ಇಂಡಿಯಾ 2.0 ಮೂಲಕ ಹೊಸ ದಾಖಲೆ ನಿರ್ಮಿಸಿದ ಸ್ಕೋಡಾ-ಫೋಕ್ಸ್ ವ್ಯಾಗನ್
ಭಾರತದಲ್ಲಿ ಸಹಭಾಗಿತ್ವದ ಕಾರು ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಕೈಗೊಂಡಿರುವ ಸ್ಕೋಡಾ ಮತ್ತು ಫೋಕ್ಸ್ ವ್ಯಾಗನ್ ಕಂಪನಿಗಳು ಇದೀಗ ಹೊಸ ಮೈಲಿಗಲ್ಲು ಸಾಧಿಸಿವೆ.
ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮೂಲಕ ಗಮನಸೆಳೆಯುತ್ತಿರುವ ಸ್ಕೋಡಾ ಮತ್ತು ಫೋಕ್ಸ್ ವ್ಯಾಗನ್ (Skoda Auto and Volkswagen India) ಕಂಪನಿಗಳು ಇದೀಗ ಮೈಲಿಗಲ್ಲು ಸಾಧಿಸಿವೆ. ಭಾರತದಲ್ಲಿ ಇದುವರೆಗೆ ಎರಡು ಕಂಪನಿಗಳು ಒಟ್ಟಾರೆಯಾಗಿ 15 ಲಕ್ಷ ಕಾರುಗಳ ಉತ್ಪಾದನೆಯ ಮೈಲಿಗಲ್ಲು ಸಾಧಿಸಿದ್ದು, ಇಂಡಿಯಾ 2.0 ಯೋಜನೆ ಅಡಿ ಹೆಚ್ಚಿನ ಮಟ್ಟದ ಬೇಡಿಕೆ ದಾಖಲಿಸುತ್ತಿವೆ.
MQB-A0-IN ಪ್ಲ್ಯಾಟ್ ಫಾರ್ಮ್ ಮೂಲಕ ಹೊಸ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಸ್ಕೋಡಾ ಮತ್ತು ಫೋಕ್ಸ್ ವ್ಯಾಗನ್ ಕಂಪನಿಗಳು ಪುಣೆಯಲ್ಲಿರುವ ಚಾಕನ್ ಕಾರು ಉತ್ಪಾದನಾ ಘಟಕದ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ. ಇಂಡಿಯಾ 2.0 ಯೋಜನೆ ನಂತರ ಹೆಚ್ಚಿನ ಮಟ್ಟದ ಬೇಡಿಕೆ ದಾಖಲಿಸುತ್ತಿದ್ದು, ಕುಶಾಕ್, ಸ್ಲಾವಿಯಾ, ವರ್ಟಸ್ ಮತ್ತು ಟೈಗನ್ ಕಾರುಗಳು ಭಾರೀ ಬೇಡಿಕೆ ಪಡೆದುಕೊಳ್ಳುತ್ತಿವೆ.
ಈ ಮೂಲಕ ಭಾರತದಲ್ಲಿ ಉತ್ಪಾದನೆಯಾಗುವ ಶೇ.30 ರಷ್ಟು ಮೇಡ್ ಇನ್ ಇಂಡಿಯಾ ಕಾರುಗಳನ್ನು ವಿದೇಶಿ ಮಾರುಕಟ್ಟಗಳಿಗೆ ರಫ್ತು ಮಾಡಿರುವ ಸ್ಕೋಡಾ ಮತ್ತು ಫೋಕ್ಸ್ ವ್ಯಾಗನ್ ಕಂಪನಿಗಳ ಸುರರಕ್ಷೆಯಲ್ಲಿ ಗ್ರಾಹಕರ ಮೆಚ್ಚುಗೆ ಪಡೆದುಕೊಂಡಿವೆ.
ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!
ಇನ್ನು ಗುಣಮಟ್ಟದ ಉತ್ಪಾದನೆ ಮತ್ತು ಗರಿಷ್ಠ ಸುರಕ್ಷಾ ಸೌಲಭ್ಯಗಳ ಮೂಲಕ ಈಗಾಗಲೇ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಸೇಫ್ಟಿ ಹೊಂದಿರುವ ಕುಶಾಕ್ ಮತ್ತು ಸ್ಲಾವಿಯಾ ಕಾರುಗಳಲ್ಲಿ ಏರ್ ಬ್ಯಾಗ್ ಉನ್ನತೀಕರಣ ಜೊತೆಗೆ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಫೀಚರ್ಸ್ ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಹೊಸ ಕಾರುಗಳಲ್ಲಿ ಮೊದಲ ಬಾರಿಗೆ 360 ಡಿಗ್ರಿ ಕ್ಯಾಮೆರಾ ಸೌಲಭ್ಯವನ್ನು ಒಳಗೊಂಡ ಲೆವಲ್ 2 ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಸೌಲಭ್ಯಗಳನ್ನು ಪಡೆದುಕೊಳ್ಳಲಿವೆ.
ಸಂಭಾವ್ಯ ಅಪಘಾತಗಳನ್ನು ತಗ್ಗಿಸುವಲ್ಲಿ ಅಡ್ವಾನ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಸಾಕಷ್ಟು ಸಹಕಾರಿಯಾಗುತ್ತಿದ್ದು, ಇದು ಕಾರು ಚಾಲನೆಯಲ್ಲಿರುವಾಗ ಚಾಲಕನ ಅರಿವಿಗೆ ಬಾರದೇ ಆಗಬಹುದಾದ ಅಪಘಾತಗಳನ್ನು ತಪ್ಪಿಸಲು ನೆರವಾಗುತ್ತಿದೆ. ಹೀಗಾಗಿ ಇತ್ತೀಚೆಗೆ ಬಿಡುಗಡೆಯಾಗಿರುವ ಹಲವು ಕಾರುಗಳಲ್ಲಿ ಈ ಹೊಸ ಸುರಕ್ಷಾ ಸೌಲಭ್ಯ ಪರಿಚಯಿಸಿದ್ದು, ಇದು ಗ್ರಾಹಕರಿಂದಲೂ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇದರಿಂದ ಸ್ಕೋಡಾ ಕಂಪನಿ ಸಹ ಕುಶಾಕ್ ಮತ್ತು ಸ್ಲಾವಿಯಾ ಕಾರುಗಳಿಗಾಗಿ ಹೊಸ ಫೀಚರ್ಸ್ ನೀಡಲು ಸಿದ್ದವಾಗುತ್ತಿದ್ದು, ಹೊಸ ಫೀಚರ್ಸ್ ಅನ್ನು ಹೈ ಎಂಡ್ ವೆರಿಯೆಂಟ್ ಗಳಲ್ಲಿ ನೀಡಬಹುದಾಗಿದೆ.
ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!
ಹಾಗೆಯೇ ಕುಶಾಕ್ ಮತ್ತು ಸ್ಲಾವಿಯಾ ಸದ್ಯಕ್ಕೆ 1.0 ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಇದರಲ್ಲಿ ಎಲೆಗೆನ್ಸ್ ಮತ್ತು ಮಾಂಟೆ ಕಾರ್ಲೊ ಎಡಿಷನ್ ಗಳನ್ನು ಹೊಂದಿವೆ. ಅದೇ ರೀತಿಯಾಗಿ ವರ್ಟಸ್ ಮತ್ತು ಟೈಗನ್ ಕಾರುಗಳು ಕೂಡಾ 1.0 ಲೀಟರ್ ಟಿಎಸ್ಐ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿವೆ.