Tax Relief: ಟಿಡಿಎಸ್, ಟಿಸಿಎಸ್​ ನಿಯಮದಲ್ಲಿ ಉದ್ಯಮಗಳಿಗೆ ನಿರಾಳ ನೀಡಿದ ಸಿಬಿಡಿಟಿ

ಉದ್ಯಮಗಳಿಗೆ ನಿರಾಳ ನೀಡುವಂತೆ ಕೇಂದ್ರೀಯ ನೇರ ತೆರಿಗೆ ಮಂಡಳಿಯಿಂದ ಟಿಡಿಎಸ್ ಹಾಗೂ ಟಿಸಿಎಸ್​ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಲಾಗಿದೆ. ಆ ಬಗ್ಗೆ ವಿವರ ಇಲ್ಲಿದೆ.

Tax Relief: ಟಿಡಿಎಸ್, ಟಿಸಿಎಸ್​ ನಿಯಮದಲ್ಲಿ ಉದ್ಯಮಗಳಿಗೆ ನಿರಾಳ ನೀಡಿದ ಸಿಬಿಡಿಟಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Nov 26, 2021 | 8:42 AM

ಉದ್ಯಮಗಳಿಗೆ ನಿರಾಳ ಆಗುವಂಥ ಸುದ್ದಿಯೊಂದು ಇಲ್ಲಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (CBDT) ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಮೂಲದಲ್ಲಿ ತೆರಿಗೆ (TCS, TDS) ಕಡ್ಡಾಯ ಸಂಗ್ರಹ ಅಥವಾ ಕಡಿತಕ್ಕೆ ಸಂಬಂಧಿಸಿದ ನಿಬಂಧನೆಗಳ ಮೇಲೆ ವ್ಯವಹಾರಗಳಿಗೆ ನಿರಾಳವನ್ನು ನೀಡಿದೆ. ಈ ವಿಚಾರವು ಗುರುವಾರದಂದು ಬಂದಿರುವ ಅಧಿಕೃತ ಆದೇಶದಿಂದ ತಿಳಿದಿದೆ. ಆ ಆದೇಶದ ಪ್ರಕಾರ, ಎಲೆಕ್ಟ್ರಾನಿಕ್ ಪೋರ್ಟಲ್ ಮೂಲಕ ನಡೆಸುವ ಇ-ಹರಾಜು ಸೇವೆಗಳು ಇ-ಕಾಮರ್ಸ್ ಆಪರೇಟರ್‌ಗಳಿಗೆ ಅನ್ವಯವಾಗುವ ಟಿಡಿಎಸ್ ನಿಬಂಧನೆಗೆ ಒಳಪಡುವುದಿಲ್ಲ. ಕೇವಲ ಬೆಲೆಯನ್ನು ತಿಳಿದುಕೊಳ್ಳುವುದಕ್ಕೆ ಮಾತ್ರ ಹರಾಜು ಇರುತ್ತದೆ ಮತ್ತು ವಾಸ್ತವ ಮಾರಾಟವು ಸ್ವತಂತ್ರವಾಗಿ ನಡೆಯುತ್ತದೆ. 2020ರ ಅಕ್ಟೋಬರ್​ನಿಂದ ಜಾರಿಗೆ ಬಂಂದಿರುವ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 194-O ಅಡಿಯಲ್ಲಿ ಅನ್ವಯವಾಗುವ ಶೇ 1ರ TDS ಅವಶ್ಯಕತೆಯಿಂದ ಈ ಪರಿಹಾರವು ಆರು ರೈಡರ್‌ಗಳೊಂದಿಗೆ ಬರುತ್ತದೆ.

ಮಾರಾಟವನ್ನು ಸುಲಭಗೊಳಿಸಲು ಇ-ಕಾಮರ್ಸ್ ಆಪರೇಟರ್ ಯಾವುದೇ ರೀತಿಯಲ್ಲಿ ತೊಡಗಿಸಿಕೊಂಡಿದ್ದರೆ TDS ನಿಬಂಧನೆಯು ಆಗ ಅನ್ವಯ ಆಗುತ್ತದೆ. ಪ್ಲಾಟ್‌ಫಾರ್ಮ್ ಮೂಲಕ ಕಂಡುಹಿಡಿಯಲಾದ ಬೆಲೆಯು ವಹಿವಾಟು ನಡೆಯುವ ಬೆಲೆ ಆಗಿರಬಾರದು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ನ ಕ್ಲೈಂಟ್‌ನ ಬೆಲೆಯನ್ನು ಸ್ವೀಕರಿಸಲು ಅಥವಾ ನೇರವಾಗಿ ಕೌಂಟರ್-ಪಾರ್ಟಿಯೊಂದಿಗೆ ಮಾತುಕತೆ ನಡೆಸುವುದು ವಿವೇಚನೆಗೆ ಬಿಟ್ಟದ್ದು ಎಂದು ಹೇಳುತ್ತಾರೆ. ಈ ಸಡಿಲಿಕೆಯಿಂದಾಗಿ ಟಿಡಿಎಸ್ ಕಡಿತಗೊಳಿಸಲು ಇ-ಕಾಮರ್ಸ್ ಆಪರೇಟರ್‌ಗಳು ಎದುರಿಸುತ್ತಿರುವ ಪ್ರಾಯೋಗಿಕ ತೊಂದರೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಮತ್ತು ವ್ಯಾಪಾರ ಮಾಡಲು ಸುಲಭವಾಗುತ್ತದೆ. ಅಲ್ಲದೆ, ಇದು ಕಡಿಮೆ ಭಾರದ ಮೂಲಕ ಪಾರದರ್ಶಕ ಎಲೆಕ್ಟ್ರಾನಿಕ್ ವಹಿವಾಟುಗಳನ್ನು ಉತ್ತೇಜಿಸುತ್ತದೆ.

