Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವರೇನು ಸೆಬಿಯನ್ನು ಮೂರ್ಖ ಅಂದುಕೊಂಡಿದ್ದಾರಾ?: ಸೋಷಿಯಲ್ ಮೀಡಿಯಾ ಸ್ಟಾರ್ಸ್, ಆಲ್ಗೋ ಟ್ರೇಡರ್​ಗಳನ್ನು ತರಾಟೆಗೆ ತೆಗೆದುಕೊಂಡ ಸೆಬಿ ಅಧ್ಯಕ್ಷೆ

Finfluencers and Algo Traders: ಆಲ್ಗೋ ಟ್ರೇಡರ್​ಗಳು ಶೇ. 300ರಷ್ಟು ರಿಟರ್ನ್ ನೀಡುತ್ತೇವೆಂದು ಹೇಳಿಕೊಳ್ಳುತ್ತಿರುವುದನ್ನು ಪ್ರಸ್ತಾಪಿಸಿದ ಸೆಬಿ ಮುಖ್ಯಸ್ಥೆ, ‘ಸೆಬಿಯನ್ನು ಅಷ್ಟೊಂದು ದಡ್ಡ ಎಂದು ಭಾವಿಸಿದ್ದೀರಾ?’ ಎಂದು ಅವರನ್ನು ಪ್ರಶ್ನಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜನರ ಮೇಲೆ ತಮ್ಮ ವಿಡಿಯೋಗಳ ಮೂಲಕ ಪ್ರಭಾವ ಬೀರುತ್ತಿರುವ ಇನ್​ಫ್ಲುಯನ್ಸರುಗಳನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಇವರೇನು ಸೆಬಿಯನ್ನು ಮೂರ್ಖ ಅಂದುಕೊಂಡಿದ್ದಾರಾ?: ಸೋಷಿಯಲ್ ಮೀಡಿಯಾ ಸ್ಟಾರ್ಸ್, ಆಲ್ಗೋ ಟ್ರೇಡರ್​ಗಳನ್ನು ತರಾಟೆಗೆ ತೆಗೆದುಕೊಂಡ ಸೆಬಿ ಅಧ್ಯಕ್ಷೆ
ಮಾಧಬಿ ಪುರಿ ಬುಚ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 05, 2023 | 6:44 PM

ನವದೆಹಲಿ, ಅಕ್ಟೋಬರ್ 5: ಯೂಟ್ಯೂಬ್, ಇನ್ಸ್​ಟಾಗ್ರಾಂ ಇತ್ಯಾದಿ ಸೋಷಿಯಲ್ ಮೀಡಿಯಾಗಳಲ್ಲಿ ಜನಪ್ರಿಯವಾಗಿರುವ ಕೆಲ ಸ್ವಘೋಷಿತ ಹಣಕಾಸು ತಜ್ಞರು (finfluencers) ಬಹಳಷ್ಟು ಹೂಡಿಕೆ ಸಲಹೆಗಳನ್ನು ಕೊಡುವುದನ್ನು ನೀವು ನೋಡಿರಬಹುದು. ಹೂಡಿಕೆ ಹೇಗೆ ಮಾಡುವುದು, ವರ್ಷಕ್ಕೆ ಮೂರು ಪಟ್ಟು, ನಾಲ್ಕು ಪಟ್ಟು ಸಂಪತ್ತು ಹೆಚ್ಚಿಸುವುದು ಹೇಗೆ ಹೀಗೆ ನಾನಾ ರೀತಿಯಲ್ಲಿ ಇವರು ಪ್ರಲೋಬನೆ ಒಡ್ಡುವುದನ್ನು ಕಂಡಿರುಬಹುದು. ಸೆಬಿ (SEBI) ಇವೆಲ್ಲವನ್ನೂ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ಕಡಿವಾಣ ಹಾಕಲು ಕ್ರಮ ಜರುಗಿಸುವ ಸಾಧ್ಯತೆ ಇದೆ. ಮುಂಬೈನಲ್ಲಿ ನಡೆದ ನೊಂದಾಯಿತ ಹೂಡಿಕೆ ಸಲಹಾಗಾರರ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸೆಬಿ ಅಧ್ಯಕ್ಷೆ ಮಾಧಬಿ ಪುರಿ ಬುಚ್ (Madhabi Puri buch), ನಕಲಿ ಸೋಷಿಯಲ್ ಮೀಡಿಯಾ ಇನ್ಫ್ಲುಯನ್ಸರುಗಳ ಮಾತುಗಳಿಗೆ ಮರುಳಾಗಬಾರದು ಎಂದು ಹೂಡಿಕೆದಾರರಿಗೆ ಸಲಹೆ ನೀಡಿದ್ದಾರೆ.

