೂಪಟವನ್ನು ಅಳವಡಿಸಿಕೊಳ್ಳಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಐತಿಹಾಸಿಕ ನಿರ್ಣಯ ಅಂಗೀಕರಿಸಿದೆ. 16ನೇ ಶತಮಾನದ ಸಾಂಪ್ರದಾಯಿಕ ಮರ್ಕೇಟರ್ ನಕ್ಷೆಯನ್ನು ಬದಲಿಸುವ ಈ ನಿರ್ಣಯಕ್ಕೆ ಬರೋಬ್ಬರಿ 164 ರಾಷ್ಟ್ರಗಳು ಬೆಂಬಲ ಸೂಚಿಸಿದ್ದರೆ, ವಿಶ್ವಸಂಸ್ಥೆಯು ಇಂತಹ ವಿಷಯಗಳ ಮೇಲೆ ಗಮನಹರಿಸಿ ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ ಎಂದು ಅಮೆರಿಕ ತೀವ್ರ ಆಕ್ರೋಶ ವ್ಯಕ್ತಪಡಿಸಿ ವಿರೋಧಿಸಿದೆ.

ಪಶ್ಚಿಮ ಆಫ್ರಿಕಾದ ಟೋಗೋ ದೇಶವು ಮಂಡಿಸಿ, ಫ್ರಾನ್ಸ್ ಸಹ-ಪ್ರಾಯೋಜಿಸಿದ ಈ ನಿರ್ಣಯಕ್ಕೆ 164 ದೇಶಗಳು ಬೆಂಬಲ ನೀಡಿದವು. ಅಮೆರಿಕ ವಿರೋಧಿಸಿ ಮತ ಚಲಾಯಿಸಿದರೆ, ಇತರ 6 ರಾಷ್ಟ್ರಗಳು ಮತದಾನದಿಂದ ದೂರ ಉಳಿದವು.

ವಿಶ್ವಸಂಸ್ಥೆ ವಿರುದ್ಧ ಅಮೆರಿಕ ಚಾಟಿ: ಅಮೆರಿಕದ ಪ್ರತಿನಿಧಿ ಯಾರಿನಾ ಫೆರೆನ್ಸ್ವಿಚ್ ಈ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದು, ವಿಶ್ವವು ಜ್ವಲಂತ ಸಮಸ್ಯೆಗಳಿಂದ ಬಳಲುತ್ತಿರುವಾಗ, ವಿಶ್ವಸಂಸ್ಥೆಯು 16ನೇ ಶತಮಾನದ ನಕ್ಷೆಯ ಯೋಜನೆಗಳ ಬಗ್ಗೆ ಚರ್ಚಿಸುತ್ತಾ ತನ್ನ ನೈಜ ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮರ್ಕೇಟರ್‌ನ ದೋಷವೇನಿತ್ತು?: 1569 ರಲ್ಲಿ ನಾವಿಕ ಗೆರಾರ್ಡಸ್ ಮರ್ಕೇಟರ್ ಸಮುದ್ರಯಾನಕ್ಕಾಗಿ ರೂಪಿಸಿದ್ದ ನಕ್ಷೆಯಲ್ಲಿ, ಗೋಳಾಕಾರದ ಭೂಮಿಯನ್ನು ಸಮತಟ್ಟಾಗಿ ತೋರಿಸುವಾಗ ಸಮಭಾಜಕ ವೃತ್ತದ ಭಾಗಗಳು (ಆಫ್ರಿಕಾ, ದಕ್ಷಿಣ ಅಮೆರಿಕ) ಕುಗ್ಗಿ, ಉತ್ತರ ಗೋಳಾರ್ಧದ ಯುರೋಪ್, ಅಮೆರಿಕ, ರಷ್ಯಾ ಮತ್ತು ಗ್ರೀನ್‌ಲ್ಯಾಂಡ್ ಅತಿ ದೊಡ್ಡದಾಗಿ ಕಾಣುತ್ತಿದ್ದವು. ಉದಾಹರಣೆಗೆ, ವಾಸ್ತವದಲ್ಲಿ ಆಫ್ರಿಕಾಕ್ಕಿಂತ 14 ಪಟ್ಟು ಚಿಕ್ಕದಾಗಿರುವ ಗ್ರೀನ್‌ಲ್ಯಾಂಡ್, ನಕ್ಷೆಯಲ್ಲಿ ಆಫ್ರಿಕಾದಷ್ಟೇ ವಿಸ್ತಾರವಾಗಿ ಗೋಚರಿಸುತ್ತಿತ್ತು.