ಇದೇ ಕ್ರಮದಲ್ಲಿ, ಸಿಬಿಡಿಟಿ ಸಹ GST ಹೊರತುಪಡಿಸಿ ತೆರಿಗೆ ಘಟಕವನ್ನು ತಿಳಿದಿರುವ ಮಾರಾಟಗಾರರಿಗೆ ಮಾಡಿದ ಪಾವತಿಗಳಿಗೆ ಸಂಬಂಧಿಸಿದ TDS ನಿಬಂಧನೆಯಲ್ಲಿ ಹೆಚ್ಚಿನ ಆರಾಮವನ್ನು ನೀಡಿದೆ. ಅಂತಹ ಸಂದರ್ಭಗಳಲ್ಲಿ TDS ನಿಬಂಧನೆಯು ತೆರಿಗೆ ಘಟಕವನ್ನು ಹೊರತುಪಡಿಸಿ ಮೊತ್ತಕ್ಕೆ ಅನ್ವಯಿಸುತ್ತದೆ. ವಹಿವಾಟು ಜಿಎಸ್‌ಟಿ ವ್ಯಾಪ್ತಿಗೆ ಒಳಪಟ್ಟಿರುವಲ್ಲಿ ಈ ಆರಾಮವು ಈಗಾಗಲೇ ಲಭ್ಯವಿದೆ. TDS ಮತ್ತು TCS ನಿಬಂಧನೆಗಳು ನಿರ್ದಿಷ್ಟಪಡಿಸಿದ ಹಣಕಾಸು ಮಿತಿಗಿಂತ ಹೆಚ್ಚಿನ ಸಂದರ್ಭಗಳಲ್ಲಿ ಮಾತ್ರ ಅನ್ವಯಿಸುತ್ತವೆ. ಆದ್ದರಿಂದ ಈ ನಿಬಂಧನೆಯಿಂದ ಸಣ್ಣ ವ್ಯಾಪಾರಗಳ ಮೇಲೆ ಪರಿಣಾಮ ಬೀರುವುದಿಲ್ಲ.

ಈ ಸ್ಪಷ್ಟೀಕರಣವು ಸಾರ್ವಜನಿಕ ವಲಯದ ಕಂಪೆನಿಗಳನ್ನು ಹೊರತುಪಡಿಸಿ ಇತರ ಸರ್ಕಾರಿ ಘಟಕಗಳನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 194Q ಅಡಿಯಲ್ಲಿ TDS ನಿಬಂಧನೆಯ ಅವಶ್ಯಕತೆಯಿಂದ ನಿರ್ದಿಷ್ಟವಾಗಿ ಹೊರಗಿರಿಸಿದೆ. ಏಕೆಂದರೆ ಇವುಗಳು ವ್ಯಾಪಾರ ಅಥವಾ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿರುವ ಘಟಕಗಳಲ್ಲ. TDS ಮತ್ತು TCS ಎರಡನ್ನೂ ತೆರಿಗೆ ಪ್ರಾಧಿಕಾರವು ಆರ್ಥಿಕ ಚಟುವಟಿಕೆಯ ಮೇಲೆ ಹೆಚ್ಚಿನ ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಸಾಧನವಾಗಿ ಬಳಸುತ್ತದೆ. ಮತ್ತು ವಹಿವಾಟುಗಳು ಹಾಗೂ ಆದಾಯಗಳು ಮೌಲ್ಯಮಾಪನ ಮತ್ತು ತೆರಿಗೆಯಿಂದ ತಪ್ಪಿಸಿಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇವೆ. ಸರ್ಕಾರವು ನಗದು ಪಾವತಿಗಳನ್ನು ಉತ್ತೇಜಿಸುತ್ತಿಲ್ಲ ಮತ್ತು ತೆರಿಗೆ ಮೂಲವನ್ನು ವಿಸ್ತರಿಸುವ ಪ್ರಯತ್ನಗಳ ಭಾಗವಾಗಿ ಎಲೆಕ್ಟ್ರಾನಿಕ್ ವಹಿವಾಟುಗಳನ್ನು ಪ್ರೋತ್ಸಾಹಿಸುತ್ತಿದೆ.

ಇದನ್ನೂ ಓದಿ: IT Refund: ಆದಾಯ ತೆರಿಗೆ ಪಾವತಿದಾರರಿಗೆ ನ. 22ರ ತನಕ 1.24 ಲಕ್ಷ ಕೋಟಿ ರೀಫಂಡ್; ಮರುಪಾವತಿ ಸ್ಥಿತಿ ಪರಿಶೀಲನೆ ಹೇಗೆ?

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