
ನೀವು ಆರ್ಥಿಕವಾಗಿ ಸುದೃಢಗೊಳ್ಳಬೇಕೆಂದರೆ ಒಂದಕ್ಕಿಂತ ಹೆಚ್ಚಿನ ಆದಾಯ ಮೂಲಗಳಿರುವುದು ಅಗತ್ಯ. ಸ್ಯಾಲರಿ ಇತ್ಯಾದಿ ನಿಮ್ಮ ರೆಗ್ಯುಲರ್ ಇನ್ಕಮ್ ಜೊತೆಗೆ ಮನೆ ಬಾಡಿಗೆ ಇತ್ಯಾದಿ ಪಾಸಿವ್ ಇನ್ಕಮ್ ಸೃಷ್ಟಿಸಿಕೊಳ್ಳುವುದೂ ಮುಖ್ಯ. ಪ್ರತೀ ತಿಂಗಳು ನಿಮಗೆ ಕೂತಲ್ಲೇ ಒಂದು ಲಕ್ಷ ರೂ ಆದಾಯ ಬರುವಂತಾಗಲು ಏನು ಮಾಡಬಹುದು? ಇವತ್ತು ರೆಗ್ಯುಲರ್ ಇನ್ಕಮ್ ಸೃಷ್ಟಿಸಲು ಅವರವರ ರಿಸ್ಕ್ಗೆ ಅನುಗುಣವಾಗಿ ಹಲವು ಆಯ್ಕೆಗಳಿವೆ. ಫಿಕ್ಸೆಡ್ ಡೆಪಾಸಿಟ್ (Fixed Deposit), ಡಿಜಿಟಲ್ ಗೋಲ್ಡ್, ಇಟಿಎಫ್, ಮ್ಯೂಚುವಲ್ ಫಂಡ್ ಇತ್ಯಾದಿಗಳಿವೆ.
ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಬಯಸದವರಿಗೆ ಫಿಕ್ಸೆಡ್ ಡೆಪಾಸಿಟ್ ಒಳ್ಳೆಯ ಆಯ್ಕೆ. ಇದರಲ್ಲಿ ನೀವು ತಿಂಗಳಿಗೆ ಒಂದು ಲಕ್ಷ ರೂ ಆದಾಯ ಪಡೆಯಬೇಕೆಂದರೆ, ಶೇ. 6ರಷ್ಟು ವಾರ್ಷಿಕ ರಿಟರ್ನ್ ಕೊಡುವ ವಿವಿಧ ಡೆಪಾಸಿಟ್ಗಳಲ್ಲಿ ಒಟ್ಟು 2 ಕೋಟಿ ರೂ ಹೂಡಿಕೆ ಮಾಡಬೇಕಾಗುತ್ತದೆ. ಇದರಿಂದ ನಿಮಗೆ ವರ್ಷಕ್ಕೆ 12 ಲಕ್ಷ ರೂ ರಿಟರ್ನ್ ಸಿಗುತ್ತದೆ.
ಇದನ್ನೂ ಓದಿ: ವಯಸ್ಸಾದವರಿಗೆ ಶೇ. 8.5ರವರೆಗೆ ಬಡ್ಡಿ ನೀಡುವ ಫಿಕ್ಸೆಡ್ ಡೆಪಾಸಿಟ್; ಇಲ್ಲಿವೆ ವಿವಿಧ ಬ್ಯಾಂಕುಗಳ ಎಫ್ಡಿ ದರಗಳು
ಶೇ. 8ರಷ್ಟು ಬಡ್ಡಿ ಅಥವಾ ರಿಟರ್ನ್ ನೀಡಬಲ್ಲ ಫಿಕ್ಸೆಡ್ ಡೆಪಾಸಿಟ್ ಅಥವಾ ಇನ್ಯಾವುದಾದರೂ ಫಂಡ್ಗಳಲ್ಲಿ ಹೂಡಿಕೆ ಮಾಡುವುದಾರೆ ತಿಂಗಳಿಗೆ ಒಂದು ಲಕ್ಷ ರೂ ಆದಾಯ ಗಳಿಸಲು ಒಂದೂವರೆ ಕೋಟಿ ರೂ ಹೂಡಿಕೆ ಸಾಕಾಗಬಹುದು.
