Solar Car: ಇದು ಭಾರತದ ಮೊದಲ ಸೋಲಾರ್ ಕಾರು: 50 ಪೈಸೆಗೆ 1 ಕಿಮೀ ಓಡುತ್ತೆ, ಬೆಲೆ ಎಷ್ಟು ನೋಡಿ?
ಮುಂದಿನ ತಿಂಗಳು ನವದೆಹಲಿಯಲ್ಲಿ ಆಯೋಜಿಸಲಾದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರ ಸಮಯದಲ್ಲಿ ಭಾರತದ ಮೊದಲ ಸೋಲಾರ್ ಎಲೆಕ್ಟ್ರಿಕ್ ಕಾರ್ EVA ಜನರಿಗೆ ಪ್ರಸ್ತುತಪಡಿಸಲಿದೆ. ನಗರದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ. ಈ ಕಾರಿನ ಗಾತ್ರ ಚಿಕ್ಕದಾಗಿದೆ. ಹೀಗಾಗಿ ನಿಮಗೆ ಸಣ್ಣ ಜಾಗದಲ್ಲಿಯೂ ಸುಲಭವಾಗಿ ಪಾರ್ಕ್ ಮಾಡಬಹುದಾಗಿದೆ.
ನೀವು ಅನೇಕ ಪೆಟ್ರೋಲ್, ಡೀಸೆಲ್, CNG ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ನೋಡಿರಬಹುದು. ಆದರೆ ನೀವು ಸೋಲಾರ್ ಎಲೆಕ್ಟ್ರಿಕ್ ಕಾರ್ ಅನ್ನು ನೋಡಿದ್ದೀರಾ?. ಪುಣೆ ಮೂಲದ ಸ್ಟಾರ್ಟಪ್ ಕಂಪನಿ ವೇವ್ ಮೊಬಿಲಿಟಿ ತನ್ನ ಸೌರ ಚಾಲಿತ ಎಲೆಕ್ಟ್ರಿಕ್ ಕಾರ್ EVA ಯ ನವೀಕರಿಸಿದ ಆವೃತ್ತಿಯನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ. ಮುಂದಿನ ತಿಂಗಳು ನವದೆಹಲಿಯಲ್ಲಿ ಆಯೋಜಿಸಲಾದ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರ ಸಮಯದಲ್ಲಿ ಈ ಸೋಲಾರ್ ಕಾರನ್ನು ಜನರಿಗೆ ಪ್ರಸ್ತುತಪಡಿಸಲಿದೆ. ಇದು ಭಾರತದ ಮೊದಲ ಸೋಲಾರ್ ಎಲೆಕ್ಟ್ರಿಕ್ ಕಾರ್ ಆಗಿದ್ದು, ಆಟೋ ಎಕ್ಸ್‌ಪೋ 2023 ರಲ್ಲಿ ಇದರ ಎಲ್ಲ ಮಾಹಿತಿ ಬಹಿರಂಗಗೊಳ್ಳಲಿದೆ.
ನಗರದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ. ಈ ಕಾರಿನ ಗಾತ್ರ ಚಿಕ್ಕದಾಗಿದೆ. ಹೀಗಾಗಿ ನಿಮಗೆ ಸಣ್ಣ ಜಾಗದಲ್ಲಿಯೂ ಸುಲಭವಾಗಿ ಪಾರ್ಕ್ ಮಾಡಬಹುದಾಗಿದೆ.
ವ್ಯಾಪ್ತಿ ಮತ್ತು ಚಾರ್ಜಿಂಗ್ ಸಮಯ:
ಈ ಕಾರು ಒಂದೇ ಚಾರ್ಜ್‌ನಲ್ಲಿ 250 ಕಿಲೋ ಮೀಟರ್ ಗಳವರೆಗೆ ಕ್ರಮಿಸುತ್ತದೆ ಮತ್ತು ಛಾವಣಿಯ ಮೇಲೆ ಅಳವಡಿಸಲಾದ ಸೌರ ಫಲಕದ ಸಹಾಯದಿಂದ ಈ ಕಾರು ವರ್ಷದಲ್ಲಿ 3 ಸಾವಿರ ಕಿಲೋಮೀಟರ್‌ಗಳವರೆಗೆ ಓಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಕಾರು ಅಲ್ಟ್ರಾ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು ಕೇವಲ ಐದು ನಿಮಿಷಗಳ ಚಾರ್ಜ್‌ನಲ್ಲಿ 50 ಕಿಲೋ ಮೀಟರ್ ಗಳವರೆಗೆ ಚಾಲನಾ ವ್ಯಾಪ್ತಿಯನ್ನು ನೀಡುತ್ತದೆ.
ಸೌರ ಕಾರಿನ ವೈಶಿಷ್ಟ್ಯಗಳು:
ಈ ಸೋಲಾರ್ ಎಲೆಕ್ಟ್ರಿಕ್ ಕಾರು ಕೇವಲ ಐದು ಸೆಕೆಂಡುಗಳಲ್ಲಿ 0 ರಿಂದ 40 ಕಿ. ಮೀ ರವರೆಗೆ ವೇಗವನ್ನು ಹೊಂದುತ್ತದೆ ಮತ್ತು ಈ ಕಾರಿನ ಗರಿಷ್ಠ ವೇಗವು 70 ಕಿ ಮೀ. ಈ ಕಾರಿನ ಮತ್ತೊಂದು ವಿಶೇಷವೆಂದರೆ ಈ ಕಾರಿನ ಚಾಲನೆಯ ವೆಚ್ಚವೂ ಸಾಕಷ್ಟು ಕಡಿಮೆಯಾಗಿದೆ. ಈ ಕಾರನ್ನು ಒಂದು ಕಿಲೋಮೀಟರ್ ಓಡಿಸಲು ಕೇವಲ 0.50 ಪೈಸೆ ವೆಚ್ಚವಾಗುತ್ತದೆ ಅಷ್ಟೆ. ವೈಶಿಷ್ಟ್ಯಗಳ ಕುರಿತು ಮಾತನಾಡುತ್ತಾ, ಈ ಕಾರು ಸ್ಮಾರ್ಟ್‌ಫೋನ್ ಸಂಪರ್ಕ, ರಿಮೋಟ್ ಮಾನಿಟರಿಂಗ್ ಮತ್ತು ಏರ್ ಅಪ್‌ಡೇಟ್‌ಗಳಂತಹ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ.
ಇದನ್ನೂ ಓದಿ: 5 ರೂಪಾಯಿಗೆ 50 ಕಿ.ಮಿ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಬೈಕ್, 8ನೇ ತರಗತಿ ವಿದ್ಯಾರ್ಥಿಯ ಹೊಸ ಆವಿಷ್ಕಾರ
ಸೌರ ಸೋಲಾರ್ ಕಾರ್ ಬೆಲೆ:
ಪ್ರಸ್ತುತ, ಈ ಸೋಲಾರ್ ಕಾರಿನ ಬೆಲೆ ಎಷ್ಟು ಎಂಬುದರ ಕುರಿತು ಕಂಪನಿಯು ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ ಅಥವಾ ಈ ಕಾರಿನ ಅಪ್‌ಗ್ರೇಡ್ ಆವೃತ್ತಿಯನ್ನು ಯಾವಾಗ ಬಿಡುಗಡೆ ಮಾಡಲಾಗುವುದು ಎಂಬುದನ್ನು ಬಹಿರಂಗಪಡಿಸಿಲ್ಲ. ಈ ಕಾರಿನ ಬೆಲೆಗೆ ಸಂಬಂಧಿಸಿದ ಯಾವುದೇ ವಿವರಗಳನ್ನು ಸದ್ಯಕ್ಕೆ ಬಹಿರಂಗಪಡಿಸಲಾಗಿಲ್ಲ. ಆದರೆ ಮೂಲಗಳ ಪ್ರಕಾರ ಈ ಕಾರಿನ ಬೆಲೆ 10 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆಗಿರಬಹುದೆಂದು ನಿರೀಕ್ಷಿಸಲಾಗಿದೆ.
ಆಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