ಫಿಕ್ಸೆಡ್ ಡೆಪಾಸಿಟ್; ವಯಸ್ಸಿಗೆ ಅನುಗುಣವಾಗಿ ಠೇವಣಿ ಹೂಡಿಕೆ ನಿಯಮಗಳು; ಅವಿವಾಹಿತರು, ವಿವಾಹಿತರು, ನಿವೃತ್ತರು ಏನು ಮಾಡಬೇಕು?

How to invest in Fixed Deposits according to the Age: ಮ್ಯೂಚುವಲ್ ಫಂಡ್​ನಂತಹ ಸುಲಭ ಹೂಡಿಕೆ ಸಾಧನಗಳ ಮಧ್ಯೆ ಸಾಂಪ್ರದಾಯಿಕ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳು ಈಗಲೂ ತಮ್ಮ ರೆಲಿವೆನ್ಸ್ ಕಳೆದುಕೊಂಡಿಲ್ಲ. ನಿಶ್ಚಿತ ಠೇವಣಿಗಳು ಯಾವುದೇ ವ್ಯಕ್ತಿಯ ಒಂದು ಹೂಡಿಕೆಯ ಭಾಗವಾಗಿ ಇರಬಲ್ಲುವು. ಆದರೆ, ವಯಸ್ಸಿಗೆ ಅನುಗುಣವಾಗಿ ಡೆಪಾಸಿಟ್ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸಮಂಜಸ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಫಿಕ್ಸೆಡ್ ಡೆಪಾಸಿಟ್; ವಯಸ್ಸಿಗೆ ಅನುಗುಣವಾಗಿ ಠೇವಣಿ ಹೂಡಿಕೆ ನಿಯಮಗಳು; ಅವಿವಾಹಿತರು, ವಿವಾಹಿತರು, ನಿವೃತ್ತರು ಏನು ಮಾಡಬೇಕು?
ಹೂಡಿಕೆ
Image Credit source: Getty Images

Updated on: Aug 24, 2026 | 10:50 AM

ಮುಖ್ಯಾಂಶಗಳು

  • ಸಾಂಪ್ರದಾಯಿಕ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳು ಈಗಲೂ ತಮ್ಮ ರೆಲಿವೆನ್ಸ್ ಕಳೆದುಕೊಂಡಿಲ್ಲ.
  • ನಿಶ್ಚಿತ ಠೇವಣಿಗಳು ಯಾವುದೇ ವ್ಯಕ್ತಿಯ ಒಂದು ಹೂಡಿಕೆಯ ಭಾಗವಾಗಿ ಇರಬಲ್ಲುವು.
  • ಆದರೆ, ವಯಸ್ಸಿಗೆ ಅನುಗುಣವಾಗಿ ಡೆಪಾಸಿಟ್ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸಮಂಜಸ.

ಫಿಕ್ಸೆಡ್ ಡೆಪಾಸಿಟ್ (FD – Fixed Deposit) ಎಂದರೆ ಹಣ ಹಾಕುವುದು, ಬಡ್ಡಿ ಗಳಿಸುವುದು ಮತ್ತು ಮೆಚ್ಯೂರಿಟಿ ಅವಧಿಯವರೆಗೆ ಕಾಯುವುದು ಎಂದು ಎಲ್ಲರೂ ಸಾಮಾನ್ಯವಾಗಿ ಭಾವಿಸುತ್ತಾರೆ. ಆದರೆ, ಜೀವನದ ಪ್ರತಿಯೊಂದು ಹಂತದಲ್ಲೂ FD ಉದ್ದೇಶ ಬದಲಾಗುತ್ತದೆ. ಈಕ್ವಿಟಿ ಹೂಡಿಕೆ ಟ್ರೆಂಡ್​ಗೆ ಬಂದ ಬಳಿಕ ಎಫ್​ಡಿ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ ಎಂದೇ ಹಲವರು ಭಾವಿಸಿದ್ದರು. ಅದು ಸುಳ್ಳೆಂದು ಸಾಬೀತಾಗಿದೆ. ಈಗಲೂ ಕೂಡ ಜನರು ಠೇವಣಿಗಳಿಂದ ವಿಮುಖರಾಗಿಲ್ಲ. ಹಣಕಾಸು ಪರಿಣಿತರೂ ಕೂಡ ಹೂಡಿಕೆಯಲ್ಲಿ ಎಫ್​ಡಿಯೂ ಒಂದು ಭಾಗವಾಗಿರಲಿ ಎಂದೇ ಸಲಹೆ ನೀಡುವುದುಂಟು.

