AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಧಾರ್ ಕಾರ್ಡ್​ಗೆ ನೀಡಿರುವ ಮೊಬೈಲ್ ನಂಬರ್ ಪರಿಶೀಲಿಸುವುದು ಹೇಗೆ? ಇಲ್ಲಿದೆ ವಿಧಾನ

Steps to verify mobile number and email linked to Aadhaar: ವ್ಯಕ್ತಿಯ ಗುರುತಿನ ದಾಖಲೆಯಾದ ಆಧಾರ್ ಕಾರ್ಡ್​ಗೆ ಮೊಬೈಲ್ ನಂಬರ್ ಲಿಂಕ್ ಮಾಡುವ ಅವಕಾಶ ಕೊಡಲಾಗುತ್ತದೆ. ಇದರಿಂದ ಒಟಿಪಿ ಮೂಲಕ ಆಧಾರ್ ದೃಢೀಕರಣ ಪಡೆಯಬಹುದು. ಅಧಾರ್​ಗೆ ಲಿಂಕ್ ಆದ ಮೊಬೈಲ್ ನಂಬರ್ ಮತ್ತು ಇಮೇಲ್ ಅನ್ನು ವೆರಿಫೈ ಮಾಡುವ ಕ್ರಮ ಇಲ್ಲಿದೆ.

ಆಧಾರ್ ಕಾರ್ಡ್​ಗೆ ನೀಡಿರುವ ಮೊಬೈಲ್ ನಂಬರ್ ಪರಿಶೀಲಿಸುವುದು ಹೇಗೆ? ಇಲ್ಲಿದೆ ವಿಧಾನ
ಆಧಾರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 20, 2026 | 1:41 PM

Share

ಆಧಾರ್ ಕಾರ್ಡ್ (Aadhaar) ಭಾರತದಲ್ಲಿ ಈಗ ಬಹಳ ಮುಖ್ಯ ದಾಖಲೆಯಾಗಿದೆ. ಸಾಕಷ್ಟು ಸೇವೆಗಳಿಗೆ ಆಧಾರ್ ಪ್ರಮುಖ ದಾಖಲೆಯಾಗಿ ಪರಿಗಣಿತವಾಗುತ್ತದೆ. ಇದು ವ್ಯಕ್ತಿಯ ಗುರುತಿನ ದಾಖಲೆ. ಇದರಲ್ಲಿ ವ್ಯಕ್ತಿಯ ಫಿಂಗರ್ ಪ್ರಿಂಟ್, ಕಣ್ಣಿನ ಸ್ಕ್ಯಾನ್, ಭಾವಚಿತ್ರ, ಹೆಸರು, ಜನ್ಮದಿನಾಂಕ, ವಿಳಾಸ ಇತ್ಯಾದಿ ವಿವರ ಇರುತ್ತದೆ. ಬಯೋಮೆಟ್ರಿಕ್ ಮಾಹಿತಿಯಾದ ಫಿಂಗರ್ ಪ್​ರಿಂಟ್, ಐರಿಸ್ ಸ್ಕ್ಯಾನ್​ನ ಡಾಟಾ ಬಹಳ ಮುಖ್ಯವಾದುದು. ಇವು ಆಧಾರ್ ದೃಢೀಕರಣಕ್ಕೆ ಬಹಳ ಮುಖ್ಯ.

ಹಾಗೆಯೇ, ಮೊಬೈಲ್ ನಂಬರ್ ಮೂಲಕ ಆಧಾರ್ ಅಥೆಂಟಿಕೇಶನ್ ಮಾಡಲಾಗುತ್ತದೆ. ಆಧಾರ್​ಗೆ ಮೊಬೈಲ್ ನಂಬರ್ ಲಿಂಕ್ ಮಾಡಿದರೆ ಇದು ಸಾಧ್ಯ. ಈಗ ಹೆಚ್ಚಿನ ಆಧಾರ್ ದೃಢೀಕರಣಗಳು ಮೊಬೈಲ್ ನಂಬರ್​ಗೆ ಬರುವ ಒಟಿಪಿ ಮೂಲಕವೇ ಆಗಿ ಹೋಗುತ್ತವೆ.

ಇದನ್ನೂ ಓದಿ: ಆಧಾರ್ ಜೊತೆ ಪಾನ್ ಲಿಂಕ್ ಮಾಡಲು ಡೆಡ್​ಲೈನ್ ಮುಗೀತು? ಮತ್ತೆ ಲಿಂಕ್ ಮಾಡಬಹುದಾ? ಮುಂದೇನಾಗಬಹುದು?

