AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಲಾಯನ್ಸ್ ಜಿಯೋ, 30 ದಿನಗಳ ಎರಡು ಪೋಸ್ಟ್ ಪೇಡ್ ಟ್ರಯಲ್ ಪ್ಲಾನ್; ಎಷ್ಟು ಡೇಟಾ? ಇಲ್ಲಿದೆ ವಿವರ

Reliance Jio Post Paid Trial Offer: ರಿಲಾಯನ್ಸ್ ಜಿಯೋ ಎರಡು ಪೋಸ್ಟ್ ಪೇಡ್ ಪ್ಲಾನ್​ಗಳನ್ನು ಪ್ರಾಯೋಗಿಕ ಆಫರ್ ಕೊಟ್ಟಿದೆ. 399 ರೂ ಮತ್ತು 699 ರೂಗಳ ಈ ಪ್ಲಾನ್​ನಲ್ಲಿ 75 ಜಿಬಿ ಮತ್ತು 100 ಜಿಬಿ ಡೇಟಾ ಸಿಗುತ್ತದೆ. ಒಂದು ತಿಂಗಳು ಇದನ್ನು ಬಳಸಿ, ಇಷ್ಟವಾದರೆ ಪೋಸ್ಟ್ ಪೇಡ್ ಕನೆಕ್ಷನ್ ಮುಂದುವರಿಸಬಹುದು.

ರಿಲಾಯನ್ಸ್ ಜಿಯೋ, 30 ದಿನಗಳ ಎರಡು ಪೋಸ್ಟ್ ಪೇಡ್ ಟ್ರಯಲ್ ಪ್ಲಾನ್; ಎಷ್ಟು ಡೇಟಾ? ಇಲ್ಲಿದೆ ವಿವರ
ರಿಲಾಯನ್ಸ್ ಜಿಯೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 04, 2023 | 4:01 PM

Share

ಭಾರತದ ಪ್ರಮುಖ ಮೊಬೈಲ್ ನೆಟ್ವರ್ಕ್ ಕಂಪನಿ ರಿಲಾಯನ್ಸ್ ಜಿಯೋ (Reliance Jio) ಸಾಕಷ್ಟು ಒಳ್ಳೆಯ ಡೇಟಾ ಪ್ಲಾನ್​ಗಳನ್ನು ಹೊಂದಿದೆ. ಜಿಯೋದ ಪ್ರೀಪೇಡ್ ಮತ್ತು ಪೋಸ್ಟ್ ಪೇಡ್ ಎರಡೂ ಥರದ ಪ್ಲಾನ್​ಗಳು ಕಾಸಿಗೆ ತಕ್ಕಂಥ ಸೌಲಭ್ಯ ಕೊಡುತ್ತವೆ. ಹೊಸ ಹೊಸ ಪ್ಲಾನ್​ಗಳನ್ನು ಆಗಾಗ್ಗೆ ಬಿಡುಗಡೆ ಮಾಡುತ್ತದೆ. ಈಗ ಅದು ಎರಡು ಪೋಸ್ಟ್ ಪೇಯ್ಡ್ (Jio Post Paid) ಪ್ಲಾನ್​ಗಳನ್ನು ನೀಡಿದೆ. 399 ರೂ ಮತ್ತು 699 ರೂ ಪ್ಲಾನ್​ಗಳನ್ನು 30 ದಿನಗಳ ಟ್ರಯಲ್ ಆಗಿ ಜಿಯೊ ಆಫರ್ ಮಾಡಿದೆ. ಇವು ಫ್ಯಾಮಿಲಿ ಪ್ಲಾನ್​ಗಳಾಗಿದ್ದು, ಜಿಯೋದಿಂದ ಆ್ಯಡ್ ಆನ್ ಕನೆಕ್ಷನ್​ಗಳೂ ಸಿಗುತ್ತವೆ.

ಈ ಎರಡು ಪ್ಲಾನ್​ಗಳನ್ನು ಪ್ರಾಯೋಗಿಕವಾಗಿ ನೀಡಲಾಗುತ್ತಿದೆ. ಪ್ರೀಪೇಡ್ ಪ್ಲಾನ್ ಹೊಂದಿದವರನ್ನು ಪೋಸ್ಟ್ ಪೇಡ್​ಗೆ ಸೆಳೆಯುವ ಪ್ರಯತ್ನ ಇದು. ಇದೇ ಮೊದಲ ಬಾರಿಗೆ ಪೋಸ್ಟ್ ಪೇಡ್ ಅನ್ನು ಬಳಸಲು ಹೊರಟಿರುವವರಿಗೆ ಈ ಟ್ರಯಲ್ ಪ್ಲಾನ್​ಗಳು ಸೂಕ್ತ ಎನಿಸುತ್ತವೆ. ಇದರ ಸೇವೆ ಇಷ್ಟವಾದರೆ ಪೋಸ್ಟ್ ಪೇಡ್ ಪ್ಲಾನ್​ನಲ್ಲಿ ಮುಂದುವರಿಯಬಹುದು. ಇಲ್ಲದಿದ್ದರೆ ಪ್ರೀಪೇಡ್ ಸರ್ವಿಸ್​ಗೆ ಮರಳಬಹುದು.

