AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Twitter: ಎಡಪಂಥೀಯ ಚಿಂತನೆಗೆ ಮಾತ್ರ ಟ್ವಿಟ್ಟರ್​ನಲ್ಲಿ ಮಣೆ; ವೈರಲ್ ಆಯಿತು ಕಂಪೆನಿಯ ಎಂಜಿನಿಯರ್ ವಿಡಿಯೋ

ಟ್ವಿಟ್ಟರ್ ಸಿದ್ಧಾಂತವು ಎಡಪಂಥೀಯದ ಕಡೆಗೇ ಇದೆ ಎಂದು ಕಂಪೆನಿಯ ಹಿರಿಯ ಎಂಜಿನಿಯರ್​ವೊಬ್ಬರು ವಿಡಿಯೋದಲ್ಲಿ ಹೇಳಿದ್ದಾರೆ.

Twitter: ಎಡಪಂಥೀಯ ಚಿಂತನೆಗೆ ಮಾತ್ರ ಟ್ವಿಟ್ಟರ್​ನಲ್ಲಿ ಮಣೆ; ವೈರಲ್ ಆಯಿತು ಕಂಪೆನಿಯ ಎಂಜಿನಿಯರ್ ವಿಡಿಯೋ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: May 17, 2022 | 6:59 PM

Share

“ಟ್ವಿಟ್ಟರ್​ಗೆ ವಾಕ್​ ಸ್ವಾತಂತ್ರ್ಯದಲ್ಲಿ ನಂಬಿಕೆ ಇಲ್ಲ. ಎಲಾನ್​ಗೆ ವಾಕ್​ ಸ್ವಾತಂತ್ರ್ಯದಲ್ಲಿ ನಂಬಿಕೆ. ಅವರು ಬಂಡವಾಳಶಾಹಿ ಮತ್ತು ನಾವು ಬಂಡವಾಳಶಾಹಿಗಳ ರೀತಿ ನಿಜವಾಗಿಯೂ ಕಾರ್ಯ ನಿರ್ವಹಿಸುತ್ತಿರಲಿಲ್ಲ, ಹೆಚ್ಚಿನ ಪಕ್ಷ ಬಹಳ ಸಮಾಜವಾದಿಗಳು…” ಹೀಗೆ ಸಿರು ಮುರುಗನ್ ಅವರ ಮಾತು ಸಾಗುತ್ತದೆ. ಇದೀಗ ಭಾರೀ ವೈರಲ್ ಆಗಿರುವಂಥ ವಿಡಿಯೋ ತುಣಕಿನಲ್ಲಿನ ಮಾತುಕತೆಯ ಝಲಕ್ ಇದು. ಈ ಸಿರು ಮುರುಗನ್ ಟ್ವಿಟ್ಟರ್ (Twitter) ಕಂಪೆನಿಯ ಸೀನಿಯರ್ ಎಂಜಿನಿಯರ್. ಟ್ವಿಟ್ಟರ್ ಹೇಗೆ ಎಂಡಪಂಥೀಯ ಆಲೋಚನೆಗಳಿಗೆ ಇಂಬು ನೀಡುತ್ತದೆ ಮತ್ತು ಬಲ ಪಂಥೀಯ ಆಲೋಚನೆ ಇರುವ ಖಾತೆಗಳನ್ನು ಇಲ್ಲದಂತೆ ಮಾಡುತ್ತದೆ ಎಂಬುದನ್ನು ಅವರು ಹೇಳಿದ್ದಾರೆ. ಪ್ರಾಜೆಕ್ಟ್ ವೆರಿಟಾಸ್​​ಗಾಗಿ ಕೆಲಸ ಮಾಡುವ ಪತ್ರಕರ್ತರೊಬ್ಬರ ಜತೆಗೆ ಏಪ್ರಿಲ್ 28, 2022ರಂದು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಮೇ 17ನೇ ತಾರೀಕಿನಂದು ಪತ್ರಕರ್ತರಾದ ಟಿಮ್ ಪೂಲ್ ಟ್ವಿಟ್ಟರ್​ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ.

