ಸೆಪ್ಟೆಂಬರ್ 11ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್

ಎಂಜಿ ಮೋಟಾರ್ ಕಂಪನಿಯು ತನ್ನ ಬಹುನೀರಿಕ್ಷಿತ ವಿಂಡ್ಸರ್ ಎಲೆಕ್ಟ್ರಿಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಇವಿ ಕಾರು ಭರ್ಜರಿ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ.

ಸೆಪ್ಟೆಂಬರ್ 11ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಎಂಜಿ ವಿಂಡ್ಸರ್ ಎಲೆಕ್ಟ್ರಿಕ್
ಎಂಜಿ ವಿಂಡ್ಸರ್ ಎಲೆಕ್ಟ್ರಿಕ್
Follow us
Praveen Sannamani
|

Updated on: Aug 14, 2024 | 10:27 PM

ಎಂಜಿ ಮೋಟಾರ್ (MG Motor) ಕಂಪನಿಯು ತನ್ನ ಹೊಸ ಇವಿ ಕಾರು ಮಾದರಿಯಾದ ವಿಂಡ್ಸರ್ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಸೆಪ್ಟೆಂಬರ್ 11ರಂದು ಅಧಿಕೃತವಾಗಿ ಬಿಡುಗಡೆಯಾಗುವ ಸುಳಿವು ನೀಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಜೆಡ್ಎಸ್ ಇವಿ ಮತ್ತು ಕಾಮೆಟ್ ಇವಿ ನಡುವಿನ ಸ್ಥಾನದಲ್ಲಿ ಬಿಡುಗಡೆಯಾಗಲಿರುವ ಹೊಸ ವಿಂಡ್ಸರ್ ಇವಿ ಕಾರು ಅತ್ಯಾಧುನಿಕ ವಿನ್ಯಾಸ ಭಾಷೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಲಿದೆ.

ಜೆಎಸ್ ಡಬ್ಲ್ಯು ಜೊತೆಗೂಡಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಇತ್ತೀಚೆಗೆ ಬೃಹತ್ ಯೋಜನೆ ಚಾಲನೆ ನೀಡಿರುವ ಎಂಜಿ ಮೋಟಾರ್ ಕಂಪನಿಯು ಹೊಸ ಹೂಡಿಕೆಯೊಂದಿಗೆ ವಿಂಡ್ಸರ್ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಹೊಸದಾಗಿ ಬಿಡುಗಡೆಯಾಗಿರುವ ವಿಂಡ್ಸರ್ ಕಾರು ಮಾದರಿಯು ಸದ್ಯ ಇಂಡೋನೇಷಿಯಾ ಮಾರುಕಟ್ಟೆಯಲ್ಲಿರುವ ಸೈಕ್ ಕಂಪನಿಯ ಕ್ಲೌಡ್ ಇವಿ ಮಾದರಿಯನ್ನು ಆಧರಿಸಿದ್ದು, ಇದು ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಗ್ರಾಹಕರ ಹಲವು ಬೇಡಿಕೆಗಳನ್ನು ಪೂರೈಸಲಿದೆ.

ಹೊಸ ವಿಂಡ್ಸರ್ ಕಾರು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಲವು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಇದು 4,295 ಎಂಎಂ ಉದ್ದಳತೆಯೊಂದಿಗೆ ಅತ್ಯಾಧುನಿಕ ವಿನ್ಯಾಸದೊಂದಿಗೆ ಹಲವಾರು ಐಷಾರಾಮಿ ಫೀಚರ್ಸ್ ಗಳನ್ನು ಪಡೆದುಕೊಂಡಿರಲಿದೆ. 5 ಸೀಟರ್ ಮಾದರಿಯಾಗಿರುವ ಹೊಸ ಇವಿ ಕಾರು ಮಾದರಿಯಲ್ಲಿ ಎಂಜಿ ಕಂಪನಿಯು ಭರ್ಜರಿ ಮೈಲೇಜ್ ನೊಂದಿಗೆ ವಿವಿಧ ಬ್ಯಾಟರಿ ಪ್ಯಾಕ್ ಗಳ ಆಯ್ಕೆ ನೀಡಲಿದ್ದು, ಹೊಸ ಕಾರಿನ ಟಾಪ್ ಎಂಡ್ ಮಾದರಿಯು 50.6 kWh ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಪ್ರತಿ ಚಾರ್ಜ್ ಗೆ 460 ಕಿ.ಮೀ ಮೈಲೇಜ್ ನೀಡಲಿದೆ.

ಹಾಗೆಯೇ ಹೊಸ ಇವಿ ಕಾರಿನಲ್ಲಿ ಆಧುನಿಕ ಕಾರುಗಳಲ್ಲಿ ಫೀಚರ್ಸ್ ಗಳಾದ ಎಲ್ಇಡಿ ಲೈಟ್ಸ್, ಫ್ಲಶ್ ಡೋರ್ ಹ್ಯಾಂಡಲ್ಸ್, ಡ್ಯುಯಲ್ ಡಿಜಿಟಲ್ ಸ್ಕ್ರೀನ್, 360 ಡಿಗ್ರಿ ಕ್ಯಾಮೆರಾ, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಕನೆಕ್ಡೆಡ್ ಕಾರ್ ಟೆಕ್ ಸೇರಿದಂತೆ 135 ಡಿಗ್ರಿಯಲ್ಲಿ ಮಡಿಕೆ ಮಾಡಬಹುದಾದ ಹಿಂಬದಿಯ ಆಸನಗಳನ್ನು ನೀಡಲಿದೆ. ಜೊತೆಗೆ ಹೊಸ ಕಾರಿನಲ್ಲಿ ಗರಿಷ್ಠ ಸುರಕ್ಷತೆಗಾಗಿ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ನೀಡಲಾಗುತ್ತಿದ್ದು, ಇದು ಸಂಭಾವ್ಯ ಅಪಘಾತಗಳನ್ನು ತಡೆಯುವ ಮೂಲಕ ಪ್ರಾಣಹಾನಿ ಪ್ರಕರಣಗಳನ್ನು ತಡೆಯಲಿದೆ.

ಇದರೊಂದಿಗೆ ಹೊಸ ಇವಿ ಕಾರು ತಂತ್ರಜ್ಞಾನ ಮತ್ತು ಬ್ಯಾಟರಿ ಪ್ಯಾಕ್ ಗಳಿಗೆ ಅನುಗುಣವಾಗಿ ರೂ. 16 ಲಕ್ಷದಿಂದ ರೂ. 20 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದು, ಇದು ಬೆಲೆ ವಿಚಾರವಾಗಿ ಬಿವೈಡಿ ಇ6 ಎಂಪಿವಿ ಮತ್ತು ಟಾಟಾ ಕರ್ವ್ ಇವಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 13 ರಿಂದ 19ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
ದೃಷ್ಟಿ ಗಣಪತಿ ಕುರಿತಾಗಿ ಶಾಸ್ತ್ರಗಳಲ್ಲಿ ಉಲ್ಲೇಖವಿದೆಯೇ? ಇಲ್ಲಿದೆ ಉತ್ತರ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?