AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tax On PF: ಪಿಎಫ್​​ನ ಈ ಎಲ್ಲ ಮೊತ್ತ ಸೇರಿ ವರ್ಷಕ್ಕೆ 2.5 ಲಕ್ಷ ರೂಪಾಯಿ ದಾಟಿದರೆ ಬೀಳುತ್ತದೆ ತೆರಿಗೆ

ಪ್ರಾವಿಡೆಂಟ್ ಮೇಲಿನ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಹೊಸ ನಿಯಮ ತರಲಾಗಿದೆ. ಆ ಬಗೆಗಿನ ವಿವರಣಾತ್ಮಕ ಲೇಖನ ಇಲ್ಲಿದೆ.

Tax On PF: ಪಿಎಫ್​​ನ ಈ ಎಲ್ಲ ಮೊತ್ತ ಸೇರಿ ವರ್ಷಕ್ಕೆ 2.5 ಲಕ್ಷ ರೂಪಾಯಿ ದಾಟಿದರೆ ಬೀಳುತ್ತದೆ ತೆರಿಗೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 18, 2022 | 12:49 PM

Share

ಉದ್ಯೋಗಿ- ಉದ್ಯೋಗದಾತರ ಕೊಡುಗೆ ಮತ್ತು ಗಳಿಸಿದ ಬಡ್ಡಿಯೂ ಸೇರಿದಂತೆ ವಾರ್ಷಿಕವಾಗಿ ರೂ. 2.50 ಲಕ್ಷಕ್ಕಿಂತ ಹೆಚ್ಚಿನ ಪ್ರಾವಿಡೆಂಟ್ ಫಂಡ್ (PF) ಕೊಡುಗೆಗಳಿಗೆ ಸರ್ಕಾರವು ತೆರಿಗೆ ವಿಧಿಸುತ್ತದೆ. ಅಂದಹಾಗೆ ಸರ್ಕಾರಿ ನೌಕರರಿಗೆ ಗರಿಷ್ಠ ರೂ. 5 ಲಕ್ಷ ಮಿತಿ ನಿಗದಿಪಡಿಸಲಾಗಿದೆ. ವರ್ಷದಲ್ಲಿ ಗಳಿಸಿದ ಆದಾಯದ ಮೇಲಿನ ತೆರಿಗೆ ಪಾವತಿಸುವುದನ್ನು ತಪ್ಪಿಸಲು ತಮ್ಮ ಪಿಎಫ್ ಖಾತೆಗಳಿಗೆ ದೊಡ್ಡ ಪ್ರಮಾಣದ ಹಣವನ್ನು ಠೇವಣಿ ಮಾಡಿದ ಶ್ರೀಮಂತ ಮತ್ತು ಹೆಚ್ಚಿನ ನಿವ್ವಳ ಮೌಲ್ಯದ (High Net Worth) ವ್ಯಕ್ತಿಗಳಿಂದ ದುರ್ಬಳಕೆಯ ಹಲವು ಪ್ರಕರಣಗಳನ್ನು ಉಲ್ಲೇಖಿಸಿ ಕೇಂದ್ರವು ತೆರಿಗೆ ವಿಧಿಸುವುದನ್ನು ಘೋಷಣೆ ಮಾಡಿದೆ. ಅಂದ ಹಾಗೆ, ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ (EPFO) ಪ್ರಸಕ್ತ ಹಣಕಾಸು ವರ್ಷ 2021-22ಕ್ಕೆ (FY 22) ಪಿಎಫ್​ ಮೇಲಿನ ಬಡ್ಡಿ ದರವನ್ನು 40 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ, ಅಂದರೆ ಶೇ 8.1ಕ್ಕೆ ಇಳಿಸಿದೆ. ಇಂಥ ಸನ್ನಿವೇಶದಲ್ಲಿ ಈ ನಿರ್ಧಾರ ಜಾರಿ ಆಗುತ್ತಿದೆ.

ಇತ್ತೀಚಿನ ಪಿಎಫ್​ ಮೇಲಿನ ತೆರಿಗೆ ಅರ್ಥವೇನು? ಹೊಸ ಆದಾಯ ತೆರಿಗೆ (IT) ನಿಯಮಗಳ ಅಡಿಯಲ್ಲಿ ಪಿಎಫ್​ ಖಾತೆಗಳನ್ನು ಏಪ್ರಿಲ್ 1, 2022ರಿಂದ ತೆರಿಗೆಗೆ ಒಳಪಡುವ ಮತ್ತು ತೆರಿಗೆಗೆ ಒಳಪಡದ ಕೊಡುಗೆ ಖಾತೆಗಳಾಗಿ ವಿಂಗಡಿಸುವ ಸಾಧ್ಯತೆಯಿದೆ. ಹೊಸ ನಿಯಮಗಳೊಂದಿಗೆ, ಹೆಚ್ಚಿನ ಆದಾಯವನ್ನು ಗಳಿಸುವ ಜನರು ಸರ್ಕಾರದ ಕಲ್ಯಾಣ ಯೋಜನೆಗಳ ಲಾಭ ಪಡೆಯುವುದನ್ನು ತಡೆಯುವ ಗುರಿಯನ್ನು ಕೇಂದ್ರವು ಹೊಂದಿದೆ.

ಉದ್ಯೋಗಿ, ಉದ್ಯೋಗದಾತರ ಕೊಡುಗೆಗಳು, ಸ್ವಯಂಪ್ರೇರಿತ (ವಾಲಂಟರಿ), ವೈಯಕ್ತಿಕ ಮತ್ತು ಗಳಿಸಿದ ಬಡ್ಡಿ ಸೇರಿದಂತೆ ಪಿಎಫ್​ ಖಾತೆಗಳಿಗೆ ರೂ. 2.5 ಲಕ್ಷಕ್ಕಿಂತ ಹೆಚ್ಚಿನ ಯಾವುದೇ ಕೊಡುಗೆಗಳನ್ನು ತೆರಿಗೆಯ ಆದಾಯ ಎಂದು ಪರಿಗಣಿಸಲಾಗುತ್ತದೆ. “ರೂ. 2.5 ಲಕ್ಷಕ್ಕಿಂತ ಹೆಚ್ಚಿನ ಪಿಎಫ್ ಕೊಡುಗೆಗಳ ಮೇಲಿನ ತೆರಿಗೆಯು ನೀವು ಬರುವ ಆದಾಯ ತೆರಿಗೆ ಸ್ಲ್ಯಾಬ್ ಅನ್ನು ಆಧರಿಸಿರುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲಾಗುತ್ತದೆ,” ಎಂದು ಸ್ವತಂತ್ರ ತೆರಿಗೆ ಸಲಹೆಗಾರರೊಬ್ಬರು ಮಾಹಿತಿ ಹೇಳಿದ್ದಾರೆ.

ಇದನ್ನೂ ಓದಿ: EPF: ಇಪಿಎಫ್​ಒನಿಂದ ಉದ್ಯೋಗದಾತರ ಇಪಿಎಫ್​ ಟ್ರಸ್ಟ್‌ಗೆ ಇಪಿಎಫ್​ ಖಾತೆ ವರ್ಗಾವಣೆ ಹೇಗೆ? ಇಲ್ಲಿದೆ ಎಲ್ಲ ಮಾಹಿತಿ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್