AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರಿಯಾದ ಶೇರು ಮಾರುಕಟ್ಟೆ ಧೂಳೀಪಟ; ಮಹಾಕುಸಿತಕ್ಕೆ ಕೋಸ್ಪಿ ಕಕ್ಕಾಬಿಕ್ಕಿ; ಜಪಾನ್, ಚೀನಾ ಮಾರುಕಟ್ಟೆಗಳೂ ತತ್ತರ

Asian stock markets tumble down on June 26th Friday: ಎಐ ಉಬ್ಬರ ಇಳಿಯುವ ಸೂಚನೆ ತೋರುತ್ತಿರುವಂತೆಯೇ ಎಐ ಷೇರುಗಳ ಪತನ ಆಗುತ್ತಿದೆ. ಜೂನ್ 26, ಶುಕ್ರವಾರ ವಿಶ್ವದ ಪ್ರಮುಖ ಷೇರು ಮಾರುಕಟ್ಟೆಗಳು ಭಾರೀ ಹಿನ್ನಡೆ ಕಂಡಿವೆ. ಅದರಲ್ಲೂ ಸೌತ್ ಕೊರಿಯಾದ ಕೋಸ್ಪಿ ಸೂಚ್ಯಂತ ಶೇ. 8ರಷ್ಟು ನಷ್ಟ ಕಂಡಿದೆ.

ಕೊರಿಯಾದ ಶೇರು ಮಾರುಕಟ್ಟೆ ಧೂಳೀಪಟ; ಮಹಾಕುಸಿತಕ್ಕೆ ಕೋಸ್ಪಿ ಕಕ್ಕಾಬಿಕ್ಕಿ; ಜಪಾನ್, ಚೀನಾ ಮಾರುಕಟ್ಟೆಗಳೂ ತತ್ತರ
ಕೊರಿಯಾ ಕೋಸ್ಪಿ ಸೂಚ್ಯಂಕImage Credit source: AP
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 26, 2026 | 5:32 PM

Share

ಮುಖ್ಯಾಂಶಗಳು

  • ಎಐ ಉಬ್ಬರ ಇಳಿಯುವ ಸೂಚನೆ ತೋರುತ್ತಿರುವಂತೆಯೇ ಎಐ ಷೇರುಗಳ ಪತನ ಆಗುತ್ತಿದೆ.
  • ಜೂನ್ 26, ಶುಕ್ರವಾರ ವಿಶ್ವದ ಪ್ರಮುಖ ಷೇರು ಮಾರುಕಟ್ಟೆಗಳು ಭಾರೀ ಹಿನ್ನಡೆ ಕಂಡಿವೆ.
  • ಅದರಲ್ಲೂ ಸೌತ್ ಕೊರಿಯಾದ ಕೋಸ್ಪಿ ಸೂಚ್ಯಂತ ಶೇ. 8ರಷ್ಟು ನಷ್ಟ ಕಂಡಿದೆ.

ನವದೆಹಲಿ, ಜೂನ್ 26: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೇಲಿನ ಅತಿಯಾದ ಹೂಡಿಕೆ ಮತ್ತು ನಿರೀಕ್ಷೆಗಳು ಮಿತಿ ಮೀರುತ್ತಿವೆಯೇ ಎಂಬ ಆತಂಕ ಹೂಡಿಕೆದಾರರಲ್ಲಿ ಶುರುವಾಗಿದೆ. ಇದರ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಟೆಕ್ ದೈತ್ಯರ ಷೇರುಗಳ ಮಾರಾಟದ ಭಾರಿ ಅಲೆ (Sell-off) ಎದ್ದಿದ್ದು, ಏಷ್ಯಾದ ಮಾರುಕಟ್ಟೆಗಳು ನೆಲಕಚ್ಚಿವೆ. ಅದರಲ್ಲೂ ದಕ್ಷಿಣ ಕೊರಿಯಾದ ಮಾರುಕಟ್ಟೆಗೆ ಅತಿಹೆಚ್ಚು ಘಾಸಿಯಾಗಿದೆ. ಅಲ್ಲಿನ ಪ್ರಮುಖ ಸೂಚ್ಯಂಕವಾದ ಕೋಸ್ಪಿ (KOSPI) ಶೇ. 8.2 ರಷ್ಟು ಭಾರಿ ಕುಸಿತ ಕಂಡಿದೆ. ಮಾರುಕಟ್ಟೆಯ ತೀವ್ರ ನಷ್ಟವನ್ನು ನಿಯಂತ್ರಿಸಲು ಅಧಿಕಾರಿಗಳು 20 ನಿಮಿಷಗಳ ಕಾಲ ಟ್ರೇಡಿಂಗ್ ಅನ್ನೇ ಸ್ಥಗಿತಗೊಳಿಸಬೇಕಾಯಿತು (Circuit Breaker).