ಮತ್ತಷ್ಟು ಓದಿ: 2027 ರವರೆಗೆ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಪಡೆಗಳ ಬೀಡು: ಇರಾನ್ ವಿರುದ್ಧ ಕಠಿಣ ಯುದ್ಧ ವಿಸ್ತರಣೆಗೆ ಮುಂದಾದ ಟ್ರಂಪ್ ಆಡಳಿತ

ಈಕ್ವಲ್ ಅರ್ಥ್ ನಕ್ಷೆಯ ಹಿರಿಮೆ: 2018 ರಲ್ಲಿ ನಕ್ಷೆಶಾಸ್ತ್ರಜ್ಞ ಬೋಜನ್ ಸಾವ್ರಿಕ್ ಮತ್ತು ತಂಡವು ವಿನ್ಯಾಸಗೊಳಿಸಿದ ‘ಈಕ್ವಲ್ ಅರ್ಥ್ ಪ್ರೊಜೆಕ್ಷನ್’, ಪ್ರತಿಯೊಂದು ಖಂಡದ ನೈಜ ವಿಸ್ತೀರ್ಣವನ್ನು ಯಾವುದೇ ಅತಿಶಯೋಕ್ತಿಯಿಲ್ಲದೆ ನಿಖರವಾಗಿ ತೋರಿಸುತ್ತದೆ. ಇದರಲ್ಲಿ ಆಫ್ರಿಕಾ, ಭಾರತ ಸೇರಿದಂತೆ ದಕ್ಷಿಣ ಏಷ್ಯಾ ಹಾಗೂ ಲ್ಯಾಟಿನ್ ಅಮೆರಿಕ ತಮ್ಮ ನೈಜ ವಿಸ್ತಾರವನ್ನು ಮರಳಿ ಪಡೆದಿವೆ.

ವಿಡಿಯೋ

ಫ್ರಾನ್ಸ್‌ನ ನಯವಾದ ತಂತ್ರ: ಈ ನಿರ್ಣಯಕ್ಕೆ ಪ್ರಮುಖ ಬೆಂಬಲ ನೀಡಿದ ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ನೋಯೆಲ್ ಬ್ಯಾರಟ್, ಮರ್ಕೇಟರ್ ನಕ್ಷೆಯನ್ನು ಸಂಪೂರ್ಣವಾಗಿ ಕೈಬಿಡುವುದಾಗಿ ಘೋಷಿಸಿದ್ದಾರೆ. ಆಫ್ರಿಕಾದ ತನ್ನ ಹಿಂದಿನ ವಸಾಹತುಶಾಹಿ ರಾಷ್ಟ್ರಗಳೊಂದಿಗೆ ಮುರಿದುಬಿದ್ದ ರಾಜತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪಿಸಲು ಮತ್ತು ಆಫ್ರಿಕನ್ ಒಕ್ಕೂಟದ ವಿಶ್ವಾಸ ಗಳಿಸಲು ಫ್ರಾನ್ಸ್ ಈ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ.

ಶೈಕ್ಷಣಿಕ ಪಠ್ಯಗಳಲ್ಲಿ ಬದಲಾವಣೆ: ವಿಶ್ವಸಂಸ್ಥೆಯ ಅಂಗಸಂಸ್ಥೆಗಳು, ಯುನೈಟೆಡ್ ನೇಷನ್ಸ್ ಕಚೇರಿಗಳು ಹಾಗೂ ಜಾಗತಿಕ ಶೈಕ್ಷಣಿಕ ಪಠ್ಯಪುಸ್ತಕಗಳಲ್ಲಿ ಇನ್ನುಮುಂದೆ ಈ ನೂತನ ‘ಈಕ್ವಲ್ ಅರ್ಥ್’ ನಕ್ಷೆಯನ್ನು ಪ್ರಮಾಣಿತ ಭೂಪಟವನ್ನಾಗಿ ಬಳಸುವಂತೆ ಜಾಗತಿಕ ಸಮುದಾಯಕ್ಕೆ ಕರೆ ನೀಡಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ
ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