AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರಿಗೆದರಿದ ಷೇರುಪೇಟೆ; 900 ಅಂಕ ಗಳಿಸಿದ ಸೆನ್ಸೆಕ್ಸ್; 267 ಅಂಕ ಹೆಚ್ಚಿಸಿಕೊಂಡ ನಿಫ್ಟಿ; ಇವತ್ತು ಮಾರುಕಟ್ಟೆ ಏರುತ್ತಿರುವುದು ಯಾಕೆ?

Know why Indian stock market rising: ಭಾರತದ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಷೇರುಗಳು ಇವತ್ತು ಪಾಸಿಟಿವ್ ಆಗಿವೆ. ಹೆಚ್ಚಿನ ಸೂಚ್ಯಂಕಗಳು ಅಂಕಗಳನ್ನು ಹೆಚ್ಚಿಸಿಕೊಂಡಿವೆ. ಸೆನ್ಸೆಕ್ಸ್ 75,000 ಅಂಕಗಳು, ಹಾಗು ನಿಫ್ಟಿ 22,776 ಅಂಕಗಳ ಮಟ್ಟಕ್ಕೆ ಹೋಗಿವೆ. ಜಾಗತಿಕ ಮಾರುಕಟ್ಟೆಗಳ ಏರಿಕೆ, ಭಾರತೀಯ ಷೇರುಗಳ ಆಕರ್ಷಕ ಬೆಲೆ, ರುಪಾಯಿ ಮೌಲ್ಯ ಹೆಚ್ಚಳ ಇವೇ ಮುಂತಾದ ಕಾರಣಗಳನ್ನು ಗುರುತಿಸಲಾಗಿದೆ.

ಗರಿಗೆದರಿದ ಷೇರುಪೇಟೆ; 900 ಅಂಕ ಗಳಿಸಿದ ಸೆನ್ಸೆಕ್ಸ್; 267 ಅಂಕ ಹೆಚ್ಚಿಸಿಕೊಂಡ ನಿಫ್ಟಿ; ಇವತ್ತು ಮಾರುಕಟ್ಟೆ ಏರುತ್ತಿರುವುದು ಯಾಕೆ?
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 18, 2025 | 3:01 PM

Share

ನವದೆಹಲಿ, ಮಾರ್ಚ್ 18: ಸತತ ಐದು ತಿಂಗಳು ಕುಸಿಯುತ್ತಾ ಬಂದಿರುವ ಭಾರತದ ಷೇರು ಮಾರುಕಟ್ಟೆ ಅಪರೂಪಕ್ಕೊಮ್ಮೆ ಏರಿಕೆ ಕಾಣುವಂತಾಗಿದೆ. ಅಂತಹ ಒಂದು ದಿನ ಇವತ್ತಿನದ್ದಾಗಿದ್ದು, ಪ್ರಮುಖ ಸೂಚ್ಯಂಕಗಳು ಲಾಭ ಮಾಡಿವೆ. ಬಾಂಬೆ ಸ್ಟಾಕ್ ಎಕ್ಸ್​​ಚೇಂಜ್​ನ ಸೆನ್ಸೆಕ್ಸ್ ಸೂಚ್ಯಂಕ (sensex index) ಇಂದು ಮಂಗಳವಾರ 900ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿ 75,000 ಅಂಕಗಳ ಗಡಿ ದಾಟಿದೆ. ನ್ಯಾಷನಲ್ ಸ್ಟಾಕ್ ಎಕ್ಸ್​​ಚೇಂಜ್​​ನ ನಿಫ್ಟಿ ಸೂಚ್ಯಂಕ 267 ಅಂಕ ಗಳಿಸಿ 22,776 ಮಟ್ಟ ಮುಟ್ಟಿದೆ. ಬಿಎಸ್​​ಇನಲ್ಲಿರುವ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ 4 ಲಕ್ಷ ಕೋಟಿ ರೂನಷ್ಟು ಹೆಚ್ಚಳವಾಗಿದೆ.

