AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಸಂಶೋಧನೆ, ಡಿಜಿಟಲ್ ಅಗ್ರಿ ಮಿಷನ್ ಸೇರಿದಂತೆ 14,000 ಕೋಟಿ ರೂ ಮೊತ್ತದ 7 ಪ್ರಮುಖ ಕೃಷಿ ಯೋಜನೆಗಳಿಗೆ ಸಂಪುಟ ಅನುಮತಿ

Union cabinet approves 7 main Agriculture projects: ಕೇಂದ್ರ ಸಂಪುಟ ಸೆಪ್ಟಂಬರ್ 2ರಂದು ಏಳು ಪ್ರಮುಖ ಕೃಷಿ ಯೋಜನೆಗಳಿಗೆ ಅನುಮೋದನೆ ನೀಡಿದೆ. ಕೃಷಿ ಸಂಶೋಧನೆ, ತೋಟಗಾರಿಕೆ, ಹೈನುಗಾರಿಕೆ, ಸುಸ್ಥಿರ ಅಭಿವೃದ್ಧಿ, ಬೆಳೆಗಳ ತಳಿ ಅಭಿವೃದ್ಧಿ, ಹೊಸ ತಂತ್ರಜ್ಞಾನಗಳ ಸಮರ್ಪಕ ಬಳಕೆ ಇವೇ ಮುಂತಾದ ಯೋಜನೆಗಳು ಇದರಲ್ಲಿ ಸೇರಿವೆ. ಕಳೆದ ವಾರ ಸರ್ಕಾರ ಸುಮಾರು 28,000 ಕೋಟಿ ರೂ ಮೊತ್ತ ಕೈಗಾರಿಕಾ ಸ್ಮಾರ್ಟ್ ಸಿಟಿಗಳ ನಿರ್ಮಾಣ ಯೋಜನೆಗೆ ಅನುಮತಿ ನೀಡಿತ್ತು.

ಕೃಷಿ ಸಂಶೋಧನೆ, ಡಿಜಿಟಲ್ ಅಗ್ರಿ ಮಿಷನ್ ಸೇರಿದಂತೆ 14,000 ಕೋಟಿ ರೂ ಮೊತ್ತದ 7 ಪ್ರಮುಖ ಕೃಷಿ ಯೋಜನೆಗಳಿಗೆ ಸಂಪುಟ ಅನುಮತಿ
ಕೇಂದ್ರ ಸಚಿವ ಡಾ. ಎ ವೈಷ್ಣವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 02, 2024 | 4:27 PM

Share

ನವದೆಹಲಿ, ಸೆಪ್ಟೆಂಬರ್ 2: ಕೃಷಿ ಕ್ಷೇತ್ರಕ್ಕೆ ಪುಷ್ಟಿ ಕೊಡಲು ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ 13,966 ಕೋಟಿ ರೂ ಮೊತ್ತದ ಏಳು ಪ್ರಮುಖ ಕೃಷಿ ಯೋಜನೆಗಳಿಗೆ ಕೇಂದ್ರ ಸಂಪುಟ ಇಂದು ಸೋಮವಾರ ಅನುಮೋದನೆ ನೀಡಿದೆ. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಕೇಂದ್ರ ಸಚಿವ ಡಾ. ಎ ವೈಷ್ಣವ್ ಈ ವಿಷಯವನ್ನು ತಿಳಿಸಿದರು. ಇದರಲ್ಲಿ ಡಿಜಿಟಲ್ ಅಗ್ರಿಕಲ್ಚರ್ ಮಿಷನ್, ಸುಸ್ಥಿರ ತೋಟಗಾರಿಕೆ, ಕೃಷಿ ವಿಜ್ಞಾನ ಕೇಂದ್ರ ಇತ್ಯಾದಿ ಯೋಜನೆಗಳೂ ಒಳಗೊಂಡಿವೆ.