ಇದನ್ನೂ ಓದಿ: NPS: ನ್ಯಾಷನಲ್ ಪೆನ್ಷನ್ ಸ್ಕೀಮ್: 10 ಲಕ್ಷ ರೂ ಇದ್ದರೆ ಎಷ್ಟು ಪಿಂಚಣಿ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ

ರಿಲಾಯನ್ಸ್ ಜಿಯೋ 399 ರೂ ಪೋಸ್ಟ್ ಪೇಡ್ ಪ್ಲಾನ್

ಜಿಯೋದ 399 ರೂ ಪೋಸ್ಟ್ ಪೇಡ್ ಪ್ಲಾನ್​ನಲ್ಲಿ 75ಜಿಬಿ ಡೇಟಾ ಸಿಗುತ್ತದೆ. ಆ 75ಜಿಬಿ ಖಾಲಿ ಆದ ಬಳಿಕ ಬಳಸುವ ಪ್ರತೀ ಜಿಬಿ ಡೇಟಾಗೂ 10 ರೂ ಹಣ ಬಿಲ್ ಬೀಳುತ್ತದೆ. ಈ ಪ್ಲಾನ್​ನಲ್ಲಿ 3 ಆ್ಯಡ್ ಆನ್ ಕನೆಕ್ಷನ್​ಗಳನ್ನು ಪಡೆಯಬಹುದು. ಇವುಗಳಿಗೆ ತಿಂಗಳಿಗೆ 99 ರೂ ಹಣವನ್ನು ಬಾಡಿಗೆ ರೀತಿಯಲ್ಲಿ ಕಟ್ಟಬೇಕು. ಈ ಪ್ರತಿಯೊಂದು ಸಿಮ್​ಗೂ ತಿಂಗಳಿಗೆ 5ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ.

ಧ್ವನಿ ಕರೆ ಅನ್​ಲಿಮಿಟೆಡ್, ಎಸ್ಸೆಮ್ಮೆಸ್ ದಿನಕ್ಕೆ 100. ಇವುಗಳ ಜೊತೆಗೆ ಜಿಯೋಸಿನಿಮಾ, ಜಿಯೋ ಕ್ಲೌಡ್, ಜಿಯೋ ಟಿವಿ ಮೊದಲಾದ ಒಟಿಟಿಗಳ ಸಬ್​ಸ್ಕ್ರಿಪ್ಷನ್​ಗಳು ಉಚಿತವಾಗಿ ಸಿಗುತ್ತವೆ.

ಇದನ್ನೂ ಓದಿ: Money Skills: ಹಣ ನಿರ್ವಹಣೆ ಬಗ್ಗೆ ಇವತ್ತಿನ ಯುವ ಸಮುದಾಯಕ್ಕೆ ಏನು ಜ್ಞಾನ ಇರಬೇಕು? ತಜ್ಞರ ಟಿಪ್ಸ್ ಇಲ್ಲಿದೆ

ಜಿಯೋ 699 ರೂ ಪೋಸ್ಟ್ ಪೇಡ್ ಪ್ಲಾನ್

ರಿಲಾಯನ್ಸ್ ಜಿಯೋ ಪ್ರಾಯೋಗಿಕವಾಗಿ ಬಿಡುಗಡೆ ಮಾಡಿರುವ 699 ರೂನ ಪೋಸ್ಟ್ ಪೇಡ್ ಪ್ಲಾನ್​ನಲ್ಲಿ ತಿಂಗಳಿಗೆ 100ಜಿಬಿ ಡೇಟಾ ಸಿಗುತ್ತದೆ. ಹೆಚ್ಚುವರಿ ಬಳಸುವ ಪ್ರತೀ ಡೇಟಾಗೂ 10 ರೂ ಚಾರ್ಜ್ ಆಗುತ್ತದೆ. ಆ್ಯಡ್ ಆನ್ ಕಾರ್ಡ್ ಅಥವಾ ಫ್ಯಾಮಿಲಿ ಸಿಮ್ ಕಾರ್ಡ್ 3 ಸಿಗುತ್ತವೆ. ಈ ಹೆಚ್ಚುವರಿ ಸಿಮ್​ಗಳಿಗೆ ತಿಂಗಳಿಗೆ 100 ರೂ ಕಟ್ಟಬೇಕು. ತಿಂಗಳಿಗೆ 5ಜಿಬಿ ಡಾಟಾ ಸಿಗುತ್ತದೆ. ಅನ್​ಲಿಮಿಟೆಡ್ ವಾಯ್ಸ್ ಕಾಲ್, ದಿನಕ್ಕೆ 100 ಎಸ್ಸೆಮ್ಮೆಸ್, ಜಿಯೋ ಸಿನಿಮಾ, ಜಿಯೋ ಕ್ಲೌಡ್, ಜಿಯೋ ಟಿವಿ ಇತ್ಯಾದಿ ಒಟಿಟಿಗಳ ಚಂದಾದಾರಿಕೆ ಕೂಡ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Fri, 4 August 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