PM Kisan Yojana: ಪಿಎಂ ಕಿಸಾನ್ 13ನೇ ಕಂತಿಗೆ ಅರ್ಜಿ ಸಲ್ಲಿಕೆ ಹೇಗೆ, ಯಾವೆಲ್ಲ ದಾಖಲೆಗಳು ಬೇಕು? ಇಲ್ಲಿದೆ ಪೂರ್ಣ ಮಾಹಿತಿ
ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಡಿಸೆಂಬರ್ 20ರಿಂದ 26ರ ನಡುವೆ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಿದೆ ಎಂದು ವರದಿಯಾಗಿದೆ. 13ನೇ ಕಂತಿಗೆ ಅರ್ಜಿ ಸಲ್ಲಿಕೆ ಹೇಗೆ, ಅರ್ಹತೆ ತಿಳಿಯುವುದು ಹೇಗೆ, ಯಾವೆಲ್ಲ ದಾಖಲೆಗಳು ಬೇಕು? ಇಲ್ಲಿದೆ ಪೂರ್ಣ ಮಾಹಿತಿ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (PM-KISAN) 12ನೇ ಕಂತನ್ನು ಈಗಾಗಲೇ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ ಇದೀಗ 13ನೇ ಕಂತಿನ ಬಿಡುಗಡೆಗೆ ಮುಂದಾಗಿದೆ. ಫಲಾನುಭವಿಗಳು ಹಣ ಬಿಡುಗಡೆಗೆ ಕಾಯುತ್ತಿದ್ದಾರೆ. ಯೋಜನೆಯಡಿ ನೋಂದಾಯಿತ ರೈತರಿಗೆ ಮೂರು ಕಂತುಗಳಲ್ಲಿ 2,000 ರೂ.ನಂತೆ ವಾರ್ಷಿಕ 6,000 ರೂ. ನೀಡಲಾಗುತ್ತಿದೆ. 13ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಡಿಸೆಂಬರ್ 20ರಿಂದ 26ರ ನಡುವೆ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಿದೆ ಎಂದು ವರದಿಯಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆಯನ್ನು ಸರ್ಕಾರ ಮಾಡಬೇಕಿದೆ. ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ (DBT) ವರ್ಗಾವಣೆಯಾಗುತ್ತದೆ. ಹಣ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ, ಪಿಎಂ ಕಿಸಾನ್ 13ನೇ ಕಂತಿಗೆ ಅರ್ಜಿ ಸಲ್ಲಿಸುವುದು ಹೇಗೆ, ಯಾವೆಲ್ಲ ದಾಖಲೆಗಳು ಬೇಕು? ಇತ್ಯಾದಿ ಪೂರ್ತಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
13ನೇ ಕಂತಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಪಿಎಂ ಕಿಸಾನ್ ವೆಬ್ಸೈಟ್ಗೆ (http://pmkisan.gov.in/) ಭೇಟಿ ನೀಡುವ ಮೂಲಕ ಅರ್ಹ ಫಲಾನುಭವಿಗಳು ಆನ್ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಯ ಹಂತಗಳನ್ನು ಇಲ್ಲಿ ನೀಡಲಾಗಿದೆ.
ಯಾವೆಲ್ಲ ದಾಖಲೆಗಳು ಬೇಕು?
- ಆಧಾರ್ ಕಾರ್ಡ್
- ಮೊಬೈಲ್ ಸಂಖ್ಯೆ
- ಬ್ಯಾಂಕ್ ಖಾತೆ ವಿವರಗಳು
ಅರ್ಹ ಫಲಾನುಭವಿಗಳು ಯಾರು?
- ಸಣ್ಣ ಮತ್ತು ಅತಿ ಸಣ್ಣ ರೈತರು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಅರ್ಹ ರೈತರ ಕುಟುಂಬದವರು, ಅಂದರೆ ರೈತನ ಪತ್ನಿ, ಸಣ್ಣ ಮಕ್ಕಳೂ ಕಂತಿನ ಹಣ ಪಡೆಯಲು ಅರ್ಹರಾಗಿರುತ್ತಾರೆ.
- ಅರ್ಹ ರೈತರು ಯಾರು ಎಂಬುದನ್ನು ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಗುರುತಿಸುತ್ತವೆ.
13ನೇ ಕಂತಿನ ಫಲಾನುಭವಿಗಳ ಅರ್ಹತೆ ಸ್ಥಿತಿಗತಿ ಪರಿಶೀಲನೆ ಹೇಗೆ?
- ವೆಬ್ಸೈಟ್ಗೆ (www.kisan.gov.in) ಭೇಟಿ ನೀಡಿ.
- ವೆಬ್ ಪುಟದ ಬಲಭಾಗದ ಅಂಚಿನಲ್ಲಿರುವ ‘ಫಾರ್ಮರ್ಸ್ ಕಾರ್ನರ್’ಗೆ ಸ್ಕ್ರಾಲ್ ಮಾಡಿ.
- ‘ಬೆನಿಫೀಷಿಯರಿ ಸ್ಟೇಟಸ್’ ಎಂಬ ಸೆಕ್ಷನ್ ಅನ್ನು ಕ್ಲಿಕ್ ಮಾಡಿ.
- ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಕಾಣಿಸುವ ಅರ್ಜಿಯಲ್ಲಿ ಫಲಾನುಭವಿಯ ಹೆಸರು ಭರ್ತಿ ಮಾಡಬೇಕು.
- ಹೊಸ ಪುಟದಲ್ಲಿ ಯಾವುದನ್ನು ಹುಡುಕಲು ಬಯಸುತ್ತೀರಿ ಎಂಬ ಎರಡು ಆಯ್ಕೆಗಳಿರುತ್ತವೆ.
- ದೂರವಾಣಿ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
- ಮೊಬೈಲ್ ಫೋನ್ ಸಂಖ್ಯೆಯನ್ನೂ ಆಯ್ಕೆ ಮಾಡಬಹುದು.
- ಮೊಬೈಲ್ ಫೋನ್ ಸಂಖ್ಯೆಯನ್ನು ನಮೂದಿಸಿದಾಗ ಒಟಿಪಿ ಸಂದೇಶ ಬರುತ್ತದೆ. ಅದನ್ನು ನಮೂದಿಸಬೇಕು.
- ‘ಗೆಟ್ ಡಾಟಾ’ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಪಾವತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಕಾಣಿಸುತ್ತದೆ.
- ನಂತರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಿದೆಯೇ ಇಲ್ಲವೇ ಎಂಬ ಸಂದೇಶ ಕಾಣಿಸುತ್ತದೆ.
- ನೋಂದಣಿ ಸಂಖ್ಯೆಯ ಆಧಾರದಲ್ಲಿ ಸ್ಥಿತಿಗತಿ ಪರಿಶೀಲಿಸಲು ಬಯಸುತ್ತೀರಾದರೆ, ಅದನ್ನು ನಮೂದಿಸಿ. ನಂತರ ‘ಗೆಟ್ ಡಾಟಾ’ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ನಿಮಗೆ ಸ್ಥಿತಿಗತಿ ಏನಿದೆ ಎಂಬುದು ಕಾಣಿಸುತ್ತದೆ.
- 13ನೇ ಕಂತಿನ ಹಣ ಬಿಡುಗಡೆ ಆಗಿದೆಯೋ ಇಲ್ಲವೋ ಎಂಬುದು ಸ್ಕ್ರೀನ್ ಮೇಲೆ ಕಾಣಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:10 am, Thu, 24 November 22