AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾಲರ್ ಎದುರು ರುಪಾಯಿ ಮೌಲ್ಯ ಭರ್ಜರಿ ಹೆಚ್ಚಳ; ಭಾರತೀಯ ಕರೆನ್ಸಿಯ ಚೇತರಿಕೆಗೆ ಏನು ಕಾರಣ?

Rupee recovers against Dollar: ಡಾಲರ್ ಎದುರು 95ರ ಮಟ್ಟ ದಾಟಿದ್ದ ರುಪಾಯಿ ಇದೀಗ 94ರ ಗಡಿಯೊಳಗೆ ಬಂದಿದೆ. ಗುರುವಾರ ಪ್ರತೀ ಡಾಲರ್​ಗೆ 94.70 ರೂನಂತೆ ಟ್ರೇಡಿಂಗ್ ಆಗುತ್ತಿದೆ. ಸ್ಪೆಕ್ಯುಲೇಟಿವ್ ಬೆಟ್​ಗಳಿಗೆ ಆರ್​ಬಿಐ ಕಡಿವಾಣ ಹಾಕುವ ಕ್ರಮ ಕೈಗೊಂಡಿದ್ದ ರುಪಾಯಿ ಚೇತರಿಕೆಗೆ ಪ್ರಮುಖ ಕಾರಣವಾಗಿದೆ. ಸ್ಪೆಕ್ಯುಲೇಶನ್ ಜೊತೆಗೆ ಎಫ್​ಪಿಐಗಳ ನಿರಂತರ ಹೊರಹರಿವು, ಆಮದು ಹೆಚ್ಚಳ ಇತ್ಯಾದಿ ಅಂಶಗಳು ರುಪಾಯಿ ಮೌಲ್ಯ ಕುಸಿಯಲು ಕಾರಣವಾಗಿದ್ದವು.

ಡಾಲರ್ ಎದುರು ರುಪಾಯಿ ಮೌಲ್ಯ ಭರ್ಜರಿ ಹೆಚ್ಚಳ; ಭಾರತೀಯ ಕರೆನ್ಸಿಯ ಚೇತರಿಕೆಗೆ ಏನು ಕಾರಣ?
ಆರ್​ಬಿಐImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 02, 2026 | 3:39 PM

Share

ನವದೆಹಲಿ, ಏಪ್ರಿಲ್ 2: ಸತತ ಹಿನ್ನಡೆಯಲ್ಲಿದ್ದ ರುಪಾಯಿ ಕರೆನ್ಸಿ ಗುರುವಾರ ಡಾಲರ್ ಎದುರು 105 ಪೈಸೆಗಳಷ್ಟು ಚೇತರಿಕೆ ಪಡೆದು 94ರ ಮಟ್ಟಕ್ಕಿಂತ ಕೆಳಗೆ ಬಂದಿದೆ. ಹಿಂದಿನ ದಿನದ ವಹಿವಾಟು ಅಂತ್ಯದಲ್ಲಿ ಡಾಲರ್ ಎದುರು 94.70ರ ಮಟ್ಟದಲ್ಲಿದ್ದ ರುಪಾಯಿ ಮೌಲ್ಯ ಇವತ್ತು ಗುರುವಾರ 93.65ಕ್ಕೆ ಏರಿದೆ. ಡಾಲರ್ ಎದುರು ರುಪಾಯಿ (Dollar vs Rupee) ಚೇತರಿಕೆಗೆ ಪ್ರಮುಖವಾಗಿ ಕಾರಣವಾಗಿದ್ದು ಆರ್​ಬಿಐ ತೆಗೆದುಕೊಂಡ ಒಂದು ಕ್ರಮ.

ಸ್ಪೆಕ್ಯುಲೇಟಿವ್ ಟ್ರೇಡಿಂಗ್​ನಿಂದ ರುಪಾಯಿಗೆ ಬಹಳ ಹಿನ್ನಡೆಯಾಗಿತ್ತು. ತೈಲ ಬೆಲೆ ಹೆಚ್ಚಿದ್ದರಿಂದ ಭಾರತದ ಕರೆಂಟ್ ಅಕೌಂಟ್ ಕೊರತೆ ಹಿಗ್ಗಿತು. ಇದು ರುಪಾಯಿ ಮೇಲೆ ಇನ್ನಷ್ಟು ಒತ್ತಡ ಹಾಕಿದೆ. ರುಪಾಯಿಗೆ ಹಿನ್ನಡೆ ತರುತ್ತಿದ್ದ ಸ್ಪೆಕ್ಯೂಲೇಟಿವ್ ಬೆಟ್​ಗಳಿಗೆ ಆರ್​ಬಿಐ ಕಡಿವಾಣ ಹಾಕಿತು. ಬ್ಯಾಂಕುಗಳು ರುಪಾಯಿ ಎನ್​ಡಿಎಫ್​ಗಳನ್ನು (ನಾನ್ ಡೆಲಿವರಬಲ್ ಫಾರ್ವರ್ಡ್ಸ್) ನೀಡದಂತೆ ನಿಯಮಗಳನ್ನು ಹಾಕಲಾಯಿತು. ಕ್ಯಾನ್ಸಲ್ ಆದ ಫಾರ್ವರ್ಡ್ ಕಾಂಟ್ರಾಕ್ಟ್​ಗಳನ್ನು ರೀಬುಕಿಂಗ್ ಮಾಡದಂತೆ ಕಂಪನಿಗಳನ್ನು ತಡೆಯಾಯಿತು. ಇದರಿಂದ ಕರೆನ್ಸಿ ಸ್ಪೆಕುಲೇಶನ್ ಅತಿಯಾಗಿ ಆಗುವುದು ತಪ್ಪಿದಂತಾಯಿತು.

