Maruti Swift CNG: ಭರ್ಜರಿ ಮೈಲೇಜ್ ನೀಡುವ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿ ವರ್ಷನ್
Maruti Suzuki Swift CNG: ಮಾರುತಿ ಸುಜುಕಿ ತನ್ನ ಹೊಸ ಸ್ವಿಫ್ಟ್ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ನವೀಕೃತ ಎಂಜಿನ್ ಆಯ್ಕೆಯೊಂದಿಗೆ ಭರ್ಜರಿ ಮೈಲೇಜ್ ನೀಡಲಿದೆ.
ದೇಶದ ನಂ.1 ಕಾರುಗಳ ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ತನ್ನ ಹೊಸ ತಲೆಮಾರಿನ ಸ್ವಿಫ್ಟ್ ಸಿಎನ್‌ಜಿ (Swift CNG) ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಕಾರು ವಿಎಕ್ಸ್ಐ, ವಿಎಕ್ಸ್ಐ ಆಪ್ಷನ್ ಮತ್ತು ಜೆಡ್ಎಕ್ಸ್ಐ ಎನ್ನುವ ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇವು ಎಕ್ಸ್ ಶೋರೂಂ ಪ್ರಕಾರ ರೂ. 8.20 ಲಕ್ಷ, ರೂ.8.47 ಲಕ್ಷ ಮತ್ತು ರೂ. 9.20 ಲಕ್ಷ ಬೆಲೆ ಹೊಂದಿವೆ.
ನಾಲ್ಕನೇ ತಲೆಮಾರಿನ ವೈಶಿಷ್ಟ್ಯತೆ ಹೊಂದಿರುವ ಹೊಸ ಸ್ವಿಫ್ಟ್ ಕಾರು ಈಗಾಗಲೇ ಪೆಟ್ರೋಲ್ ಮಾದರಿಯಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೀಗ ಸಿಎನ್‌ಜಿ ಆವೃತ್ತಿಯೊಂದಿಗೂ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಇದಕ್ಕಾಗಿ ಹೊಸ ಕಾರಿನಲ್ಲಿ 1.2 ಲೀಟರ್ ಜೆಡ್12ಇ ಪೆಟ್ರೋಲ್ ಎಂಜಿನ್ ಜೊತೆಗೆ ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಕಿಟ್ ಜೋಡಣೆ ಮಾಡಲಾಗಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ ಕೆಜಿ ಸಿಎನ್ ಜಿಗೆ ಬರೋಬ್ಬರಿ 32.85 ಕಿ.ಮೀ ಮೈಲೇಜ್ ನೀಡಲಿದೆ.
ಭರ್ಜರಿ ಮೈಲೇಜ್ ಮಾತ್ರವಲ್ಲದೇ ಸ್ವಿಫ್ಟ್ ಸಿಎನ್‌ಜಿ ಕಾರಿನ ವಿಎಕ್ಸ್ಐ ವೆರಿಯೆಂಟ್ ಗೂ ಅನ್ವಯಿಸುವಂತೆ ಆರು ಏರ್ ಬ್ಯಾಗ್ ಗಳು, ಇಎಸ್ ಸಿ, ರಿಮೋಟ್ ಕಂಟ್ರೋಲ್ ಲಾಕಿಂಗ್, ಹಾಲೋಜೆನ್ ಪ್ರೊಜೆಕ್ಟರ್, 14 ಇಂಚಿನ ಅಲಾಯ್ ವ್ಹೀಲ್ಸ್, ಪವರ್ ವಿಂಡ್ಸೋ ನೀಡಲಾಗಿದೆ. ಹಾಗೆಯೇ ಮಧ್ಯಮದಲ್ಲಿರುವ ವಿಎಕ್ಸ್ಐ ಆಪ್ಷನ್ ಮಾದರಿಯಲ್ಲಿ ವಿಎಕ್ಸ್ಐನಲ್ಲಿರುವ ಕೆಲವು ಫೀಚರ್ಸ್ ಜೊತೆಗೆ ಹೆಚ್ಚುವರಿಯಾಗಿ ಎತ್ತರ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್, ಆ್ಯಂಡ್ರಾಯಿಡ್ ಆಟೋ ಮತ್ತು ಕಾರ್ ಪ್ಲೇ ಸರ್ಪೊಟ್ ಹೊಂದಿರುವ 7 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ ಮತ್ತು ಸ್ಟೀರಿಂಗ್ ಮೌಂಟೆಡ್ ಸೌಲಭ್ಯ ನೀಡಲಾಗಿದೆ.
