Maruti Brezza vs Tata Nexon: ಮಾರುತಿ ಬ್ರೆಝಾ ಅಥವಾ ಟಾಟಾ ನೆಕ್ಸಾನ್: ಯಾವ ಕಾರು ಹೆಚ್ಚು ಮೈಲೇಜ್ ನೀಡುತ್ತದೆ?

ಮಾರುತಿ ಬ್ರೆಝಾ ಮತ್ತು ಟಾಟಾ ನೆಕ್ಸಾನ್ ಎರಡೂ ಅತ್ಯಂತ ಪ್ರಸಿದ್ಧ ಕಾರುಗಳಾಗಿವೆ. ಈ ಎರಡೂ ಕಾರುಗಳು 10 ಲಕ್ಷ ರೂಪಾಯಿ ವ್ಯಾಪ್ತಿಯಲ್ಲಿ ಬರುತ್ತವೆ. ಈ ಎರಡು ಕಾರುಗಳಲ್ಲಿ ನೀವು ಒಂದನ್ನು ಖರೀದಿಸಲು ಯೋಚಿಸುತ್ತಿದ್ದರೆ, ಎರಡೂ ಕಾರುಗಳ ಸುರಕ್ಷತೆ, ಕಾರ್ಯಕ್ಷಮತೆ ಮತ್ತು ಮೈಲೇಜ್ ಹೇಗಿದೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.

Maruti Brezza vs Tata Nexon: ಮಾರುತಿ ಬ್ರೆಝಾ ಅಥವಾ ಟಾಟಾ ನೆಕ್ಸಾನ್: ಯಾವ ಕಾರು ಹೆಚ್ಚು ಮೈಲೇಜ್ ನೀಡುತ್ತದೆ?
ಮಾರುತಿ ಬ್ರೆಝಾ ಮತ್ತು ಟಾಟಾ ನೆಕ್ಸಾನ್
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 06, 2025 | 12:01 PM

ಟಾಟಾ ಮೋಟಾರ್ಸ್ ಕಳೆದ ವರ್ಷ ಪಂಚ್ ಮತ್ತು ನೆಕ್ಸಾನ್ ಮೂಲಕ ಎಸ್​ಯುವಿ ಮಾರುಕಟ್ಟೆಯಲ್ಲಿ ಸಂಚಲನವನ್ನು ಸೃಷ್ಟಿಸಿತು. ಜನರು ನೆಕ್ಸಾನ್ ಅನ್ನು ಮುಗಿಬಿದ್ದು ಖರೀದಿಸುತ್ತಿದ್ದರು. ಆದರೆ ವರ್ಷದ ಮಧ್ಯದಲ್ಲಿ ಮಾರುತಿ ಸುಜುಕಿ ಬ್ರೆಝಾ ನೆಕ್ಸಾನ್‌ಗಿಂತ ಹೆಚ್ಚು ಮಾರಾಟ ಕಂಡು ಮುನ್ನಡೆಯನ್ನು ಕಾಯ್ದುಕೊಂಡಿತು. ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಅಗ್ರ ಮಾರಾಟವಾಗಿ ಉಳಿಯಿತು. ಆದಾಗ್ಯೂ, ವರ್ಷಾಂತ್ಯದ ವೇಳೆ ಟಾಟಾ ನೆಕ್ಸಾನ್ ಭರ್ಜರಿ ಪುನರಾಗಮನ ಮಾಡಿ ಮಾರಾಟದ ಪಟ್ಟಿಯಲ್ಲಿ ಬ್ರೆಝಾವನ್ನು ಹಿಂದಕ್ಕೆ ತಳ್ಳಿತು.

ಮಾರುತಿ ಬ್ರೆಝಾ ಮತ್ತು ಟಾಟಾ ನೆಕ್ಸಾನ್ ಎರಡೂ ಅತ್ಯಂತ ಪ್ರಸಿದ್ಧ ಕಾರುಗಳಾಗಿವೆ. ಈ ಎರಡೂ ಕಾರುಗಳು 10 ಲಕ್ಷ ರೂಪಾಯಿ ವ್ಯಾಪ್ತಿಯಲ್ಲಿ ಬರುತ್ತವೆ. ಈ ಎರಡು ಕಾರುಗಳಲ್ಲಿ ನೀವು ಒಂದನ್ನು ಖರೀದಿಸಲು ಯೋಚಿಸುತ್ತಿದ್ದರೆ, ಎರಡೂ ಕಾರುಗಳ ಸುರಕ್ಷತೆ, ಕಾರ್ಯಕ್ಷಮತೆ ಮತ್ತು ಮೈಲೇಜ್ ಹೇಗಿದೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.

