Gold Silver Price on 30th January: ಚಿನ್ನ, ಬೆಳ್ಳಿ ಎರಡೂ ಬೆಲೆ ಏರಿಕೆ; ಇಲ್ಲಿದೆ ದರಪಟ್ಟಿ
Bullion Market 2024 January 30th: ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಇಂದು ಮಂಗಳವಾರ ಸತತ ಎರಡನೇ ಬಾರಿ ಏರಿಕೆ ಆಗಿವೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 7,610 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 8,302 ರೂ ಆಗಿದೆ. ಬೆಳ್ಳಿ ಬೆಲೆ ಎರಡು ದಿನದಲ್ಲಿ ಎರಡು ರೂ ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಇದರ ಬೆಲೆ 98.50 ರೂ ಆಗಿದೆ.

ಬೆಂಗಳೂರು, ಜನವರಿ 30: ಮೊನ್ನೆ ಸತತವಾಗಿ ಎರಡು ಬಾರಿ ಇಳಿಕೆ ಆಗಿದ್ದ ಚಿನ್ನದ ಬೆಲೆ ಈಗ ಸತತ ಎರಡನೇ ಬಾರಿ ಏರಿಕೆ ಕಂಡಿದೆ. ಇವತ್ತು ಗುರುವಾರ ಆಭರಣ ಚಿನ್ನದ ಬೆಲೆ ಗ್ರಾಮ್ಗೆ 15 ರೂನಷ್ಟು ಹೆಚ್ಚಳವಾಗಿದೆ. ಎರಡು ದಿನದಲ್ಲಿ ನೂರು ರೂನಷ್ಟು ಬೆಲೆ ಏರಿಕೆ ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 7,610 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 8,300 ರೂ ಗಡಿ ದಾಟಿದೆ. ಇದೇ ವೇಳೆ, ಬೆಳ್ಳಿ ಬೆಲೆಯೂ ಸತತ ಎರಡನೇ ಬಾರಿ ಏರಿಕೆ ಆಗಿದೆ. ನಿನ್ನೆ ಬುಧವಾರ ಗ್ರಾಮ್ಗೆ ಒಂದು ರೂನಷ್ಟು ಹೆಚ್ಚಳವಾಗಿದ್ದ ಬೆಳ್ಳಿ ಬೆಲೆ ಇಂದೂ ಕೂಡ ಅಷ್ಟೇ ಪ್ರಮಾಣದಲ್ಲಿ ಏರಿಕೆ ಆಗಿದೆ. ಇದರೊಂದಿಗೆ ಬೆಂಗಳೂರು, ಮುಂಬೈ ಇತ್ಯಾದಿ ಹೆಚ್ಚಿನ ಕಡೆ ಬೆಳ್ಳಿ ಬೆಲೆ ಗ್ರಾಮ್ಗೆ 98.50 ರೂ ಆಗಿದೆ. ಚೆನ್ನೈ ಮೊದಲಾದೆಡೆ ಬೆಲೆ 106 ರೂಗೆ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 76,100 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 83,020 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,850 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 76,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,850 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜನವರಿ 30ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 76,100 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 83,020 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,270 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 985 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 76,100 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 83,020 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 985 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 76,100 ರೂ
- ಚೆನ್ನೈ: 76,100 ರೂ
- ಮುಂಬೈ: 76,100 ರೂ
- ದೆಹಲಿ: 76,250 ರೂ
- ಕೋಲ್ಕತಾ: 76,100 ರೂ
- ಕೇರಳ: 76,100 ರೂ
- ಅಹ್ಮದಾಬಾದ್: 76,150 ರೂ
- ಜೈಪುರ್: 76,250 ರೂ
- ಲಕ್ನೋ: 76,250 ರೂ
- ಭುವನೇಶ್ವರ್: 76,100 ರೂ
ಇದನ್ನೂ ಓದಿ: ಕೇಂದ್ರ ಹಣಕಾಸು ಸಚಿವೆ ನೇತೃತ್ವದ ಬಜೆಟ್ ಟೀಮ್ನ ಪ್ರಮುಖ ಸದಸ್ಯರಿವರು…
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಮಲೇಷ್ಯಾ: 3,630 ರಿಂಗಿಟ್ (71,510 ರುಪಾಯಿ)
- ದುಬೈ: 3,092.50 ಡಿರಾಮ್ (72,890 ರುಪಾಯಿ)
- ಅಮೆರಿಕ: 780 ಡಾಲರ್ (67,530 ರುಪಾಯಿ)
- ಸಿಂಗಾಪುರ: 1,086 ಸಿಂಗಾಪುರ್ ಡಾಲರ್ (69,700 ರುಪಾಯಿ)
- ಕತಾರ್: 3,125 ಕತಾರಿ ರಿಯಾಲ್ (74,220 ರೂ)
- ಸೌದಿ ಅರೇಬಿಯಾ: 3,150 ಸೌದಿ ರಿಯಾಲ್ (72,710 ರುಪಾಯಿ)
- ಓಮನ್: 328.50 ಒಮಾನಿ ರಿಯಾಲ್ (73,870 ರುಪಾಯಿ)
- ಕುವೇತ್: 253.40 ಕುವೇತಿ ದಿನಾರ್ (71,160 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 9,850 ರೂ
- ಚೆನ್ನೈ: 10,600 ರೂ
- ಮುಂಬೈ: 9,850 ರೂ
- ದೆಹಲಿ: 9,850 ರೂ
- ಕೋಲ್ಕತಾ: 9,850 ರೂ
- ಕೇರಳ: 10,600 ರೂ
- ಅಹ್ಮದಾಬಾದ್: 9,850 ರೂ
- ಜೈಪುರ್: 9,850 ರೂ
- ಲಕ್ನೋ: 9,850 ರೂ
- ಭುವನೇಶ್ವರ್: 10,600 ರೂ
- ಪುಣೆ: 9,850
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