ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್ ಇಂಟರ್ನೆಟ್) ಸಂಸ್ಥೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿ.
‘ಧುರಂಧರ್’ ಬಗ್ಗೆ ಮೌನ, ಆದ್ರೆ ಆಲಿಯಾ ಸಿನಿಮಾಗೆ ಹೊಗಳಿಕೆ: ಟ್ರೋಲ್ ಆದ ಶಾರುಖ್ ಖಾನ್
‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಗೆದ್ದಾಗ ಶಾರುಖ್ ಖಾನ್ ಮೌನ ತಾಳಿದ್ದರು. ಆದರೆ ಈಗ ‘ಆಲ್ಫಾ’ ಸಿನಿಮಾದ ಟೀಸರ್ ನೋಡಿ ಹೊಗಳಿದ್ದಾರೆ. ಅವರ ಈ ನಡೆ ಕಂಡು ಕೆಲವು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ‘ಧುರಂದರ್ ಯಶಸ್ಸಿನ ಬಗ್ಗೆ ನಿಮಗೆ ಅಸೂಯೆ ಇದೆಯೇ’ ಎಂದು ಅನೇಕರು ಪ್ರಶ್ನಿಸಿದ್ದಾರೆ.
- Madan Kumar
- Updated on: Jun 10, 2026
- 10:32 pm
Dude 2: ಬರಲಿದೆ ‘ಡ್ಯೂಡ್ 2’ ಸಿನಿಮಾ; ಕಥೆ ಮೆಚ್ಚಿದ ನಟ ಪ್ರದೀಪ್ ರಂಗನಾಥನ್
ಬ್ಲಾಕ್ ಬಸ್ಟರ್ ಹಿಟ್ ಆದ ‘ಡ್ಯೂಡ್’ ಸಿನಿಮಾಗೆ ಸೀಕ್ವೆಲ್ ಮಾಡುವ ಬಗ್ಗೆ ನಿರ್ದೇಶಕ ಕೀರ್ತೀಶ್ವರನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಪ್ರದೀಪ್ ರಂಗನಾಥನ್ ಅವರ ಅಭಿಮಾನಿಗಳಿಗೆ ಈ ಸುದ್ದಿ ಕೇಳಿ ಸಂತಸ ಆಗಿದೆ. ಸದ್ಯಕ್ಕೆ ನಿರ್ದೇಶಕರಿಗೆ ಕಥೆಯ ಐಡಿಯಾ ಬಂದಿದ್ದು, ಪ್ರದೀಪ್ ಜೊತೆ ಅವರು ಚರ್ಚೆ ನಡೆಸಿದ್ದಾರೆ.
- Madan Kumar
- Updated on: Jun 10, 2026
- 9:35 pm
ಉಜ್ಜಿನಿಯಲ್ಲಿ ನೈಜ ದೃಶ್ಯಗಳನ್ನು ಸೆರೆ ಹಿಡಿದ ‘ಊರಬ್ಬ’ ಸಿನಿಮಾ; ಟ್ರೇಲರ್ ನೋಡಿ
‘ಊರಬ್ಬ’ ಸಿನಿಮಾದಲ್ಲಿ ನರೇಶ್ ಗೌಡ, ತನಿಷಾ ಕುಪ್ಪಂಡ, ದೊಡ್ಡಣ್ಣ, ಮಿಮಿಕ್ರಿ ಗೋಪಿ, ಬಿರಾದಾರ್, ಸಿದ್ದು ಮೂಲಿಮನಿ, ಮಿತ್ರ, ಪಾಯಲ್ ಚಂಗಪ್ಪ, ಡಾ. ನಂಜಪ್ಪ, ಅರವಿಂದ್ ರಾವ್ ಮುಂತಾದವರು ನಟಿಸಿದ್ದಾರೆ. ಅಕ್ಷಯ್ ಎಸ್. ರಿಷಭ್ ಸಂಗೀತ ನೀಡಿದ್ದಾರೆ. ಆರ್.ಡಿ. ರವಿ ಅವರು ಸಂಕಲನ ಮಾಡಿದ್ದಾರೆ.
- Madan Kumar
- Updated on: Jun 10, 2026
- 8:49 pm
370 ರೂ. ಬಿರಿಯಾನಿ ವಿವಾದ: ಇನ್‌ಸ್ಟಾಗ್ರಾಮ್ ಖಾತೆ ಡಿಆಕ್ಟಿವೇಟ್ ಮಾಡಿದ ಪ್ರಣಿತ್ ಮೋರೆ
ಆಗಿರುವ ತಪ್ಪಿಗೆ ಈಗಾಗಲೇ ಪ್ರಣಿತ್ ಮೋರೆ ಕ್ಷಮೆ ಕೇಳಿದ್ದಾರೆ. ಹಾಗಿದ್ದರೂ ಕೂಡ ಜನರ ಆಕ್ರೋಶ ಕಡಿಮೆ ಆಗಿಲ್ಲ. ಹಾಗಾಗಿ ಅವರು ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಆಕ್ಟಿವೇಟ್ ಮಾಡಿದ್ದಾರೆ. ಪ್ರಣೀತ್ ಮೋರೆ ಅವರು ತಮ್ಮ ಶೋನಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದರಿಂದ ಈ ವಿವಾದ ಶುರುವಾಗಿದೆ.
- Madan Kumar
- Updated on: Jun 10, 2026
- 7:35 pm
‘ಬಲರಾಮನ ದಿನಗಳು’ ಚಿತ್ರದ ‘ಕ್ವಾಟರು’ ಹಾಡು ಮೆಚ್ಚಿದ ನಟಿ ತಾರಾ ಅನುರಾಧಾ
‘ಬಲರಾಮನ ದಿನಗಳು’ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಅವರು ನಟಿಸಿದ್ದು, ಈ ಚಿತ್ರದ ಬಗ್ಗೆ ಅವರಿಗೆ ಸಖತ್ ಭರವಸೆ ಇದೆ. ‘ನನ್ನ ವೃತ್ತಿಜೀವನದ ಅತಿ ದೊಡ್ಡ ಸಿನಿಮಾ ಇದು’ ಎಂದು ಅವರು ಹೇಳಿದ್ದಾರೆ. ಸಂತೋಷ್ ನಾರಾಯಣನ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಇತ್ತೀಚೆಗೆ ಚಿತ್ರದ ಹೊಸ ಹಾಡು ರಿಲೀಸ್ ಮಾಡಲಾಯಿತು.
- Madan Kumar
- Updated on: Jun 10, 2026
- 6:59 pm
370 ರೂ. ಬಿರಿಯಾನಿ ವಿವಾದ: ಕಾಮಿಡಿಯನ್ ಪ್ರಣೀತ್‌ಗೆ ಮೊದಲೇ ವಾರ್ನಿಂಗ್ ನೀಡಿದ್ದ ಸಲ್ಮಾನ್ ಖಾನ್
370 Rupees Biryani Controversy: ಪ್ರಣೀತ್ ಮೋರೆ ಕಾಮಿಡಿ ಶೋನಲ್ಲಿ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಲಾಗಿದೆ. ಆ ವಿಡಿಯೋಗಳು ವೈರಲ್ ಆದ ಬಳಿಕ ಜನರು ಕ್ಲಾಸ್ ತೆಗೆದುಕೊಂಡಿದ್ದಾರೆ. ನಟ ಸಲ್ಮಾನ್ ಖಾನ್ ಅವರು ಒಂದು ವರ್ಷದ ಹಿಂದೆಯೇ ಪ್ರಣೀತ್ ಮೋರೆಗೆ ಖಡಕ್ ಎಚ್ಚರಿಕೆ ನೀಡಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ..
- Madan Kumar
- Updated on: Jun 10, 2026
- 5:25 pm
ರಜನಿಕಾಂತ್ ಸ್ಟೈಲ್ ಕಾಪಿ ಮಾಡಲು ಹೋಗಿ ಹೀನಾಯ ಸೋಲು ಕಂಡಿದ್ದ ಆರ್. ಮಾಧವನ್
ನಟ ಆರ್. ಮಾಧವನ್ ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಆದರೆ ಅವರು ರಜನಿಕಾಂತ್ ಸ್ಟೈಲ್ ಕಾಪಿ ಮಾಡಲು ಹೋಗಿ ಹೀನಾಯವಾಗಿ ಸೋತಿದ್ದರು. ಆ ಘಟನೆಯ ಬಗ್ಗೆ ಸ್ವತಃ ಆರ್. ಮಾಧವನ್ ಅವರೇ ಮಾತನಾಡಿದ್ದಾರೆ. ಆ ಘಟನೆಯ ಬಗ್ಗೆ ಇಲ್ಲಿದೆ ವಿವರ..
