AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೂಗಲ್​ಗೆ ಆರಂಭದಲ್ಲೇ ಫಂಡಿಂಗ್ ನೀಡಿದ್ದ ರಾಮ್ ಶ್ರೀರಾಮ್; ಭಾರತದ ಈ ಕಂಪನಿಯತ್ತ ಈಗ ಅವರ ಚಿತ್ತ

Google Pioneer Ram Shriram Boosts Skyroot Aerospace: ಗೂಗಲ್‌ನ ಆರಂಭಿಕ ಹೂಡಿಕೆದಾರ ರಾಮ್ ಶ್ರೀರಾಮ್, ಭಾರತದ ಯೂನಿಕಾರ್ನ್ ಬಾಹ್ಯಾಕಾಶ ಸ್ಟಾರ್ಟಪ್ ಸ್ಕೈರೂಟ್ ಏರೋಸ್ಪೇಸ್‌ನಲ್ಲಿ $60 ಮಿಲಿಯನ್ ಹೂಡಿಕೆ ಮಾಡಿದ್ದಾರೆ. ರಾಕೆಟ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಸ್ಕೈರೂಟ್, ಈಗಾಗಲೇ $1.1 ಬಿಲಿಯನ್ ಮೌಲ್ಯ ತಲುಪಿದೆ. ರಾಮ್ ಶ್ರೀರಾಮ್ ಈ ಹಿಂದೆ ಗೂಗಲ್‌ಗೆ ಬಂಡವಾಳ ಹಾಕಿ ಅದರ ಬೆಳವಣಿಗೆಗೆ ನೆರವಾಗಿದ್ದರು. ಈಗ ಭಾರತದ ಬಾಹ್ಯಾಕಾಶ ತಂತ್ರಜ್ಞಾನದ ಪ್ರಗತಿಗೆ ದೊಡ್ಡ ಕೊಡುಗೆ ನೀಡಿದ್ದಾರೆ.

ಗೂಗಲ್​ಗೆ ಆರಂಭದಲ್ಲೇ ಫಂಡಿಂಗ್ ನೀಡಿದ್ದ ರಾಮ್ ಶ್ರೀರಾಮ್; ಭಾರತದ ಈ ಕಂಪನಿಯತ್ತ ಈಗ ಅವರ ಚಿತ್ತ
ಸ್ಕೈರೂಟ್ ಏರೋಸ್ಪೇಸ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 07, 2026 | 8:11 PM

Share

ನವದೆಹಲಿ, ಮೇ 7: ವಿಶ್ವದ ಅತ್ಯಂತ ಗೌರವಾನ್ವಿತ ಹೂಡಿಕೆದಾರರಲ್ಲಿ ಒಬ್ಬರೆನಿಸಿರುವ ಮತ್ತು ಬಿಲಿಯನೇರ್ ಆಗಿರುವ ಭಾರತ ಮೂಲದ ರಾಮ್ ಶ್ರೀರಾಮ್ (Ram Sriram) ಅವರು ಸ್ಕೈರೂಟ್ ಏರೋಸ್ಪೇಸ್ ಎನ್ನುವ ರೈಸಿಂಗ್ ಸ್ಟಾರ್ ಕಂಪನಿಯಲ್ಲಿ ಹೂಡಿಕೆ ಮಾಡತ್ತಿದ್ದಾರೆ. ಗೂಗಲ್ ಇನ್ನೂ ಕೂಡ ಸರ್ಚ್ ಎಂಜಿನ್ ಆಗಿ ಸ್ಥಾಪನೆಯಾಗಲು ಪರದಾಡುತ್ತಿದ್ದ ಆರಂಭಿಕ ದಿನದಲ್ಲೇ ಅದಕ್ಕೆ ಅಮೂಲ್ಯವಾದ ಬಂಡವಾಳ ಒದಗಿಸಿದವರು ರಾಮ್ ಶ್ರೀರಾಮ್. ಅಷ್ಟೇ ಅಲ್ಲ, ಗೂಗಲ್​ನ ಆರಂಭಿಕ ಬ್ಯುಸಿನೆಸ್​ಗಳ ಎಡರು ತೊಡರುಗಳನ್ನು ನಿವಾರಿಸಲು ಸಹಾಯ ಮಾಡಿದ್ದ ರಾಮ್ ಶ್ರೀರಾಮ್ ಅವರು ಈಗ ಭಾರತೀಯ ಕಂಪನಿಯೊಂದನ್ನು ಎತ್ತರಕ್ಕೆ ಬೆಳೆಸಲು ಚಿತ್ತ ನೆಟ್ಟಿರುವಂತಿದೆ.

ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಭಾರತೀಯ ಕಂಪನಿಯಾಗಿದ್ದು, ಹೈದರಾಬಾದ್​ನಲ್ಲಿ ಇದರ ಮುಖ್ಯ ಕಚೇರಿ ಇದೆ. ಇದು ಸೆಟಿಲೈಟ್​ಗಳನ್ನು ಆಗಸಕ್ಕೆ ಕೊಂಡೊಯ್ಯಬಲ್ಲ ರಾಕೆಟ್​ಗಳನ್ನು ತಯಾರಿಸುವ ಕಂಪನಿ. ನುರಿತ ವಿಜ್ಞಾನಿಗಳು ಇರುವ ಸಂಸ್ಥೆಯಾದ ಇದು ಈಗಾಗಲೇ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈಗಾಗಲೇ ಇದರ ಮೌಲ್ಯ 1.1 ಬಿಲಿಯನ್ ಡಾಲರ್ ದಾಟಿ ಹೋಗಿ ಯೂನಿಕಾರ್ನ್ ಕಂಪನಿಗಳ ಸಾಲಿಗೆ ಸೇರಿದೆ. ಬಹಳಷ್ಟು ಹೂಡಿಕೆದಾರರು ಇದಕ್ಕೆ ಬಂಡವಾಳ ಹಾಕುತ್ತಿದ್ದಾರೆ. ರಾಮ್ ಶ್ರೀರಾಮ್ ಅವರು ತಮ್ಮ ವೆಂಚರ್ ಕ್ಯಾಪಿಟಲ್ ಸಂಸ್ಥೆಯಾದ ಶೆರ್ಪಾಲೋ ವೆಂಚರ್ಸ್ (Sherpalo Ventures) ಮೂಲಕ 60 ಮಿಲಿಯನ್ ಡಾಲರ್ ಬಂಡವಾಳ ನೀಡಿದ್ದಾರೆ.

ಇದನ್ನೂ ಓದಿ: ಪರಿಸರಸ್ನೇಹಿ ಯೋಜನೆಗಳಿಗೆ ಆಪಲ್ ಭರ್ಜರಿ ಹೂಡಿಕೆ; ಸ್ವಚ್ಛ ಇಂಧನ, ಪ್ಲಾಸ್ಟಿಕ್ ನಿವಾರಣೆ, ತ್ಯಾಜ್ಯ ನಿರ್ವಹಣೆ ಇತ್ಯಾದಿ ಉಪಕ್ರಮಗಳ ಘೋಷಣೆ

ಈಗಾಗಲೆ ಬಹಳ ಜನರ ಗಮನ ಸೆಳೆದಿರುವ ಸ್ಕೈರೂಟ್ ಏರೋಸ್ಪೇಸ್​ನತ್ತ ರಾಮ್ ಶ್ರೀರಾಮ್ ಚಿತ್ತ ನೆಟ್ಟಿದ್ದು ಈಗೇನಲ್ಲ. ನಾಲ್ಕು ವರ್ಷದ ಹಿಂದೆಯೇ ಈ ಕಂಪನಿಗೆ ಬಹಳ ಅಮೂಲ್ಯ ಬಂಡವಾಳ ಒದಗಿಸಿದ್ದರು. ಸ್ಕೈರೂಟ್ ಸಂಸ್ಥೆ ಬಹಳ ಮುಖ್ಯವಾದ ರಾಕೆಟ್ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ 4.5 ಮಿಲಿಯನ್ ಡಾಲರ್ ಬಂಡವಾಳ ಒದಗಿಸಿದ ಹೂಡಿಕೆ ಸಂಸ್ಥೆಗಳಲ್ಲಿ ಶೆರ್ಪಾಲೋ ವೆಂಚರ್ಸ್ ಕೂಡ ಒಂದು.

ಚೆನ್ನೈನಲ್ಲಿ ಜನಿಸಿದ ರಾಮ್ ಶ್ರೀರಾಮ್ ಬಡತನದಲ್ಲಿ ಬೆಳೆದವರು. ತಾತನ ಆಸ್ತಿ ಮಾರಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಇವತ್ತು ಅವರು ಬಿಲಿಯನೇರ್ ಆಗಿದ್ದಾರೆ. ಸೂಪರ್ ಹಿಟ್ ಕಂಪನಿಗಳಿಗೆ ನೀರೆರೆದು ಪೋಷಿಸಿದ್ದಾರೆ. 1998ರಲ್ಲಿ ಸೆರ್ಗೇ ಬ್ರಿನ್ ಮತ್ತು ಲ್ಯಾರಿ ಪೇಜ್ ಅವರು ಸ್ಟ್ಯಾನ್​ಫೋರ್ಡ್ ಪಿಎಚ್​ಡಿ ಪ್ರಾಜೆಕ್ಟ್ ಆಗಿ ಸರ್ಚ್ ಎಂಜಿನ್ ಅಭಿವೃದ್ಧಿಪಡಿಸುತ್ತಿರುವಾಗ ರಾಮ್ ಶ್ರೀರಾಮ್ ಅವರು ಅಮೇಜಾನ್​ನಲ್ಲಿ ವೈಸ್ ಪ್ರೆಸಿಡೆಂಟ್ ಆಗಿದ್ದರು. ಆ ವಿದ್ಯಾರ್ಥಿಗಳ ವಿನೂತನ ಪರಿಕಲ್ಪನೆಯ ಉತ್ಪನ್ನದ ಬಗ್ಗೆ ಆಸಕ್ತರಾಗಿ ವೈಯಕ್ತಿಕವಾಗಿ ಎರಡೂವರೆ ಲಕ್ಷ ಡಾಲರ್ ಬಂಡವಾಳ ಒದಗಿಸಿದ್ದರು.

