Hero Vida EV: ಬೆಂಗಳೂರಿನಲ್ಲಿ ವಿಡಾ ಇವಿ ಸ್ಕೂಟರ್ ವಿತರಣೆ ಶುರು

ಹೀರೋ ಮೋಟೊಕಾರ್ಪ್ ತನ್ನ ಸಬ್ ಬ್ರಾಂಡ್ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಗೆ ನಮ್ಮ ಬೆಂಗಳೂರಿನಲ್ಲಿ ಅಧಿಕೃತ ಚಾಲನೆ ನೀಡಿದೆ. ವಿನೂತನ ಫೀಚರ್ಸ್ ಹೊಂದಿರುವ ವಿಡಾ ವಿ1 ಪ್ಲಸ್ ಮತ್ತು ವಿ1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಗಳು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ.

Hero Vida EV: ಬೆಂಗಳೂರಿನಲ್ಲಿ ವಿಡಾ ಇವಿ ಸ್ಕೂಟರ್ ವಿತರಣೆ ಶುರು
ಬೆಂಗಳೂರಿನಲ್ಲಿ ವಿಡಾ ಇವಿ ಸ್ಕೂಟರ್ ವಿತರಣೆ ಶುರು
Follow us
Praveen Sannamani
|

Updated on:Jan 02, 2023 | 3:35 PM

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಪ್ರಿಯರಿಗಾಗಿ ಹೀರೋ ಮೋಟೊಕಾರ್ಪ್(Hero Motocorp) ಕಂಪನಿಯು ವಿಡಾ(Vida) ಸಬ್ ಬ್ರಾಂಡ್ ತೆರೆದಿದ್ದು, ಹೊಸ ಬ್ರಾಂಡ್ ಅಡಿಯಲ್ಲಿ ಮೊದಲ ಹಂತವಾಗಿ ವಿ1 ಪ್ಲಸ್ ಮತ್ತು ವಿ1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಪರಿಚಯಿಸಿದೆ. ಹೊಸ ಇವಿ ಸ್ಕೂಟರ್ ಸದ್ಯ ನಮ್ಮ ಬೆಂಗಳೂರು, ದೆಹಲಿ ಮತ್ತು ಜೈಪುರದಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಇದೀಗ ಮೊದಲ ಹಂತದ ವಿತರಣೆ ಚಾಲನೆಗೆ ನೀಡಿದೆ. ನಮ್ಮ ಬೆಂಗಳೂರಿನ ಲಾವೆಲ್ಲೆ ರಸ್ತೆಯಲ್ಲಿರುವ ಹೀರೋ ವಿಡಾ ಮಾರಾಟ ಮಳಿಗೆಯಲ್ಲಿ ಅಧ್ಯಕ್ಷ ಪವನ್ ಮುಂಜಲ್ ಅವರು ಇವಿ ಸ್ಕೂಟರ್ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ವಿ1 ಪ್ಲಸ್ ಮತ್ತು ವಿ1 ಪ್ರೊ ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 1.45 ಲಕ್ಷದಿಂದ ರೂ. 1.59 ಲಕ್ಷ ಬೆಲೆ ಹೊಂದಿದೆ.

ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್

ಹೊಸ ವಿಡಾ ಇವಿ ಸ್ಕೂಟರ್ ಗಳಲ್ಲಿ ಸುಧಾರಿತ 3.9kWh ಬ್ಯಾಟರಿ ಮತ್ತು 6kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗಿದ್ದು, ಇದರಲ್ಲಿ ವಿಡಾ ವಿ1 ಪ್ಲಸ್ ಪ್ರತಿ ಚಾರ್ಜ್ ಗೆ 143 ಕಿ.ಮೀ ಮೈಲೇಜ್ ನೀಡಿದರೆ ವಿಡಾ ವಿ1 ಪ್ರೊ ಪ್ರತಿ ಚಾರ್ಜ್ ಗೆ 165 ಕಿ.ಮೀ ಮೈಲೇಜ್ ನೀಡುತ್ತದೆ.

Vida electric scooter

ಪರ್ಫಾಮೆನ್ಸ್ ಮತ್ತು ಟಾಪ್ ಸ್ಪೀಡ್

ವಿಡಾ ವಿ1 ಪ್ಲಸ್ ಮತ್ತು ವಿ1 ಪ್ರೊ ಎರಡು ಇವಿ ಸ್ಕೂಟರ್ ಗಳು ಪ್ರತಿ ಗಂಟೆಗೆ ಗರಿಷ್ಠ 80 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಇದು 3.2 ಸೆಕೆಂಡ್ ಗಳಲ್ಲಿ ಸೊನ್ನೆಯಿಂದ 40 ಕಿ.ಮೀ ವೇಗ ಪಡೆದುಕೊಳ್ಳುತ್ತದೆ. ಹಾಗೆಯೇ ಹೊಸ ಇವಿ ಸ್ಕೂಟರ್ ಗಳಲ್ಲಿ ಕಂಪನಿಯು ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ಹೊಂದಿರಲಿದ್ದು, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ.