“ಸೈದ್ಧಾಂತಿಕವಾಗಿ, ಇದು ಅರ್ಥವಿಲ್ಲ. ಏಕೆಂದರೆ ನಾವು ನಿಜವಾಗಿ ಬಲ ಪಂಥೀಯ ವಾದವನ್ನು ಸೆನ್ಸಾರ್ ಮಾಡುತ್ತಿದ್ದೇವೆ ಮತ್ತು ಎಡ ಪಂಥೀಯ ವಾದವನ್ನು ಅಲ್ಲ. ಆದ್ದರಿಂದ ಬಲಪಂಥೀಯರ ಪ್ರತಿಯೊಬ್ಬರೂ ‘ಸೋದರ, ಉಳಿಯುವುದು ಪರವಾಗಿಲ್ಲ, ಅದನ್ನು ಸಹಿಸಿಕೊಳ್ಳಬೇಕು. ಎಡ ಪಂಥೀಯವು ಹಾಗೆ ಇರುತ್ತದೆ, ಇಲ್ಲ, ನಾನು ಅದನ್ನು ಸಹಿಸುವುದಿಲ್ಲ. ನನಗೆ ಸೆನ್ಸಾರ್ ಆಗಬೇಕು ಇಲ್ಲದಿದ್ದರೆ ನಾನು ವೇದಿಕೆಯಲ್ಲಿ ಇರುವುದಿಲ್ಲ,” ಎಂದು ಅವರು ಹೇಳುತ್ತಿರುವುದು ಕೇಳಿಬಂದಿದೆ.

“ಆದ್ದರಿಂದ, ಅದು ಬಲಭಾಗದಲ್ಲಿ ಮಾಡುತ್ತದೆ. ಇದು ನಿಜ. ಇಲ್ಲಿ ಪಕ್ಷಪಾತವಿದೆ. ಎರಡು ಪಕ್ಷಗಳು ಒಂದೇ ವೇದಿಕೆಯಲ್ಲಿ ಹೇಗೆ ಸಹಬಾಳ್ವೆಯಿಂದ ಇರುವುದಕ್ಕೆ ಸಾಧ್ಯ ಎಂದು ನನಗೆ ತಿಳಿದಿಲ್ಲ,” ಎಂಬುದಾಗಿ ಟ್ವಿಟ್ಟರ್ ಎಂಜಿನಿಯರ್ ಮುಂದುವರಿಸಿದ್ದಾರೆ. ‘ಬಂಡವಾಳಶಾಹಿ’ ಎಲಾನ್ ಮಸ್ಕ್ ಟ್ವಿಟ್ಟರ್ ಸ್ವಾಧೀನದ ಆಲೋಚನೆಯನ್ನು ಅವರ ‘ಎಡಪಂಥೀಯ ಸಹೋದ್ಯೋಗಿಗಳು’ ದ್ವೇಷಿಸುತ್ತಾರೆ ಎಂದು ಸಿರು ಮುರುಗೇಶನ್ ಮಾಹಿತಿ ನೀಡಿದ್ದಾರೆ. “ಓ ದೇವರೇ. ನಾನು ಕನಿಷ್ಠ ಅದರೊಂದಿಗೆ ಸರಿಯಿದ್ದೇನೆ. ಆದರೆ ನನ್ನ ಕೆಲವು ಸಹೋದ್ಯೋಗಿಗಳು ಸೂಪರ್ ಲೆಫ್ಟ್, ಲೆಫ್ಟ್, ಲೆಫ್ಟ್, ಲೆಫ್ಟ್, ಲೆಫ್ಟ್ ಅಂತಿದ್ದಾರೆ. ಇದು ಸಂಭವಿಸಿದರೆ ಅವರು ಇದೇ ನನ್ನ ಕೊನೆಯ ದಿನವಾಗಿರುತ್ತದೆ,” ಎಂದು ಒತ್ತಿ ಹೇಳಿದರು. ಟ್ವಿಟ್ಟರ್ ಒಪ್ಪಂದವು ಪ್ರಗತಿಯಲ್ಲಿ ಇರುವಾಗಿನಿಂದ ಕಂಪೆನಿಯ ಸಂಸ್ಕೃತಿಯಲ್ಲಿ ‘ಬಹಳಷ್ಟು ಬದಲಾಗಿದೆ’ ಎಂದು ಮುರುಗೇಶನ್ ಸೇರಿಸಿದ್ದಾರೆ.