ಇದನ್ನೂ ಓದಿ: ಬ್ಯಾಂಕ್ ಸಾಲಗಾರರ ಗಮನಕ್ಕೆ; ಅಡಮಾನ ಆಸ್ತಿ ವಿಚಾರದಲ್ಲಿ ಆರ್​ಬಿಐ ಕರಡು ನಿಯಮಗಳಿವು…

ಅಷ್ಟೇ ಅಲ್ಲ, ಗೂಗಲ್​ನ ಸಂಸ್ಥಾಪನಾ ಮಂಡಳಿ ಸದಸ್ಯರೂ ಆಗಿ, ಅದರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಶೆರ್ಪಾಲೋ ವೆಂಚರ್ಸ್ ಮೂಲಕ ಇನ್ನೂ ಹಲವಾರು ಕಂಪನಿಗಳಿಗೆ ಆರಂಭಿಕ ಬಂಡವಳ ಒದಗಿಸಿದ್ದಾರೆ. ಇನ್​ಮೋಬಿ, ರೇಜರ್​ಪೇ, ಗುಸ್ಟೋ, ಪೇಪರ್​ಲೆಸ್ ಪೋಸ್ಟ್, ಕ್ರಿಕೇ ಎಐ ಇತ್ಯಾದಿ ಕಂಪನಿಗಳಿಗೆ ಬಂಡವಾಳ ನೀಡಿದ್ದಾರೆ. ಕ್ರಿಕೇ ಎಐ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಸ್ಟಾರ್ಟಪ್ ಆಗಿದ್ದು ಜಾಹ್ನವಿ ಮತ್ತು ಕೇಟಲ್ಲಾ ಎಂಬಿಬ್ಬರು ಇವರ ಹೆಣ್ಮಕ್ಕಳೇ ಇದರ ಸಂಸ್ಥಾಪಕರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಕೈಗಾ ಅಣುಸ್ಥಾವರದ ರಕ್ಷಾ ಕವಚ‌ ಹೊತ್ತು ತರುತ್ತಿದ್ದ ವಾಹನ ಪಲ್ಟಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಮೆಟ್ಟಿಲುಗಳಿಗೆ ಕೈ ಮುಗಿದು ವಿಧಾನಸೌಧಕ್ಕೆ ಸಮರ್ಥ್​ ಎಂಟ್ರಿ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಉಡುಪಿಯಲ್ಲಿ ಅಬ್ಬರಿಸಿದ ವರುಣ: ರಸ್ತೆಯಲ್ಲೇ ನೀರು ನಿಂತು ಸವಾರರ ಪರದಾಟ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
ಸ್ಟ್ರಾಂಗ್‌ ರೂಮ್‌ವೊಂದರ ಬೀಗ ಕಳೆದಿರೋದನ್ನು ನಾವು ಎಂದೂ ಕೇಳಿರಲಿಲ್ಲ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
IPL ಫೈನಲ್ ಬೆಂಗಳೂರಿನಿಂದ ಸ್ಥಳಾಂತರಗೊಂಡಿದ್ದೇಕೆ? ಅಸಲಿ ಕಾರಣ ಇಲ್ಲಿದೆ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಚುನಾವಣಾ ರಾಜಕೀಯಕ್ಕೆ ವಿಶ್ವನಾಥ್ ಕುಟುಂಬ ವಿದಾಯ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ
ಪೋಕ್ಸೋ ಪ್ರಕರಣವಿದೆ: ಯಡಿಯೂರಪ್ಪ ಅಭಿಮಾನೋತ್ಸವ ಸರಿಯಲ್ಲ ಎಂದ ಬಿಜೆಪಿ ನಾಯಕ
ಕಲಬುರಗಿ: ಕಾಣೆಯಾಗಿದ್ದ 1.44 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ!
ಕಲಬುರಗಿ: ಕಾಣೆಯಾಗಿದ್ದ 1.44 ಕೋಟಿ ರೂ. ಮೌಲ್ಯದ 785 ಮೊಬೈಲ್‌ಗಳ ಹಸ್ತಾಂತರ!
ಮೈಲಾರಿ ಹೋಟೆಲ್‌ನಲ್ಲಿ ರಾಜಣ್ಣ ಜತೆ ಕುಳಿತು ದೋಸೆ ಸವಿದ ಸಿಎಂ ಸಿದ್ದರಾಮಯ್ಯ
ಮೈಲಾರಿ ಹೋಟೆಲ್‌ನಲ್ಲಿ ರಾಜಣ್ಣ ಜತೆ ಕುಳಿತು ದೋಸೆ ಸವಿದ ಸಿಎಂ ಸಿದ್ದರಾಮಯ್ಯ
ಕೇರಳ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ: ಈ ಮೂವರಲ್ಲೇ ಒಬ್ಬರು ಮುಖ್ಯಮಂತ್ರಿ?
ಕೇರಳ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ: ಈ ಮೂವರಲ್ಲೇ ಒಬ್ಬರು ಮುಖ್ಯಮಂತ್ರಿ?