AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Elon Musk: ಉತ್ಪಾದನಾ ಘಟಕ ಸ್ಥಾಪಿಸಲು ಎಲಾನ್​ ಮಸ್ಕ್​ಗೆ ಆಮಂತ್ರಣ ನೀಡಿದ ಮಹಾರಾಷ್ಟ್ರ, ಈ ಹಿಂದೆ ತೆಲಂಗಾಣವೂ ಕೋರಿತ್ತು

ಹೂಡಿಕೆ ಮಾಡಲು ಮಹಾರಾಷ್ಟ್ರ ಅತ್ಯುತ್ತಮ ಸ್ಥಳ ಎನಿಸಿದೆ ಎಂದು ಸಚಿವರು ಟ್ವೀಟ್​ನಲ್ಲಿ ವಿವರಿಸಿದ್ದಾರೆ. ನಿನ್ನೆಯಷ್ಟೇ (ಜ.15) ತೆಲಂಗಾಣ ಸರ್ಕಾರ ಎಲಾನ್ ಮಸ್ಕ್​ಗೆ ಇದೇ ರೀತಿಯ ಸ್ವಾಗತ ಕೋರಿತ್ತು.

Elon Musk: ಉತ್ಪಾದನಾ ಘಟಕ ಸ್ಥಾಪಿಸಲು ಎಲಾನ್​ ಮಸ್ಕ್​ಗೆ ಆಮಂತ್ರಣ ನೀಡಿದ ಮಹಾರಾಷ್ಟ್ರ, ಈ ಹಿಂದೆ ತೆಲಂಗಾಣವೂ ಕೋರಿತ್ತು
ಎಲಾನ್​ ಮಸ್ಕ್ (ಸಂಗ್ರಹ ಚಿತ್ರ)
TV9 Web
| Edited By: |

Updated on:Jan 16, 2022 | 4:25 PM

Share

ಮುಂಬೈ: ಸ್ಪೇಸ್​-ಎಕ್ಸ್​ ಮಾಲೀಕ ಹಾಗೂ ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ (Elon Musk) ಅವರನ್ನು ಮಹಾರಾಷ್ಟ್ರದ (Maharashtra) ನೀರಾವರಿ ಸಚಿವ ಮತ್ತು ಎನ್​ಸಿಪಿ (NCP) ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ತಮ್ಮ ರಾಜ್ಯಕ್ಕೆ ಸ್ವಾಗತಿಸಿದ್ದಾರೆ. ‘ಮಹಾರಾಷ್ಟ್ರವು ಭಾರತದ ಮುಂದುವರಿದ ರಾಜ್ಯಗಳಲ್ಲಿ ಒಂದಾಗಿದೆ. ಭಾರತದಲ್ಲಿ ನಿಮ್ಮ ಕಂಪನಿ ಸ್ಥಾಪನೆಯಾಗಲು ನಿಮಗೆ ಬೇಕಿರುವ ಎಲ್ಲ ಬಗೆಯ ನೆರವನ್ನು ಮಹಾರಾಷ್ಟ್ರದಿಂದ ನಾವು ಕೊಡುತ್ತೇವೆ. ನಿಮ್ಮ ಉತ್ಪಾದನಾ ಘಟಕವನ್ನು ಮಹಾರಾಷ್ಟ್ರದಲ್ಲಿ ಸ್ಥಾಪಿಸಬೇಕೆಂದು ಕೋರುತ್ತೇವೆ’ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. ಹೂಡಿಕೆ ಮಾಡಲು ಮಹಾರಾಷ್ಟ್ರ ಅತ್ಯುತ್ತಮ ಸ್ಥಳ ಎನಿಸಿದೆ ಎಂದು ಸಚಿವರು ಟ್ವೀಟ್​ನಲ್ಲಿ ವಿವರಿಸಿದ್ದಾರೆ. ನಿನ್ನೆಯಷ್ಟೇ (ಜ.15) ತೆಲಂಗಾಣ ಸರ್ಕಾರ ಎಲಾನ್ ಮಸ್ಕ್​ಗೆ ಇದೇ ರೀತಿಯ ಸ್ವಾಗತ ಕೋರಿತ್ತು.

‘ನಿಮ್ಮ ಕಾರ್ ಭಾರತದಲ್ಲಿ ಯಾವಾಗ ಸಿಗುತ್ತದೆ’ ಎಂದು ಟ್ವಿಟರ್ ಬಳಕೆದಾರರೊಬ್ಬರು ಎಲಾನ್ ಮಸ್ಕ್ ಅವರನ್ನು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಮಸ್ಕ್, ‘ಭಾರತದಲ್ಲಿ ಸರ್ಕಾರದ ನಿಯಮಗಳ ಅಡೆತಡೆ ಎದುರಿಸುತ್ತಿದ್ದೇನೆ’ ಎಂದು ಜನವರಿ 13ರಂದು ಉತ್ತರಿಸಿದ್ದರು.

ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಮಸ್ಕ್ ನಿರ್ಧಾರಕ್ಕೆ ಪೂರಕವಾಗಿ ಸ್ಪಂದಿಸಿದ್ದ ತೆಲಂಗಾಣ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಕೆ.ಟಿ.ರಾಮರಾವ್, ‘ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಮಸ್ಕ್ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ’ ಎಂದಿದ್ದರು.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕದ ಆರಂಭಿಸುವುದಾಗಿ ಎಲಾನ್ ಮಸ್ಕ್ 2020ರಲ್ಲಿ ಘೋಷಿಸಿದ್ದರು. ಇದಕ್ಕಾಗಿ ಟೆಸ್ಲಾ ಕಂಪನಿಯ ಅಧೀನದಲ್ಲಿ ಇಂಡಿಯಾ ಮೋಟಾರ್ಸ್ ಅಂಡ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದರು.

ಇದನ್ನೂ ಓದಿ: Elon Musk: ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆ ಬಗ್ಗೆ ಎಲಾನ್​ ಮಸ್ಕ್ ನೀಡಿದ ಅಪ್​ಡೇಟ್ಸ್ ಇದು ಇದನ್ನೂ ಓದಿ: Elon Musk: ಜಗತ್ತಿನ ಅತಿ ಶ್ರೀಮಂತ ಎಲಾನ್​ ಮಸ್ಕ್ ಸಂಪತ್ತಲ್ಲಿ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಒಂದೇ ದಿನ ಖಲ್ಲಾಸ್

Published On - 4:22 pm, Sun, 16 January 22

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದ ಆನೆ, ಭಯಾನಕ ವಿಡಿಯೋ ನೋಡಿ
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​
Siddaramaiah Press Conference: ಸಿದ್ದರಾಮಯ್ಯ ಸುದ್ದಿಗೋಷ್ಠಿ ಲೈವ್​