ಜಪಾನ್ ಮತ್ತು ಹಾಂಕಾಂಗ್ ಮಾರುಕಟ್ಟೆ ಕುಸಿತ

ಜಪಾನ್‌ನ ನಿಕ್ಕಿ 225 (Nikkei) ಸೂಚ್ಯಂಕವು ಶೇಕಡಾ 5 ರಷ್ಟು ಕುಸಿದರೆ, ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ (Hang Seng) ಶೇಕಡಾ 2.4 ರಷ್ಟು ನಷ್ಟ ಅನುಭವಿಸಿದೆ. ಇನ್ನು ಚೀನಾದ ಸಿಎಸ್‌ಐ300 ಸೂಚ್ಯಂಕವು ಶೇಕಡಾ 2.9 ರಷ್ಟು ಕುಸಿದಿದೆ. ಜಪಾನ್ ಹೊರತುಪಡಿಸಿ ಒಟ್ಟಾರೆ ಏಷ್ಯಾ-ಪೆಸಿಫಿಕ್ ವಲಯದ ಸೂಚ್ಯಂಕ (MSCI) ಶೇ. 3.8 ರಷ್ಟು ಕುಸಿದಿದ್ದು, ಇದು ಕಳೆದ ಒಂದು ವರ್ಷದಲ್ಲೇ ಮಾರುಕಟ್ಟೆ ಕಂಡ ಅತ್ಯಂತ ಕೆಟ್ಟ ವಾರದ ಪ್ರದರ್ಶನವಾಗಿದೆ.

ಇದನ್ನೂ ಓದಿ: ವೋಕ್ಸ್‌ವ್ಯಾಗನ್ ಶಾಕ್; ಒಂದು ಲಕ್ಷ ಉದ್ಯೋಗ ಕಡಿತ; ಪ್ರಮುಖ ಕಾರ್ಖಾನೆಗಳನ್ನೇ ಮುಚ್ಚಲುಹೊರಟ ವಾಹನ ತಯಾರಕ ಸಂಸ್ಥೆ

ಮಾರುಕಟ್ಟೆ ದಿಢೀರ್ ಕುಸಿಯಲು ಕಾರಣಗಳೇನು?

