AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rate Today: ಬೆಂಗಳೂರಿನಲ್ಲಿ ಏರಿಕೆಯಾದ ಚಿನ್ನ, ಬೆಳ್ಳಿ ದರ; ವಿವಿಧ ನಗರಗಳಲ್ಲಿ ಎಷ್ಟಿದೆ ಬೆಲೆ?

Gold Price Today: ಚಿನ್ನ ಕೊಳ್ಳುವ ಸಲುವಾಗಿ ಅದೆಷ್ಟೋ ವರ್ಷಗಳಿಂದ ಹಣ ಕೂಡಿಟ್ಟು ಬಂದಿರಬಹುದು. ಮನೆಯಲ್ಲಿ ವಿಶೇಷ ಪೂಜೆ ಇದ್ದರೆ ಆಭರಣ ಕೊಳ್ಳಲೇ ಬೇಕಲ್ಲವೇ.. ಪೂಜಾ ಸಾಮಗ್ರಗಳಿಗೆ ಬೇಕಾದ ಬೆಳ್ಳಿಯನ್ನೂ ಖರೀದಿಸಬೇಕು ಅಂದಾದಾಗ ಇಂದಿನ ದರ ಎಷ್ಟಿದೆ ಎಂಬ ಕುತೂಹಲ ಮೂಡುತ್ತದೆ.

Gold Rate Today: ಬೆಂಗಳೂರಿನಲ್ಲಿ ಏರಿಕೆಯಾದ ಚಿನ್ನ, ಬೆಳ್ಳಿ ದರ; ವಿವಿಧ ನಗರಗಳಲ್ಲಿ ಎಷ್ಟಿದೆ ಬೆಲೆ?
ಚಿನ್ನದ ಆಭರಣ
TV9 Web
| Edited By: |

Updated on:Aug 25, 2021 | 8:48 AM

Share

Gold Silver Price Today | ಬೆಂಗಳೂರು: ಚಿನ್ನ, ಬೆಳ್ಳಿ ದರ (Silver Price) ಸಾಮಾನ್ಯವಾಗಿ ದೈನಂದಿನ ದರ ಬದಲಾವಣೆಯಲ್ಲಿ ಏರಿಳಿತ ಕಾಣುತ್ತಿರುವುದು ಸರ್ವೇ ಸಾಮಾನ್ಯ. ಚಿನ್ನದ ದರ (Gold Price) ಇಳಿಕೆಯತ್ತ ಸಾಗಲಿ ಎಂಬುದು ಎಲ್ಲಾ ಗ್ರಾಹಕರ ಆಸೆ. ಹಾಗಾಗಿಯೇ ಆಭರಣಗಳ ಬೆಲೆ ಎಷ್ಟಿದೆ? ದೈನಂದಿನ ದರದಲ್ಲಿ ಎಷ್ಟು ಬದಲಾವಣೆಯಾಗಿದೆಯೇ? ಎಂಬ ಕುತೂಹಲ ಇದ್ದೇ ಇರುತ್ತದೆ. ಪ್ರಮುಖ ನಗರಗಳಲ್ಲಿ ಇಂದು ( ಆಗಸ್ಟ್ 25, ಬುಧವಾರ) ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬ ಮಾಹಿತಿ ತಿಳಿಯೋಣ.

