AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಸ್ಟೇಟ್ ಆಫ್​ ದಿ ಯೂನಿಯನ್ ಎಂದರೇನು? ಟ್ರಂಪ್ ಭಾಷಣದಲ್ಲಿ ಉಲ್ಲೇಖ ಮಾಡಿದ್ದೇನೇನು?

ಅಮೆರಿಕದ ಸ್ಟೇಟ್ ಆಫ್ ದಿ ಯೂನಿಯನ್ ಎಂದರೆ ಅಧ್ಯಕ್ಷರು ದೇಶದ ಪ್ರಸ್ತುತ ಸ್ಥಿತಿ, ಸಾಧನೆಗಳು ಮತ್ತು ಭವಿಷ್ಯದ ಯೋಜನೆಗಳನ್ನು ಕಾಂಗ್ರೆಸ್ ಮುಂದೆ ಮಂಡಿಸುವ ವಾರ್ಷಿಕ ಭಾಷಣ. ಸಂವಿಧಾನಬದ್ಧ ಈ ಭಾಷಣದಲ್ಲಿ ಆರ್ಥಿಕತೆ, ಭದ್ರತೆ ಮುಖ್ಯ ವಿಷಯಗಳಾಗಿವೆ. ಡೊನಾಲ್ಡ್ ಟ್ರಂಪ್ ತಮ್ಮ ಭಾಷಣದಲ್ಲಿ ಆರ್ಥಿಕ ಪುನರುಜ್ಜೀವನ, ಗಡಿಭದ್ರತೆ ಮತ್ತು ಅಮೆರಿಕದ ಶಕ್ತಿಯನ್ನು ಹೆಚ್ಚಿಸುವ ಕುರಿತು ಮಾತನಾಡಿದ್ದರು. ಇದು ಅಧ್ಯಕ್ಷರು ತಮ್ಮ ನೀತಿಗಳನ್ನು ಸಮರ್ಥಿಸಿಕೊಳ್ಳುವ ಪ್ರಮುಖ ವೇದಿಕೆಯಾಗಿದೆ.

ಅಮೆರಿಕದ ಸ್ಟೇಟ್ ಆಫ್​ ದಿ ಯೂನಿಯನ್ ಎಂದರೇನು? ಟ್ರಂಪ್ ಭಾಷಣದಲ್ಲಿ ಉಲ್ಲೇಖ ಮಾಡಿದ್ದೇನೇನು?
ಡೊನಾಲ್ಡ್​ ಟ್ರಂಪ್
ನಯನಾ ರಾಜೀವ್
|

Updated on: Feb 25, 2026 | 11:33 AM

Share

ವಾಷಿಂಗ್ಟನ್, ಫೆಬ್ರವರಿ 25: ಅಮೆರಿಕದ ಸ್ಟೇಟ್ ಆಫ್ ದಿ ಯೂನಿಯನ್ ಎಂದರೆ ಅಮೆರಿಕದ ಅಧ್ಯಕ್ಷರು ಪ್ರತಿ ವರ್ಷ ಕಾಂಗ್ರೆಸ್ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಮಾಡುವ ಭಾಷಣವಾಗಿದೆ. ಈ ಭಾಷಣದಲ್ಲಿ ದೇಶದ ಪ್ರಸ್ತುತ ಸ್ಥಿತಿ, ಸಾಧನೆಗಳು, ಪ್ರಮುಖ ಸಮಸ್ಯೆಗಳು ಹಾಗೂ ಮುಂದಿನ ವರ್ಷದ ಯೋಜನೆಗಳು ಹಾಗೂ ನೀತಿಗಳನ್ನು ವಿವರಿಸಲಾಗುತ್ತದೆ. ಈ ಬಾರಿ ಡೊನಾಲ್ಡ್​ ಟ್ರಂಪ್(Donald Trump) ಭಾಷಣ ಮಾಡಿದ್ದಾರೆ.

ದೇಶದ ಸ್ಥಿತಿಯನ್ನು ತಿಳಿಸುವುದು ಮತ್ತು ಸರ್ಕಾರದ ಭವಿಷ್ಯದ ಕಾರ್ಯಸೂಚಿಯನ್ನು ರೂಪಿಸುವುದು ಇದರ ಉದ್ದೇಶವಾಗಿದೆ. ಅಮೆರಿಕದ ಸಂವಿಧಾನದ ಅಧ್ಯಕ್ಷರು ಕಾಲಕಾಲಕ್ಕೆ ಕಾಂಗ್ರೆಸ್‌ಗೆ ರಾಷ್ಟ್ರದ ಸ್ಥಿತಿಯ ಬಗ್ಗೆ ಮಾಹಿತಿ ನೀಡಬೇಕು.