ಇದನ್ನೂ ಓದಿ
Image
Elon Musk: ಸ್ಪ್ಯಾಮ್ ಖಾತೆಯಲ್ಲಿ ವ್ಯತ್ಯಾಸ ಇರುವುದರಿಂದ ಟ್ವಿಟ್ಟರ್ ಖರೀದಿ ದರದಲ್ಲೂ ಕಡಿತ ಆಗಬಹುದು ಎಂದ ಎಲಾನ್ ಮಸ್ಕ್
Image
Donald Trump: ಡೊನಾಲ್ಡ್ ಟ್ರಂಪ್ ಮೇಲಿನ ಟ್ವಿಟರ್ ನಿರ್ಬಂಧ ವಾಪಸ್: ಎಲಾನ್ ಮಸ್ಕ್ ಘೋಷಣೆ
Image
ಟ್ವಿಟರ್ ಎಲ್ಲರಿಗೂ ಉಚಿತವಲ್ಲ: ಶುಲ್ಕ ವಿಧಿಸುವ ಸಾಧ್ಯತೆ ತೆರೆದಿಟ್ಟ ಎಲನ್ ಮಸ್ಕ್ ಟ್ವೀಟ್
Image
Elon Musk: ಟ್ವಿಟರ್ ನನಗೆ ತುಂಬಾ ಇಷ್ಟ, ಇದಕ್ಕೆ ಎಷ್ಟು?: 2017 ರಲ್ಲಿ ಎಲಾನ್ ಮಸ್ಕ್ ಮಾಡಿದ ಟ್ವೀಟ್ ವೈರಲ್

ಇದನ್ನೂ ಓದಿ: ಎಲಾನ್ ಮಸ್ಕ್ ಅಧೀನದಲ್ಲಿ ಟ್ವಿಟ್ಟರ್ ಭವಿಷ್ಯ ಅಸ್ಪಷ್ಟ: ಸಿಇಒ ಪರಾಗ್ ಅಗರ್​ವಾಲ್ ಮಾತಿಗೆ ಹಲವು ಅರ್ಥ

“ನಾವು ಅದರ ವಿರುದ್ಧ ದಂಗೆಯಂತೆ ನಮ್ಮ ಕೈಲಾದಷ್ಟು ಮಾಡಿದ್ದೇವೆ. ಬಹಳಷ್ಟು ಉದ್ಯೋಗಿಗಳು ಇದರ ವಿರುದ್ಧ ದಂಗೆ ಎದ್ದರು. ಆದರೆ ದಿನದ ಕೊನೆಯಲ್ಲಿ ನಿರ್ದೇಶಕರ ಮಂಡಳಿಯು ಹೇಳುತ್ತದೆ, ಮತ್ತು ಆ ನಂತರ ಅವರು ತಮ್ಮ ಹಿತಾಸಕ್ತಿಗಳಿಗಾಗಿ ಕಾರ್ಯ ನಿರ್ವಹಿಸಿದರು. ಏಕೆಂದರೆ ಅವರು ಮೊಕದ್ದಮೆ ಹೂಡಲು ಬಯಸಲಿಲ್ಲ,” ಎಂದು ಅವರು ತಿಳಿಸಿದ್ದಾರೆ. ಟ್ವಿಟ್ಟರ್ ಎಂಜಿನಿಯರ್ ಕೆಲಸದ ವಾತಾವರಣದಲ್ಲಿನ ಸಡಿಲತೆಯನ್ನು ಎತ್ತಿ ತೋರಿಸಿದ್ದಾರೆ. ಕಳೆದ ತ್ರೈಮಾಸಿಕದಲ್ಲಿ ವಾರಕ್ಕೆ 4 ಗಂಟೆ ಮಾತ್ರ ಹೇಗೆ ಕಚೇರಿಗೆ ಹೋಗಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

