Sign In

By signing in or creating an account, you agree with Associated Broadcasting Company's Terms & Conditions and Privacy Policy.

Pranjali Awasthi: 16 ವರ್ಷದ ಬಾಲಕಿ ಪ್ರಾಂಜಲಿ ಅವಸ್ಥಿ ಬಳಿ 100 ಕೋಟಿ ರೂ ಮೌಲ್ಯದ ಕಂಪನಿ

Indian American Wonder Kid: ಪ್ರಾಂಜಲಿ ಅವಸ್ಥಿ ಅಮೆರಿಕದಲ್ಲಿರುವ ಭಾರತೀಯ ಸಮುದಾಯದ ಹುಡುಗಿ. ಮಿಯಾಮಿ ಟೆಕ್ ವೀಕ್ ಕಾರ್ಯಕ್ರಮದಲ್ಲಿ 16 ವರ್ಷದ ಅವಸ್ಥಿ ಒಂದು ಕಂಪನಿಯ ಒಡತಿ ಎಂಬ ವಿಚಾರ ಜಗಜ್ಜಾಹೀರಾಗಿ ಹೋಗಿತ್ತು. ಅವರ ಡೆಲ್ವ್ ಡಾಟ್ ಎಐ ಒಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಸ್ಟಾರ್ಟಪ್ ಆಗಿದೆ. 2022ರ ಜನರಿಯಲ್ಲಿ ಶುರುವಾದ ಈ ಕಂಪನಿ ಸದ್ಯ 100 ಕೋಟಿ ರೂ ಮೌಲ್ಯ ಪಡೆದಿದೆ. 10 ಮಂದಿಗೆ ಈಕೆ ಕೆಲಸ ಕೊಟ್ಟಿದ್ದಾಳೆ.

Pranjali Awasthi: 16 ವರ್ಷದ ಬಾಲಕಿ ಪ್ರಾಂಜಲಿ ಅವಸ್ಥಿ ಬಳಿ 100 ಕೋಟಿ ರೂ ಮೌಲ್ಯದ ಕಂಪನಿ
ಪ್ರಾಂಜಲಿ ಅವಸ್ಥಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 12, 2023 | 3:55 PM

ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ಒಲಿಂಪಿಕ್ಸ್​ನಲ್ಲಿ ಹದಿಹರೆಯದಲ್ಲಿ ಚಿನ್ನದ ಪದಕಗಳನ್ನು ಸೂರೆಗೊಳ್ಳಬಹುದಾದರೆ ಉದ್ಯಮದಲ್ಲಿ ಯಾಕಾಗಲ್ಲ? ಓದಿನ ಜೊತೆಗೆ ಉದ್ದಿಮೆ ನಡೆಸಿ ಓದು ಮುಗಿಸುವುದರೊಳಗೆ ದೊಡ್ಡ ಕಂಪನಿಯ ಒಡೆಯರಾಗಿರುವ ನಿದರ್ಶನಗಳು ಹಲವಿವೆ. ಈ ಸಾಲಿಗೆ 16 ವರ್ಷದ ಪ್ರಾಂಜಲಿ ಅವಸ್ಥಿ ಸೇರಿದ್ದಾಳೆ. 15 ವರ್ಷದ ವಯಸ್ಸಿನಲ್ಲಿ ಈಕೆ ಸ್ಥಾಪಿಸಿದ ಕಂಪನಿ ಒಂದೇ ವರ್ಷದಲ್ಲಿ 100 ಕೋಟಿ ರೂ ಮೌಲ್ಯದ ಸಂಸ್ಥೆಯಾಗಿ ಬೆಳೆದಿದೆ. ಪ್ರಾಂಜಲಿ ಅವಸ್ಥಿ ಅವರ ಡೆಲ್ವ್ ಡಾಟ್ ಎಐ (Delv.ai) ಒಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (artificial intelligence) ಕ್ಷೇತ್ರದ ಸ್ಟಾರ್ಟಪ್ ಆಗಿದೆ. 2022ರ ಜನರಿಯಲ್ಲಿ ಶುರುವಾದ ಈ ಕಂಪನಿ ಸದ್ಯ 100 ಕೋಟಿ ರೂ ಮೌಲ್ಯ ಪಡೆದಿದೆ. 10 ಮಂದಿಗೆ ಈಕೆ ಕೆಲಸ ಕೊಟ್ಟಿದ್ದಾಳೆ. ಇತ್ತೀಚೆಗಷ್ಟೇ ಈಕೆ 3 ಕೋಟಿ ರೂಗೂ ಹೆಚ್ಚು ಫಂಡಿಂಗ್ ಪಡೆದು ಕಂಪನಿ ನಡೆಸುತ್ತಿದ್ದಾಳೆ.