ಮಾರುತಿ ಬ್ರೆಝಾ ಒಂದು ಹೈಬ್ರಿಡ್ ಕಾರು. ಈ ಕಾರು K15 C ಪೆಟ್ರೋಲ್ + CNG ಎಂಜಿನ್‌ನೊಂದಿಗೆ ಬರುತ್ತದೆ, ಆದ್ದರಿಂದ ಇದು ಪೆಟ್ರೋಲ್ ಮತ್ತು CNG ಮೋಡ್‌ಗಳಲ್ಲಿ ಚಲಿಸುತ್ತದೆ. ಈ ಕಾರಿನ ಎಂಜಿನ್ ಪೆಟ್ರೋಲ್ ಮೋಡ್‌ನಲ್ಲಿ 6,000 rpm ನಲ್ಲಿ 100.6 PS ಪವರ್ ಮತ್ತು 4,400 rpm ನಲ್ಲಿ 136 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

CNG ಮೋಡ್‌ನಲ್ಲಿರುವಾಗ, ಕಾರು 5,500 rpm ನಲ್ಲಿ 87.8 PS ಪವರ್ ಮತ್ತು 4,200 rpm ನಲ್ಲಿ 121.5 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಮಾರುತಿ ಕಾರು 25.51 ಕಿ.ಮೀ ಮೈಲೇಜ್ ನೀಡುತ್ತದೆ.

ಟಾಟಾ ನೆಕ್ಸಾನ್ ಹೈಬ್ರಿಡ್ ಕಾರು ಅಲ್ಲ. ಆದರೆ ಈ ಕಾರು ಪೆಟ್ರೋಲ್, ಡೀಸೆಲ್ ಮತ್ತು CNG ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಬರುತ್ತದೆ. ಈ ಟಾಟಾ ಕಾರು 1.2-ಲೀಟರ್ ಟರ್ಬೋಚಾರ್ಜ್ಡ್ ರೆವೊಟ್ರಾನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 5,500 rpm ನಲ್ಲಿ 88.2 PS ಪವರ್ ಮತ್ತು 1,750 ರಿಂದ 4,000 rpm ನಲ್ಲಿ 170 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟಾಟಾ ನೆಕ್ಸಾನ್ 17 ರಿಂದ 24 kmpl ಮೈಲೇಜ್ ನೀಡುತ್ತದೆ.

ಇದನ್ನೂ ಓದಿ: ವರ್ಷಾಂತ್ಯದಲ್ಲಿ ದಾಖಲೆಯ ಮಾರಾಟ ಕಂಡ ಮಾರುತಿಯ ಈ ಕಾರು: ಎಷ್ಟು ಸೇಲ್ ಆಗಿದೆ ಗೊತ್ತೇ?

ಟಾಟಾ ನೆಕ್ಸಾನ್ ಎಕ್ಸ್ ಶೋ ರೂಂ ಬೆಲೆ 7.99 ಲಕ್ಷದಿಂದ ಆರಂಭವಾಗಿ 15.50 ಲಕ್ಷ ರೂ. ವರೆಗೆ ಇದೆ. ಮಾರುತಿ ಬ್ರೆಝಾ ಬೆಲೆ ರೂ. 8.34 ಲಕ್ಷದಿಂದ ಪ್ರಾರಂಭವಾಗಿ ಅದರ ಟಾಪ್ ವೆರಿಯಂಟ್‌ನ ಎಕ್ಸ್ ಶೋ ರೂಂ ಬೆಲೆ ರೂ. 14.14 ಲಕ್ಷಕ್ಕೆ ಏರುತ್ತದೆ. ಗ್ಲೋಬಲ್ ಎನ್‌ಸಿಎಪಿಯಿಂದ ಕ್ರ್ಯಾಶ್ ಟೆಸ್ಟ್‌ನಲ್ಲಿ ಟಾಟಾ ನೆಕ್ಸಾನ್ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ಮಾರುತಿ ಬ್ರೆಝಾ 4-ಸ್ಟಾರ್ ಸುರಕ್ಷತೆಯ ರೇಟಿಂಗ್ ಅನ್ನು ಹೊಂದಿದೆ. ಟಾಟಾ ನೆಕ್ಸಾನ್ 382 ಲೀಟರ್ ಬೂಟ್-ಸ್ಪೇಸ್ ಹೊಂದಿದೆ. ಬ್ರೆಝಾ 328 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.

ಆಟೋಮೊಬೈಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?