Gold Rate Today: ಚಿನ್ನದ ಬೆಲೆ ಭರ್ಜರಿ ಕುಸಿತ; ಬೆಳ್ಳಿ ಬೆಲೆಯೂ ಇಳಿಕೆ

Gold Price 28 September 2026: ಚಿನ್ನ, ಬೆಳ್ಳಿ ಬೆಲೆಗಳು ಸೋಮವಾರ ಇಳಿದಿವೆ. ಚಿನ್ನದ ಬೆಲೆ 230 ರೂ, ಬೆಳ್ಳಿ ಬೆಲೆ 5 ರೂ ತಗ್ಗಿದೆ. 22 ಕ್ಯಾರಟ್ ಚಿನ್ನದ ಬೆಲೆ 13,995 ರೂನಿಂದ 13,765 ರೂಗೆ ಇಳಿದಿದೆ. 24 ಕ್ಯಾರಟ್ ಚಿನ್ನದ ಬೆಲೆ 15,017 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್​ಗೆ 240 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 245 ರೂ ಇದೆ.

Gold Rate Today: ಚಿನ್ನದ ಬೆಲೆ ಭರ್ಜರಿ ಕುಸಿತ; ಬೆಳ್ಳಿ ಬೆಲೆಯೂ ಇಳಿಕೆ
ಚಿನ್ನ
Image Credit source: PTI
Edited By:

Updated on: Sep 28, 2026 | 1:24 PM

ನವದೆಹಲಿ, ಸೆಪ್ಟೆಂಬರ್ 28: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸೋಮವಾರ ಭರ್ಜರಿ ಇಳಿಕೆ ಕಂಡಿವೆ. ಬಂಗಾರದ ದರ ಗ್ರಾಮ್​ಗೆ ಬರೋಬ್ಬರಿ 230 ರೂಗಳಷ್ಟು ಕುಸಿತ ಕಂಡಿದೆ. ಅಪರಂಜಿ ಚಿನ್ನದ ಬೆಲೆ 15,000 ರೂ ಸಮೀಪಕ್ಕೆ ಇಳಿದಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ. ಆದರೆ, ಅಂತಾರಾಷ್ಟ್ರೀಯ ಸ್ಪಾಟ್ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದೆ. ಬಹಳ ದಿನಗಳ ನಂತರ ಬೆಲೆ 13,000 ರೂಗಿಂತ ಕೆಳಗೆ ಬಂದಿದೆ. ಬೆಳ್ಳಿ ಬೆಲೆಯೂ ಗ್ರಾಮ್​ಗೆ 5 ರೂ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,37,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,50,170 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,37,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 24,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಸೆಪ್ಟೆಂಬರ್ 28ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,017
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,765
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,263
  • ಬೆಳ್ಳಿ ಬೆಲೆ 1 ಗ್ರಾಂಗೆ: 240 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,765 ರೂ
  • ಚೆನ್ನೈ: 13,765 ರೂ
  • ಮುಂಬೈ: 13,765 ರೂ
  • ದೆಹಲಿ: 13,780
  • ಕೋಲ್ಕತಾ: 13,765 ರೂ
  • ಕೇರಳ: 13,765 ರೂ
  • ಅಹ್ಮದಾಬಾದ್: 13,770 ರೂ
  • ಜೈಪುರ್: 13,780
  • ಲಕ್ನೋ: 13,780
  • ಭುವನೇಶ್ವರ್: 13,765 ರೂ

ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ

  • ಸ್ಪಾಟ್ ಗೋಲ್ಡ್ 1 ಗ್ರಾಮ್​ಗೆ 134. 59 ಡಾಲರ್ (12,923 ರುಪಾಯಿ)
  • ಸ್ಪಾಟ್ ಸಿಲ್ವರ್ 1 ಗ್ರಾಮ್​ಗೆ 1.978 ಡಾಲರ್ (190 ರುಪಾಯಿ)

ಇದನ್ನೂ ಓದಿ: 28 ದಿನ ಅಲ್ಲ, ಪೂರ್ಣ ತಿಂಗಳ ರೀಚಾರ್ಜ್ ಪ್ಲಾನ್: ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ನಿರ್ದೇಶನ

ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಭಾರತ: 15,017 ರುಪಾಯಿ
  • ಮಲೇಷ್ಯಾ: 568 ರಿಂಗಿಟ್ (13,343 ರುಪಾಯಿ)
  • ದುಬೈ: 516.50 ಡಿರಾಮ್ (13,494 ರುಪಾಯಿ)
  • ಅಮೆರಿಕ: 141 ಡಾಲರ್ (13,529 ರುಪಾಯಿ)
  • ಸಿಂಗಾಪುರ: 186.50 ಸಿಂಗಾಪುರ್ ಡಾಲರ್ (14,003 ರುಪಾಯಿ)
  • ಕತಾರ್: 516.50 ಕತಾರಿ ರಿಯಾಲ್ (13,597 ರೂ)
  • ಸೌದಿ ಅರೇಬಿಯಾ: 531 ಸೌದಿ ರಿಯಾಲ್ (13,571 ರುಪಾಯಿ)
  • ಓಮನ್: 54.85 ಒಮಾನಿ ರಿಯಾಲ್ (13,670 ರುಪಾಯಿ)
  • ಕುವೇತ್: 42.84 ಕುವೇತಿ ದಿನಾರ್ (13,359 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 240 ರೂ
  • ಚೆನ್ನೈ: 245 ರೂ
  • ಮುಂಬೈ: 240 ರೂ
  • ದೆಹಲಿ: 240 ರೂ
  • ಕೋಲ್ಕತಾ: 240 ರೂ
  • ಕೇರಳ: 245 ರೂ
  • ಅಹ್ಮದಾಬಾದ್: 240 ರೂ
  • ಜೈಪುರ್: 240 ರೂ
  • ಲಕ್ನೋ: 240 ರೂ
  • ಭುವನೇಶ್ವರ್: 245 ರೂ
  • ಪುಣೆ: 240

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:19 pm, Mon, 28 September 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us