ಏಳನೇ ವಯಸ್ಸಿನಲ್ಲಿ ಕೋಡಿಂಗ್ ಕಲಿತ ಪ್ರಾಂಜಲಿ

ಪ್ರಾಂಜಲಿ ಅವಸ್ಥಿ ಅಮೆರಿಕದಲ್ಲಿರುವ ಭಾರತೀಯ ಸಮುದಾಯದ ಹುಡುಗಿ. ಮಿಯಾಮಿ ಟೆಕ್ ವೀಕ್ ಕಾರ್ಯಕ್ರಮದಲ್ಲಿ ಅವಸ್ಥಿ ಒಂದು ಕಂಪನಿಯ ಒಡತಿ ಎಂಬ ವಿಚಾರ ಜಗಜ್ಜಾಹೀರಾಗಿ ಹೋಗಿತ್ತು. ಈಕೆ ಶಾಲೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಆಸಕ್ತಿ ಹೊಂದಿ ಏಳನೇ ವಯಸ್ಸಿನಲ್ಲಿ ಕೋಡಿಂಗ್ ಕಲಿಯತೊಡಿದ್ದಳು. ಈ ಮೂಲಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಬಗ್ಗೆ ಆಸಕ್ತಿ ತೋರತೊಡಗಿದಳು.

ಇದನ್ನೂ ಓದಿ: ಸಾವಿತ್ರಿ ಅತಿ ಶ್ರೀಮಂತ ಭಾರತೀಯ ಮಹಿಳೆ; ಅಂಬಾನಿ ನಂ. 1; ಇಲ್ಲಿದೆ ಫೋರ್ಬ್ಸ್ ಸಿರಿವಂತ ಭಾರತೀಯರ ಪಟ್ಟಿ

ಹದಿಮೂರನೇ ವಯಸ್ಸಿನಲ್ಲಿ ಈಕೆ ಫ್ಲೋರಿಡಾ ಯೂನಿವರ್ಸಿಟಿಯ ರಿಸರ್ಚ್ ಲ್ಯಾಬ್​ನಲ್ಲಿ ಇಂಟರ್ನ್​ಶಿಪ್ ಸೇರುತ್ತಾಳೆ. ಇಲ್ಲಿ ಮೆಷಿನ್ ಲರ್ನಿಂಗ್ ಪ್ರಾಜೆಕ್ಟ್​​ಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡತೊಡಗುತ್ತಾಳೆ. ಕೋವಿಡ್ ಇದ್ದು ಆನ್​ಲೈನ್​ನಲ್ಲಿ ಎಲ್ಲವೂ ನಡೆಯುತ್ತಿದ್ದರಿಂದ ಶಾಲಾ ಶಿಕ್ಷಣ ಮತ್ತು ಯೂನಿವರ್ಸಿಟಿ ಇಂಟರ್​ಶಿಪ್ ಎರಡನ್ನೂ ನಿಭಾಯಿಸಲು ಪ್ರಾಂಜಲಿ ಅವಸ್ಥಿಗೆ ಸಾಧ್ಯವಾಗುತ್ತದೆ.

ಇಲ್ಲಿಂದಲೇ ಪ್ರಾಂಜಲಿ ಅವಸ್ಥಿಗೆ ತನ್ನದೇ ಹೊಸ ಉದ್ದಿಮೆ ಸ್ಥಾಪಿಸಬೇಕೆಂಬ ಹಂಬಲ ಕುಡಿಯೊಡೆಯುತ್ತದೆ. ಮಿಯಾಮಿಯಲ್ಲಿ ಆರ್ಟಿಫಿಶಿಯಲ್ ಸ್ಟಾರ್ಟಪ್ ಉತ್ತೇಜಕ ಸಂಸ್ಥೆಯನ್ನು ಸೇರುತ್ತಾಳೆ. ಆ ನಂತರ ಡೆಲ್ವ್ ಡಾಟ್ ಎಐ ಎಂಬ ತನ್ನದೇ ಹೊಸ ಸ್ಟಾರ್ಟಪ್ ಆರಂಭಿಸುತ್ತಾಳೆ.