ಇದನ್ನೂ ಓದಿ: ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಆಮದು ಸುಂಕದಿಂದ ವಿನಾಯಿತಿ; ಹಲವು ಉದ್ಯಮಗಳಿಗೆ ಅನುಕೂಲ

ಇರಾನ್ ಯುದ್ಧವು ತಾರ್ಕಿಕ ಅಂತ್ಯ ಮುಟ್ಟುವ ಲಕ್ಷಣ ಸದ್ಯಕ್ಕೆ ಗೋಚರಿಸುತ್ತಿಲ್ಲ. ತೈಲ ಬೆಲೆ 100 ಡಾಲರ್​ಗಿಂತ ಹೆಚ್ಚಿನ ಮಟ್ಟದಲ್ಲೇ ಇದೆ. ಗುರುವಾರ ಬ್ರೆಂಟ್ ಫ್ಯೂಚರ್ಸ್​ನಲ್ಲಿ ತೈಲ ಬೆಲೆ ಶೇ. 5ರಷ್ಟು ಹೆಚ್ಚಾಗಿ ಬ್ಯಾರಲ್​ಗೆ 106 ಡಾಲರ್ ಮುಟ್ಟಿದೆ. ಇದೇ ಮಟ್ಟದಲ್ಲಿ ತೈಲ ಬೆಲೆ ಮತ್ತಷ್ಟು ಕಾಲ ಮುಂದುವರಿಯುತ್ತಿದ್ದಲ್ಲಿ ಭಾರತದ ಆರ್ಥಿಕತೆಗೆ ಮತ್ತಷ್ಟು ಹಿನ್ನಡೆ ತರುತ್ತಾ ಹೋಗಬಹುದು.

ಭಾರತಕ್ಕೆ ಬೈ ಹೇಳುತ್ತಿರುವ ವಿದೇಶೀ ಹೂಡಿಕೆದಾರರು

ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆದಾರರು ಭಾರತೀಯ ಈಕ್ವಿಟಿ ಸೆಗ್ಮೆಂಟ್​ನಿಂದ ಸತತವಾಗಿ ನಿರ್ಗಮಿಸುತ್ತಿದ್ದಾರೆ. ಬುಧವಾರವೂ ಎಫ್​ಪಿಐಗಳೀಂದ 8,331 ಕೋಟಿ ರೂ ಮೊತ್ತದ ಷೇರುಗಳ ಮಾರಾಟವಾಗಿದೆ. ಮಾರ್ಚ್ ತಿಂಗಳಲ್ಲಿ ಎಫ್​ಪಿಐಗಳು 1.18 ಲಕ್ಷ ಕೋಟಿ ರೂ ಹೂಡಿಕೆಗಳನ್ನು ಹಿಂಪಡೆದಿದ್ದಾರೆ.

ಇದನ್ನೂ ಓದಿ: ಟ್ರಂಪ್ ಹಾಕಿದ ಟ್ಯಾರಿಫ್​ಗಳಿಗೆ ಬದಲಾಗಿ ಸಿಗಲಿದೆ ರೀಫಂಡ್; ಯಾರಿಗೆ ಸಿಗುತ್ತೆ ಆದ್ಯತೆ?

2024-25ರಲ್ಲಿ ಎಫ್​ಪಿಐಗಳಿಂದ ನಿವ್ವಳ ಹೊರಹರಿವು ಆಗಿರುವುದು ಬರೋಬ್ಬರಿ 1.80 ಲಕ್ಷ ಕೋಟಿ ರೂ ನಷ್ಟು. ಕಳೆದ 34 ವರ್ಷದಲ್ಲೇ ಇದು ದಾಖಲೆ ಪ್ರಮಾಣದ ಎಫ್​ಪಿಐ ಹೊರಹರಿವು. ಈ ಬೆಳವಣಿಗೆಯು ರುಪಾಯಿ ಮೇಲೆ ಅತೀವ ಒತ್ತಡ ತಂದಿದೆ. ಪರಿಣಾಮವಾಗಿ ಡಾಲರ್ ಎದುರು ರುಪಾಯಿ ಒಂದು ಹಂತದಲ್ಲಿ 95ರ ಗಡಿ ದಾಟಿ ಹೋಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us