AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್​ನ ಖರ್ಗ್ ದ್ವೀಪದ ಮೇಲೆ ಟ್ರಂಪ್​ಗೆ ಕಣ್ಣು? ಅಂಥದ್ದೇನಿದೆ ಅಲ್ಲಿ?

Know why US wants to capture Kharg Island: ಇರಾನ್ ಯುದ್ಧ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಇರಾನ್ ಅನ್ನು ಮಣಿಸಲು ಅಮೆರಿಕ ಭೂದಾಳಿಗೆ ಯೋಜಿಸಿದೆ. ತನ್ನ ನೆಲಕ್ಕೆ ಕಾಲಿಡುವ ಅಮೆರಿಕನ್ ಸೈನಿಕರನ್ನು ಬಲಿತೆಗೆದುಕೊಳ್ಳುವುದಾಗಿ ಇರಾನ್ ಮಿಲಿಟರಿ ಹೇಳುತ್ತಿದೆ. ಇದೇ ವೇಳೆ, ಇರಾನ್​ನ ಆರ್ಥಿಕ ಜೀವನಾಡಿ ಎನಿಸಿರುವ ಖರ್ಗ್ ದ್ವೀಪವನ್ನು ಆಕ್ರಮಿಸಿಕೊಳ್ಳಲು ಟ್ರಂಪ್ ಗುರಿ ಇಟ್ಟಿದ್ದಾರೆ.

ಇರಾನ್​ನ ಖರ್ಗ್ ದ್ವೀಪದ ಮೇಲೆ ಟ್ರಂಪ್​ಗೆ ಕಣ್ಣು? ಅಂಥದ್ದೇನಿದೆ ಅಲ್ಲಿ?
ಡೊನಾಲ್ಡ್ ಟ್ರಂಪ್Image Credit source: Alamy
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 30, 2026 | 12:11 PM

Share

ನವದೆಹಲಿ, ಮಾರ್ಚ್ 30: ಇರಾನ್ ಮೇಲೆ ದಾಳಿ ಮಾಡಿ ಕ್ಷಿಪ್ರವಾಗಿ ಸಮರ ಅಂತ್ಯಗೊಳಿಸುವ ಲೆಕ್ಕಾಚಾರ ಹಾಕಿದ್ದ ಅಮೆರಿಕಕ್ಕೆ ಈ ಯುದ್ಧ ನಿರೀಕ್ಷೆಮೀರಿ ದೀರ್ಘವಾಗುತ್ತಿದೆ. ಇರಾನ್ ಪ್ರತಿರೋಧಕ್ಕೆ ಅಮೆರಿಕ ಮತ್ತು ಇಸ್ರೇಲ್ ಹೈರಾಣಾಗಿವೆ. ಇದೀಗ ಅಮೆರಿಕವು ಭೂದಾಳಿ ಮೂಲಕ ಇರಾನ್ ಅನ್ನು ಕಟ್ಟಿಹಾಕಲು ಯೋಜಿಸುತ್ತಿರುವ ಸುದ್ದಿ ಇದೆ. ಇದಕ್ಕೆ ಇಂಬುಕೊಡುವಂತೆ ಸಾವಿರಾರು ಅಮೆರಿಕನ್ ಸೈನಿಕರು ವಿವಿಧ ಕಡೆ ಬೀಡುಬಿಟ್ಟು ಸಜ್ಜಾಗಿದ್ದಾರೆ. ಇರಾನ್​ನ ಖರ್ಗ್ ದ್ವೀಪ ಸೇರಿದಂತೆ ಕೆಲ ನಿರ್ದಿಷ್ಟ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವುದು ಅಮೆರಿಕದ ತಂತ್ರವಾಗಿದೆ ಎನ್ನುವಂತಹ ಸುದ್ದಿಗಳಿವೆ.

ಇರಾನ್​ನ ಆರ್ಥಿಕ ಜೀವನಾಳ ಈ ಖರ್ಗ್ ದ್ವೀಪ

ಇತರ ಪಶ್ಚಿಮ ಏಷ್ಯನ್ ರಾಷ್ಟ್ರಗಳಂತೆ ಇರಾನ್​ಗೂ ತೈಲ ಮಾರಾಟವೇ ಪ್ರಮುಖ ಆದಾಯ ಮೂಲ. ಇರಾನ್ ಬಳಿ ಅಪಾರ ಪ್ರಮಾಣದ ತೈಲ ಸಂಪತ್ತು ಇದೆ. ಒಂದು ಅಂದಾಜು ಪ್ರಕಾರ 208.6 ಬಿಲಿಯನ್ ಬ್ಯಾರಲ್​ಗಳಷ್ಟು ತೈಲ ನಿಕ್ಷೇಪವು ಇರಾನ್​ನಲ್ಲಿ ಸದ್ಯದವರೆಗೆ ಪತ್ತೆಯಾಗಿದೆ. ಇದು ಜಗತ್ತಿನ ಒಟ್ಟು ತೈಲ ಸಂಪತ್ತಿನ ಶೇ. 12ರಷ್ಟು ಎಂದರೆ ಅದೆಷ್ಟು ಬೃಹತ್ ಇರಬಹುದು ಊಹಿಸಬಹುದು.