ಡೆಲ್ವ್ ಕಂಪನಿ ಏನು ಮಾಡುತ್ತದೆ?

ಪ್ರಾಂಜಲಿ ಅವಸ್ಥಿ ಅವರ ಡೆಲ್ವ್ ಕಂಪನಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಳಸಿ ನಿರ್ಬಂಧಿತ ದತ್ತಾಂಶ ಸಂಗ್ರಹಗಳನ್ನು (data silos) ನೀಗಿಸಿ ದತ್ತಾಂಶ ಹೊರತೆಗೆಯುವ ವಿಧಾನಗಳಿಗೆ (data extraction procedures) ಪುಷ್ಟಿ ಕೊಡುತ್ತದೆ.

ಇದನ್ನೂ ಓದಿ: ಸರ್ಕಾರ ಕಳುಹಿಸುವ ಎಮರ್ಜೆನ್ಸಿ ಅಲರ್ಟ್ ಟೆಸ್ಟ್ ಮೆಸೇಜ್ ನಿಮ್ಮ ಮೊಬೈಲ್​ಗೆ ಬಂದಿಲ್ಲವಾ? ಕಾರಣಗಳೇನಿರಬಹುದು?

ಇಂಟರ್ನೆಟ್​ನಲ್ಲಿ ಅಗಾಧವಾಗಿ ಡಂಪ್ ಆಗುತ್ತಲೇ ಇರುವ ಬೃಹತ್ ಕಂಟೆಂಟ್​ಗಳಲ್ಲಿ ನಿರ್ದಿಷ್ಟ ಮಾಹಿತಿಯನ್ನು ಬಹಳ ಬೇಗವಾಗಿ ಮತ್ತು ಸುಲಭವಾಗಿ ಹುಡುಕಲು ಇವರ ಕಂಪನಿಯ ತಂತ್ರಾಂಶ ಸಹಾಯ ಮಾಡುತ್ತದೆ.

ಸದ್ಯ, ಪ್ರಾಂಜಲಿ ಅವಸ್ಥಿ ಅವರ ಡೆಲ್ವ್ ಡಾಟ್ ಎಐ ಸಂಸ್ಥೆಯ ಬೀಟಾ ವರ್ಷನ್ ಇತ್ತೀಚೆಗೆ ಟೆಕ್ ವಲಯದಲ್ಲಿ ಜನಪ್ರಿಯವಅಗಿತ್ತು. ಪ್ರಾಂಜಲಿ ಅವರು ಕೋಡಿಂಗ್, ಕಸ್ಟಮರ್ ಸರ್ವಿಸ್ ಮತ್ತು ಆಪರೇಶನ್ಸ್ ನೋಡಿಕೊಳ್ಳುತ್ತಿದ್ದಾಳೆ.

ಕಾಲೇಜು ಸೇರಿರುವ ಈಕೆ ಓದಲು ಸಮಯ ಇಲ್ಲದಷ್ಟು ಬ್ಯುಸಿಯಾಗಿದ್ದಾಳೆ. ಇನ್ನಷ್ಟು ಸಮಯ ಈಕೆ ವಿದ್ಯಾಭ್ಯಾಸವನ್ನು ನಿಲ್ಲಿಸಿ ಬಿಸಿನೆಸ್ ಕಡೆ ಗಮನ ಕೊಡಲಿದ್ದಾಳೆ. ತದನಂತರದ ದಿನಗಳಲ್ಲಿ ತನ್ನ ವ್ಯವಹಾರದ ಉನ್ನತಗಾಗಿ ಸಹಾಯಕವಾಗಲು ಉನ್ನತಶಿಕ್ಷಣ ಪಡೆಯುವ ಆಲೋಚನೆಯಲ್ಲಿದ್ದಾಳೆ. ಬಿಸಿನೆಸ್​ ಮೈಂಡ್ ಎಂದರೆ ಇದಪ್ಪಾ…!

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು