ನೀವು ಯಾವುದೇ ರೀತಿಯ ಹೂಡಿಕೆ ಮಾಡುವ ಮುನ್ನ ಅದರಿಂದ ಎಷ್ಟು ಲಾಭ ಸಿಗುತ್ತದೆ ಎಂಬುದನ್ನು ಗಮನಿಸುತ್ತೇವೆ. ಲಾಭದ ಜೊತೆಗೆ ಇನ್ನೂ ಹಲವಾರು ಅಂಶಗಳನ್ನು ನಾವು ಗಣನೆಗೆ ತೆಗೆದುಕೊಳ್ಳುವುದುಂಟು. ಇಟಿಎಫ್ನಲ್ಲೂ ಹೂಡಿಕೆ ಮಾಡುವಾಗ ಹಲವು ಸಂಗತಿಗಳನ್ನು ತಿಳಿದುಕೊಂಡಿರಬೇಕು. ಇಟಿಎಫ್ನಲ್ಲಿ ಹೂಡಿಕೆ ಮಾಡಲಾಗುತ್ತಿರುವ ಪ್ರಮಾಣ ಹೆಚ್ಚುತ್ತಲೇ ಇದೆ. ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಗಳು ಸಾಕಷ್ಟು ಹೂಡಿಕೆಗಳನ್ನು ಆಕರ್ಷಿಸುತ್ತಿವೆ. ನೀವು ಇಟಿಎಫ್ಗಳಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಯಾಕೆ ಇಟಿಎಫ್ನಲ್ಲಿ ಹೂಡಿಕೆ ಮಾಡಬೇಕು, ಅದರಿಂದ ಪ್ರಯೋಜನ ಏನು ಇತ್ಯಾದಿ ಸಂಗತಿಗಳು ತಿಳಿದಿರುವುದು ಒಳ್ಳೆಯದು.
ಇಟಿಎಫ್ ಅಥವಾ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ ಎಂಬುದು ಒಂದು ರೀತಿಯಲ್ಲಿ ಇಂಡೆಕ್ಸ್ ಟ್ರ್ಯಾಕ್ ಮಾಡುವ ಮ್ಯುಚುವಲ್ ಫಂಡ್ನಂತೆ. ಪ್ರಮುಖ ವ್ಯತ್ಯಾಸ ಎಂದರೆ ಇದು ಪಾಸಿವ್ ಫಂಡ್ ಆಗಿರುತ್ತದೆ, ಮತ್ತು ಷೇರು ವಿನಿಮಯ ಕೇಂದ್ರದಲ್ಲಿ ಷೇರುಗಳ ರೀತಿಯಲ್ಲಿ ಇದನ್ನೂ ಟ್ರೇಡ್ ಮಾಡಬಹುದು.
ಇದನ್ನೂ ಓದಿ: Thematic ETF ಎಂದರೇನು? ಈ ಹೂಡಿಕೆ ಯಾರಿಗೆ ಹೇಳಿ ಮಾಡಿಸಿದ್ದು? ಇಲ್ಲಿದೆ ಮಾಹಿತಿ
ಇಟಿಎಫ್ನಲ್ಲಿ ಹೂಡಿಕೆ ಮಾಡಲು ಹಲವಾರು ಕಾರಣಗಳನ್ನು ಹೆಸರಿಸಬಹುದು. ಇಟಿಎಫ್ ಖರೀದಿಸುವುದರಿಂದ ನೀವು ಒಂದಲ್ಲ ಹಲವಾರು ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತೀರಿ. ಉದಾಹರಣೆಗೆ, ನಿಫ್ಟಿ50 ಇಟಿಎಫ್ ಎಂಬುದು ಆ ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುತ್ತದೆ. ನೀವು ನಿಫ್ಟಿ50 ಇಟಿಎಫ್ ಅನ್ನು ಖರೀದಿಸಿದಾಗ ಆ ಇಂಡೆಕ್ಸ್ನಲ್ಲಿರುವ 50 ಷೇರುಗಳಲ್ಲಿ ಅವುಗಳ ವೈಟೇಜ್ ಆಧಾರದ ಮೇಲೆ ಹೂಡಿಕೆ ನಿಯೋಜನೆ ಆಗುತ್ತದೆ. ಒಂದು ಅಥವಾ ಎರಡು ಷೇರುಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಹೆಚ್ಚಿನ ಷೇರುಗಳಲ್ಲಿ ಹೂಡಿಕೆ ಮಾಡುವುದರಿಂದ ರಿಸ್ಕ್ ಅಂಶ ತಗ್ಗುತ್ತದೆ. ಹೀಗಾಗಿ, ಇಟಿಎಫ್ನಲ್ಲಿ ಹೂಡಿಕೆ ಮಾಡಿದರೆ ರಿಸ್ಕ್ ಅಂಶ ಸಹಜವಾಗಿ ಕಡಿಮೆ ಇರುತ್ತದೆ.
