AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಣ್ಣ ಉದ್ದಿಮೆಗಳಿಗೆ ಅಡಮಾನರಹಿತ ಸಾಲದ ಮಿತಿ 20 ಲಕ್ಷ ರೂಗೆ ಏರಿಕೆ; ಸಣ್ಣ ಎನ್​ಬಿಎಫ್​ಸಿಗಳಿಗೆ ನೊಂದಣಿ ವಿನಾಯಿತಿ

RBI rises collateral-free loan limit for MSMEs: ಎಂಎಸ್​ಎಂಇಗಳಿಗೆ ಅಡಮಾನರಹಿತವಾಗಿ ನೀಡುವ ಸಾಲದ ಮಿತಿಯನ್ನು 10 ಲಕ್ಷ ರೂನಿಂದ 20 ಲಕ್ಷ ರೂಗೆ ಏರಿಸಲಾಗಿದೆ. ಎಂಪಿಸಿ ಸಭೆ ಬಳಿಕ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ನಿರ್ಧಾರ ಪ್ರಕಟಿಸಿದ್ದಾರೆ. 1,000 ಕೋಟಿ ರೂಗಿಂತ ಕಡಿಮೆ ಅಸೆಟ್ ಹೊಂದಿರುವ ಎನ್​ಬಿಎಫ್​ಸಿಗಳಿಗೆ ನೊಂದಣಿಯಿಂದ ವಿನಾಯಿತಿ ಕೂಡ ಕೊಡಲಾಗಿದೆ.

ಸಣ್ಣ ಉದ್ದಿಮೆಗಳಿಗೆ ಅಡಮಾನರಹಿತ ಸಾಲದ ಮಿತಿ 20 ಲಕ್ಷ ರೂಗೆ ಏರಿಕೆ; ಸಣ್ಣ ಎನ್​ಬಿಎಫ್​ಸಿಗಳಿಗೆ ನೊಂದಣಿ ವಿನಾಯಿತಿ
ಎಂಎಸ್​ಎಂಇ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 06, 2026 | 12:49 PM

Share

ನವದೆಹಲಿ, ಫೆಬ್ರುವರಿ 6: ಸಣ್ಣ ಉದ್ದಿಮೆಗಳಿಗೆ ಪುಷ್ಟಿ ನೀಡಲು ಆರ್​ಬಿಐ (RBI) ತನ್ನ ಅಡಮಾನರಹಿತ ಸಾಲದ (Collateral-free loan) ಮಿತಿಯನ್ನು ಏರಿಸಿದೆ. ಆರ್​ಬಿಐ ಎಂಪಿಸಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ನಿರ್ಧಾರ ಪ್ರಕಟಿಸಿದ್ದಾರೆ. ಎಂಎಸ್​ಎಂಇಗಳಿಗೆ ಅಡಮಾನರಹಿತವಾಗಿ ನೀಡಲಾಗುವ ಸಾಲದ ಮಿತಿಯನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. 10 ಲಕ್ಷ ರೂ ಇದ್ದ ಇಂಥ ಸಾಲದ ಮಿತಿಯನ್ನು 20 ಲಕ್ಷ ರೂಗೆ ಹೆಚ್ಚಿಸಲಾಗಿದೆ.

ಇದರೊಂದಿಗೆ, ಎಂಎಸ್​ಎಂಇಗಳು ಯಾವುದೇ ಸೆಕ್ಯೂರಿಟಿ ಒದಗಿಸುವ ಅಗತ್ಯ ಇಲ್ಲದೇ 20 ಲಕ್ಷ ರೂವರೆಗೆ ಸಾಲ ಪಡೆಯಲು ಅವಕಾಶ ಇರುತ್ತದೆ. ಈ ಕ್ರಮವು ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಿಗೆ ಸುಲಭ ಸಾಲಕ್ಕೆ ಅವಕಾಶ ಕೊಡುತ್ತದೆ. ಎಂಎಸ್​ಎಂಇಗಳು ದೇಶದ ಅರ್ಥ ವ್ಯವಸ್ಥೆಯ ಪ್ರಮುಖ ಭಾಗವಾಗಿರುವುದರಿಂದ, ಅವುಗಳ ಆರೋಗ್ಯ ಕಾಪಾಡಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳಲ್ಲಿ ಇದೂ ಒಂದು.

