Auto Tips: ಹೆಚ್ಚಿನ ಬೆಲೆ ಸಿಗಲು ನಿಮ್ಮ ಕಾರನ್ನು ಯಾವ ಟೈಮ್​ನಲ್ಲಿ ಮಾರಾಟ ಮಾಡಬೇಕು?

ಹಬ್ಬದ ಋತುವಿನಲ್ಲಿ ಅಂದರೆ ದೀಪಾವಳಿ ಮತ್ತು ಇತರ ಹಬ್ಬಗಳಲ್ಲಿ ವಾಹನಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ಅವಧಿಯಲ್ಲಿ, ಬೋನಸ್ ಮತ್ತು ಆಫರ್ ಕಾರಣ ಜನರು ಹೊಸ ಅಥವಾ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುತ್ತಾರೆ. ಈ ಸಮಯದಲ್ಲಿ ನಿಮ್ಮ ಕಾರನ್ನು ನೀವು ಮಾರಾಟ ಮಾಡಿದರೆ, ತ್ವರಿತ ಮತ್ತು ಉತ್ತಮ ಬೆಲೆಯನ್ನು ಪಡೆಯುವ ಸಾಧ್ಯತೆಗಳು ಇವೆ.

Auto Tips: ಹೆಚ್ಚಿನ ಬೆಲೆ ಸಿಗಲು ನಿಮ್ಮ ಕಾರನ್ನು ಯಾವ ಟೈಮ್​ನಲ್ಲಿ ಮಾರಾಟ ಮಾಡಬೇಕು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 02, 2025 | 11:11 AM

Best Time to Sell Old Car: ಇತ್ತೀಚಿನ ದಿನಗಳಲ್ಲಿ ಹಳೆಯ ಕಾರುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಪ್ರವೃತ್ತಿಯು ಭಾರತದಲ್ಲಿ ಸಾಕಷ್ಟು ಹೆಚ್ಚಾಗಿದೆ. ಈ ವರ್ಷ ನಿಮ್ಮ ಕಾರನ್ನು ನೀವು ಮಾರಾಟ ಮಾಡುವ ಪ್ಲ್ಯಾನ್​ನಲ್ಲಿದ್ದರೆ ಮತ್ತು ಹೆಚ್ಚಿನ ಬೆಲೆಯನ್ನು ಪಡೆಯಲು ಬಯಸಿದರೆ, ಸರಿಯಾದ ಸಮಯವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ನಿಮ್ಮ ಕಾರನ್ನು ನೀವು ಈ ಸಮಯದಲ್ಲಿ ಮಾರಾಟ ಮಾಡಿದರೆ ಉತ್ತಮ ಬೆಲೆ ಪಡೆಯುವುದು ಖಚಿತ. ಹಾಗಾದರೆ ಭಾರತದಲ್ಲಿ ಹಳೆಯ ಕಾರನ್ನು ಮಾರಾಟ ಮಾಡಲು ಉತ್ತಮ ಸಮಯ ಯಾವುದು?.

ಹಬ್ಬ ಹರಿದಿನಗಳಲ್ಲಿ ಹೆಚ್ಚು ಬೇಡಿಕೆ:

ಹಬ್ಬದ ಋತುವಿನಲ್ಲಿ ಅಂದರೆ ದೀಪಾವಳಿ ಮತ್ತು ಇತರ ಹಬ್ಬಗಳಲ್ಲಿ ವಾಹನಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಈ ಅವಧಿಯಲ್ಲಿ, ಬೋನಸ್ ಮತ್ತು ಆಫರ್ ಕಾರಣ ಜನರು ಹೊಸ ಅಥವಾ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುತ್ತಾರೆ. ಈ ಸಮಯದಲ್ಲಿ ನಿಮ್ಮ ಕಾರನ್ನು ನೀವು ಮಾರಾಟ ಮಾಡಿದರೆ, ತ್ವರಿತ ಮತ್ತು ಉತ್ತಮ ಬೆಲೆಯನ್ನು ಪಡೆಯುವ ಸಾಧ್ಯತೆಗಳು ಇವೆ.

ಹೊಸ ಮಾದರಿಯನ್ನು ಬಿಡುಗಡೆ ಮೊದಲು ಮಾರಾಟ ಮಾಡಿ:

ಅಟೋ ಕಂಪನಿ ನಿಮ್ಮ ಕಾರಿನ ಹೊಸ ಮಾದರಿಯನ್ನು ಬಿಡುಗಡೆ ಮಾಡಲಿದ್ದರೆ, ಅದನ್ನು ಶೀಘ್ರದಲ್ಲೇ ಮಾರಾಟ ಮಾಡಿ. ಹೊಸ ವಾಹನಗಳ ಆಗಮನದೊಂದಿಗೆ ಹಳೆಯ ಮಾದರಿಗಳ ಬೆಲೆ ವೇಗವಾಗಿ ಕಡಿಮೆಯಾಗುತ್ತದೆ. ಹೊಸ ಕಾರು ರಿಲೀಸ್​ಗು ಮುನ್ನ ಮಾರಾಟ ಮಾಡಿದರೆ ಉತ್ತಮ ಬೆಲೆ ಪಡೆಯಬಹುದು. ಈ ಟ್ರಿಕ್ ನಿಮ್ಮ ವಾಹನದ ಉತ್ತಮ ಮರುಮಾರಾಟ ಮೌಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಇದು ಭಾರತದ ಮೊದಲ ಸೋಲಾರ್ ಕಾರು: 50 ಪೈಸೆಗೆ 1 ಕಿಮೀ ಓಡುತ್ತೆ, ಬೆಲೆ ಎಷ್ಟು ನೋಡಿ?

ಋತುವಿನ ಪ್ರಕಾರ ಬೇಡಿಕೆ:

ಹವಾಮಾನವು ಕಾರು ಮಾರಾಟದ ಮೇಲೂ ಪರಿಣಾಮ ಬೀರುತ್ತದೆ.

ಮಾನ್ಸೂನ್: ಎಸ್ ಯು ವಿಗಳು ಮತ್ತು ದೊಡ್ಡ ವಾಹನಗಳು ಹೆಚ್ಚು ಮಾರಾಟವಾಗುತ್ತವೆ. ಏಕೆಂದರೆ ಅವುಗಳು ಸುರಕ್ಷಿತವೆಂದು ಪರಿಗಣಿಸಲ್ಪಡುತ್ತವೆ. ಬೇಸಿಗೆ: ಸಣ್ಣ ಮತ್ತು ಉತ್ತಮ ಮೈಲೇಜ್ ವಾಹನಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.

ಆರ್ಥಿಕ ಸ್ಥಿತಿಯ ಪರಿಣಾಮ: ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೆ ವಾಹನಗಳ ಬೇಡಿಕೆ ಹೆಚ್ಚುತ್ತದೆ. ಜನರು ದೊಡ್ಡ ವಸ್ತುಗಳಿಗೆ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಆದರೆ ಆರ್ಥಿಕ ಹಿಂಜರಿತದ ಸಮಯದಲ್ಲಿ ವಾಹನಗಳನ್ನು ಮಾರಾಟ ಮಾಡುವುದು ಕಷ್ಟವಾಗಬಹುದು.

2025 ರಲ್ಲಿ ನಿಮ್ಮ ಕಾರನ್ನು ಮಾರಾಟ ಮಾಡಲು ನೀವು ಯೋಚಿಸುತ್ತಿದ್ದರೆ, ದೀಪಾವಳಿ ಅಥವಾ ಹೊಸ ಕಾರು ಬಿಡುಗಡೆಯಂತಹ ಹಬ್ಬಗಳ ಮೊದಲು ಉತ್ತಮ ಸಮಯವಾಗಿರುತ್ತದೆ. ವಾಹನದ ಉತ್ತಮ ಸ್ಥಿತಿ ಮತ್ತು ಸ್ಮಾರ್ಟ್ ತಂತ್ರವು ಉತ್ತಮ ಬೆಲೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಇನ್ನು ನೀವು ಬಳಸಿದ ಕಾರನ್ನು ಖರೀದಿಸುವ ಮುನ್ನ ಅದರ ಹಿಸ್ಟರಿ ತಿಳಿಯುವುದು ಬಹಳ ಮುಖ್ಯ. ಅದನ್ನು ಹೇಗೆ ಬಳಸಲಾಗಿದೆ, ಎಷ್ಟು ಬಾರಿ ಅಪಘಾತವಾಗಿದೆ, ಅಥವಾ ಎಷ್ಟು ಮತ್ತು ಹೇಗೆ ಸರ್ವಿಸ್ ಮಾಡಲಾಗಿದೆ ಎಂದು ತಿಳಿಯಬೇಕು. ಕಾರುಗಳು ಡ್ಯಾಮೇಜ್ ಆಗಿದ್ದರೆ ಅದನ್ನು ಮರೆ ಮಾಡುವ ಅನೇಕ ಸಾಧನಗಳು ಇಂದು ಮಾರುಕಟ್ಟೆಯಲ್ಲಿವೆ. ಹೀಗಾಗಿ ನೀವು ಸೆಕೆಂಟ್ ಹ್ಯಾಂಡ್ ಕಾರು ಖರೀದಿಸುವ ಮುನ್ನ ಏನಾದರು ಹಾನಿ ಅಥವಾ ದೋಷಗಳನ್ನು ಹೊಂದಿದೆಯೆ ಎಂದು ಪರಿಶೀಲಿಸಿ. ಇಲ್ಲವಾದಲ್ಲಿ ಅದು ಭವಿಷ್ಯದಲ್ಲಿ ದುಬಾರಿ ರಿಪೇರಿಗೆ ಕಾರಣವಾಗಬಹುದು.

ಆಟೋಮೊಬೈಲ್  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