  1. ಆಪಲ್ (Apple) ನೀಡಿದ ಶಾಕ್: ಅಮೆರಿಕದ ವಾಲ್ ಸ್ಟ್ರೀಟ್‌ನಲ್ಲಿ ಆಪಲ್ ಕಂಪನಿಯ ಷೇರುಗಳು ಶೇಕಡಾ 6.1 ರಷ್ಟು ಕುಸಿದು, ಕಂಪನಿಯ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು $250 ಬಿಲಿಯನ್ (ಭಾರಿ ಮೊತ್ತ) ನಷ್ಟವಾಗಿದೆ. ಮೆಮೊರಿ ಮತ್ತು ಸ್ಟೋರೇಜ್ ಚಿಪ್‌ಗಳ ಬೆಲೆ ಗಗನಕ್ಕೇರಿರುವುದರಿಂದ, ಆಪಲ್ ತನ್ನ ಐಪ್ಯಾಡ್ ಮತ್ತು ಮ್ಯಾಕ್‌ಬುಕ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಇದು ಜಾಗತಿಕವಾಗಿ ತಂತ್ರಜ್ಞಾನ ವಲಯಕ್ಕೆ ದೊಡ್ಡ ಆತಂಕ ತಂದಿದೆ.
  2. ಹೆಚ್ಚುತ್ತಿರುವ ಸೆಮಿಕಂಡಕ್ಟರ್ ಮತ್ತು AI ವೆಚ್ಚ: AI ಮೂಲಸೌಕರ್ಯಗಳನ್ನು ನಿರ್ಮಿಸಲು ಬೇಕಾಗುವ ಚಿಪ್‌ಗಳು ಹಾಗೂ ಕಚ್ಚಾ ಸಾಮಗ್ರಿಗಳ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಪ್ರಪಂಚದ ಅತಿ ದೊಡ್ಡ ಟೆಕ್ ಕಂಪನಿಗಳ ಲಾಭದ (Profit Margin) ಮೇಲೂ ಪರಿಣಾಮ ಬೀರುತ್ತಿದೆ ಎಂದು ಹೂಡಿಕೆದಾರರು ಹೆದರಿದ್ದಾರೆ.
  3. ಓಪನ್ ಏಐ (OpenAI) ಐಪಿಒ ವಿಳಂಬ: ಚಾಟ್‌ಜಿಪಿಟಿ ತಯಾರಕ ಸಂಸ್ಥೆಯಾದ ಓಪನ್ ಏಐ ತನ್ನ ಬಹುನಿರೀಕ್ಷಿತ ಪಬ್ಲಿಕ್ ಲಿಸ್ಟಿಂಗ್ (IPO) ಅನ್ನು ಮುಂದಿನ ವರ್ಷಕ್ಕೆ ಮುಂದೂಡಬಹುದು ಎಂಬ ವರದಿಗಳು ಬಂದಿವೆ. ಇದು ಇಡೀ AI ಮಾರುಕಟ್ಟೆಯ ಮೌಲ್ಯದ (Valuation) ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ.
  4. ಪ್ರಾಫಿಟ್ ಬುಕಿಂಗ್: ಇಷ್ಟೆಲ್ಲಾ ಕುಸಿತದ ನಡುವೆಯೂ, ಕಳೆದ ಕೆಲವು ತಿಂಗಳುಗಳಲ್ಲಿ ಈ ಮಾರುಕಟ್ಟೆಗಳು ಭಾರಿ ಲಾಭ ಗಳಿಸಿದ್ದವು (ಕೊರಿಯಾದ ಕೋಸ್ಪಿ ಈ ಕ್ವಾರ್ಟರ್‌ನಲ್ಲಿ ಶೇ. 62 ಮತ್ತು ಜಪಾನ್‌ನ ನಿಕ್ಕಿ ಶೇ. 34 ರಷ್ಟು ಲಾಭದಲ್ಲಿದ್ದವು). ಹೀಗಾಗಿ, ಕ್ವಾರ್ಟರ್ ಕೊನೆಯಲ್ಲಿ ಹೂಡಿಕೆದಾರರು ತಮಗ ಬಂದ ಲಾಭವನ್ನು ಕೈಗೆತ್ತಿಕೊಳ್ಳಲು (Profit Booking) ಮುಗಿಬಿದ್ದಿರುವುದು ಕೂಡ ಕುಸಿತಕ್ಕೆ ವೇಗ ನೀಡಿದೆ.

ಇದನ್ನೂ ಓದಿ: ಆಫ್ರಿಕಾ ಮಾರುಕಟ್ಟೆಯಲ್ಲಿ ಭಾರತೀಯ ಕಂಪನಿಗಳ ಅಬ್ಬರ; ಸ್ಥಳೀಯ ಉತ್ಪಾದನೆಗೂ ಮುಂದು

ಭಾರತದಲ್ಲಿ ಏನಿದೆ ಸ್ಥಿತಿ?

ಭಾರತದ ಶೇರು ಮಾರುಕಟ್ಟೆ ಇವತ್ತು ಶುಕ್ರವಾರ ರಜೆಯ ದಿನ. ಮೊಹರಂ ಹಬ್ಬವಾದ್ದರಿಂದ ಇಂದು ಷೇರುಬಜಾರು ಬಂದ್ ಇತ್ತು. ಈ ಕಾರಣಕ್ಕೆ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ಬಚಾವಾಗಿರಬಹುದು. ಪ್ರಪಂಚದ ಪ್ರಮುಖ ಮಾರುಕಟ್ಟೆಗಳ ಪತನದ ಪರಿಣಾಮ ಭಾರತದ ಮಾರುಕಟ್ಟೆಯ ಮೇಲೆ ಸೋಮವಾರ ಆಗಬಹುದು. ಜೂನ್ 29ರಂದು ಭಾರತದ ಷೇರುಪೇಟೆಯಲ್ಲಿ ಬ್ಲಡ್​ಬಾತ್ ನಿರೀಕ್ಷಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:25 pm, Fri, 26 June 26

Follow Us
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!