LPG Cylinder Price: ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್​ ಬೆಲೆಯಲ್ಲಿ ಗಮನಾರ್ಹ ಇಳಿಕೆ

ವಾಣಿಜ್ಯ ಸಿಲಿಂಡರ್​ ಬೆಲೆಯು ₹ 100ರಷ್ಟು ಕಡಿಮೆಯಾಗಿದೆ. ಆದರೆ ಗೃಹಬಳಕೆಯ ಸಿಲಿಂಡರ್​ಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

LPG Cylinder Price: ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್​ ಬೆಲೆಯಲ್ಲಿ ಗಮನಾರ್ಹ ಇಳಿಕೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 01, 2022 | 9:55 AM

ದೆಹಲಿ: ಗಣೇಶನ ಹಬ್ಬ ಈ ಸಲ ಚೆನ್ನಾಗಿ ಬಂದಿದೆ. ವಿನಾಯಕ ಚತುರ್ಥಿಯಂದೇ ಬಿಡುಗಡೆಯಾದ ಆಂಕಿಅಂಶಗಳು ಭಾರತದ ಜಿಡಿಪಿಯ ಬಗ್ಗೆ ಶುಭಸುದ್ದಿ ಕೊಟ್ಟಿದೆ. ಹಬ್ಬದ ಮಾರನೇ ದಿನ, ಅಂದರೆ ಗುರುವಾರ (ಸೆಪ್ಟೆಂಬರ್ 1) 19 ಕೆಜಿ ತೂಕದ ಅಡುಗೆ ಅನಿಲದ ವಾಣಿಜ್ಯ ಸಿಲಿಂಡರ್​ಗಳ (Commercial Liquified Petroleum Gas – LPG) ಬೆಲೆ ಇಳಿಸುವ ನಿರ್ಧಾರ ಹೊರಬಿದ್ದಿದೆ. ವಾಣಿಜ್ಯ ಸಿಲಿಂಡರ್​ ಬೆಲೆಯು ₹ 100ರಷ್ಟು ಕಡಿಮೆಯಾಗಿದೆ. ಆದರೆ ಗೃಹಬಳಕೆಯ ಸಿಲಿಂಡರ್​ಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ದೆಹಲಿಯಲ್ಲಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆಯು ₹ 91.50ರಷ್ಟು ಕಡಿಮೆಯಾಗಿದ್ದು, ₹ 1,885ಕ್ಕೆ ಮಾರಾಟವಾಗುತ್ತಿದೆ. ಮೊದಲು ಇದು ₹ 1,976.50 ಇತ್ತು. ಕಲ್ಕತ್ತಾದಲ್ಲಿ ಸಿಲಿಂಡರ್ ಬೆಲೆಯು ₹ 100 ಕಡಿಮೆಯಾಗಿದೆ. ಪ್ರಸ್ತುತ ₹ 1,995.50ಕ್ಕೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ₹ 96 ಕಡಿಮೆಯಾಗಿದ್ದು, ₹ 2,045ಕ್ಕೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಪ್ರಸ್ತುತ ₹ 1,685ಕ್ಕೆ ಸಿಲಿಂಡರ್ ಮಾರಾಟವಾಗುತ್ತಿದೆ ಎಂದು ತೈಲ ಮಾರಾಟ ಕಂಪನಿಗಳ ವೆಬ್​ಸೈಟ್​ಗಳ ಮಾಹಿತಿ ತಿಳಿಸುತ್ತದೆ.

ಪ್ರತಿ ತಿಂಗಳ ಮೊದಲ ದಿನ ಕೆಲ ನಿಯಮಗಳಲ್ಲಿ ಮಾರ್ಪಾಡಾಗುವುದು ವಾಡಿಕೆ. ಎಲ್​ಪಿಜಿ ಮತ್ತು ಇಂಧನ ದರಗಳ ಪರಿಷ್ಕರಣೆಯನ್ನೂ ತಿಂಗಳ ಮೊದಲ ದಿನದಿಂದಲೇ ಜಾರಿಗೆ ತರಲಾಗುತ್ತಿದೆ. ಆಗಸ್ಟ್​ 1ರಂದು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ₹ 36ರಷ್ಟು ಕಡಿಮೆ ಮಾಡಲಾಗಿತ್ತು. ಕಳೆದ ತಿಂಗಳೂ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಪರಿಷ್ಕರಣೆ ಆಗಿರಲಿಲ್ಲ.

ಇದು ವಾಣಿಜ್ಯ ಸಿಲಿಂಡರ್​ ಬೆಲೆಗಳಲ್ಲಿ ಸತತ 5ನೇ ಕಡಿತವಾಗಿದೆ. ಜುಲೈ 6ರಂದು ₹ 50ರಷ್ಟು ಬೆಲೆ ಹೆಚ್ಚಿಸಲಾಗಿತ್ತು. ನಂತರದ ದಿನಗಳಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್​ಗಳ ಬೆಲೆ ಹೆಚ್ಚಾಗಿರಲಿಲ್ಲ.

Published On - 9:50 am, Thu, 1 September 22