ಒಂದು ಕುಟುಂಬದಲ್ಲಿ ಎಲ್ಲಾ ಸದಸ್ಯರಿಗೂ ಆಧಾರ್ ಕಾರ್ಡ್ ಮಾಡಿಸಲಾಗಿರುತ್ತದೆ. ಎಲ್ಲದಕ್ಕೂ ಪ್ರತ್ಯೇಕ ಮೊಬೈಲ್ ನಂಬರ್ ಅನ್ನು ಜೋಡಿಸಿರುವ ಸಾಧ್ಯತೆ ಕಡಿಮೆ. ಒಂದೆರಡು ನಂಬರ್​ಗಳನ್ನು ಬೇರೆ ಬೇರೆ ಆಧಾರ್​ಗೆ ಕೊಟ್ಟಿರಬಹುದು. ಕೆಲವೊಮ್ಮೆ ಯಾವ ಆಧಾರ್ ಕಾರ್ಡ್​ಗೆ ಯಾವ ನಂಬರ್ ಕೊಟ್ಟಿದ್ದೇವೆ ಎಂದು ಮರೆತುಹೋಗಬಹುದು. ಯಾರ ಆಧಾರ್​ಗೆ ಯಾವ ಮೊಬೈಲ್ ನಂಬರ್ ಲಿಂಕ್ ಮಾಡಲಾಗಿದೆ ಎಂದು ಗೊಂದಲವಿದ್ದಲ್ಲಿ, ಅಥವಾ ಆಧಾರ್​ಗೆ ಲಿಂಕ್ ಆದ ಮೊಬೈಲ್ ನಂಬರ್ ಅನ್ನು ವೆರಿಫೈ ಮಾಡಬೇಕಿದ್ದಲ್ಲಿ ಈ ಕೆಳಗಿನ ವಿಧಾನ ಅನುಸರಿಸಬಹುದು.

ಆಧಾರ್​ಗೆ ಲಿಂಕ್ ಆದ ಮೊಬೈಲ್ ನಂಬರ್ ಪರಿಶೀಲಿಸುವ ಕ್ರಮ

  • ಯುಐಡಿಎಐ ವೆಬ್​ಸೈಟ್​ಗೆ ಹೋಗಿ. ಅದರ ವಿಳಾಸ ಇಂತಿದೆ: uidai.gov.in/en/
  • ಇಲ್ಲಿ ‘ಮೈ ಆಧಾರ್’ ಸೆಕ್ಷನ್ ಅಡಿಯಲ್ಲಿ ಆಧಾರ್ ಸರ್ವಿಸಸ್ ಮೆನು ಅಡಿಯಲ್ಲಿ ‘ವೆರಿಫೈ ಇಮೇಲ್/ ಮೊಬೈಲ್ ನಂಬರ್’ ಮೇಲೆ ಕ್ಲಿಕ್ ಮಾಡಿ.
  • 12 ಅಂಕಿ ಆಧಾರ್ ನಂಬರ್ ನಮೂದಿಸಿ
  • ಮೊಬೈಲ್ ನಂಬರ್ ಅನ್ನು ನಮೂದಿಸಿ.
  • ಮೊಬೈಲ್ ನಂಬರ್ ಲಿಂಕ್ ಆಗಿದ್ದರೆ ಆ ನಂಬರ್​ಗೆ ಒಟಿಪಿ ಬರುತ್ತದೆ. ಆ ಒಟಿಪಿ ಹಾಕಿ ವೆರಿಫೈ ಮಾಡಬಹುದು.
  • ಆಧಾರ್​ಗೆ ಮೊಬೈಲ್ ನಂಬರ್ ಲಿಂಕ್ ಆಗಿಲ್ಲದೇ ಇದ್ದರೆ ಅದರ ಮಾಹಿತಿಯನ್ನು ತೋರಿಸುತ್ತದೆ.

ಇದನ್ನೂ ಓದಿ: ಗೆಜೆಟ್ ಮೂಲಕ ಹೆಸರು ಬದಲಾಯಿಸುವುದು ಹೇಗೆ?; ಇಲ್ಲಿದೆ 3 ಹಂತಗಳ ನಾಮ ಬದಲಾವಣೆ ಪ್ರಕ್ರಿಯೆ

ಇದೇ ರೀತಿ ಇಮೇಲ್ ಅನ್ನೂ ಕೂಡ ವೆರಿಪೈ ಮಾಡಬಹುದು. ಮೊಬೈಲ್ ನಂಬರ್ ಮತ್ತು ಇಮೇಲ್ ಅನ್ನು ಅಪ್​ಟುಡೇಟ್ ಇಟ್ಟಿರುವುದು ಆಧಾರ್ ಸುರಕ್ಷತೆ ದೃಷ್ಟಿಯಿಂದ ಉತ್ತಮ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