ಭಾರತದ ಷೇರು ಮಾರುಕಟ್ಟೆ ಇವತ್ತು ಮಂಗಳವಾರ ಗರಿಗೆದರಲು ಏನು? ಈ ಏರಿಕೆಯ ಹಾದಿ ಇನ್ಮುಂದೆ ಸ್ಥಿರವಾಗಿರುತ್ತದಾ? ಸತತ ಐದು ತಿಂಗಳು ಋಣಾತ್ಮಕವಾಗಿ ಅಂತ್ಯಗೊಂಡಿರುವ ನಿಫ್ಟಿ ಸೂಚ್ಯಂಕ, ಆರನೇ ತಿಂಗಳಲ್ಲಿ ಕರಡಿ ಹಿಡಿತದಿಂದ ತಪ್ಪಿಸಿಕೊಂಡು ಗೂಳಿ ಕಡೆಗೆ ಹೋಗುತ್ತಾ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಸದ್ಯಕ್ಕೆ ಕಷ್ಟ. ಇವತ್ತು ಷೇರು ಮಾರುಕಟ್ಟೆ ಗರಿಗೆದರಲು ಕೆಲ ಪ್ರಮುಖ ಕಾರಣಗಳನ್ನಂತೂ ಗುರುತಿಸಬಹುದು.

ಜಾಗತಿಕ ಮಾರುಕಟ್ಟೆಗಳ ಏರಿಕೆಯ ಪರಿಣಾಮ

ಅಮೆರಿಕದ ಮಾರುಕಟ್ಟೆಯ ಪ್ರಮುಖ ಸೂಚ್ಯಂಕಗಳು ಪ್ರಬಲವಾಗಿ ಬೆಳೆದಿವೆ. ಚೀನಾ, ಹಾಂಕಾಂಗ್, ಕೊರಿಯಾ, ಜಪಾನ್, ಆಸ್ಟ್ರೇಲಿಯಾ, ತೈವಾನ್​ನ ಮಾರುಕಟ್ಟೆ ಇಂದು ಪಾಸಿಟಿವ್ ಆಗಿವೆ. ಭಾರತೀಯ ಮಾರುಕಟ್ಟೆಗೂ ಈ ಪಾಸಿಟಿವ್ ವೈಬ್ರೇಶನ್ ತಾಕಿರಬಹುದು.

ಇದನ್ನೂ ಓದಿ
Image
ಇತಿಹಾಸದಲ್ಲೇ ಅತಿದೊಡ್ಡ ಮಾರುಕಟ್ಟೆ ಕುಸಿತವಾ ಇದು?
Image
ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್​​ಗಳ ಸಾಧಕ-ಬಾಧಕಗಳು
Image
ಮಲ್ಟಿಬ್ಯಾಗರ್ ಷೇರು ಗುರುತಿಸಲು ಬೇಕು ಈ ಅಂಶಗಳು
Image
W ಆಕಾರದಲ್ಲಿ ಚಲಿಸುತ್ತಿದೆಯಾ ನಿಫ್ಟಿ? ಹಾಗಂದರೇನು?

ಇದನ್ನೂ ಓದಿ: ಸರ್ಕಾರಕ್ಕೆ ತೆರಿಗೆ ಸುಗ್ಗಿ; ನೇರ ತೆರಿಗೆ ಸಂಗ್ರಹ ಶೇ. 16.2 ಏರಿಕೆ; ಎಸ್​ಟಿಟಿಯಲ್ಲೂ ಹೈಜಂಪ್

ರುಪಾಯಿ ಬಲ ವೃದ್ಧಿ

ಅಮೆರಿಕದ ಡಾಲರ್ ಕರೆನ್ಸಿ ಬಲ ತುಸು ಕುಂದಿದೆ. ಯೂರೋ ಹಾಗೂ ಇತರ ಪ್ರಮುಖ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಕಡಿಮೆ ಆಗಿದೆ. ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಮೌಲ್ಯ ಇಳಿದಿದೆ. ಕೆಲ ದಿನಗಳ ಹಿಂದೆ 110.17 ಇದ್ದ ಡಾಲರ್ ಇಂಡೆಕ್ಸ್ ಈಗ 103.44ಕ್ಕೆ ಇಳಿದಿದೆ. ಇದೇ ವೇಳೆ, ಇವತ್ತು ಭಾರತೀಯ ರುಪಾಯಿ ಮೌಲ್ಯ ಡಾಲರ್ ಎದುರು ತುಸು ಏರಿಕೆ ಕಂಡಿದೆ.

ಉತ್ತಮ ಮಾರುಕಟ್ಟೆ ಮೌಲ್ಯ

ಭಾರತದ ಷೇರು ಮಾರುಕಟ್ಟೆ ಸತತ ಐದು ತಿಂಗಳು ಕುಸಿದ ಪರಿಣಾಮ ಬಹಳ ಒಳ್ಳೆಯ ಷೇರುಗಳ ಬೆಲೆ ಕಡಿಮೆ ಆಗಿ, ಈಗ ಉತ್ತಮ ಮೌಲ್ಯದ ಸ್ಥಿತಿಯಲ್ಲಿವೆ. ಅದರಲ್ಲೂ ಲಾರ್ಕ್ ಕ್ಯಾಪ್ ಷೇರುಗಳು ಆಕರ್ಷಕ ಸ್ಥಿತಿಯಲ್ಲಿವೆ. ಮಾರುಕಟ್ಟೆಯಲ್ಲಿ ಹೂಡಿಕೆಗೆ ಇದು ಪ್ರಶಸ್ತ ಸಮಯ ಎನ್ನುತ್ತಾರೆ ತಜ್ಞರು.

ಆರ್​​ಬಿಐನಿಂದ ಬಡ್ಡಿದರ ಕಡಿತ ಸಾಧ್ಯತೆ

ಅಭೂತಪೂರ್ವ ರೀತಿಯಲ್ಲಿ ತೆರಿಗೆ ಸಂಗ್ರಹ ಆಗಿರುವುದು, ಹಣದುಬ್ಬರ ಕಡಿಮೆ ಆಗಿರುವುದು, ಆರ್​​ಬಿಐಗೆ ರಿಪೋ ದರ ಕಡಿತಗೊಳಿಸುವ ಸಾಧ್ಯತೆ ಇರುವುದು, ಈ ಅಂಶಗಳು ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಿಸಿವೆ.

ಇದನ್ನೂ ಓದಿ: ಭಾರತೀಯ ರೈಲ್ವೆ ಗರಿಮೆ; ಯೂರೋಪ್, ಆಸ್ಟ್ರೇಲಿಯಾ, ಸೌದಿಗೆ ಭಾರತದಿಂದ ರೈಲ್ವೆ ಉಪಕರಣಗಳ ರಫ್ತು: ಅಶ್ವಿನಿ ವೈಷ್ಣವ್

ನಿಫ್ಟಿ ತಾಂತ್ರಿಕ ಅಂಶ

ಪರಿಣಿತರೊಬ್ಬರು ನಿಫ್ಟಿಯ ತಾಂತ್ರಿಕ ಅಂಶವನ್ನು ಎತ್ತಿ ತೋರಿಸಿ, ಇದು ಮಾರುಕಟ್ಟೆ ಏರಿಕೆಯಾಗುವ ಸೂಚನೆ ಎಂದಿದ್ದಾರೆ. ಅವರ ಪ್ರಕಾರ, ನಿಫ್ಟಿ 22,350 ಹಾಗು ಸೆನ್ಸೆಕ್ಸ್ 73,800 ಅಂಕಗಳ ಮಟ್ಟಕ್ಕಿಂತ ಮೇಲೆಯೇ ಇದ್ದಲ್ಲಿ ಮಾರುಕಟ್ಟೆ ಮೇಲ್ಮುಖವಾಗಿ ಚಲಿಸುವ ಸಾಧ್ಯತೆ ದಟ್ಟವಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:56 pm, Tue, 18 March 25

ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