ಕ್ರಿಪ್ಟೋಗಳು ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ, ನಿಯಂತ್ರಣ ಅಗತ್ಯವಿದೆ: ಸಂಸದರ ಸಂಸದೀಯ ಸಮಿತಿ ಸಭೆಯ ಅಭಿಮತ

ಕ್ರಿಪ್ಟೋಕರೆನ್ಸಿಗಳ ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ. ಆದರೆ ನಿಯಂತ್ರಕರ ಅಗತ್ಯ ಇದೆ ಎಂದು ಸಂಸದರ ಹಣಕಾಸು ಸ್ಥಾಯಿ ಸಮಿತಿ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಕ್ರಿಪ್ಟೋಗಳು ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ, ನಿಯಂತ್ರಣ ಅಗತ್ಯವಿದೆ: ಸಂಸದರ ಸಂಸದೀಯ ಸಮಿತಿ ಸಭೆಯ ಅಭಿಮತ
ಕ್ರಿಪ್ಟೋಕರೆನ್ಸಿ (ಪ್ರಾತಿನಿಧಿಕ ಚಿತ್ರ)
Follow us
| Updated By: Srinivas Mata

Updated on: Nov 15, 2021 | 9:01 PM

ದೇಶದಲ್ಲಿ ಕ್ರಿಪ್ಟೋಕರೆನ್ಸಿಯನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂಬುದು ಈಗ ಗೊತ್ತಾಗಿದೆ. ಆದರೆ ನಿಯಂತ್ರಣದ ಅವಶ್ಯಕತೆಯಿದೆ ಎಂದು ಸಂಸತ್ ಸದಸ್ಯರು (ಸಂಸದರು) ಸೋಮವಾರ ಸಂಸತ್ ಸಮಿತಿ ಸಭೆಯಲ್ಲಿ ಹೇಳಿದ್ದಾರೆ. ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಪೂರ್ಣ ಪುಟದ ಕ್ರಿಪ್ಟೋ ಜಾಹೀರಾತುಗಳನ್ನು ನೀಡುತ್ತಿವಾಗ, ಹೂಡಿಕೆದಾರರ ಹಣದ ಭದ್ರತೆಯು ಎಲ್ಲ ಸದಸ್ಯರಿಗೆ ಅತ್ಯಂತ ಗಂಭೀರವಾದ ಕಾಳಜಿ ವಿಷಯವಾಗಿದೆ ಎಂದು ಸಂಸದರು ಹೇಳಿದ್ದಾರೆ. “ಇದು ಬಹುತೇಕ ಪೊಂಜಿ ಯೋಜನೆಯಂತೆಯೇ ಇದೆ. ಅದಕ್ಕಾಗಿ ನಂತರ ಬಲವಾದ ಕಾನೂನು ನಿಯಮಗಳನ್ನು ತರಲಾಯಿತು,” ಎಂದು ಸಂಸದರು ಹೇಳಿದ್ದಾರೆ. ಇಲ್ಲಿಯವರೆಗೆ ಕ್ರಿಪ್ಟೋವನ್ನು ಕಾನೂನುಬದ್ಧಗೊಳಿಸಿದ ಏಕೈಕ ದೇಶ ಎಲ್ ಸಲ್ವಡಾರ್ ಆಗಿದೆ. ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಕ್ರಿಪ್ಟೋ ಫೈನಾನ್ಸ್‌ನ ವಿಷಯದ ಕುರಿತು ಕರೆದ ಮೊದಲ ಸಭೆ ಇದಾಗಿತ್ತು. ಸಮಿತಿಯ ನೇತೃತ್ವವನ್ನು ಬಿಜೆಪಿ ನಾಯಕ ಜಯಂತ್ ಸಿನ್ಹಾ ವಹಿಸಿದ್ದರು. ಅವರು ಮಾಜಿ ಹಣಕಾಸು ಖಾತೆ ರಾಜ್ಯ ಸಚಿವರೂ ಹೌದು.

