AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಬ್ರಿಟನ್ ವ್ಯಾಪಾರ ಒಪ್ಪಂದ: ಭಾರತೀಯ ವಾಹನ ತಯಾರಕರಿಗೆ ದೊಡ್ಡ ಮಾರುಕಟ್ಟೆ ಅವಕಾಶ

Indian EV makers to gain from India UK trade agreement: ಭಾರತದ ವಾಹನ ತಯಾರಕರಿಗೆ ರಫ್ತು ಮಾರುಕಟ್ಟೆ ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡದಾಗಲಿದೆ. ಭಾರತ ಹಾಗೂ ಬ್ರಿಟನ್ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದದ ಬಳಿಕ ಭಾರತದ ಇವಿ, ಹೈಡ್ರೋಜನ್ ಕಾರುಗಳಿಗೆ ಬ್ರಿಟನ್ ಮಾರುಕಟ್ಟೆಗೆ ಸುಲಭ ಪ್ರವೇಶ ಸಿಗಲಿದೆ. ಸುಂಕ ರಹಿತವಾಗಿ ಅಲ್ಲಿಗೆ ರಫ್ತು ಮಾಡಬಹುದು ಎನ್ನಲಾಗಿದೆ.

ಭಾರತ-ಬ್ರಿಟನ್ ವ್ಯಾಪಾರ ಒಪ್ಪಂದ: ಭಾರತೀಯ ವಾಹನ ತಯಾರಕರಿಗೆ ದೊಡ್ಡ ಮಾರುಕಟ್ಟೆ ಅವಕಾಶ
ಟಾಟಾ ಮೋಟರ್ಸ್​ನ ಹ್ಯಾರಿಯರ್ ಇವಿ ಕಾರುImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 21, 2026 | 4:56 PM

Share

ನವದೆಹಲಿ, ಜೂನ್ 21: ಭಾರತ ಮತ್ತು ಬ್ರಿಟನ್ (UK) ನಡುವಿನ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದವು (CETA – Comprehensive Economic and Trade Agreement) ಜುಲೈ 15 ರಿಂದ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ ಭಾರತದಲ್ಲಿ ತಯಾರಾಗುವ ಎಲೆಕ್ಟ್ರಿಕ್ (EV), ಹೈಬ್ರಿಡ್ ಮತ್ತು ಹೈಡ್ರೋಜನ್ ಕಾರುಗಳಿಗೆ ಬ್ರಿಟನ್ ಮಾರುಕಟ್ಟೆಯಲ್ಲಿ ಕೋಟಾ ಆಧಾರಿತ ‘ಸುಂಕ ರಹಿತ’ (Duty-free) ಪ್ರವೇಶ ಸಿಗಲಿದೆ. ಈ ಒಪ್ಪಂದದ ನಿಯಮಗಳ ಪ್ರಕಾರ, ಒಪ್ಪಂದ ಜಾರಿಯಾದ ಆರನೇ ವರ್ಷದಿಂದ (ಅಂದರೆ 2031 ರಿಂದ) ಭಾರತದ ಹಸಿರು ವಾಹನಗಳು ಯಾವುದೇ ಕಸ್ಟಮ್ಸ್ ಸುಂಕವಿಲ್ಲದೆ ಬ್ರಿಟನ್ ಮಾರುಕಟ್ಟೆಯನ್ನು ಪ್ರವೇಶಿಸಬಹುದು. 2030 ರ ವೇಳೆಗೆ ಉಭಯ ದೇಶಗಳ ನಡುವಿನ ವ್ಯಾಪಾರವನ್ನು $100 ಬಿಲಿಯನ್‌ಗೆ ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ.

ಭಾರತದ ಪ್ರಮುಖ ವಾಹನ ತಯಾರಕರಾದ ಮಾರುತಿ ಸುಜುಕಿ, ಮಹೀಂದ್ರಾ ಆಂಡ್ ಮಹೀಂದ್ರಾ ಮತ್ತು ಟಾಟಾ ಮೋಟರ್ಸ್ ಈ ಅವಕಾಶವನ್ನು ಬಳಸಿಕೊಂಡು ಬ್ರಿಟನ್‌ನ ಇವಿ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗುತ್ತಿವೆ. ಬ್ರಿಟನ್‌ನಲ್ಲಿ ಭಾರತದಂತೆಯೇ ರಸ್ತೆಯ ಎಡಭಾಗದಲ್ಲಿ ವಾಹನ ಚಾಲನೆ ಮಾಡುವ (Right-hand-drive) ವ್ಯವಸ್ಥೆ ಇರುವುದರಿಂದ ಭಾರತೀಯ ಕಂಪನಿಗಳಿಗೆ ಇದು ಸುಲಭವಾಗಲಿದೆ.