ನಿಶ್ಚಿತ ಠೇವಣಿಯ ನಿಯಮಗಳನ್ನು ಮತ್ತು ಬಳಕೆಯ ಕ್ರಮವನ್ನು ವಯಸ್ಸಿಗೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಬದಲಾಯಿಸಿಕೊಂಡರೆ, ಅದರ ಉಪಯೋಗ ಹೆಚ್ಚು ಸಮರ್ಪಕವಾಗಿರುತ್ತದೆ. ಅವಿವಾಹಿತರು, ವಿವಾಹಿತರು ಹಾಗೂ ನಿವೃತ್ತರು ಈ ಎಫ್​ಡಿಯನ್ನು ಹೇಗೆ ಬಳಸಿಕೊಂಡರೆ ಉತ್ತಮ ಎನ್ನುವ ಒಂದು ಸಲಹೆ ಈ ಕೆಳಕಂಡಂತಿದೆ:

ಇದನ್ನೂ ಓದಿ: ಚೆಕ್‌ನ ಹಿಂಭಾಗದಲ್ಲಿ ಯಾಕೆ ಸಹಿ ಮಾಡ್ತಾರೆ? ಇದೇ ನೋಡಿ ಕಾರಣ

ಹಿರಿಯ ನಾಗರಿಕರಿಗೆ: ಸುರಕ್ಷತೆ ಮತ್ತು ನಗದೀಕರಣ ಮೊದಲ ಆದ್ಯತೆ

ಹಿರಿಯ ನಾಗರಿಕರಿಗೆ (Senior Citizens) ಹೆಚ್ಚಿನ ಲಾಭ ಗಳಿಸುವುದಕ್ಕಿಂತ ಬಂಡವಾಳದ ಸುರಕ್ಷತೆ ಮತ್ತು ನಿಯಮಿತ ಆದಾಯ ಮುಖ್ಯ.

  • ಹೆಚ್ಚಿನ ಬಡ್ಡಿ ದರ: ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚಿನ ಬಡ್ಡಿ ದರವನ್ನು ನೀಡುತ್ತವೆ. ಉದಾಹರಣೆಗೆ, ಎಸ್‌ಬಿಐ ಸಾಮಾನ್ಯ ಗ್ರಾಹಕರಿಗೆ ಶೇ. 6.40 ಬಡ್ಡಿ ನೀಡಿದರೆ, ಹಿರಿಯ ನಾಗರಿಕರಿಗೆ ಶೇ. 6.90 ನೀಡುತ್ತದೆ.
  • ಎಫ್‌ಡಿ ಲ್ಯಾಡರಿಂಗ್: ಇಡೀ ಹಣವನ್ನು ಒಂದೇ FD ಯಲ್ಲಿ ಹಾಕುವ ಬದಲು, ಬೇರೆ ಬೇರೆ ಸಮಯದಲ್ಲಿ ಮೆಚ್ಯೂರ್ ಆಗುವಂತೆ ಹಲವು FD ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ಈ ಕ್ರಮಕ್ಕೆ ಎಫ್​ಡಿ ಲ್ಯಾಡರಿಂಗ್ (FD Laddering) ಎನ್ನುತ್ತಾರೆ. ಲ್ಯಾಡರಿಂಗ್ ಎಂದರೆ ಏಣಿಯಂತೆ ಹಂತ ಹಂತವಾಗಿ ಹೋಗುವುದು. ಇದರಿಂದ ಯಾವುದೇ ತುರ್ತು ಸಂದರ್ಭದಲ್ಲಿ ಸಂಪೂರ್ಣ ಡೆಪಾಸಿಟ್ ಮುರಿಯುವ ಅಗತ್ಯವಿರುವುದಿಲ್ಲ.
  • ನಿಯಮಿತ ಆದಾಯ: ಮಾಸಿಕ ಬಡ್ಡಿ ಪಾವತಿ ಆಯ್ಕೆಯು (Monthly Interest Payout) ಮನೆ ಖರ್ಚುಗಳನ್ನು ಸಾಗಿಸಲು ನೆರವಾಗುತ್ತದೆ.
  • ತೆರಿಗೆ ವಿನಾಯಿತಿ: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80TTB ಅಡಿಯಲ್ಲಿ ಹಿರಿಯ ನಾಗರಿಕರು ₹50,000 ವರೆಗಿನ ಬಡ್ಡಿ ಆದಾಯದ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು.
  • ಬ್ಯಾಂಕ್ ಸುರಕ್ಷತೆ: ಒಂದೇ ಬ್ಯಾಂಕಿನಲ್ಲಿ ₹5 ಲಕ್ಷಕ್ಕಿಂತ ಹೆಚ್ಚು ಡೆಪಾಸಿಟ್ ಇಡಬೇಡಿ. DICGC ನಿಯಮದಡಿ ₹5 ಲಕ್ಷದವರೆಗೆ ಮಾತ್ರ ವಿಮೆ ಇರುತ್ತದೆ.