ಇದನ್ನೂ ಓದಿ: ಭಾರತದಲ್ಲಿ ಪೆಟ್ರೋಲ್, ಎಲ್​ಪಿಜಿ, ನ್ಯಾಚುರಲ್ ಗ್ಯಾಸ್ ಪೂರೈಕೆ ಹೇಗಿದೆ? ಸರ್ಕಾರದಿಂದ ಮಾಹಿತಿ

ಸದ್ಯ ಅಮೆರಿಕ ಹಾಕಿರುವ ನಿಷೇಧದ ನಡುವೆಯೂ ಇರಾನ್ ದೇಶವು ದಿನಕ್ಕೆ ಸುಮಾರು 40 ಲಕ್ಷ ಬ್ಯಾರಲ್​ಗಳಷ್ಟು ಕಚ್ಛಾ ತೈಲವನ್ನು ಹೊರತರುತ್ತದೆ. ಆಂತರಿಕ ಬಳಕೆ ಬಿಟ್ಟು ಅದು ರಫ್ತು ಮಾಡುವ ತೈಲ ದಿನಕ್ಕೆ 11ರಿಂದ 15 ಲಕ್ಷ ಬ್ಯಾರಲ್​ನಷ್ಟು ಎನ್ನಲಾಗುತ್ತಿದೆ.

ಖರ್ಗ್ ದ್ವೀಪದಲ್ಲೇ ಈ ತೈಲ ಸಂಪತ್ತು ಇಲ್ಲ…

ಇರಾನ್​ನ ಖರ್ಗ್ ದ್ವೀಪವು ಒಂದು ಪ್ರಮುಖ ಬಂದರಿನಂತೆ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಬೃಹತ್ತಾದ ಶಿಪ್ ಟರ್ಮಿನಲ್ ಇದೆ. ಇರಾನ್​ನ ಶೇ. 90ಕ್ಕೂ ಹೆಚ್ಚು ತೈಲ ರಫ್ತು ಇದೇ ಟರ್ಮಿನಲ್ ಮೂಲಕ ನಡೆಯುತ್ತದೆ. ಅಂದರೆ ಖರ್ಗ್ ದ್ವೀಪವು ಇರಾನ್​ನ ಆರ್ಥಿಕ ಜೀವನಾಡಿಯೇ ಆಗಿಹೋಗಿದೆ.

ಇದನ್ನೂ ಓದಿ: ಹಾರ್ಮುಜ್ ನಂತರ ಮತ್ತೊಂದು ಜಲಸಂಧಿ ಕಂಟಕ; ಜಗತ್ತಿಗೆ ಕಾದಿದೆ ಡಬಲ್ ಶಾಕ್

ಇರಾನ್​ನ ಅಪಾರ ತೈಲ ಸಂಪತ್ತಿನ ಮೇಲೆ ಅಮೆರಿಕ ಮತ್ತು ಟ್ರಂಪ್​ನ ಕಣ್ಣು ನೆಟ್ಟಿದೆ. ಇದನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಮೆರಿಕಕ್ಕೆ ಈಗ ಖರ್ಗ್ ದ್ವೀಪ ಬೇಕು. ಇದು ಅದರ ತೆಕ್ಕೆಗೆ ಹೋದರೆ ಇರಾನ್​ನ ಜುಟ್ಟು ಜನಿವಾರ ಅಮೆರಿಕಕ್ಕೆ ಸಿಕ್ಕಂತಾಗುತ್ತದೆ. ಇದೇನಾದರೂ ಸಾಧ್ಯವಾದಲ್ಲಿ ವಿಶ್ವದ ಬಹುತೇಕ ಎಲ್ಲಾ ತೈಲ ಸಂಪತ್ತು ಅಮೆರಿಕದ ಪ್ರತ್ಯಕ್ಷ ಮತ್ತು ಪರೋಕ್ಷ ನಿಯಂತ್ರಣಕ್ಕೆ ಬಂದಂತಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಜಗಳ: ಸೌಂದರ್ಯಾ-ಮಂಜು ನಡುವೆ ಗಲಾಟೆ
ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಜಗಳ: ಸೌಂದರ್ಯಾ-ಮಂಜು ನಡುವೆ ಗಲಾಟೆ
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ
ಮೈಸೂರಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶೋತ್ಸವ
ಮೈಸೂರಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶೋತ್ಸವ
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ತಿರುಪತಿ ಎಕ್ಸ್‌ಪ್ರೆಸ್ ಹೋರಿ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಾಚರಣೆ
ತಿರುಪತಿ ಎಕ್ಸ್‌ಪ್ರೆಸ್ ಹೋರಿ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಾಚರಣೆ
ಪಕ್ಕದ ರಾಜ್ಯದಿಂದ ವಿದ್ಯತ್ ಖರೀದಿ ಅನಿವಾರ್ಯತೆ ಸೃಷ್ಟಿ: ಸಿಎಂ ಡಿಕೆಶಿ
ಪಕ್ಕದ ರಾಜ್ಯದಿಂದ ವಿದ್ಯತ್ ಖರೀದಿ ಅನಿವಾರ್ಯತೆ ಸೃಷ್ಟಿ: ಸಿಎಂ ಡಿಕೆಶಿ
ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ
ಭಿಕ್ಷುಕನ ವೇಷ ತೊಟ್ಟ ಬಿಜೆಪಿ ಶಾಸಕ
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಪಷ್ಟನೆ : ಅಂತೆ ಕಂತೆಗಳಿಗೆ ತೆರೆ
ಬಿಕೆ ಹರಿಪ್ರಸಾದ್ ಅಸಮಾಧಾನಕ್ಕೆ ಡಿಕೆಶಿ ಸ್ಪಷ್ಟನೆ : ಅಂತೆ ಕಂತೆಗಳಿಗೆ ತೆರೆ
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!
ರೇಷನ್ ಕಾರ್ಡ್ ಕೆವೈಸಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಡಿಸಿಎಂ ಹೇಳಿದ್ದಿಷ್ಟು!