- Madan Kumar
- Updated on: Jun 10, 2026
- 4:49 pm
‘ಆಲ್ಫಾ’ ಅವತಾರ ತಾಳಿದ ನಟಿ ಆಲಿಯಾ ಭಟ್
ನಟಿ ಆಲಿಯಾ ಭಟ್ ಅವರು ‘ಆಲ್ಫಾ’ ಸಿನಿಮಾದಲ್ಲಿ ಅಭಿನಯಿಸಿದ್ದು, ಜುಲೈ 3ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಈಗ ಟೀಸರ್ ರಿಲೀಸ್ ಆಗಿದೆ. ಅಭಿಮಾನಿಗಳಿಗೆ ಈ ಟೀಸರ್ ಇಷ್ಟ ಆಗಿದೆ.
- Madan Kumar
- Updated on: Jun 10, 2026
- 3:47 pm
ಎಷ್ಟು ಹ್ಯಾಪಿ ಆಗಿದೆ ನೋಡಿ ನಯನತಾರಾ ಕುಟುಂಬ
4ನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಲು ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು ವಿದೇಶಕ್ಕೆ ತೆರಳಿದ್ದಾರೆ. ನಯನತಾರಾ ಹಂಚಿಕೊಂಡ ಫ್ಯಾಮಿಲಿ ಫೋಟೋ ವೈರಲ್ ಆಗಿದೆ.
- Madan Kumar
- Updated on: Jun 10, 2026
- 2:53 pm
‘ಬಲರಾಮನ ದಿನಗಳು ನನ್ನ ಜೀವನದ ಅತಿ ದೊಡ್ಡ ಸಿನಿಮಾ’: ವಿನೋದ್ ಪ್ರಭಾಕರ್
ನಟ ವಿನೋದ್ ಪ್ರಭಾಕರ್ ಅವರು ‘ಬಲರಾಮನ ದಿನಗಳು’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಸಿನಿಮಾ ಅವರ ವೃತ್ತಿಜೀವನದ ಅತಿ ದೊಡ್ಡ ಪ್ರಾಜೆಕ್ಟ್. ಆ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೆ.ಎಂ. ಚೈತನ್ಯ ನಿರ್ದೇಶನ ಮಾಡಿರುವ ಈ ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದೆ.
- Madan Kumar
- Updated on: Jun 9, 2026
- 10:37 pm
ಸನ್ನಿ ಡಿಯೋಲ್, ಪ್ರೀತಿ ಜಿಂಟಾ ನಟನೆಯ ‘ಲಾಹೋರ್ 1947’ ಚಿತ್ರದ ಶೀರ್ಷಿಕೆ ಬದಲು; ಹೊಸ ಟೈಟಲ್ ಏನು?
‘ಲಾಹೋರ್ 1947’ ಚಿತ್ರದ ಟೈಟಲ್ ಬದಲಾವಣೆ ಮಾಡಲಾಗಿದೆ. ಹೊಸ ಶೀರ್ಷಿಕೆಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಜೊತೆಗೆ ಶಬಾನಾ ಅಜ್ಮಿ, ಪ್ರೀತಿ ಜಿಂಟಾ, ಅಲಿ ಫಜಲ್, ಕರಣ್ ಡಿಯೋಲ್ ಮುಂತಾದವರು ನಟಿಸುತ್ತಿದ್ದಾರೆ. ಎ.ಆರ್. ರೆಹಮಾನ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದು, ಜಾವೇದ್ ಅಖ್ತರ್ ಸಾಹಿತ್ಯ ಬರೆದಿದ್ದಾರೆ.
- Madan Kumar
- Updated on: Jun 9, 2026
- 9:06 pm
ಡಿವೋರ್ಸ್ ಚಿಂತೆ ಮರೆತು ಕೆಲಸದ ಮೇಲೆ ಗಮನ ಹರಿಸಿದ ಮೌನಿ ರಾಯ್
ನಟಿ ಮೌನಿ ರಾಯ್ ಅವರು ಪತಿ ಸೂರಜ್ ನಂಬಿಯಾರ್ ಅವರಿಗೆ ವಿಚ್ಛೇದನ ನೀಡಿದ ಬಳಿಕ ಕೆಲಸದ ಕಡೆಗೆ ಗಮನ ಹರಿಸಿದ್ದಾರೆ. ಡಿವೋರ್ಸ್ ಚಿಂತೆ ಮರೆತು ಅವರು ತುಂಬಾ ಬ್ಯುಸಿ ಆಗಿದ್ದಾರೆ.
- Madan Kumar
- Updated on: Jun 9, 2026
- 8:32 pm