ಚಿನ್ನ ಕೊಳ್ಳುವ ಸಲುವಾಗಿ ಅದೆಷ್ಟೋ ವರ್ಷಗಳಿಂದ ಹಣ ಕೂಡಿಟ್ಟು ಬಂದಿರಬಹುದು. ಇಲ್ಲವೇ ಸ್ನೇಹಿತರಿಗಾಗಿ, ಪ್ರೇಯಸಿಗಾಗಿ ಅಥವಾ ಹೆಂಡತಿಗೆ ಉಡುಗೊರೆ ಕೊಡುವ ಪ್ಲ್ಯಾನ್ ಮಾಡಿರಬಹುದು. ಇಲ್ಲವೇ ಮನೆಯಲ್ಲಿ ವಿಶೇಷ ಪೂಜೆ ಇದ್ದರೆ ಆಭರಣ ಕೊಳ್ಳಲೇ ಬೇಕಲ್ಲವೇ.. ಪೂಜಾ ಸಾಮಗ್ರಗಳಿಗೆ ಬೇಕಾದ ಬೆಳ್ಳಿಯನ್ನೂ ಖರೀದಿಸಬೇಕು ಅಂದಾದಾಗ ಇಂದಿನ ದರ ಎಷ್ಟಿದೆ ಎಂಬ ಕುತೂಹಲ ಮೂಡುತ್ತದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,460 ರೂಪಾಯಿ ನಿಗದಿಯಾಗಿದೆ. 100 ಗ್ರಾಂ ಚಿನ್ನಕ್ಕೆ 4,44,600 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,500 ರೂಪಾಯಿ ನಿಗದಿಯಾಗಿದೆ. 100 ಗ್ರಾಂ ಚಿನ್ನಕ್ಕೆ 4,85,000 ರೂಪಾಯಿ ನಿಗದಿಯಾಗಿದೆ. ನಿನ್ನೆ ದರಕ್ಕಿಂತ ಕೊಂಚ ಏರಿಕೆ ಕಂಡು ಬಂದಿದೆ. ಬೆಳ್ಳಿ ದರವೂ ಸಹ ಏರಿಕೆಯಾಗಿದ್ದು, ಕೆಜಿ ಬೆಳ್ಳಿ ದರ 600 ರೂಪಾಯಿ ಏರಿಕೆ ಬಳಿಕ 63,400 ರೂಪಾಯಿ ನಿಗದಿಯಾಗಿದೆ.

ಚೆನ್ನೈನಲ್ಲಿ ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,860 ರೂಪಾಯಿ ಹಾಗೂ 100 ಗ್ರಾಮ ಚಿನ್ನಕ್ಕೆ 4,48,600 ರೂಪಾಯಿ ನಿಗದಿಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,940 ರೂಪಾಯಿಗೆ ಏರಿಕೆ ಆಗಿದೆ. 100 ಗ್ರಾಂ ಚಿನ್ನಕ್ಕೆ 4,89,400 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿ ಏರಿಕೆ ಕಂಡು ಬಂದಿದೆ. ಬೆಳ್ಳಿ ದರ ಸ್ಥಿರವಾಗಿಯೇ ಉಳಿದಿದ್ದು ಕೆಜಿ ಬೆಳ್ಳಿ ಬೆಲೆ 67,700 ರೂಪಾಯಿ ಇದೆ.

ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 46,610 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,66,100 ರೂಪಾಯಿ ನಿಗದಿಯಾಗಿದೆ. ಅದೆ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 50,840 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,08,400 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.

ಬೆಂಗಳೂರು, ದೆಹಲಿ, ಚೆನ್ನೈ ಸೇರಿದಂತೆ ಹೈದರಾಬಾದ್, ಮುಂಬೈ, ಜೈಪುರದಲ್ಲಿಯೂ ಚಿನ್ನದ ದರ ಏರಿಕೆ ಕಂಡು ಬಂದಿದೆ. ಇನ್ನು, ಬೆಳ್ಳಿ ದರ ಕೆಲವೆಡೆ ಏರಿಕೆ ಆಗಿದ್ದರೆ ಇನ್ನು ಕೆಲವೆಡೆ ಸ್ಥಿರವಾಗಿದೆ. ನಿನ್ನೆ ಕೂಡಾ ಚಿನ್ನ, ಬೆಳ್ಳಿ ದರ ಏರಿಕೆ ಕಂಡಿತ್ತು. ಅದೇ ರೀತಿ ಇಂದು ಸಹ ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಆಭರಣಗಳ ಬೆಲೆ ಏರಿಕೆಯಾಗಿದೆ.

ಇದನ್ನೂ ಓದಿ:

Gold Rate Today: ಚಿನ್ನಾಭರಣ ಖರೀದಿದಾರದಿಗೆ ಗುಡ್​ ನ್ಯೂಸ್​; ಇಂದು ಸಹ ಇಳಿಕೆಯಾದ ಚಿನ್ನದ ದರ, ಬೆಳ್ಳಿ ಬೆಲೆ ಸ್ಥಿರ

Gold Price Today: ಏರಿಕೆಯತ್ತ ಮುಖ ಮಾಡಿದ ಚಿನ್ನದ ದರ, ಬೆಳ್ಳಿ ಬೆಲೆ ಇಳಿಕೆ; ಪ್ರಮುಖ ನಗರಗಳಲ್ಲಿ ದರ ವಿವರ ಪರಿಶೀಲಿಸಿ

(Gold Price increased today 2021 august 25 check silver price in bangalore delhi mumbai and major city)

Published On - 8:37 am, Wed, 25 August 21

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!