“ಮೂಲಭೂತವಾಗಿ ಪ್ರತಿಯೊಬ್ಬರೂ ತಮಗೆ ಬೇಕಾದುದನ್ನು ಮಾಡುವಂತೆ, ಬಂಡವಾಳಶಾಹಿಗಳ ರೀತಿಯಲ್ಲಿ ಯಾರೂ ನಿಜವಾಗಿಯೂ ಕಾಳಜಿ ವಹಿಸುವುದಿಲ್ಲ (ನಿರ್ವಹಣಾ ವೆಚ್ಚಗಳು). ಅವರು ಸಂಖ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಾರೆ ಅಥವಾ ವ್ಯವಹಾರವನ್ನು ಹೇಗೆ ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದು ಎಂಬುದರ ಬಗ್ಗೆ ಕಾಳಜಿ ವಹಿಸುತ್ತಾರೆ,” ಎಂದು ಅವರು ಒತ್ತಿ ಹೇಳಿದ್ದಾರೆ. “ಆದರೆ ಟ್ವಿಟ್ಟರ್‌ನಲ್ಲಿ, ಇದು ಮಾನಸಿಕ ಆರೋಗ್ಯವೇ ಸರ್ವಸ್ವ ಎಂಬಂತಿದೆ. ನೀವು ಅದನ್ನು ಅನುಭವಿಸದಿದ್ದರೆ ಕೆಲವು ದಿನಗಳ ರಜೆ ತೆಗೆದುಕೊಳ್ಳಬಹುದು. ಜನರು ತಿಂಗಳ ರಜೆ ತೆಗೆದುಕೊಂಡಿದ್ದಾರೆ, ಅವರು ಹಿಂತಿರುಗುತ್ತಾರೆ. ಆದರೆ ನೀವು ಯಾವುದೇ ಸಮಯದಲ್ಲಿ ನಿಮ್ಮ ಕೈಲಾದಷ್ಟು ಮಾಡುವಂತೆ ಇಷ್ಟಪಡುತ್ತೀರಿ. ಮತ್ತು ಅದು ಸಂಸ್ಕೃತಿ ಮತ್ತು ನಾವು ಸಾಧ್ಯವಾದಷ್ಟು ವ್ಯವಹಾರವನ್ನು ನಡೆಸುತ್ತೇವೆ ಎಂದು ನಿಮಗೆ ತಿಳಿದಿದೆ,” ಎಂದು ಅವರು ಮಾಹಿತಿ ನೀಡಿದ್ದಾರೆ.

ಟ್ವಿಟ್ಟರ್‌ಗಾಗಿ ಕೆಲಸ ಮಾಡುವುದು ಅವರ ಸ್ವಂತ ರಾಜಕೀಯ ದೃಷ್ಟಿಕೋನಗಳ ಮೇಲೆ ಹೇಗೆ ಪ್ರಭಾವ ಬೀರಿದೆ ಎಂಬುದರ ಬಗ್ಗೆಯೂ ಗಮನ ಸೆಳೆದಿದ್ದಾರೆ. “ನಾನು ಟ್ವಿಟ್ಟರ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಮೇಲೆ ಎಡ ಪಂಥೀಯನಾದೆ. ನೀವು ಯಾವ ಪರಿಸರದಲ್ಲಿ ಇರುತ್ತೀರೋ ಅದೇ ರೀತಿ ಆಗುತ್ತೀರಿ ಎಂದು ನಾನು ಭಾವಿಸುತ್ತೇನೆ, ”ಎಂದು ಟ್ವಿಟ್ಟರ್ ಎಂಜಿನಿಯರ್ ಮುಂದುವರಿಸಿದ್ದಾರೆ.

ಎಲಾನ್ ಮಸ್ಕ್ ಮತ್ತು ‘ಟ್ವಿಟ್ಟರ್ ಒಪ್ಪಂದ’ ಈಗಾಗಲೇ ಕಂಪೆನಿಯ ಶೇ 9.2ರಷ್ಟು ಪಾಲನ್ನು ಹೊಂದಿದ್ದು, ಟ್ವಿಟ್ಟರ್‌ನ ಅತಿದೊಡ್ಡ ವೈಯಕ್ತಿಕ ಷೇರುದಾರರಾಗಿದ್ದ ಎಲಾನ್ ಮಸ್ಕ್, ನಿರ್ವಹಣೆಯಲ್ಲಿ ನನಗೆ ನಂಬಿಕೆಯಿಲ್ಲ ಮತ್ತು ಅವರ ಅಡಿಯಲ್ಲಿ ಟ್ವಿಟ್ಟರ್‌ನ ನಿಜವಾದ ಸಾಮರ್ಥ್ಯ ಹೊರಬರಲು ಸಾಧ್ಯವಿಲ್ಲ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು. ಅವರು ಕಂಪೆನಿಯನ್ನು ಖಾಸಗಿಯಾಗಿ ಮಾಡಲು ಗುರಿಯನ್ನು ಹೊಂದಿದ್ದರು. ಇದರಿಂದ ಅವರು ಅದರ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಬಹುದು ಮತ್ತು ಅದರ ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಟ್ವಿಟ್ಟರ್​ ಅನ್ನು ನಿರ್ದೇಶಿಸಬಹುದು.

ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