AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಭ್ರಮದ ಮದುವೆ ಮನೆಯಲ್ಲಿ ಅಮೆರಿಕ ಬಾಂಬ್ ದಾಳಿ, ಚೆಲ್ಲಾಪಿಲ್ಲಿಯಾಗಿ ಬಿದ್ದ ಮಕ್ಕಳ ಮೃತದೇಹಗಳು

ದಕ್ಷಿಣ ಇರಾನ್‌ನ ಕುಹೆಸ್ತಾಕ್‌ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದ ಮೇಲೆ ಅಮೆರಿಕ ಸೇನೆ ನಡೆಸಿದ ವೈಮಾನಿಕ ದಾಳಿಯು ಅಪಾರ ಸಾವು-ನೋವುಗಳನ್ನುಂಟು ಮಾಡಿದೆ. ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದೂರಸಂಪರ್ಕ ಗೋಪುರವನ್ನು ಗುರಿಯಾಗಿಸಿಕೊಂಡಿದ್ದ ದಾಳಿ ಮದುವೆ ಮನೆಗೆ ಅಪ್ಪಳಿಸಿದೆ. ಅಮೆರಿಕದ ಶಸ್ತ್ರಾಸ್ತ್ರಗಳೇ ಇದಕ್ಕೆ ಕಾರಣವೆಂದು ತಜ್ಞರು ದೃಢಪಡಿಸಿದ್ದು, ಸ್ಥಳೀಯರಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದೆ.

ಸಂಭ್ರಮದ ಮದುವೆ ಮನೆಯಲ್ಲಿ ಅಮೆರಿಕ ಬಾಂಬ್ ದಾಳಿ, ಚೆಲ್ಲಾಪಿಲ್ಲಿಯಾಗಿ ಬಿದ್ದ ಮಕ್ಕಳ ಮೃತದೇಹಗಳು
ಅಮೆರಿಕ ದಾಳಿImage Credit source: India Today
ನಯನಾ ರಾಜೀವ್
|

Updated on: Sep 05, 2026 | 11:42 AM

Share

ಟೆಹ್ರಾನ್, ಸೆಪ್ಟೆಂಬರ್ 05: ದಕ್ಷಿಣ ಇರಾನ್‌ನ ಸಣ್ಣ ಕರಾವಳಿ ಪಟ್ಟಣ ಕುಹೆಸ್ತಾಕ್‌ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದ ಮೇಲೆ ಅಮೆರಿಕ ಸೇನೆ ನಡೆಸಿದ ವೈಮಾನಿಕ ದಾಳಿಯು ಅಪಾರ ಸಾವು-ನೋವಿಗೆ ಕಾರಣವಾಗಿದೆ. ದೂರಸಂಪರ್ಕ ಗೋಪುರವನ್ನು ಗುರಿಯಾಗಿಸಿಕೊಂಡಿದ್ದ ಕ್ಷಿಪಣಿ ಮತ್ತು ಡ್ರೋನ್‌ಗಳು ಸಮೀಪದ ನಿವಾಸದ ಮೇಲೆ ಅಪ್ಪಳಿಸಿದ ಪರಿಣಾಮ, ಮಗು ಸೇರಿದಂತೆ ಕನಿಷ್ಠ ಐದು ಮಂದಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಂಭ್ರಮದಿಂದ ಕಂಗೊಳಿಸಬೇಕಿದ್ದ ಮದುವೆ ಮನೆ ಕ್ಷಣಾರ್ಧದಲ್ಲಿ ಹೆಣಗಳ ರಾಶಿ ಮತ್ತು ರಕ್ತಸಿಕ್ತ ಅವಶೇಷಗಳ ತಾಣವಾಗಿ ಮಾರ್ಪಟ್ಟಿದೆ.

ವಧು-ವರರು ಬರುವ ಮುನ್ನವೇ ಬಿದ್ದ ಬಾಂಬ್: ಸಮಾರಂಭ ಆರಂಭವಾಗುವ ಮುನ್ನವೇ ಮಹಿಳೆಯರು ಮತ್ತು ಮಕ್ಕಳು ಆವರಣದಲ್ಲಿ ಜಮಾಯಿಸಿದ್ದರು. ಮೊದಲು ಹತ್ತಿರದ ಟೆಲಿಕಾಂ ಟವರ್ ಮೇಲೆ ಕ್ಷಿಪಣಿ ಬಿದ್ದ ಬೆನ್ನಲ್ಲೇ, ಸತತ ಎರಡು ಡ್ರೋನ್‌ಗಳು ಮದುವೆ ಮನೆಗೆ ನುಗ್ಗಿದವು ಎಂದು ಸ್ಥಳೀಯ ನಿವಾಸಿ ಸುಲೇಮಾನ್ ಜಕಿರಿ ವಿವರಿಸಿದ್ದಾರೆ.

ಸ್ಥಳೀಯ ಮಾರಾಟಗಾರ ಸಸಾನ್ ಜರೈ ಮಾತನಾಡಿ, ಅವಶೇಷಗಳಡಿ ಸಿಲುಕಿದವರಲ್ಲಿ ಹೆಚ್ಚಿನವರು ಪುಟ್ಟ ಮಕ್ಕಳು. ಆವರಣದ ತುಂಬಾ ಮಕ್ಕಳ ಶೂಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಮಿಲಿಟರಿ ತಾಣವಲ್ಲ:ಇದು ಯಾವುದೇ ಸೇನಾ ನೆಲೆಯಲ್ಲ, ಮುಗ್ಧ ಜನರ ಮನೆ. ಇರಾನ್ ಕ್ಷಿಪಣಿಗಳ ಭಯದಿಂದ ಹತಾಶೆಗೊಂಡ ಅಮೆರಿಕ ಈ ಅಮಾಯಕರನ್ನು ಬಲಿಪಡೆದಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಮತ್ತಷ್ಟು ಓದಿ: ಇರಾನ್‌ ಜೊತೆ ಮಾತುಕತೆ ಓಕೆ, ವ್ಯಾಪಾರ ಒಪ್ಪಂದಕ್ಕೆ ಕೈಹಾಕಬೇಡಿ: ಭಾರತಕ್ಕೆ ನಯವಾಗಿಯೇ ಎಚ್ಚರಿಕೆ ರವಾನಿಸಿದ ಅಮೆರಿಕ

ಅಮೆರಿಕದ ಶಸ್ತ್ರಾಸ್ತ್ರ ದೃಢ: ರಾಯಿಟರ್ಸ್ ನಡೆಸಿದ ವಿಶ್ಲೇಷಣೆಯಲ್ಲಿ, ಘಟನಾ ಸ್ಥಳದ ಫೋಟೋಗಳನ್ನು ಪರಿಶೀಲಿಸಿದ ನಾಲ್ವರು ಶಸ್ತ್ರಾಸ್ತ್ರ ತಜ್ಞರ ಪೈಕಿ ಮೂವರು ಇದು ಅಮೆರಿಕ ಸೇನೆಗೆ ಸೇರಿದ ಬಾಂಬ್ ತುಣುಕುಗಳೇ ಆಗಿವೆ ಎಂದು ಖಚಿತಪಡಿಸಿದ್ದಾರೆ. ಟೆಲಿಕಾಂ ಟವರ್‌ನಿಂದ ಕೇವಲ 135 ಮೀಟರ್ ದೂರದಲ್ಲಿದ್ದ ಮನೆಯ ಮೇಲೆ ಗುರಿ ತಪ್ಪಿ ಈ ಬಾಂಬ್ ಬಿದ್ದಿರುವ ಸಾಧ್ಯತೆಯಿದೆ.

ಜೆಡಿ ವ್ಯಾನ್ಸ್ ಹೇಳಿಕೆ: ಈ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಅಮೆರಿಕ ಉದ್ದೇಶಪೂರ್ವಕವಾಗಿ ನಾಗರಿಕರನ್ನು ಗುರಿಯಾಗಿಸುವುದಿಲ್ಲ. ಆದರೆ ಯುದ್ಧ ನಡೆಯುವಾಗ ಕೆಲವೊಮ್ಮೆ ಇಂತಹ ಅನಿರೀಕ್ಷಿತ ಘಟನೆಗಳು ನಡೆದುಹೋಗುತ್ತವೆ. ಈ ಬಗ್ಗೆ ವಾಷಿಂಗ್ಟನ್ ಆಂತರಿಕ ತನಿಖೆ ನಡೆಸುತ್ತಿದೆ ಎಂದಿದ್ದಾರೆ.

ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು: ಕುಹೆಸ್ತಾಕ್ ಪಟ್ಟಣವು ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಗೆ ಅತ್ಯಂತ ಸಮೀಪದಲ್ಲಿದೆ. ಕದನ ವಿರಾಮ ಮುರಿದುಬಿದ್ದ ನಂತರ, ಅಮೆರಿಕವು ಇರಾನ್‌ನ ರೇಡಾರ್ ಮತ್ತು ಸಂವಹನ ಕೇಂದ್ರಗಳನ್ನು ನಾಶಮಾಡಲು ದಿನಂಪ್ರತಿ ಬಾಂಬ್ ದಾಳಿ ನಡೆಸುತ್ತಿದೆ.

ಮಿನಾಬ್ ಶಾಲಾ ದುರಂತದ ನೆನಪು: ಇದೇ ವರ್ಷ ಫೆಬ್ರವರಿಯಲ್ಲಿ ಕುಹೆಸ್ತಾಕ್‌ನಿಂದ 30 ಕಿ.ಮೀ ದೂರದ ಮಿನಾಬ್ ಎಂಬಲ್ಲಿ ಅಮೆರಿಕ ನಡೆಸಿದ ಕ್ಷಿಪಣಿ ದಾಳಿಗೆ ಪ್ರಾಥಮಿಕ ಶಾಲೆಯೊಂದು ಧ್ವಂಸಗೊಂಡು 175ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಆ ಕರಾಳ ನೆನಪು ಮಾಸುವ ಮುನ್ನವೇ ಮತ್ತೊಂದು ನಾಗರಿಕ ಹತ್ಯಾಕಾಂಡ ನಡೆದಿರುವುದು ಇರಾನ್ ಜನತೆಯನ್ನು ತೀವ್ರ ರೊಚ್ಚಿಗೆಬ್ಬಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ
ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ
ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ನನ್ನ 1 ವರ್ಷದ ಸಂಬಳ ಕೊಡ್ತೇನೆ
ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ನನ್ನ 1 ವರ್ಷದ ಸಂಬಳ ಕೊಡ್ತೇನೆ