Gold Rate: ಗುರುವಾರ ಮತ್ತಷ್ಟು ಏರಿದ ಚಿನ್ನದ ಬೆಲೆ; ಗುರುವಾರ ಗ್ರಾಮ್​ಗೆ 70 ರೂ ಏರಿಕೆ

Gold Price 23 July 2026: ಚಿನ್ನದ ಬೆಲೆ ಸತತ ಏರಿಕೆ ಮುಂದುವರಿದಿದೆ. ನಿನ್ನೆ 210 ರೂ ಹೆಚ್ಚಿದ್ದ ಚಿನ್ನದ ಬೆಲೆ ಇವತ್ತು 70 ರೂ ಏರಿದೆ. 22 ಕ್ಯಾರಟ್ ಚಿನ್ನದ ಬೆಲೆ 13,430 ರೂನಿಂದ 13,500 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 14,728 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ ಗ್ರಾಮ್​ಗೆ 240 ರೂಗೆ ಏರಿದೆ. ಚೆನ್ನೈ ಮೊದಲಾದೆಡೆ ಬೆಲೆ 245 ರೂ ಇದೆ.

Gold Rate: ಗುರುವಾರ ಮತ್ತಷ್ಟು ಏರಿದ ಚಿನ್ನದ ಬೆಲೆ; ಗುರುವಾರ ಗ್ರಾಮ್​ಗೆ 70 ರೂ ಏರಿಕೆ
ಚಿನ್ನ
Image Credit source: PTI
Edited By:

Updated on: Jul 24, 2026 | 5:46 PM

ನವದೆಹಲಿ, ಜುಲೈ 23: ಬಂಗಾರದ ದರ ಗುರುವಾರವೂ ಏರಿದೆ. ಇದರೊಂದಿಗೆ ಈ ಹಳದಿ ಲೋಹದ ಬೆಲೆ ಸತತ ಐದು ದಿನಗಳಿಂದ ಏರುತ್ತಲೇ ಬಂದಂತಾಗಿದೆ. ಗುರುವಾರ ಇದರ ಬೆಲೆ (Gold Price) ಗ್ರಾಮ್​ಗೆ 70 ರೂ ಹೆಚ್ಚಿದೆ. ನಿನ್ನೆ ಬರೋಬ್ಬರಿ 210 ರೂಗಳಷ್ಟು ಏರಿಕೆಯಾಗಿತ್ತು. ಇವತ್ತು, 18 ಕ್ಯಾರಟ್ ಚಿನ್ನದ ಬೆಲೆ 11,000 ರೂ ಗಡಿ ದಾಟಿ ಹೋಗಿದೆ. ವಿದೇಶಗಳಲ್ಲೂ ಸ್ವರ್ಣ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆ ಯಥಾಸ್ಥಿತಿ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,35,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,47,280 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,35,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜುಲೈ 23ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,728 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,500 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,046 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,728 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,500 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 235 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,500 ರೂ
  • ಚೆನ್ನೈ: 13,500 ರೂ
  • ಮುಂಬೈ: 13,500 ರೂ
  • ದೆಹಲಿ: 13,515 ರೂ
  • ಕೋಲ್ಕತಾ: 13,500 ರೂ
  • ಕೇರಳ: 13,500 ರೂ
  • ಅಹ್ಮದಾಬಾದ್: 13,505 ರೂ
  • ಜೈಪುರ್: 13,515 ರೂ
  • ಲಕ್ನೋ: 13,515 ರೂ
  • ಭುವನೇಶ್ವರ್: 13,500 ರೂ

ಇದನ್ನೂ ಓದಿ: ಸೈಲೆಂಟಾಗಿ ನಿಮ್ಮ ಕ್ರೆಡಿಟ್ ಲಿಮಿಟ್​ಗೆ ಕತ್ತರಿ ಬೀಳಬಹುದು; ಬ್ಯಾಂಕುಗಳು ಯಾಕೆ ಈ ಕೆಲಸ ಮಾಡುತ್ತವೆ ಗೊತ್ತಾ?

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 556 ರಿಂಗಿಟ್ (13,126 ರುಪಾಯಿ)
  • ದುಬೈ: 500.75 ಡಿರಾಮ್ (13,158 ರುಪಾಯಿ)
  • ಅಮೆರಿಕ: 137 ಡಾಲರ್ (13,225 ರುಪಾಯಿ)
  • ಸಿಂಗಾಪುರ: 182 ಸಿಂಗಾಪುರ್ ಡಾಲರ್ (13,629 ರುಪಾಯಿ)
  • ಕತಾರ್: 501 ಕತಾರಿ ರಿಯಾಲ್ (13,267 ರೂ)
  • ಸೌದಿ ಅರೇಬಿಯಾ: 515 ಸೌದಿ ರಿಯಾಲ್ (13,243 ರುಪಾಯಿ)
  • ಓಮನ್: 53.20 ಒಮಾನಿ ರಿಯಾಲ್ (13,338 ರುಪಾಯಿ)
  • ಕುವೇತ್: 41.89 ಕುವೇತಿ ದಿನಾರ್ (13,139 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 240 ರೂ
  • ಚೆನ್ನೈ: 245 ರೂ
  • ಮುಂಬೈ: 240 ರೂ
  • ದೆಹಲಿ: 240 ರೂ
  • ಕೋಲ್ಕತಾ: 240 ರೂ
  • ಕೇರಳ: 245 ರೂ
  • ಅಹ್ಮದಾಬಾದ್: 240 ರೂ
  • ಜೈಪುರ್: 240 ರೂ
  • ಲಕ್ನೋ: 240 ರೂ
  • ಭುವನೇಶ್ವರ್: 245 ರೂ
  • ಪುಣೆ: 240

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:07 am, Thu, 23 July 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us