AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಅಮೆರಿಕ ಟ್ರೇಡ್ ಡೀಲ್ ಬೇಗ ಕುದುರುತ್ತಾ? ಪೀಯೂಶ್ ಗೋಯಲ್ ಭೇಟಿ ಬಳಿಕ ಗರಿಗೆದರಿದ ಆಶಯ

Piyush Goyal US visit: ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರು ಅಮೆರಿಕ ಭೇಟಿಯಲ್ಲಿದ್ದಾರೆ. ಸೆ. 22ರಂದು ನ್ಯೂಯಾರ್ಕ್​ನಲ್ಲಿ ಅವರ ನೇತೃತ್ವದ ತಂಡವು ವ್ಯಾಪಾರ ಒಪ್ಪಂದ ಸಂಬಂಧ ಒಂದು ಸುತ್ತಿನ ಮಾತುಕತೆ ನಡೆಸಿದೆ. ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಗೋಯಲ್, ಭಾರತ ಮತ್ತು ಅಮೆರಿಕ ನಡುವೆ ಇಂಧನ ವ್ಯವಹಾರ ಹೆಚ್ಚುತ್ತಿರುವುದನ್ನು ತಿಳಿಸಿದ್ದಾರೆ.

ಭಾರತ-ಅಮೆರಿಕ ಟ್ರೇಡ್ ಡೀಲ್ ಬೇಗ ಕುದುರುತ್ತಾ? ಪೀಯೂಶ್ ಗೋಯಲ್ ಭೇಟಿ ಬಳಿಕ ಗರಿಗೆದರಿದ ಆಶಯ
ಪಿಯೂಶ್ ಗೋಯಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 24, 2025 | 12:10 PM

Share

ನ್ಯೂಯಾರ್ಕ್, ಸೆಪ್ಟೆಂಬರ್ 24: ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದವನ್ನು (India US trade deal) ಅಂತಿಮಗೊಳಿಸುವ ಸಂಬಂಧ ಮತ್ತೊಂದು ಸುತ್ತಿನ ಮಾತುಕತೆ ಚಾಲನೆಯಲ್ಲಿದೆ. ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ (Piyush Goyal) ಅವರ ನೇತೃತ್ವದ ತಂಡವು ನ್ಯೂಯಾರ್ಕ್​ನಲ್ಲಿ ಮಾತುಕತೆಯಲ್ಲಿ ತೊಡಗಿದೆ. ಸೋಮವಾರ ಈಗಾಗಲೇ ಒಂದು ಸುತ್ತಿನ ಮಾತುಕತೆ ಯಶಸ್ವಿಯಾಗಿ ನಡೆದಿದೆ. ಪೀಯೂಶ್ ಗೋಯಲ್ ಅಮೆರಿಕದಲ್ಲಿ ಇನ್ನಷ್ಟು ದಿನ ಇರಲಿದ್ದು, ಸತತವಾಗಿ ಮಾತುಕತೆಗಳು ನಡೆಯುವ ನಿರೀಕ್ಷೆ ಇದೆ.

ಎರಡೂ ದೇಶಗಳಿಗೆ ಸಮ್ಮತವಾಗುವಂತಹ ಒಪ್ಪಂದವನ್ನು ಕುದುರಿಸುವ ಪ್ರಯತ್ನ ಆಗುತ್ತಿದೆ. ಅಮೆರಿಕದ ಸಂಧಾನ ತಂಡದ ನೇತೃತ್ವವನ್ನು ಬ್ರೆಂಡಾನ್ ಲಿಂಚ್ ಅವರು ವಹಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಅಮೆರಿಕದ ಈ ತಂಡು ಭಾರತಕ್ಕೆ ಬಂದು ಒಂದು ಸುತ್ತಿನ ಮಾತುಕತೆ ನಡೆಸಿತ್ತು. ಈಗ ಪೀಯೂಶ್ ಗೋಯಲ್ ಅವರ ನೇತೃತ್ವದಲ್ಲಿ ಭಾರತದ ನಿಯೋಗವು ಅಮೆರಿಕದಲ್ಲಿದೆ.

ಇದನ್ನೂ ಓದಿ: ಚ್ಯಾಟ್​ಜಿಪಿಟಿ ಭಾರತದ್ದೇ ಆಗುವ ಅವಕಾಶ ತಪ್ಪಿತ್ತಾ? ಇನ್ಫೋಸಿಸ್ ಮೂರ್ತಿ ಯಡವಟ್ಟು ಮಾಡಿದರಾ?

‘ಮುಂಬರುವ ವರ್ಷಗಳಲ್ಲಿ ಅಮೆರಿಕ ಜೊತೆ ಇಂಧನ ಉತ್ಪನ್ನಗಳ ವಹಿವಾಟು ಹೆಚ್ಚಿಸುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಪೀಯೂಶ್ ಗೋಯಲ್ ಹೇಳಿದ್ದಾರೆ.

2025ರಲ್ಲಿ ಅಮೆರಿಕದಿಂದ ಕಚ್ಛಾ ತೈಲದ ಆಮದನ್ನು ಭಾರತ ಗಣನೀಯವಾಗಿ ಹೆಚ್ಚಿಸಿದೆ. ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಅಮೆರಿಕದಿಂದ ಖರೀದಿಸಿದ ತೈಲವು ಶೇ 114ರಷ್ಟು ಹೆಚ್ಚಾಗಿದೆ. ಭಾರತೀಯ ಕಂಪನಿಗಳು ಇನ್ನೂ ಹೆಚ್ಚಿನ ತೈಲವನ್ನು ಆಮದು ಮಾಡಿಕೊಳ್ಳುವ ಯೋಜನೆಯಲ್ಲಿವೆ ಎಂದು ವರದಿಗಳು ಹೇಳುತ್ತಿವೆ.

ರಷ್ಯಾದ ತೈಲವನ್ನು ಭಾರತ ಅತಿಹೆಚ್ಚು ಖರೀದಿ ಮಾಡುತ್ತಿದೆಯಾದರೂ, ಅಮೆರಿಕದ ತೈಲ ಖರೀದಿಯನ್ನೂ ಭಾರತ ಗಣನೀಯವಾಗಿ ಹೆಚ್ಚಿಸಿರುವುದು ಹೌದು.

ಇದನ್ನೂ ಓದಿ: ಲಾಜಿಸ್ಟಿಕ್ಸ್ ಬಲಪಡಿಸಲು 8 ನಗರಗಳಲ್ಲಿ ಏಕೀಕೃತ ಪ್ಲಾನ್​ಗಳನ್ನು ಅನಾವರಣಗೊಳಿಸಿದ ಸರ್ಕಾರ

ಅಮೆರಿಕದ ಪ್ರಗತಿಯಲ್ಲಿ ಭಾರತೀಯರ ಪಾತ್ರ…

ಅಮೆರಿಕದಲ್ಲಿರುವ ಪೀಯೂಶ್ ಗೋಯಲ್ ಅವರು, ಎಚ್1ಬಿ ವೀಸಾ ನೀತಿ ಸಂಬಂಧ ಅಮೆರಿಕಕ್ಕೆ ತಿಳಿಹೇಳುವ ಪ್ರಯತ್ನ ಮಾಡಿದ್ದಾರೆ. ಭಾರತದ ಎಂಜಿನಿಯರುಗಳು, ಪದವೀಧರರು ಅಮೆರಿಕ ಹಾಗೂ ವಿಶ್ವದ ಪ್ರಗತಿಗೆ ಶಕ್ತಿ ತುಂಬುತ್ತಿದ್ದಾರೆ ಎಂದು ಗೋಯಲ್ ಅಭಿಪ್ರಾಯಪಟ್ಟಿದ್ಧಾರೆ.

‘ಭಾರತೀಯ ಎಂಜಿನಿಯರುಗಳು ಪ್ರತಿಭೆ ಮತ್ತು ನಾವೀನ್ಯತೆಗೆ ಹೆಸರುವಾಸಿ. ಅಮೆರಿಕವೂ ಸೇರಿದಂತೆ ವಿಶ್ವಾದ್ಯಂತ ಕಂಪನಿಗಳಿಗೆ ಹೊಸ ಸಂಶೋಧನೆ ಮತ್ತು ಅಭಿವೃದ್ಧಿ ಹಾಗು ಹೊಸ ಐಡಿಯಾಗಳ ಸೃಷ್ಟಿಗೆ ಭಾರತೀಯರು ನೆರವಾಗುತ್ತಾರೆ’ ಎಂದು ಪೀಯೂಶ್ ಗೋಯಲ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