ಪೋಸ್ಟ್ ಆಫೀಸ್ನ ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್ನಲ್ಲಿ ಶೇ. 8.25 ಬಡ್ಡಿ ಸಿಗುತ್ತದೆ. ಬ್ಯಾಲನ್ಸ್ಡ್ ಹೈಬ್ರಿಡ್ ಫಂಡ್, ಈಕ್ವಿಟಿ ಸೇವಿಂಗ್ಸ್ ಫಂಡ್ ಇತ್ಯಾದಿ ಮ್ಯೂಚುವಲ್ ಫಂಡ್ಗಳೂ ಕೂಡ ಶೇ. 8ಕ್ಕಿಂತಲೂ ಹೆಚ್ಚು ರಿಟರ್ನ್ ಕೊಡಬಲ್ಲುವು.
ಸಿಸ್ಟಮ್ಯಾಟಿಕ್ ವಿತ್ಡ್ರಾಯಲ್ ಅವಕಾಶ ಇರುವ ಮ್ಯೂಚುವಲ್ ಫಂಡ್ಗಳಿವೆ. ಸಾಮಾನ್ಯವಾಗಿ ನಿಮ್ಮ ಫಂಡ್ನ ಶೇ. 4ರಿಂದ 5ರಷ್ಟು ಹಣವನ್ನು ವರ್ಷಕ್ಕೆ ವಿತ್ಡ್ರಾ ಮಾಡುವುದು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಈ ರೇಟ್ನಲ್ಲಿ ನೀವು ಹಣ ವಿತ್ಡ್ರಾ ಮಾಡಿದರೆ, ಫಂಡ್ನಲ್ಲಿರುವ ಹಣವೂ ಕೂಡ ಬತ್ತುವುದಿಲ್ಲ. ಹಲವಾರು ವರ್ಷಗಳ ಕಾಲ ನೀವು ಹಣ ವಿತ್ಡ್ರಾ ಮಾಡಿದರೂ ಫಂಡ್ ಖಾಲಿಯಾಗುವುದೇ ಇಲ್ಲ.
ಇದನ್ನೂ ಓದಿ: ಪೋಸ್ಟ್ ಆಫೀಸ್: 20 ವರ್ಷಕ್ಕೆ 4 ಪಟ್ಟು ರಿಟರ್ನ್ ಕೊಡಬಲ್ಲ ಟಿಡಿ ಪ್ಲಾನ್
ಈ ರೀತಿ ನೀವು ತಿಂಗಳಿಗೆ 1 ಲಕ್ಷ ರೂ ವಿತ್ಡ್ರಾ ಮಾಡುತ್ತೀರಿ ಎಂದರೆ, ನಿಮ್ಮ ಫಂಡ್ನಲ್ಲಿ 2-3 ಕೋಟಿ ರೂ ಇರಬೇಕು. ಇಂಥ ಸಿಸ್ಟಮ್ಯಾಟಿಕ್ ವಿತ್ಡ್ರಾಯಲ್ಗೆ ಯಾವುದು ಸೂಕ್ತವಾದ ಫಂಡ್? ತಜ್ಞರ ಪ್ರಕಾರ, ಯಾವುದಾದರೂ ಬ್ಯಾಲನ್ಸ್ಡ್ ಅಡ್ವಾಂಟೇಜ್ ಫಂಡ್ಗಳು ಅಥವಾ ಹೈಬ್ರಿಡ್ ಫಂಡ್ಗಳು ಸೂಕ್ತವಂತೆ. ಯಾಕೆಂದರೆ, ಈ ಫಂಡ್ಗಳು ಮಾರುಕಟ್ಟೆಯ ಅವಸ್ಥೆಗೆ ತಕ್ಕಂತೆ ಹೂಡಿಕೆಗಳನ್ನು ಬದಲಿಸುತ್ತವೆ. ಹೀಗಾಗಿ, ಮಾರುಕಟ್ಟೆ ಬಿದ್ದಾಗ ನಿಮ್ಮ ಫಂಡ್ ಪ್ರಪಾತಕ್ಕೆ ಬೀಳೋದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