AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2023 Live Stream: ಇಂದು ಕೇಂದ್ರ ಬಜೆಟ್​; ಮಂಡನೆ ಸಮಯ, ಲೈವ್​ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ

Budget 2023 Time: ಸಂಸತ್​​ನಲ್ಲಿ ಇಂದು (ಫೆ.1) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ.

Budget 2023 Live Stream: ಇಂದು ಕೇಂದ್ರ ಬಜೆಟ್​; ಮಂಡನೆ ಸಮಯ, ಲೈವ್​ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಕೇಂದ್ರ ಬಜೆಟ್​ 2023
TV9 Web
| Edited By: ವಿವೇಕ ಬಿರಾದಾರ|

Updated on:Feb 01, 2023 | 10:50 AM

Share

ನವದೆಹಲಿ: ಸಂಸತ್​​ನಲ್ಲಿ ಇಂದು (ಫೆ.1) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)​ 5ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಪೂರ್ಣ ಬಜೆಟ್ (Union Budget 2023) ಮಂಡನೆಯಾಗಲಿದೆ. ಬಜೆಟ್ ಮಂಡನೆ ಸಮಯ, ಎಲ್ಲಿ ವೀಕ್ಷಿಸಬಹುದು, ಜನರ ನಿರೀಕ್ಷೆಗಳೇನು ಹಾಗೂ ಮತ್ತಷ್ಟು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಕೇಂದ್ರ ಬಜೆಟ್ 2023 ದಿನಾಂಕ, ಸಮಯ

ಇಂದು (ಫೆ. 1) 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಿಗ್ಗೆ 11 ಗಂಟೆಗೆ ಸಂಸತ್​​ನಲ್ಲಿ ಬಜೆಟ್ ಮಂಡನೆ ಆರಂಭಿಸಲಿದ್ದಾರೆ. ಈ ಹಿಂದೆ 2022ರಲ್ಲಿ ಅವರು ಸುಮಾರು 1.5 ಗಂಟೆ ಕಾಲ ಬಜೆಟ್ ಮಂಡನೆ ಮಾಡಿದ್ದರು. 2021ರಲ್ಲಿ 2 ಗಂಟೆ 40 ನಿಮಿಷಗಳ ಕಾಲ ಅವರು ಬಜೆಟ್ ಮಂಡನೆ ಮಾಡಿದ್ದು, ದೇಶದ ಇತಿಹಾಸದಲ್ಲಿಯೇ ಸುದೀರ್ಘ ಬಜೆಟ್ ಎಂದು ಪರಿಗಣಿಸಲ್ಪಟ್ಟಿದೆ.

ಕೇಂದ್ರ ಬಜೆಟ್ ಅನ್ನು ಯಾವಾಗ, ಎಲ್ಲಿ ನೋಡಬಹುದು?

ಲೋಕಸಭಾ ಟಿವಿ, ರಾಜ್ಯಸಭಾಟಿವಿ, ದೂರದರ್ಶನ (ಡಿಡಿ ನ್ಯೂಸ್) ಹಾಗೂ ಇತರ ಸುದ್ದಿ ವಾಹಿನಿಗಳಲ್ಲಿ ಬಜೆಟ್ ಮಂಡನೆ ಸಂಸದ್ ಟಿವಿ ಮತ್ತು ಸಂಸತ್ನ ಟ್ವಿಟರ್​​ ಖಾತೆಗಳಲ್ಲಿಯೂ ಬಜೆಟ್ ಮಂಡನೆಯ ನೇರ ಪ್ರಸಾರ ದೊರೆಯಲಿದೆ. ದೂರದರ್ಶನ ಮತ್ತು ಲೋಕಸಭೆಯ ಅಧಿಕೃತ ಯೂಟ್ಯೂಬ್ ಚಾನೆಲ್ಗಳಲ್ಲೂ ಬಜೆಟ್ ನೇರ ಪ್ರಸಾರ ಲಭ್ಯವಾಗಲಿದೆ.

ಎಷ್ಟು ದಿನ ನಡೆಯಲಿದೆ ಬಜೆಟ್ ಅಧಿವೇಶನ?

ಸಂಸತ್​ನ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭಗೊಳ್ಳಲಿದ್ದು ಏಪ್ರಿಲ್ 6ರ ವರೆಗೆ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್​ನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ಫೆಬ್ರವರಿ 14ರಿಂದ ಮಾರ್ಚ್ 12ರ ವರೆಗೆ ಬಜೆಟ್ ಅಧಿವೇಶನಕ್ಕೆ ಬಿಡುವು ಇರಲಿದೆ. ಈ ಅವಧಿಯಲ್ಲಿ ಸಂಸದೀಯ ಸ್ಥಾಯಿ ಸಮಿತಿಗಳು ಅನುದಾನದ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸಲಿವೆ. ವಿವಿಧ ಸಚಿವಾಲಯಗಳು ಮತ್ತು ಅವುಗಳ ಇಲಾಖೆಗಳಿಗೆ ಸಂಬಂಧಿಸಿದ ವರದಿಗಳನ್ನು ಕೂಡ ಸಿದ್ಧಪಡಿಸಲಿವೆ. ಜನವರಿ 31ರಂದು ಹಣಕಾಸು ಸಚಿವರು ಆರ್ಥಿಕ ಸಮೀಕ್ಷೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಈ ವರ್ಷ ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆ ಚುನಾವಣಾ ರಾಜ್ಯಗಳಿಗೆ ಹಲವು ಯೋಜನೆ ಘೋಷಣೆ ಮಾಡುವ ಸಾಧ್ಯತೆ ಇದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಇರುವುದರಿಂದ ಹೆಚ್ಚಿನ ನಿರೀಕ್ಷೆ ಇದ್ದು, ಜನತೆ ಕೇಂದ್ರದ ಪೂರ್ಣ ಪ್ರಮಾಣದ ಬಜೆಟ್​ ಮೇಲೆ ನಿರೀಕ್ಷೆ ಹೊಂದಿದ್ದಾರೆ. ಎಂದಿನಂತೆ ಮಧ್ಯಮ ವರ್ಗದ ಜನತೆ ತೆರಿಗೆ ವಿನಾಯಿತಿಗೆ‌ ಕಾಯುತ್ತಿದ್ದಾರೆ.

ಬಜೆಟ್ ಸಂಬಂಧಿತ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:46 am, Wed, 1 February 23

Follow Us
Web contact
Web contact

TV9 Kannada

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!