AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 9 ಒಟಿಟಿ ಸೌಲಭ್ಯ: ಬಿಎಸ್​ಎನ್​ಎಲ್ ಹೊಸ ಪ್ಲಾನ್ ಕಂಡು ದಂಗಾದ ಜಿಯೋ, ಏರ್ಟೆಲ್

BSNL Broadband Plans: ಬಿಎಸ್​ಎನ್​ಎಲ್ ಅಧಿಕ ಚಂದಾದಾರರನ್ನು ಆಕರ್ಷಿಸಲು ನೂತನವಾಗಿ ಒಟಿಟಿ (OTT) ಪ್ರಯೋಜನ ಒಳಗೊಂಡ ಪ್ಲಾನ್​ಗಳನ್ನು ಬಿಡುಗಡೆ ಮಾಡಿ ಧೂಳೆಬ್ಬಿಸುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ. ಬಿಎಸ್​ಎನ್​ಎಲ್ ಅಧಿಕ ಚಂದಾದಾರರನ್ನು ಆಕರ್ಷಿಸಲು ನೂತನವಾಗಿ ಒಟಿಟಿ (OTT) ಪ್ರಯೋಜನ ಒಳಗೊಂಡ ಪ್ಲಾನ್​ಗಳನ್ನು ಬಿಡುಗಡೆ ಮಾಡಿ ಧೂಳೆಬ್ಬಿಸುತ್ತಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಬರೋಬ್ಬರಿ 9 ಒಟಿಟಿ ಸೌಲಭ್ಯ: ಬಿಎಸ್​ಎನ್​ಎಲ್ ಹೊಸ ಪ್ಲಾನ್ ಕಂಡು ದಂಗಾದ ಜಿಯೋ, ಏರ್ಟೆಲ್
BSNL
Vinay Bhat
| Edited By: |

Updated on:Oct 07, 2026 | 4:33 PM

Share

ಕೆಲವು ವರ್ಷಗಳ ಹಿಂದೆ ಟೆಲಿಕಾಂ ಮಾರಯಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಸರ್ಕಾರಿ ಒಡೆತನದ ಭಾರತೀಯ ಸಂಚಾರ್‌ ನಿಗಮ ಲಿಮಿಟೆಡ್ ಬಿಎಸ್​ಎನ್​ಎಲ್ (BSNL)​ ಇದೀಗ ಪಾತಾಳಕ್ಕೆ ಕುಸಿದಿದ್ದು ಮೇಲೇಳಲು ಹರಸಾಹಸ ಪಡುತ್ತಿದೆ. ಸರಕಾರದ ನೀತಿಗಳು, ಖಾಸಗಿ ಟೆಲಿಕಾಂ (Telecom) ಕಂಪನಿಗಳು ದರ ಸಮರ ಸೇರಿ ಅನೇಕ ಕಾರಣಗಳಿಂದ ಬಿಎಸ್​ಎನ್​ಎಲ್ ಸಾಕಷ್ಟು ಲಾಸ್​ನಲ್ಲಿದೆ. ಹೀಗಿದ್ದರೂ ಆಗಾಗ ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡಿ ಸದ್ದು ಮಾಡುತ್ತದೆ. ಇದೀಗ ಬಿಎಸ್​ಎನ್​ಎಲ್ ಅಧಿಕ ಚಂದಾದಾರರನ್ನು ಆಕರ್ಷಿಸಲು ನೂತನವಾಗಿ ಒಟಿಟಿ (OTT) ಪ್ರಯೋಜನ ಒಳಗೊಂಡ ಪ್ಲಾನ್​ಗಳನ್ನು ಬಿಡುಗಡೆ ಮಾಡಿ ಧೂಳೆಬ್ಬಿಸುತ್ತಿದೆ. ಈ ನೂತನ ಯೋಜನೆಗಳು ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್ ಪ್ಲಾನ್ ಆಗಿದ್ದು ಮನರಂಜನೆ ಆಯ್ಕೆಗಾಗಿ 9 ಜನಪ್ರಿಯ ಒಟಿಟಿ ಸೌಲಭ್ಯವನ್ನು ಲಭ್ಯ ಮಾಡಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಬಿಎಸ್‌ಎನ್‌ಎಲ್​ನ ಹೊಸ 249 ರೂ. ಬ್ರಾಡ್‌ಬ್ಯಾಂಡ್ ಪ್ಲಾನ್ ಗ್ರಾಹಕರಿಗೆ ಒಟ್ಟು 9 ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನೀಡುತ್ತದೆ. ಅವುಗಳು ಕ್ರಮವಾಗಿ ಜೀ5, ಸೋನಿಲೈವ್, ವೋಟ್‌ ಸೆಲೆಕ್ಟ್‌, ಯುಪ್‌ ಟಿವಿ, ಆಹಾ, Lionsgate Play, ಹಂಗಾಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ ಸೇರಿ ಮತ್ತೊಂದು ಒಟಿಟಿಯ ಚಂದಾದಾರಿಕೆ ನೀಡುತ್ತದೆ. ಎಂಟ್ರಿ ಲೆವೆಲ್‌ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ ಒಟಿಟಿ ಪ್ರಯೋಜನ ಬಯಸುವ ಬಳಕೆದಾರರಿಗೆ ಈ ನೂತನ ಪ್ಲಾನ್ ಸಹಕಾರಿ ಆಗಲಿದೆ.