ಇದನ್ನೂ ಓದಿ: ರಿಪೋ ಬಡ್ಡಿದರ ಶೇ. 5.25ರಲ್ಲಿ ಮುಂದುವರಿಸಿದ ಆರ್​ಬಿಐ

ಸಣ್ಣ ಎನ್​ಬಿಎಫ್​ಸಿಗಳಿಗೆ ನೊಂದಣಿಯಿಂದ ವಿನಾಯಿತಿ

1,000 ಕೋಟಿ ರೂಗಿಂತ ಕಡಿಮೆ ಫಂಡಿಂಗ್ ಹೊಂದಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್​ಬಿಎಫ್​ಸಿ) ನೊಂದಾಯಿಸಿಕೊಳ್ಳುವುದು ಕಡ್ಡಾಯಾಗಿರುವುದಿಲ್ಲ. ಹೆಚ್ಚಿನ ಗಾತ್ರದ ಎನ್​ಬಿಎಫ್​ಸಿಗಳು ಮಾತ್ರವೇ ಕಡ್ಡಾಯವಾಗಿ ನೊಂದಣಿ ಮಾಡಿಸಬೇಕು.

ಹಾಗೆಯೇ, ಕೆಲ ಎನ್​ಬಿಎಫ್​ಸಿಗಳು 1,000ಕ್ಕಿಂತ ಹೆಚ್ಚು ಶಾಖೆಗಳನ್ನು ತೆರೆಯಲು ಮುಂಚಿತವಾಗಿ ಅನುಮತಿ ಪಡೆಯಬೇಕೆಂದ ನಿಯಮವನ್ನೂ ಸಡಿಲಿಸಲಾಗಿದೆ.

ಇದನ್ನೂ ಓದಿ: ವಾಣಿಜ್ಯಾತ್ಮಕವಾಗಿ ಲಾಭವಿದ್ದರೆ ವೆನೆಜುವೆಲಾದಿಂದಲೂ ತೈಲ ಪಡೆಯುತ್ತೇವೆ: ಭಾರತ ಸರ್ಕಾರದ ಹೇಳಿಕೆ

