ಕರ್ನಾಟಕದಲ್ಲಿ ಸೆಪ್ಟಂಬರ್ ತಿಂಗಳು ಬ್ಯಾಂಕ್​ಗಳಿಗೆ 8 ರಜಾದಿನಗಳು; ಗಣೇಶ ಚತುರ್ಥಿ, ಈದ್ ಮಿಲಾದ್ ಮೊದಲಾದ ದಿನ ರಜೆ

Bank holidays in Karnataka: ದೇಶದ ವಿವಿಧೆಡೆ ಸೆಪ್ಟಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 14 ದಿನ ರಜೆಗಳಿವೆ. ಆರ್​ಬಿಐ ಕ್ಯಾಲಂಡರ್ ಪ್ರಕಾರ ಗಣೇಶ ಚತುರ್ಥಿ, ಈದ್ ಮಿಲಾದ್ ರಾಷ್ಟ್ರೀಯ ಹಬ್ಬವಾದರೆ ಉಳಿದವು ಪ್ರಾದೇಶಿಕ ರಜೆಗಳು. ಕರ್ನಾಟಕದಲ್ಲಿ ಶನಿವಾರ, ಭಾನುವಾರವೂ ಒಳಗೊಂಡು ಒಟ್ಟು 8 ದಿನ ಮಾತ್ರವೇ ಸೆಪ್ಟಂಬರ್​ನಲ್ಲಿ ರಜೆ ಇರುತ್ತದೆ.

ಕರ್ನಾಟಕದಲ್ಲಿ ಸೆಪ್ಟಂಬರ್ ತಿಂಗಳು ಬ್ಯಾಂಕ್​ಗಳಿಗೆ 8 ರಜಾದಿನಗಳು; ಗಣೇಶ ಚತುರ್ಥಿ, ಈದ್ ಮಿಲಾದ್ ಮೊದಲಾದ ದಿನ ರಜೆ
ಬ್ಯಾಂಕು
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk

Updated on:Aug 27, 2024 | 12:14 PM

ಬೆಂಗಳೂರು, ಆಗಸ್ಟ್ 22: ಗಣೇಶ ಚತುರ್ಥಿ ಸೇರಿ ದೇಶದ ವಿವಿಧೆಡೆ 14 ದಿನ ಬ್ಯಾಂಕುಗಳಿಗೆ ರಜೆ ಇದ್ದರೆ, ಕರ್ನಾಟಕದಲ್ಲಿ ಎಂಟು ದಿನ ರಜೆಗಳಿವೆ. ಇದರಲ್ಲಿ ಗಣೇಶನ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ರಜೆಗಳೂ ಒಳಗೊಂಡಿವೆ. ನಾಲ್ಕು ಭಾನುವಾರ ಹಾಗೂ ಎರಡು ಶನಿವಾರದ ರಜೆಗಳೂ ಈ ಎಂಟು ರಜೆಗಳ ಪಟ್ಟಿಯಲ್ಲಿವೆ. ಸೆಪ್ಟಂಬರ್ 7ರಂದು ವಿನಾಯಕ ಚತುರ್ಥಿ ಇದ್ದರೆ, ಸೆಪ್ಟಂಬರ್ 16 ಸೋಮವಾರದಂದು ಈದ್ ಮಿಲಾದ್ ಹಬ್ಬಕ್ಕೆ ರಜೆ ಇದೆ. ಸೆಪ್ಟಂಬರ್ 14ರಿಂದ 16ರವರೆಗೆ ಸತತ ಮೂರು ದಿನಗಳ ಕಾಲ ಕರ್ನಾಟಕದಲ್ಲಿ ಬ್ಯಾಂಕ್ ರಜಾ ದಿನಗಳಿವೆ.

ಕರ್ನಾಟಕದಲ್ಲಿ 2024ರ ಸೆಪ್ಟಂಬರ್​ನಲ್ಲಿರುವ ಬ್ಯಾಂಕ್ ರಜಾ ದಿನಗಳು

  • ಸೆಪ್ಟಂಬರ್ 7, ಶನಿವಾರ: ವಿನಾಯಕ ಚತುರ್ಥಿ
  • ಸೆಪ್ಟಂಬರ್ 8: ಭಾನುವಾರದ ರಜೆ
  • ಸೆಪ್ಟಂಬರ್ 14: ಎರಡನೇ ಶನಿವಾರ
  • ಸೆಪ್ಟಂಬರ್ 15: ಭಾನುವಾರದ ರಜೆ
  • ಸೆಪ್ಟಂಬರ್ 16, ಸೋಮವಾರ: ಈದ್ ಮಿಲಾದ್
  • ಸೆಪ್ಟಂಬರ್ 22: ಭಾನುವಾರದ ರಜೆ
  • ಸೆಪ್ಟಂಬರ್ 28: ನಾಲ್ಕನೇ ಶನಿವಾರ
  • ಸೆಪ್ಟಂಬರ್ 29: ಭಾನುವಾರದ ರಜೆ

ಅಕ್ಟೋಬರ್, ನವೆಂಬರ್, ಡಿಸೆಂಬರ್​ನಲ್ಲಿರುವ ರಜಾದಿನಗಳು

  • ಅ. 1, ಮಂಗಳವಾರ: ಬ್ಯಾಂಕ್ ಖಾತೆಗಳ ಅರ್ಧವಾರ್ಷಿಕ ಮುಕ್ತಾಯ
  • ಅ. 2, ಬುಧವಾರ: ಗಾಂಧಿ ಜಯಂತಿ
  • ಅ. 11, ಶುಕ್ರವಾರ: ಆಯುಧ ಪೂಜೆ, ಸರಸ್ವತಿ ಪೂಜೆ
  • ಅ. 21, ಗುರುವಾರ: ದೀಪಾವಳಿ
  • ನ. 1, ಶುಕ್ರವಾರ: ಕನ್ನಡ ರಾಜ್ಯೋತ್ಸವ
  • ನ. 2, ಶನಿವಾರ: ಗೋವರ್ಧನ ಪೂಜೆ
  • ನ. 18, ಸೋಮವಾರ: ಕನಕದಾಸ ಜಯಂತಿ
  • ಡಿ. 25, ಬುಧವಾರ: ಕ್ರಿಸ್ಮಸ್ ಹಬ್ಬ
  • ಡಿ. 31, ಮಂಗಳವಾರ: ಹೊಸ ವರ್ಷದ ಪ್ರಯುಕ್ತ

ಇದನ್ನೂ ಓದಿ: ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬ ಸೇರಿ 2024ರ ಸೆಪ್ಟಂಬರ್ ತಿಂಗಳಲ್ಲಿ 14 ದಿನ ರಜೆ; ಇಲ್ಲಿದೆ ಪಟ್ಟಿ

ಎಟಿಎಂ, ನೆಟ್​ಬ್ಯಾಂಕಿಂಗ್ ಇತ್ಯಾದಿ ಸೇವೆ ಲಭ್ಯ

ಬ್ಯಾಂಕುಗಳಿಗೆ ಯಾವಾಗಲೇ ರಜೆಗಳಿದ್ದರೂ ಬಹುತೇಕ ಬ್ಯಾಂಕಿಂಗ್ ಚಟುವಟಿಕೆಗಳು ನಿರಂತರವಾಗಿ ಲಭ್ಯ ಇರುತ್ತವೆ. ಎಟಿಎಂ ಸೇವೆ ಇದ್ದೇ ಇರುತ್ತದೆ. ನೆಟ್​ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್​ಗಳು ಸದಾ ಲಭ್ಯ ಇರುತ್ತವೆ. ಯುಪಿಐ ಮೂಲಕವೂ ಹಣದ ವಹಿವಾಟು ನಡೆಸಬಹುದು. ಚೆಕ್ ಡೆಪಾಸಿಟ್, ಕ್ಯಾಷ್ ಡೆಪಾಸಿಟ್, ಡಿಡಿ ಇತ್ಯಾದಿ ಸೇವೆಗಳಿಗೆ ಬ್ಯಾಂಕುಗಳಿಗೆ ಹೋಗಬೇಕಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:14 pm, Fri, 23 August 24

ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