ನವದೆಹಲಿ, ನವೆಂಬರ್ 17: ನಿಷ್ಕ್ರಿಯವಾಗಿರುವ ಯುಪಿಐ ಬಳಕೆದಾರರಿಗೆ ಎಚ್ಚರಿಕೆಯ ಕರೆಗಂಟೆ ಈ ಸುದ್ದಿ. ಕಳೆದ ಒಂದು ವರ್ಷದಿಂದ ಯಾವುದೇ ವಹಿವಾಟು ನಡೆಸದ ಯುಪಿಐ ಐಡಿ, ಯುಪಿಐ ನಂಬರ್ ಮತ್ತು ಫೋನ್ ನಂಬರ್ಗಳನ್ನು ಡೀ ಆ್ಯಕ್ಟಿವೇಟ್ ಮಾಡುವ ಸಂಬಂಧ ಎನ್ಪಿಸಿಐ (NPCI guidelines) ಮಾರ್ಗಸೂಚಿ ಹೊರಡಿಸಿದೆ. ಟಿಪಿಎಪಿ ಅಥವಾ ಪಿಎಸ್ಪಿ ಅಪ್ಲಿಕೇಶನ್ಗಳಿಂದ ಹಣಕಾಸು ವಹಿವಾಟನ್ನಾಗಲೀ ಅಥವಾ ಬ್ಯಾಲನ್ಸ್ ಎನ್ಕ್ವೈರಿ ಇತ್ಯಾದಿ ಹಣಕಾಸೇತರ ವಹಿವಾಟನ್ನಾಗಲೀ (Non Banking Transaction) ಮಾಡದೇ ಇದ್ದರೆ ಡೀ ಆಕ್ಟಿವೇಟ್ ಆಗುವ ಸಾಧ್ಯತೆ ಇರುತ್ತದೆ. ನಿಷ್ಕ್ರಿಯ ಗ್ರಾಹಕರ ಯುಪಿಐ ಐಡಿಗಳನ್ನು ಡೀಆ್ಯಕ್ಟಿವೇಟ್ ಮಾಡಲು 2023ರ ಡಿಸೆಂಬರ್ 31ಕ್ಕೆ ಡೆಡ್ಲೈನ್ ಹಾಕಲಾಗಿದೆ.
ಟಿಪಿಎಪಿ, ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ಗಳೆಂದರೆ ಫೋನ್ ಪೇ, ಪೇಟಿಎಂ, ಗೂಗಲ್ ಪೇ ಇತ್ಯಾದಿಯವರು. ಇನ್ನು, ಪಿಎಸ್ಪಿ ಎಂದರೆ ಪೇಮೆಂಟ್ ಸರ್ವಿಸ್ ಪ್ರೊವೈಡರ್ಗಳಾಗಿವೆ. ಪೇಮೆಂಟ್ ಒದಗಿಸುವ ಬ್ಯಾಂಕ್ ಇತ್ಯಾದಿಗಳು ಪಿಎಸ್ಪಿಗಳಾಗಿವೆ.
ಇದನ್ನೂ ಓದಿ: ಯುಪಿಐನಲ್ಲಿ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಫೀಚರ್; ಪ್ರಯೋಜನಗಳೇನು? ಅನನುಕೂಲಗಳೇನು?
ಯುಪಿಐ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಅನ್ನು ಬದಲಿಸಿ ಹೊಸ ನಂಬರ್ ಅಪ್ಡೇಟ್ ಮಾಡಿದರೂ ಬ್ಯಾಂಕುಗಳಲ್ಲಿ ಆ ನಂಬರ್ ಅನ್ನು ಬದಲಿಸಿರುವುದಿಲ್ಲ. ಇಂಥ ಹಲವು ನಿದರ್ಶನಗಳು ಗಮನಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಗೈಡ್ಲೈನ್ಸ್ ಬಿಡುಗಡೆ ಮಾಡಿದ್ದೇವೆ ಎಂದು ಯುಪಿಐ ರೂಪಿಸಿದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ತಿಳಿಸಿದೆ.
ನಿಷ್ಕ್ರಿಯಗೊಂಡಿರುವ ಯುಪಿಐ ಐಡಿಗಳಿಗೆ ಆಕಸ್ಮಿಕವಾಗಿ ಹಣ ವರ್ಗಾವಣೆ ಆಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಯುಪಿಐ ಐಡಿಗಳನ್ನು ಡೀ ಆ್ಯಕ್ಟಿವೇಟ್ ಮಾಡಿದಾಗ ಅವುಗಳ ಮೂಲಕ ಯಾವುದೇ ವಹಿವಾಟ ನಡೆಸಲು ಆಗುವುದಿಲ್ಲ. ಆ ಐಡಿಗೆ ಯಾವ ಹಣವನ್ನೂ ಕಳುಹಿಸಲು ಆಗುವುದಿಲ್ಲ. ಆ ಐಡಿಯಿಂದ ಬೇರೆಯವರಿಗೆ ಹಣ ಕಳುಹಿಸಲೂ ಆಗುವುದಿಲ್ಲ.
ಇದನ್ನೂ ಓದಿ: ಹೊಸ ದಾಖಲೆ; ಅಕ್ಟೋಬರ್ ತಿಂಗಳಲ್ಲಿ ಯುಪಿಐ ಮೂಲಕ ಆದ ವಹಿವಾಟು ಮೌಲ್ಯ 17.16 ಲಕ್ಷಕೋಟಿ ರೂ
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