Auto Tips: ದುಬಾರಿ ಬೆಲೆಯ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ಮುನ್ನ ಎಚ್ಚರ: ಈ ವಿಚಾರ ನಿಮಗೆ ಗೊತ್ತಿರಲಿ
ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರನ್ನು ಖರೀದಿಸುವುದರಿಂದ ಅನುಕೂಲಗಳು ಮತ್ತು ಅನಾನುಕೂಲಗಳು ಇವೆ. ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರನ್ನು ಖರೀದಿಸುವುದು ನಿಮಗೆ ಸೂಕ್ತವೇ ಅಥವಾ ಇಲ್ಲವೇ ಎಂಬುದನ್ನು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು ನಿರ್ಧರಿಸಬೇಕು.
ದುಬಾರಿ ಬೆಲೆಯ ಐಷಾರಾಮಿ ಕಾರು ಖರೀದಿಸಬೇಕು ಎಂಬುವುದು ಅನೇಕ ಜನರ ಕನಸು. ಆದರೆ, ಈ ಕಾರುಗಳಿಗೆ ಹೆಚ್ಚುನ ಹಣ ನೀಡಬೇಕಾಗಿರುವ ಕಾರಣ ಆ ಕನಸು ಕನಸಾಗಿಯೇ ಉಳಿಯುತ್ತದೆ. ಅದಕ್ಕಾಗಿಯೇ ಕೆಲವರು ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಇದು ನಿಮಗೆ ಕಡಿಮೆ ಬಜೆಟ್‌ಗೆ ಐಷಾರಾಮಿ ಕಾರಿನ ಅನುಭವವನ್ನು ನೀಡುತ್ತದೆ. ಸೆಕೆಂಡ್ ಹ್ಯಾಂಡ್ ಕಾರಿನ ಮೂಲಕ, ನಿಮ್ಮ ಆಯ್ಕೆಯ ಐಷಾರಾಮಿ ಕಾರನ್ನು ಅಗ್ಗವಾಗಿ ಖರೀದಿಸಬಹುದು. ಆದರೆ ಅದರ ಅನಾನುಕೂಲತೆಗಳ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು.
ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರನ್ನು ಖರೀದಿಸುವುದರಿಂದ ಅನುಕೂಲಗಳು ಮತ್ತು ಅನಾನುಕೂಲಗಳು ಇವೆ. ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರನ್ನು ಖರೀದಿಸುವುದು ನಿಮಗೆ ಸೂಕ್ತವೇ ಅಥವಾ ಇಲ್ಲವೇ ಎಂಬುದನ್ನು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು ನಿರ್ಧರಿಸಬೇಕು. ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರನ್ನು ಖರೀದಿಸುವ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಇಲ್ಲಿ ನೀವು ಓದಬಹುದು.
ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಖರೀದಿಸುವ ಪ್ರಯೋಜನಗಳು:
ಕೈಗೆಟುಕುವ ಬೆಲೆ: ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರನ್ನು ಖರೀದಿಸುವ ದೊಡ್ಡ ಪ್ರಯೋಜನವೆಂದರೆ ನೀವು ಅದನ್ನು ಹೊಸ ಕಾರಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಇಂದು ಹೊಸ ಐಷಾರಾಮಿ ಕಾರಿನ ಬೆಲೆ ತುಂಬಾ ಹೆಚ್ಚಾಗಿದೆ ಮತ್ತು ನೀವು ಅದನ್ನು ಖರೀದಿಸಬೇಕಾದರೆ, ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಖರೀದಿಸುವ ಮೂಲಕ ನಿಮ್ಮ ಬಜೆಟ್‌ಗೆ ತಕ್ಕಂತೆ ಐಷಾರಾಮಿ ಕಾರನ್ನು ಪಡೆದುಕೊಳ್ಳಬಹುದು.
ಉತ್ತಮ ವೈಶಿಷ್ಟ್ಯಗಳು: ಐಷಾರಾಮಿ ಕಾರುಗಳು ನಿಮಗೆ ಆರಾಮದಾಯಕ ಮತ್ತು ಸುರಕ್ಷಿತ ಚಾಲನಾ ಅನುಭವವನ್ನು ನೀಡುವ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿವೆ. ಇವುಗಳಲ್ಲಿ ಪವರ್ ವಿಂಡೋ, ಪವರ್ ಸ್ಟೀರಿಂಗ್, ಸನ್‌ರೂಫ್, ಲೆದರ್ ಸೀಟ್‌ಗಳು, ನ್ಯಾವಿಗೇಷನ್ ಸಿಸ್ಟಮ್, ಮ್ಯೂಸಿಕ್ ಸಿಸ್ಟಂ ಮತ್ತು ಇನ್ನೂ ಹಲವು ವೈಶಿಷ್ಟ್ಯಗಳು ಸೇರಿವೆ.