ಯುವ ಹೂಡಿಕೆದಾರರಿಗೆ: ತುರ್ತು ನಿಧಿ ಮತ್ತು ಮನಸ್ಸಿನ ಶಾಂತಿ

20 ರ ಹರೆಯದಲ್ಲಿರುವ ಯುವಕರಿಗೆ (Young Investors) ದೀರ್ಘಾವಧಿಯ ಸಂಪತ್ತು ಸೃಷ್ಟಿಸಲು FD ಯೊಂದೇ ಸೂಕ್ತ ಮಾರ್ಗವಲ್ಲದಿರಬಹುದು. ಆದರೆ ಇದು ತುರ್ತು ನಿಧಿಯಾಗಿ (Emergency Fund) ಕೆಲಸ ಮಾಡುತ್ತದೆ.

  • ತುರ್ತು ನಿಧಿ: ಕನಿಷ್ಠ 6 ತಿಂಗಳ ಖರ್ಚಿಗೆ ಬೇಕಾಗುವಷ್ಟು ಹಣವನ್ನು FD ರೂಪದಲ್ಲಿ ಸುರಕ್ಷಿತವಾಗಿಡಬೇಕು.
  • ಮಾರುಕಟ್ಟೆಯ ಕುಸಿತದಿಂದ ರಕ್ಷಣೆ: ಶೇರು ಮಾರುಕಟ್ಟೆಗಳು ಕುಸಿದಾಗ, ಭೀತಿಯಿಂದ ಶೇರುಗಳನ್ನು ಮಾರಾಟ ಮಾಡುವುದನ್ನು ತಡೆಯಲು, ಅಥವಾ ತುರ್ತು ಸಂದರ್ಭದಲ್ಲಿ ಈಕ್ವಿಟಿಯಿಂದ ಹೂಡಿಕೆ ಹಿಂಪಡೆಯುವುದನ್ನು ತಡೆಯಲು ಈ ಎಫ್‌ಡಿ ನಿಧಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಹಬ್ಬದ ಸೀಸನ್​ನಲ್ಲಿ ಸಕ್ಕರೆ ದುಬಾರಿ; ಒಂದೇ ತಿಂಗಳಲ್ಲಿ ಭರ್ಜರಿ ಏರಿಕೆ ಕಂಡ ಬೆಲೆ; ಏನು ಕಾರಣ?

ಕುಟುಂಬಗಳಿಗೆ: ಹಣಕಾಸಿನ ಗುರಿಗಳಿಗೆ ಅನುಗುಣವಾಗಿ FD

ಕುಟುಂಬಗಳು (Families) ತಮ್ಮ ಹಣವನ್ನು ಒಂದೇ FD ಯಲ್ಲಿ ಇಡುವ ಬದಲು, ನಿರ್ದಿಷ್ಟ ಗುರಿಗಳಿಗೆ (Financial Goals) ವಿಂಗಡಿಸಿ ಹೂಡಿಕೆ ಮಾಡಬೇಕು.

  • ಸಮಯಕ್ಕೆ ಸರಿಯಾಗಿ ಮೆಚ್ಯೂರಿಟಿ: ಏಪ್ರಿಲ್‌ನಲ್ಲಿ ಕಟ್ಟಬೇಕಾದ ಶಾಲಾ ಶುಲ್ಕ, ಜುಲೈನಲ್ಲಿ ಕಟ್ಟಬೇಕಾದ ಇನ್ಶೂರೆನ್ಸ್ ಪ್ರೀಮಿಯಂ, ಅಥವಾ 3 ವರ್ಷಗಳ ನಂತರದ ಮನೆ ಮುಂಗಡ ಹಣ — ಪ್ರತಿಯೊಂದಕ್ಕೂ ಬೇರೆ ಬೇರೆ ಅವಧಿಯ FD ಮಾಡಿಕೊಳ್ಳಬೇಕು.
  • ಯೋಜಿತ ನಿರ್ಧಾರ: “ಬಡ್ಡಿ ದರ ಎಷ್ಟಿದೆ ಎಂಬುದು ಕೊನೆಯ ಆದ್ಯತೆಯಾಗಬೇಕು, ಹಣಕಾಸಿನ ಉದ್ದೇಶವೇ (Purpose) ಮೊದಲ ಆದ್ಯತೆಯಾಗಬೇಕು” ಎಂದು ಹಣಕಾಸು ತಜ್ಞರು ಸಲಹೆ ನೀಡುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:45 am, Mon, 24 August 26

Loading...
Unable to load recommendations.
Follow Us