ಆಲ್ಗೋ ಟ್ರೇಡರ್​ಗಳು ಶೇ. 300ರಷ್ಟು ರಿಟರ್ನ್ ನೀಡುತ್ತೇವೆಂದು ಹೇಳಿಕೊಳ್ಳುತ್ತಿರುವುದನ್ನು ಪ್ರಸ್ತಾಪಿಸಿದ ಸೆಬಿ ಮುಖ್ಯಸ್ಥೆ, ‘ಸೆಬಿಯನ್ನು ಅಷ್ಟೊಂದು ದಡ್ಡ ಎಂದು ಭಾವಿಸಿದ್ದೀರಾ?’ ಎಂದು ಅವರನ್ನು ಪ್ರಶ್ನಿಸಿದ್ದಾರೆ.

‘ಸತ್ಯಾಂಶ ಯಾವುದು ಸುಳ್ಳು ಯಾವುದು ಎಂದು ನಾವು ಬಹಳ ಹುಷಾರಾಗಿರಬೇಕು. ಆಲ್ಗೋ ಟ್ರೇಡರ್​ಗಳು ತಮ್ಮ ಆಲ್ಗೊರಿದಂ ಬಳಸಿ ವರ್ಷಕ್ಕೆ ಶೇ. 300ರಷ್ಟು ರಿಟರ್ನ್ ನೀಡುತ್ತೇವೆ ಎಂದು ಹೇಳಿಕೊಳ್ಳುತ್ತಾರೆ. ಸೆಬಿಯನ್ನು ಅಷ್ಟೊಂದು ದಡ್ಡ ಎಂದು ನೀವು ಭಾವಿಸಿದ್ದೀರಾ? ನೀವು ಹೇಳಿಕೊಳ್ಳುತ್ತಿರುವುದಕ್ಕೆ ಏನು ಆಧಾರ ಎಂದು ಕೇಳಿದರೆ, ಅವರು ಡಾಟಾವನ್ನು ಹಿಂದಿನದಕ್ಕೂ ಅನ್ವಹಿಸಿ ಅದರ ಆಧಾರದ ಮೇಲೆ ಶೇ. 300 ರಿಟರ್ನ್ ಎಂಬುದನ್ನು ತೋರಿಸುತ್ತಾರೆ. ನಮ್ಮನ್ನು ಅವರು ಅಷ್ಟೊಂದು ಮುಠ್ಠಾಳರೆಂದು ಭಾವಿಸಿಬಿಟ್ಟಿದ್ದಾರೆ,’ ಎಂದು ಮಾಧವಿ ಪುರಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮೂರನೇ ತ್ರೈಮಾಸಿಕ ಅವಧಿಗೆ ಪಿಎಫ್ ಬಡ್ಡಿದರದಲ್ಲಿ ಇಲ್ಲ ಬದಲಾವಣೆ; ಹತ್ತು ವಿವಿಧ ಪಿಎಫ್ ನಿಧಿಗಳಿಗೆ ಸರ್ಕಾರ ಎಷ್ಟು ಬಡ್ಡಿ ನೀಡುತ್ತೆ?

ಆಲ್ಗೋ ಟ್ರೇಡಿಂಗ್ ಎಂದರೇನು?