ಪೇಮೆಂಟ್ ವಂಚನೆಯಾದರೆ 25,000 ರೂವರೆಗೆ ಪರಿಹಾರ

ಇದೇ ವೇಳೆ, ಆರ್​ಬಿಐ ಗವರ್ನರ್ ಅವರು ಪೇಮೆಂಟ್ ವಂಚನೆಗೊಳಗಾದ ಗ್ರಾಹಕರಿಗೆ 25,000 ರೂವರೆಗೆ ಪರಿಹಾರ ಒದಗಿಸುವ ಒಂದು ವ್ಯವಸ್ಥೆ ತರುತ್ತಿರುವುದಾಗಿ ತಿಳಿಸಿದ್ದಾರೆ. ಇದು ಸಣ್ಣ ಮೊತ್ತದ ವಂಚನೆಗೆ ಸಿಗಬಹುದಾದ ಪರಿಹಾರ. ಎಂಥ ಟ್ರಾನ್ಸಾಕ್ಷನ್​ಗಳಿಗೆ ಇದು ಅನ್ವಯ ಆಗುತ್ತದೆ ಎಂಬಿತ್ಯಾದಿ ಮಾಹಿತಿ ಗೊತ್ತಾಗಬೇಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
‘ಸಾಕ್ಷ್ಯ ವಿಚಾರಣೆ ವಿಳಂಬ ಆಗುತ್ತಿದೆ, ಜಾಮೀನು ಕೊಡಿ’; ದರ್ಶನ್ ಅರ್ಜಿ
‘ಸಾಕ್ಷ್ಯ ವಿಚಾರಣೆ ವಿಳಂಬ ಆಗುತ್ತಿದೆ, ಜಾಮೀನು ಕೊಡಿ’; ದರ್ಶನ್ ಅರ್ಜಿ
ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ
ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ
ಬಂಗಾಳ ಅಂತಿಮ ಸಮರದಲ್ಲಿ ಆರಂಭಿಕ ವಿಘ್ನ
ಬಂಗಾಳ ಅಂತಿಮ ಸಮರದಲ್ಲಿ ಆರಂಭಿಕ ವಿಘ್ನ
ಸಂಸದ ಸುನಿಲ್ ಬೋಸ್ ಮನೆಯಲ್ಲಿ ಸಚಿವ ಮಹದೇವಪ್ಪ ಡಿನ್ನರ್ ಮೀಟಿಂಗ್
ಸಂಸದ ಸುನಿಲ್ ಬೋಸ್ ಮನೆಯಲ್ಲಿ ಸಚಿವ ಮಹದೇವಪ್ಪ ಡಿನ್ನರ್ ಮೀಟಿಂಗ್
ವಾರಾಣಸಿಯ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ವಾರಾಣಸಿಯ ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ
ಡಿಕೆಶಿ ಬಣಕ್ಕೆ ಮೇ ಕ್ರಾಂತಿ ಕನಸು: ಸಿದ್ದರಾಮಯ್ಯ ಬಣ ಅಹಿಂದ ಕಾರ್ಡ್​ ಪ್ಲೇ!
ಡಿಕೆಶಿ ಬಣಕ್ಕೆ ಮೇ ಕ್ರಾಂತಿ ಕನಸು: ಸಿದ್ದರಾಮಯ್ಯ ಬಣ ಅಹಿಂದ ಕಾರ್ಡ್​ ಪ್ಲೇ!
ಹಾಸನ ಹಲವು ಅವಾಂತರ ಸೃಷ್ಟಿಸಿದ ಮಳೆ: ಧರೆಗುರುಳಿದ ವಿದ್ಯುತ್​ ಕಂಬ, ಮರಗಳು
ಹಾಸನ ಹಲವು ಅವಾಂತರ ಸೃಷ್ಟಿಸಿದ ಮಳೆ: ಧರೆಗುರುಳಿದ ವಿದ್ಯುತ್​ ಕಂಬ, ಮರಗಳು
ಐವಿ ಡ್ರಿಪ್​ ಹಾಕಿಸಿಕೊಂಡು ಕೆಲಸಕ್ಕೆ ಹಾಜರಾದ ಅಂಗನವಾಡಿ ಕಾರ್ಯಕರ್ತೆ
ಐವಿ ಡ್ರಿಪ್​ ಹಾಕಿಸಿಕೊಂಡು ಕೆಲಸಕ್ಕೆ ಹಾಜರಾದ ಅಂಗನವಾಡಿ ಕಾರ್ಯಕರ್ತೆ
‘ಮಗನೇ ಈಗಲೂ ನನಗೆ ಸಿನಿಮಾ ಅರ್ಥ ಆಗಿಲ್ಲ ಅಂತಿದ್ರು’; ವಿನೋದ್
‘ಮಗನೇ ಈಗಲೂ ನನಗೆ ಸಿನಿಮಾ ಅರ್ಥ ಆಗಿಲ್ಲ ಅಂತಿದ್ರು’; ವಿನೋದ್
ದೇವಾಲಯದಲ್ಲಿ ಪ್ರಸಾದ ಬೇಡ ಅನ್ನೋದು ಘೋರ ಪಾಪ! ಯಾಕೆ ಗೊತ್ತಾ?
ದೇವಾಲಯದಲ್ಲಿ ಪ್ರಸಾದ ಬೇಡ ಅನ್ನೋದು ಘೋರ ಪಾಪ! ಯಾಕೆ ಗೊತ್ತಾ?