ಆರ್ಥಿಕತೆ, ಆರೋಗ್ಯ, ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತೆಯಂತಹ ಪ್ರಮುಖ ವಿಷಯಗಳನ್ನು ಇದರಲ್ಲಿ ಚರ್ಚಿಸಲಾಗುತ್ತದೆ.ಇದು ಅಧ್ಯಕ್ಷರು ತಮ್ಮ ನೀತಿಗಳನ್ನು ಸಮರ್ಥಿಸಿಕೊಳ್ಳಲು ಮತ್ತು ಸಾರ್ವಜನಿಕರೊಂದಿಗೆ ನೇರವಾಗಿ ಸಂವಹನ ನಡೆಸಲು ಒಂದು ಪ್ರಮುಖ ವೇದಿಕೆಯಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ಅಮೆರಿಕದ ಅಧ್ಯಕ್ಷರು ದೇಶದ ಸ್ಥಿತಿಗತಿ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಮಂಡಿಸುವ ಪ್ರಮುಖ ಭಾಷಣವಾಗಿದೆ.

ಮತ್ತಷ್ಟು ಓದಿ: ಭಾರತ-ಪಾಕಿಸ್ತಾನ ಯುದ್ಧ ನಾನು ನಿಲ್ಲಿಸದಿದ್ದರೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಾಯ್ತಿದ್ರು ಎಂದ ಟ್ರಂಪ್

ಡೊನಾಲ್ಡ್​ ಟ್ರಂಪ್ ಮಂಗಳವಾರ ಸ್ಟೇಟ್ ಆಫ್ ದಿ ಯೂನಿಯನ್​ನಲ್ಲಿ ಮಾತನಾಡಿದ್ದಾರೆ. ತಮ್ಮ ಭಾಷಣದಲ್ಲಿ, ಡೊನಾಲ್ಡ್ ಟ್ರಂಪ್ ಅವರು ಅಧಿಕಾರದಲ್ಲಿದ್ದ ಮೊದಲ ವರ್ಷದ ಬಗ್ಗೆ ಪ್ರಸ್ತಾಪಿಸಿದರು. ಆ ಅವಧಿಯಲ್ಲಿ ಆರ್ಥಿಕ ಪುನರುಜ್ಜೀವನ, ಗಡಿಭದ್ರತೆಯನ್ನು ಕಠಿಣಗೊಳಿಸುವುದು ಮತ್ತು ಅಮೆರಿಕವನ್ನು ಮಹಾಶಕ್ತಿಯಾಗಿ ಇನ್ನಷ್ಟು ದೃಢವಾಗಿ ಸ್ಥಾಪಿಸುವುದು ಮುಖ್ಯ ಆದ್ಯತೆಗಳಾಗಿದ್ದವು ಎಂದು ಹೇಳಿದರು. ಇತ್ತೀಚೆಗೆ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಅಮೆರಿಕದ ಐಸ್ ಹಾಕಿ ತಂಡವನ್ನೂ ಅವರು ಆಹ್ವಾನಿಸಿದ್ದರು.

ಮೊದಲಿಗಿಂತ ಶ್ರೀಮಂತ ಮತ್ತು ಬಲಿಷ್ಠವಾಗಿದೆ, ಎಂದು ಅವರು ಹೇಳಿದರು. ಜುಲೈ 4ರಂದು ಅಮೆರಿಕದ ಸ್ವಾತಂತ್ರ್ಯದ 250 ವರ್ಷಾಚರಣೆಯನ್ನು ದೇಶ ಆಚರಿಸಲಿದೆ ಎಂದು ತಿಳಿಸಿದರು. ಕಳೆದ 12 ತಿಂಗಳಲ್ಲಿ ಜಗತ್ತಿನ ವಿವಿಧ ಭಾಗಗಳಿಂದ 18 ಟ್ರಿಲಿಯನ್ ಡಾಲರ್ ಹೂಡಿಕೆ ಅಮೆರಿಕಕ್ಕೆ ಬಂದಿದೆ ಎಂದರು. ವೆನೆಜುವೆಲಾದಿಂದ 80 ಮಿಲಿಯನ್ ಡಾಲರ್ ಮೌಲ್ಯದ ತೈಲವನ್ನು ಪಡೆದಿದ್ದೇವೆ, ಡ್ರಿಲ್ ಬೇಬಿ ಡ್ರಿಲ್ ಎಂಬ ನನ್ನ ವಾಗ್ದಾನವನ್ನು ನೆರವೇರಿಸಿದ್ದೇನೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us