ಅಗಲೇ ತಿಳಿಸಿದಂತೆ ಇಟಿಎಫ್ನಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹೂಡಿಕೆ ಪೋರ್ಟ್ಫೋಲಿಯೋ ವಿಸ್ತೃತಗೊಳ್ಳುತ್ತದೆ. ನೀವು ಇಟಿಎಫ್ ಖರೀದಿಸಿದಾಗ ಯುನಿಟ್ಗಳನ್ನು ಪಡೆಯುತ್ತೀರಿ. ಇವುಗಳನ್ನು ನೀವು ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಟ್ರೇಡ್ ಮಾಡಬಹುದು. ಮಾರುಕಟ್ಟೆ ಅವಧಿಯಲ್ಲಿ ಯಾವಾಗಬೇಕಾದೂ ನೀವು ಇಟಿಎಫ್ ಅನ್ನು ಖರೀದಿಸಬಹುದು ಮತ್ತು ಮಾರಬಹುದು.
ಇದನ್ನೂ ಓದಿ: ಹೂಡಿಕೆಯಲ್ಲಿ ಲಿಕ್ವಿಡಿಟಿ ಅಂಶ ಎಷ್ಟು ಮುಖ್ಯ? ಉತ್ತಮ ಲಿಕ್ವಿಡಿಟಿ ಇರುವ ಇಟಿಎಫ್ನ ಪ್ರಯೋಜನಗಳಿವು…
ಈ ವಿಚಾರದಲ್ಲಿ ಮ್ಯೂಚುವಲ್ ಫಂಡ್ ತುಸು ಭಿನ್ನ. ಮ್ಯುಚುವಲ್ ಫಂಡ್ಗಳನ್ನು ಖರೀದಿಸಿದರೆ ನಿಮಗೆ ನೆಟ್ ಅಸೆಟ್ ವ್ಯಾಲ್ಯೂ ಅಥವಾ ಎನ್ಎಇ ಪ್ರಕಾರ ಯೂನಿಟ್ ಸಿಗುತ್ತದೆ. ಈ ಎನ್ಎವಿ ಎನ್ನುವುದು ಟ್ರೇಡಿಂಗ್ ಕೊನೆಯಲ್ಲಿ ನಿರ್ಧಾರವಾಗುತ್ತದೆ. ಆದರೆ, ಇಟಿಎಫ್ ಎಂಬುದು ರಿಯಲ್ ಟೈಮ್ ಟ್ರೇಡಿಂಗ್ಗೆ ಲಭ್ಯ ಇರುತ್ತದೆ. ಮಾರುಕಟ್ಟೆ ಏರುತ್ತಿದೆ ಎಂದನಿಸಿದರೆ ನೀವು ಇಟಿಎಫ್ ಮಾರಿ ಲಾಭ ಮಾಡಬಹುದು.
ಇಟಿಎಫ್ನ ಮತ್ತೊಂದು ಅನುಕೂಲವೆಂದರೆ, ಆ್ಯಕ್ಟಿವ್ ಮ್ಯುಚುವಲ್ ಫಂಡ್ಗೆ ಹೋಲಿಸಿದರೆ ಇದರ ಎಕ್ಸ್ಪೆನ್ಸ್ ರೇಶಿಯೋ ಕಡಿಮೆ ಇರುತ್ತದೆ. ಅಂದರೆ, ಇದರ ನಿರ್ವಹಣಾ ವೆಚ್ಚ ಕಡಿಮೆ ಇರುತ್ತದೆ.
ಆ್ಯಕ್ಟಿವ್ ಫಂಡ್ಗಳಾದರೆ ಬೆಂಚ್ಮಾರ್ಕ್ ಇಂಡೆಕ್ಸ್ಗಿಂತ ಹೆಚ್ಚಿನ ಲಾಭವನ್ನು ತರುವ ಗುರಿ ಮತ್ತು ಒತತಡ ಹೊಂದಿರುತ್ತವೆ. ಆದರೆ, ಇಟಿಎಫ್ ಒಂದು ಪಾಸಿವ್ ಫಂಡ್ ಮಾತ್ರವೇ ಆಗಿರುತ್ತದೆ. ಬೆಂಚ್ಮಾರ್ಕ್ ಇಂಡೆಕ್ಸ್ನ ಸಾಧನೆಯನ್ನು ಸರಿಗಟ್ಟುವ ಗುರಿ ಮಾತ್ರವೇ ಇದರದ್ದು. ಇದರ ಹೂಡಿಕೆಯನ್ನು ಸಕ್ರಿಯವಾಗಿ ನಿರ್ವಹಿಸುವ ಅವಶ್ಯಕತೆ ಇರುವುದಿಲ್ಲ. ಹೀಗಾಗಿ, ಇದರ ಎಕ್ಸ್ಪೆನ್ಸ್ ರೇಶಿಯೋ ಕಡಿಮೆ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