ಇದರ ಜೊತೆಗೆ ಬಿಎಸ್ಎನ್ಎಲ್ 499 ರೂ. ಬ್ರಾಡ್‌ಬ್ಯಾಂಡ್‌ ಯೋಜನೆಯು 40 Mbps ಇಂಟರ್ನೆಟ್ ವೇಗವನ್ನು 3.3TB FUP ಡೇಟಾದೊಂದಿಗೆ ಅನಿಯಮಿತ ವಾಯಿಸ್‌ ಕರೆ ಸೌಲಭ್ಯ ಪಡೆದಿದೆ. ನಿಗದಿತ FUP ಡೇಟಾ ಬಳಕೆಯ ಮಿತಿ ಮುಗಿದ ಬಳಿಕ, ಡೇಟಾ ವೇಗವು 4 Mbps ಗೆ ಇಳಿಕೆಯಾಗುತ್ತದೆ. ಅಂತೆಯೆ 449ರೂ. ಫೈಬರ್ ಬೇಸಿಕ್ NEO ಪ್ಲ್ಯಾನ್ನಲ್ಲಿ ಬಳಕೆದಾರರಿಗೆ ತಿಂಗಳಿಗೆ 3.3 TB ವರೆಗೆ 30 Mbps ವೇಗವನ್ನು ಬ್ರೌಸ್ ಮಾಡಲು ಅನುವು ಮಾಡಿಕೊಡುತ್ತದೆ. FUP ಡೇಟಾ ಬಳಕೆಯ ಮಿತಿ ಮುಗಿದ ಬಳಿಕ, ಆಪರೇಟರ್ ಡೇಟಾ ವೇಗವನ್ನು 2 Mbps ಗೆ ನಿರ್ಬಂಧಿಸುತ್ತದೆ.

ಬಿಎಸ್​ಎನ್​ಎಲ್​ ಕಳೆದ ವರ್ಷಾಂತ್ಯದಲ್ಲಿ 269 ರೂ. ಹಾಗೂ 769 ರೂ. ವಿನ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ ಮಾಡಿತ್ತು. ಇದು ಸಾಕಷ್ಟು ಪ್ರಸಿದ್ದಿ ಪಡೆದಿದೆ. ಅನಿಯಮಿತ ಉಪಯೋಗ ಬಯಸುವವರಿಗೆ ಈ ಯೋಜನೆ ಸಾಕಷ್ಟು ಸಹಕಾರಿ ಆಗಲಿದೆ.

269 ರೂ. ಪ್ಲಾನ್​ನಲ್ಲಿ ದಿನಕ್ಕೆ 2GB ಡೇಟಾ ಪ್ರಯೋಜನ ಸಿಗುತ್ತದೆ. ಯಾವುದೇ ನೆಟ್​ವರ್ಕ್​ಗೆ ಅನಿಯಮಿತ ವಾಯಿಸ್ ಕರೆ ಸೌಲಭ್ಯವಿದೆ. ಜೊತೆಗೆ ಪ್ರತಿದಿನ 100 ಎಸ್​ಎಮ್​ಎಸ್ ಉಚಿತ ಪಡೆಯಬಹುದು. ಇದು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಬಿಎಸ್​ಎನ್​ಎಲ್ ಫ್ರೀ ಟ್ಯೂನ್ ಲಭ್ಯವಿದ್ದು ಇದರ ಮೂಲಕ ನಿಮಗೆ ಬೇಕಾದ ಹಾಡುಗಳನ್ನು ಉಚಿತವಾಗಿ ಹಾಕಬಹುದು. ಇದನ್ನು ಎಷ್ಟು ಬಾರಿ ಬೇಕಾದರೂ ಬದಲಾವಣೆ ಮಾಡಬಹುದಾಗಿದೆ. ಇದರ ಜೊತೆಗೆ ಎರಾಸ್ ನೌ, ಚಾಲೆಂಜೆಸ್ ಡರೇನಾ ಗೇಮ್ಸ್ ಸೇರಿದಂತೆ ಅನೇಕ ಸೌಲಭ್ಯವನ್ನು ಪಡೆಯಬಹುದು.

769 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಕೂಡ ದಿನಕ್ಕೆ 2GB ಡೇಟಾ ಪ್ರಯೋಜನ ಪಡೆಯಬಹುದು. ಅನಿಯಮಿತ ಕರೆ ಸೌಲಭ್ಯ ನೀಡಲಾಗಿದ್ದು 100 ಎಸ್​ಎಮ್​ಎಸ್ ಉಚಿತವಿದೆ. 269 ರೂ. ಪ್ಲಾನ್​ನಲ್ಲಿರುವ ಎಲ್ಲ ಪ್ರಯೋಜನ ಇದರಲ್ಲೂ ಇದೆ. ವ್ಯಾಲಿಡಿಯಲ್ಲಿ ಮಾತ್ರ ವ್ಯತ್ಯಾಸವಿದೆ. ಇದು 90 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಎರಡು ಹೊಸ ಪ್ಲಾನ್ ಈಗಾಗಲೇ ಲೈವ್ ಆಗಿದ್ದು ಆಸಕ್ತ ಬಿಎಸ್​ಎನ್​ಎಲ್ ಬಳಕೆದಾರರು ಆ್ಯಕ್ಟಿವ್ ಮಾಡಬಹುದು.

Published On - 10:05 am, Sun, 22 January 23

Follow Us
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