ಕ್ರಿಪ್ಟೋ ಎಕ್ಸ್‌ಚೇಂಜ್‌ಗಳು, ಬ್ಲಾಕ್ ಚೈನ್ ಮತ್ತು ಕ್ರಿಪ್ಟೋ ಅಸೆಟ್ಸ್ ಕೌನ್ಸಿಲ್ (BACC), ಉದ್ಯಮ ಸಂಸ್ಥೆಗಳು ಮತ್ತು ಇತರ ಪ್ರತಿನಿಧಿಗಳು ಈ ಸಭೆಯ ಭಾಗವಾಗಿದ್ದರು. ಕ್ರಿಪ್ಟೋಕರೆನ್ಸಿಯನ್ನು ನಿಯಂತ್ರಿಸಲು ನಿಯಂತ್ರಕ ಕಾರ್ಯ ವಿಧಾನವನ್ನು ಜಾರಿಗೆ ತರಬೇಕು ಎಂಬ ಒಮ್ಮತವಿದ್ದರೂ ಉದ್ಯಮ ಸಂಘಗಳು ಮತ್ತು ಮಧ್ಯಸ್ಥಗಾರರಿಗೆ ನಿಯಂತ್ರಕ ಯಾರಾಗಿರಬೇಕು ಎಂಬುದರ ಕುರಿತು ಸ್ಪಷ್ಟವಾಗಿಲ್ಲ. ಕ್ರಿಪ್ಟೋಕರೆನ್ಸಿಯ ಮುಂದಿನ ಹಾದಿಯಲ್ಲಿ ವಿವಿಧ ಸಚಿವಾಲಯಗಳು ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಕೆಲವೇ ದಿನಗಳ ನಂತರ ಸಮಿತಿ ಸಭೆಯು ನಡೆದಿದೆ. ಸಭೆಯಲ್ಲಿ ಗಮನಕ್ಕೆ ತರಲಾದ ಎರಡು ಪ್ರಮುಖ ಸಮಸ್ಯೆಗಳೆಂದರೆ, ಕ್ರಿಪ್ಟೋಕರೆನ್ಸಿಗಳಿಗೆ ಸಂಬಂಧಿಸಿದ ಅತಿಯಾದ ಭರವಸೆ ಮತ್ತು ಪಾರದರ್ಶಕತೆಯ ಕೊರತೆ.

ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಆರ್​ಬಿಐ ಸುತ್ತೋಲೆಯನ್ನು ಮಾರ್ಚ್ 2020ರ ಆರಂಭದಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಇದರ ನಂತರ ಫೆಬ್ರವರಿ 5, 2021ರಂದು, ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್ ಕರೆನ್ಸಿಗೆ ಮಾದರಿಯನ್ನು ಸೂಚಿಸಲು ಕೇಂದ್ರೀಯ ಬ್ಯಾಂಕ್ ಆಂತರಿಕ ಪ್ಯಾನೆಲ್​ ಅನ್ನು ಸ್ಥಾಪಿಸಿದೆ. ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳ ಪ್ರಸರಣವನ್ನು ಎದುರಿಸಲು ಆರ್‌ಬಿಐ ಅಧಿಕೃತ ಡಿಜಿಟಲ್ ಕರೆನ್ಸಿ ಹೊರತರಲು ತನ್ನ ಉದ್ದೇಶವನ್ನು ಪ್ರಕಟಿಸಿದೆ. ಕಳೆದ ವಾರ, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಕ್ರಿಪ್ಟೋಕರೆನ್ಸಿಗಳ ಸುತ್ತಲಿನ ಕಳವಳಗಳನ್ನು ಒತ್ತಿ ಹೇಳಿದ್ದರು. ಕನಿಷ್ಠ ಅವುಗಳನ್ನು ನಿಯಂತ್ರಿಸುವವರೆಗೆ ಯಾವುದೇ ಹಣಕಾಸು ವ್ಯವಸ್ಥೆಗೆ ಬೆದರಿಕೆ ಎಂದು ಅವುಗಳನ್ನು ಕರೆದಿದ್ದರು.

ಖಾಸಗಿ ಡಿಜಿಟಲ್ ಕರೆನ್ಸಿಗಳು/ವರ್ಚುವಲ್ ಕರೆನ್ಸಿಗಳು/ಕ್ರಿಪ್ಟೋ-ಕರೆನ್ಸಿಗಳು ಕಳೆದ ಒಂದು ದಶಕದಲ್ಲಿ ಜನಪ್ರಿಯತೆಯನ್ನು ಗಳಿಸಿವೆ. ಇಲ್ಲಿ ನಿಯಂತ್ರಕರು ಮತ್ತು ಸರ್ಕಾರಗಳು ಈ ಕರೆನ್ಸಿಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ ಮತ್ತು ಸಂಬಂಧಿತ ಅಪಾಯಗಳ ಬಗ್ಗೆ ಆತಂಕಪಡುತ್ತಾರೆ. ವರ್ಚುವಲ್ ಕರೆನ್ಸಿಗಳಿಗೆ ಸಂಬಂಧಿಸಿದಂತೆ ಸೇವೆಗಳನ್ನು ಒದಗಿಸುವುದನ್ನು ಬ್ಯಾಂಕ್‌ಗಳು ಮತ್ತು ಸಂಸ್ಥೆಗಳನ್ನು ನಿಷೇಧಿಸುವ ಏಪ್ರಿಲ್ 6, 2018ರ ಆರ್‌ಬಿಐ ಸುತ್ತೋಲೆಯನ್ನು ಮಾರ್ಚ್ 4, 2021ರಂದು ಸುಪ್ರೀಂ ಕೋರ್ಟ್​ನಿಂದ ರದ್ದುಗೊಳಿಸಲಾಗಿದೆ ಎಂಬುದನ್ನು ಗಮನಿಸಬಹುದು.

ಇದನ್ನೂ ಓದಿ: Bitcoin: ಕ್ರಿಪ್ಟೋಕರೆನ್ಸಿ ಬಿಟ್​ಕಾಯಿನ್ ಬಗ್ಗೆ ಆತಂಕ ಯಾಕೆ? ಇಲ್ಲಿದೆ ಕೆಲವಷ್ಟು ಮಾಹಿತಿ

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್