ಹೊಸ ಇವಿ ಸ್ಕೂಟರಿನಲ್ಲಿ ಮತ್ತೊಂದು ಪ್ರಮುಖ ತಂತ್ರಜ್ಞಾನ ಸೌಲಭ್ಯವೆಂದರೆ ರೈಡಿಂಗ್ ವೇಳೆ ಬ್ಯಾಟರಿ ಪ್ರಮಾಣವು ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾದ ಸಂದರ್ಭದಲ್ಲಿ ಎಮರ್ಜೆನ್ಸಿ ಕಂಡಿಷನ್ ಮೂಲಕ ಕನಿಷ್ಠ 8 ಕಿ.ಮೀ ದೂರವನ್ನು ಪ್ರತಿ ಗಂಟೆಗೆ 10 ಕಿ.ಮೀ ವೇಗದಲ್ಲಿ ಚಾಲನೆಗೆ ಅವಕಾಶ ನೀಡುತ್ತದೆ. ಇದರಿಂದ ಟ್ರಾಫಿಕ್ ದಟ್ಟಣೆಯ ಸಂದರ್ಭದಲ್ಲಿ ಬ್ಯಾಟರಿ ಖಾಲಿಯಾದರೂ ಹತ್ತಿರ ಚಾರ್ಜಿಂಗ್ ನಿಲ್ದಾಣಕ್ಕೆ ತಲುಪಲು ಈ ಸೌಲಭ್ಯವು ಸಾಕಷ್ಟು ಸಹಕಾರಿಯಾಗಲಿದ್ದು, ಹೊಸ ಇವಿ ಸ್ಕೂಟರ್ ಗಳು ಫಾಸ್ಟ್ ಚಾರ್ಜಿಂಗ್ ಸರ್ಪೋಟ್ ಹೊಂದಿವೆ.

ಡಿಸೈನ್ ಮತ್ತು ಫೀಚರ್ಸ್

ಹೊಸ ಸ್ಕೂಟರ್ ರೆಟ್ರೊ ಲುಕ್ ಜೊತೆಗೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿದ್ದು, ಶಾರ್ಪ್ ಡಿಸೈನ್ ನೊಂದಿಗೆ ಎಲ್ಇಡಿ ಹೆಡ್ ಲ್ಯಾಂಪ್, ಟರ್ನ್ ಇಂಡಿಕೇಟರ್, ಸಣ್ಣ ಗಾತ್ರದ ವಿಂಡ್ ಸ್ಕ್ರೀನ್ ಮತ್ತು 7 ಇಂಚಿನ ಟಚ್ ಸ್ಕ್ರೀನ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್ ಪ್ಯಾನೆಲ್ ಸೌಲಭ್ಯಗಳಿವೆ. ಹಾಗೆಯೇ ಹೊಸ ಇವಿ ಸ್ಕೂಟರ್ ಗಳಲ್ಲಿ ಕರ್ವ್ ಡಿಸೈನ್ ಪ್ರೇರಿತ ಸ್ಪ್ಲೀಟ್ ಸೀಟ್, ಕೀ ಲೆಸ್ ಕಂಟ್ರೊಲ್, ಎಮರ್ಜೆನ್ಸಿ ಕಾಲ್, ಕ್ರೂಸ್ ಕಂಟ್ರೊಲ್, ಟು ವೇ ಥ್ರೊಟಲ್ ಸೌಲಭ್ಯಗಳಿವೆ.

ಈ ಮೂಲಕ ಹೊಸ ವಿ1 ಪ್ಲಸ್ ಮತ್ತು ವಿ1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಗಳು ಸದ್ಯ ಮಾರುಕಟ್ಟೆಯಲ್ಲಿರುವ ಎಥರ್ 450 ಪ್ಲಸ್, 450ಎಕ್ಸ್, ಓಲಾ ಎಸ್1, ಎಸ್ ಪ್ರೊ ಮತ್ತು ಬಜಾಜ್ ಚೇತಕ್ ಇವಿ ಸ್ಕೂಟರ್ ಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಶೀಘ್ರದಲ್ಲಿಯೇ ಹೊಸ ಸ್ಕೂಟರ್ ಮಾರಾಟವು ದೇಶದ ಪ್ರಮುಖ ನಗರಗಳಿಗೆ ವಿಸ್ತರಣೆಯಾಗಿದೆ.

Published On - 3:27 pm, Mon, 2 January 23

ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