ಇದನ್ನೂ ಓದಿ: ಏಪ್ರಿಲ್​ನಿಂದ ಜೂನ್ 14ರವರೆಗೆ ಭಾರತದ ರಫ್ತು ಶೇ. 15ರಷ್ಟು ಏರಿಕೆ: ವಾಣಿಜ್ಯ ಸಚಿವ ಪಿಯೂಶ್ ಗೋಯಲ್

ಕೋಟಾ ಮತ್ತು ಬೆಲೆಯ ವಿವರಗಳು

ಈ ಸುಂಕ ರಹಿತ ಸೌಲಭ್ಯವು £20,000 (ಅಂದಾಜು ₹21 ಲಕ್ಷ) ದಿಂದ ಹಿಡಿದು £80,000 (ಅಂದಾಜು ₹86 ಲಕ್ಷ) ವರೆಗಿನ ಮೂರು ವಿಭಿನ್ನ ಬೆಲೆಯ ಕಾರುಗಳಿಗೆ ಅನ್ವಯಿಸುತ್ತದೆ. ಆದರೆ £80,000 ಕ್ಕಿಂತ ಹೆಚ್ಚಿನ ಬೆಲೆಯ ಐಷಾರಾಮಿ ಕಾರುಗಳಿಗೆ ಯಾವುದೇ ಸುಂಕ ವಿನಾಯಿತಿ ಇರುವುದಿಲ್ಲ. ಆರಂಭದಲ್ಲಿ (6ನೇ ವರ್ಷದಲ್ಲಿ) ಒಟ್ಟು 17,600 ವಾಹನಗಳ ರಫ್ತಿಗೆ ಅವಕಾಶ ಸಿಗಲಿದ್ದು, 15ನೇ ವರ್ಷದ ವೇಳೆಗೆ ಈ ಕೋಟಾ ಗರಿಷ್ಠ 88,000 ವಾಹನಗಳಿಗೆ ಏರಿಕೆಯಾಗಲಿದೆ.

ಕಂಪನಿಯು ಈಗಾಗಲೇ ತನ್ನ ‘ಇ-ವಿಟಾರಾ’ (eVITARA) ಎಲೆಕ್ಟ್ರಿಕ್ ಕಾರನ್ನು ಯುರೋಪ್‌ಗೆ ರಫ್ತು ಮಾಡಲು ಆರಂಭಿಸಿದ್ದು, ಅದಕ್ಕೆ ಬ್ರಿಟನ್ ಪ್ರಮುಖ ಮಾರುಕಟ್ಟೆಯಾಗಿದೆ. ಈ ಒಪ್ಪಂದವು ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ದೊಡ್ಡ ಬಲ ನೀಡಲಿದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿದೆ.

ಇದನ್ನೂ ಓದಿ: ವಿಶ್ವಬ್ಯಾಂಕ್​ನಿಂದ 1.5 ಬಿಲಿಯನ್, ಎಡಿಬಿಯಿಂದ 1 ಬಿಲಿಯನ್ ಡಾಲರ್ ಸಾಲ ಪಡೆಯಲಿರುವ ಭಾರತ

ಬ್ರಿಟನ್ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ಎಲೆಕ್ಟ್ರಿಕ್ ಎಸ್‌ಯುವಿ (SUV) ಪೋರ್ಟ್‌ಫೋಲಿಯೊವನ್ನು ಅಲ್ಲಿಗೆ ವಿಸ್ತರಿಸುವ ಬಗ್ಗೆ ಒಪ್ಪಂದದ ನಿಯಮಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ನಿರ್ಧಾರ ಕೈಗೊಳ್ಳುವುದಾಗಿ ಮಹೀಂದ್ರ ಅಂಡ್ ಮಹೀಂದ್ರ ಕಂಪನಿ ತಿಳಿಸಿದೆ.

ಈ ಹಂತಹಂತದ ಕೋಟಾ ವ್ಯವಸ್ಥೆಯು ಭಾರತೀಯ ಇವಿ ಉದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಮತ್ತು ದೀರ್ಘಾವಧಿಯ ಬೆಳವಣಿಗೆಗೆ ಉತ್ತಮ ಹಾದಿ ಮಾಡಿಕೊಡುತ್ತದೆ ಎಂದು ಟಾಟಾ ಮೋಟರ್ಸ್ ಸ್ವಾಗತಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್