ನಿಗದಿತ ಮಾನದಂಡಗಳ ಅಲ್ಗಾರಿದಂ ಅನ್ನು ಕಂಪ್ಯೂಟರ್​ನಲ್ಲಿ ಅಳವಡಿಸಿ, ಸ್ವಯಂಚಾಲಿತವಾಗಿ ಟ್ರೇಡಿಂಗ್ ಮಾಡುವುದಕ್ಕೆ ಅಲ್ಗೋ ಟ್ರೇಡಿಂಗ್ ಎನ್ನುತ್ತಾರೆ. ಉದಾಹರಣೆಗೆ, ನಿರ್ದಿಷ್ಟ ಅವಧಿಯಲ್ಲಿ ಸರಾಸರಿಗಿಂತ ಬೆಲೆ ಏರಿರುವ ಷೇರುಗಳನ್ನು ಗುರುತಿಸಿ ನಿರ್ದಿಷ್ಟ ಪ್ರಮಾಣದಲ್ಲಿ ಖರೀದಿಸುವುದು, ಅಥವಾ ನಿರ್ದಿಷ್ಟ ಅವಧಿಯಲ್ಲಿ ಬೆಲೆ ಇಳಿದಿರುವ ಷೇರುಗಳನ್ನು ಗುರುತಿಸಿ ಮಾರುವುದು ಹೀಗೆ ಟ್ರೇಡಿಂಗ್ ತಂತ್ರಗಳನ್ನು ಗಣಕದಲ್ಲಿ ಪ್ರೋಗ್ರಾಂ ಮಾಡಿಸಲಾಗುತ್ತದೆ. ಈ ಸೂಚನೆಗಳ ಆಧಾರದ ಮೇಲೆ ಮೆಷೀನ್​ಗಳೇ ಬಹಳ ವೇಗವಾಗಿ ಟ್ರೇಡಿಂಗ್ ಮಾಡುತ್ತವೆ. ವ್ಯಕ್ತಿಗತ ಟ್ರೇಡರ್​ಗಳಿಗಿಂತ ಇದು ಹೆಚ್ಚು ನಿಖರವಾಗಿ ಮತ್ತು ವೇಗವಾಗಿ ಟ್ರೇಡ್ ಮಾಡಬಹುದು.

ಆದರೆ, ಈ ಆಲ್ಗೋ ಟ್ರೇಡಿಂಗ್ ಎಲ್ಲಾ ಕಾಲಕ್ಕೂ ಲಾಭ ತರುತ್ತದೆ ಎಂದು ಖಚಿತವಾಗಿ ಹೇಳಲು ಬರೊಲ್ಲ.

ಇದನ್ನೂ ಓದಿ: ಜೆಪಿ ಮಾರ್ಗನ್ ಬಾಂಡ್ ಮಾರುಕಟ್ಟೆಗೆ ಭಾರತದ ಸೇರ್ಪಡೆಯಿಂದ 23 ಬಿಲಿಯನ್ ಡಾಲರ್ ಬಂಡವಾಳ: ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ

ಫಿನ್​ಫ್ಲುಯನ್ಸರುಗಳ ಮೇಲೆ ಸೆಬಿ ಗರಂ

ಇದೇ ವೇಳೆ, ಸೆಬಿ ಛೇರ್ಮನ್ ಮಾಧವಿ ಪುರಿ ಬುಚ್ ಅವರು ಸೋಷಿಯಲ್ ಮೀಡಿಯಾದಲ್ಲಿ ಜನರ ಮೇಲೆ ತಮ್ಮ ವಿಡಿಯೋಗಳ ಮೂಲಕ ಪ್ರಭಾವ ಬೀರುತ್ತಿರುವ ಇನ್​ಫ್ಲುಯನ್ಸರುಗಳನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

‘ನನ್ನ ವಿದ್ಯಾರ್ಥಿ 1 ವರ್ಷದಲ್ಲಿ 15 ಕೋಟಿ ರೂ ಮಾಡಿದ್ರು, ನಿನ್ನೆ ನನ್ನ ಸ್ಟುಡೆಂಟ್ 5 ಲಕ್ಷ ರೂ ಮಾಡಿದ್ದು ಹೇಗೆ, ಹಾಗೆ ಹೀಗೆ ಎಂದು ವಿಡಿಯೋಗಳಲ್ಲಿ ಥಂಬ್​ನೈಲ್ ಇಮೇಜುಗಳಲ್ಲಿ ಬರೆದಿರುವುದನ್ನು ನೋಡುತ್ತೇವೆ. ಸೋಷಿಯಲ್ ಮೀಡಿಯಾದಲ್ಲಿ ಹೀಗೆ ಹೇಳಿದ್ದನ್ನೆಲ್ಲಾ ಈಗ ನಂಬಲು ಸಾಧ್ಯವಾ?’ ಎಂದು ಸೆಮಿ ಮುಖ್ಯಸ್ಥೆ ಕೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