ಸುರಕ್ಷತಾ ವೈಶಿಷ್ಟ್ಯಗಳು: ಐಷಾರಾಮಿ ಕಾರುಗಳು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸುವ ಅನೇಕ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ಹೊಂದಿವೆ. ಏರ್‌ಬ್ಯಾಗ್‌ಗಳು, ಆಂಟಿ-ಲಾಕ್ ಬ್ರೇಕ್ ಸಿಸ್ಟಮ್ (ABS), ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ (EBD), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (TCS) ಮತ್ತು ಪಾರ್ಕಿಂಗ್ ಸೆನ್ಸರ್‌ಗಳು ಇವುಗಳಲ್ಲಿ ಕೆಲವು ವೈಶಿಷ್ಟ್ಯಗಳಾಗಿವೆ.
ಗುಣಮಟ್ಟದ ಪ್ರಯೋಜನ: ಐಷಾರಾಮಿ ಕಾರುಗಳಲ್ಲಿ ಬಳಸುವ ಭಾಗಗಳು ಮತ್ತು ವಸ್ತುಗಳ ಗುಣಮಟ್ಟವು ತುಂಬಾ ಉತ್ತಮವಾಗಿದೆ. ಆದ್ದರಿಂದ, ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಸಹ ಬಹಳ ಬಾಳಿಕೆ ಬರುವಂತಹದ್ದಾಗಿದೆ.
ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಖರೀದಿಸುವ ಅನಾನುಕೂಲಗಳು:
ದುಬಾರಿ ನಿರ್ವಹಣೆ: ಐಷಾರಾಮಿ ಕಾರುಗಳ ನಿರ್ವಹಣೆ ತುಂಬಾ ದುಬಾರಿಯಾಗಿದೆ. ಕಾಲಕಾಲಕ್ಕೆ ಕಾರಿನ ಸರ್ವಿಸ್ ಮತ್ತು ದುರಸ್ತಿಗಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ, ನೀವು ದುಬಾರಿ ನಿರ್ವಹಣೆಗೆ ಸಿದ್ಧರಾಗಿರಬೇಕು.
ಕಾರ್ ಪಾರ್ಟ್ಸ್: ಐಷಾರಾಮಿ ಕಾರುಗಳ ಬಿಡಿಭಾಗಗಳ ಕೊರತೆ ಎದುರಾಗಬಹುದು. ಏನಾದರೂ ಹಾನಿಗೊಳಗಾದರೆ ಅದರ ಬದಲಿ ಪಾರ್ಟ್ಸ್ ತುಂಬಾ ದುಬಾರಿಯಾಗಿದೆ. ಐಷಾರಾಮಿ ಕಾರುಗಳ ಬಿಡಿ ಭಾಗಗಳು ಮತ್ತು ಘಟಕಗಳು ದುಬಾರಿಯಾಗಿದೆ.
ಮೈಲೇಜ್: ಐಷಾರಾಮಿ ಕಾರುಗಳ ಮೈಲೇಜ್ ತುಂಬಾ ಕಡಿಮೆ. ಇದು ಹೆಚ್ಚು ಪೆಟ್ರೋಲ್ ಕುಡಿಯುತ್ತದೆ. ನೀವು ಐಷಾರಾಮಿ ಕಾರು ಖರೀದಿಸಿದರೆ, ನೀವು ಇಂಧನಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ.
ಹಳೆಯ ಮಾದರಿ: ನಿಮ್ಮ ಬಜೆಟ್‌ಗೆ ಅನುಗುಣವಾಗಿ ನೀವು ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರನ್ನು ಖರೀದಿಸಿದರೆ ನೀವು ಹಳೆಯ ಮಾದರಿಯನ್ನು ಖರೀದಿಸಬೇಕಾಗುತ್ತದೆ. ಈ ಕಾರಣದಿಂದಾಗಿ, ಹೊಸ ಮಾದರಿಯಲ್ಲಿ ಲಭ್ಯವಿರುವ ಕೆಲವು ವೈಶಿಷ್ಟ್ಯಗಳ ಪ್ರಯೋಜನವನ್ನು ನೀವು ಪಡೆಯುವುದಿಲ್ಲ.
ಈ ಮಾಹಿತಿಯನ್ನು ಓದುವ ಮೂಲಕ ನೀವು ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರನ್ನು ಖರೀದಿಸುವುದರಿಂದ ಆಗುವ ಅನುಕೂಲಗಳು ಮತ್ತು ಅನಾನುಕೂಲಗಳೇನು ಎಂದು ತಿಳಿದುಕೊಳ್ಳಬಹುದು. ನಿಮ್ಮ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಕಾರನ್ನು ಕೂಲಂಕಷವಾಗಿ ಪರಿಶೀಲಿಸಿದರೆ ನೀವು ಉತ್ತಮವಾದ ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರನ್ನು ಖರೀದಿಸಿ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