ಇದನ್ನೂ ಓದಿ: ಅಚ್ಚರಿಯ ಬೆಲೆಯಲ್ಲಿ ಸೂಪರ್ ಫೀಚರ್ಸ್ ಹೊಂದಿರುವ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ಬಿಡುಗಡೆ
ಟಾಪ್ ಎಂಡ್ ಮಾದರಿಯಾದ ಜೆಡ್ಎಕ್ಸ್ಐನಲ್ಲಿ ವಿಎಕ್ಸ್ಐ, ವಿಎಕ್ಸ್ಐ ಆಪ್ಷನ್ ನಲ್ಲಿರುವ ಕೆಲವು ಫೀಚರ್ಸ್ ಗಳ ಜೊತೆ ಹೆಚ್ಚುವರಿಯಾಗಿ ಡಿಆರ್ ಎಲ್ ಗಳ ಜೊತೆ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್, 15 ಇಂಚಿನ ಅಲಾಯ್ ವ್ಹೀಲ್ಸ್, ವೈರ್ ಲೆಸ್ ಚಾರ್ಜಿಂಗ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ರಿಯರ್ ವಾಷರ್ ವೈಪರ್ಸ್ ಸೇರಿದಂತೆ ಹಲವಾರು ಆಕರ್ಷಕ ಫೀಚರ್ಸ್ ನೀಡಲಾಗಿದೆ.
ಹೊಸ ಬದಲಾವಣೆಯೊಂದಿಗೆ ಸ್ವಿಫ್ಟ್ ಸಿಎನ್ ಜಿ ಮಾದರಿಯು ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಇದು ಕಂಪನಿಯ ಒಟ್ಟಾರೆ ಕಾರು ಮಾರಾಟ ಪ್ರಮಾಣವನ್ನು ಸುಧಾರಿಸಲಿದೆ. ಈಗಾಗಲೇ ಶೇ. 15 ರಷ್ಟು ಸ್ವಿಫ್ಟ್ ಗ್ರಾಹಕರು ಸಿಎನ್ ಜಿ ಮಾದರಿಗಳನ್ನು ಆಯ್ಕೆ ಮಾಡುತ್ತಿದ್ದು, ಇದೀಗ ಮೈಲೇಜ್ ಮತ್ತು ಫೀಚರ್ಸ್ ಗಳು ಹೆಚ್ಚಿರುವುದರಿಂದ ಗ್ರಾಹಕರ ಆಯ್ಕೆ ಮತ್ತಷ್ಟು ಹೆಚ್ಚಿಸುವ ನೀರಿಕ್ಷೆಯಿದೆ.
ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!
ಇನ್ನು ಆಕರ್ಷಕ ಬೆಲೆ, ಸ್ಪೋರ್ಟಿಯಾಗಿರುವ ವಿನ್ಯಾಸ, ಅತ್ಯುತ್ತಮ ಮೈಲೇಜ್ ಮತ್ತು ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿರುವ ಸ್ವಿಫ್ಟ್ ಕಾರು ಕಾಲಕ್ಕೆ ತಕ್ಕಂತೆ ಹಲವಾರು ಬದಲಾವಣೆಗಳೊಂದಿಗೆ ಮಾರಾಟಗೊಳ್ಳುತ್ತಿದೆ. ಇದೀಗ ಮಾರುಕಟ್ಟೆಯಲ್ಲಿರುವ ಹೊಸ ಸ್ವಿಫ್ಟ್ ಆವೃತ್ತಿಯು ಈ ಹಿಂದೆಂದಿಗಿಂತಲೂ ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಪೆಟ್ರೋಲ್ ಮಾದರಿಯು ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ ಆಪ್ಷನ್, ಜೆಡ್ಎಕ್ಸ್ಐ ಮತ್ತು ಜೆಡ್ಎಕ್ಸ್ಐ ಪ್ಲಸ್ ವೆರಿಯೆಂಟ್ ಗಳಲ್ಲಿ ಮಾರಾಟಗೊಳ್ಳುತ್ತಿದೆ.