1. ಆಹಾರ ಮತ್ತು ಪೌಷ್ಟಿಕ ಭದ್ರತೆಗೆ ಬೆಳೆ ವಿಜ್ಞಾನ: 3,979 ಕೋಟಿ ರೂ

ಇದರಲ್ಲಿ ಕೃಷಿ ಕ್ಷೇತ್ರದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವುದು; ಬೆಳೆಯ ಗುಣಮಟ್ಟ ಹೆಚ್ಚಿಸಲು ತಳಿ ಸಂಪನ್ಮೂಲದ ಸದ್ಬಳಕೆ ಮಾಡುವುದು; ಬೇಳೆ ಕಾಳು, ಎಣ್ಣಬೀಜ ಮತ್ತು ವಾಣಿಜ್ಯ ಬೆಳೆಗಳ ತಳಿ ಅಭಿವೃದ್ಧಿ; ಕೀಟಗಳು, ಮೈಕ್ರೋಬ್​ಗಳು, ಪರಾಗ ಕರ್ತರು ಮುಂತಾದವುಗಳ ಮೇಲೆ ಸಂಶೋಧನೆ ನಡೆಸಲಾಗುವುದು.

2. ಕೃಷಿ ಶಿಕ್ಷಣ ಮತ್ತು ನಿರ್ವಹಣೆಗೆ 2,291 ಕೋಟಿ ರೂ

ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಅಡಿಯಲ್ಲಿ ಕೃಷಿ ಶಿಕ್ಷಣ, ಕೃಷಿ ನಿರ್ವಹಣೆ, ಸಾಮಾಜಿಕ ವಿಜ್ಞಾನಗಳನ್ನು ಬಲಪಡಿಸಲು ಈ ಯೋಜನೆ ಹಾಕಲಾಗಿದೆ. ಹೊಸ ಶಿಕ್ಷಣ ನೀತಿಗೆ ಅನುಸಾರವಾಗಿ ಕೃಷಿ ಶಿಕ್ಷಣವನ್ನು ಮೇಲ್ದರ್ಜೆಗೆ ಏರಿಸುವ ಗುರಿ ಇದೆ. ಇದಕ್ಕಾಗಿ ಎಐ, ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್, ರಿಮೋಟ್ ಸೆನ್ಸಿಂಗ್ ಇತ್ಯಾದಿ ಹೊಸ ಆವಿಷ್ಕಾರಗಳನ್ನು ಬಳಸಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ಇಥನಾಲ್ ಮಿಶ್ರಿತ ಪೆಟ್ರೋಲ್​ನಿಂದಾಗಿ ದೇಶದ ಖಜಾನೆಗೆ ಹತ್ತು ವರ್ಷದಿಂದ ಲಕ್ಷ ಕೋಟಿ ರೂ ಹಣ ಉಳಿತಾಯ?

3. ಡಿಜಿಟಲ್ ಅಗ್ರಿಕಲ್ಚರ್ ಮಿಷನ್​ಗೆ 2,817 ಕೋಟಿ ರೂ

ಡಿಜಿಟಲ್ ಕೃಷಿ ಯೋಜನೆಯಲ್ಲಿ ಎಐ ಇತ್ಯಾದಿ ಆಧುನಿಕ ತಂತ್ರಜ್ಞಾನವನ್ನು ಕೃಷಿಗಾರಿಕೆಗೆ ಹೇಗೆ ಬಳಸಬಹುದು, ಆ ಮೂಲಕ ಕೃಷಿ ಉತ್ಪನ್ನಶೀಲತೆ ಹೇಗೆ ಹೆಚ್ಚಿಸುವುದು ಇತ್ಯಾದಿಗೆ ಇದು ನೆರವಾಗಲಿದೆ. ಕೃಷಿಕರ ನೊಂದಣಿ, ಗ್ರಾಮ ಜಮೀನು ನಕ್ಷೆಗಳ ನೊಂದಣಿ, ಬಿತ್ತನೆಗೊಂಡ ಬೆಳೆಗಳ ನೊಂದಣಿ, ಬರ ಪರಿಸ್ಥಿತಿ ಅವಲೋಕನೆ, ಪ್ರವಾಹ ಪರಿಸ್ಥಿತಿ ಅವಲೋಕನೆ, ಹವಾಮಾನ ವರದಿ, ಅಂತರ್ಜಲ ಸ್ಥಿತಿ, ಬೆಳೆ ಇಳುವರಿ ಇತ್ಯಾದಿ ಅನೇಕ ಸಂಗತಿಗಳಿಗೆ ಹೊಸ ತಂತ್ರಜ್ಞಾನವು ನೆರವಾಗಲಿದೆ.

4. ಜಾನುವಾರು ಆರೋಗ್ಯ ಮತ್ತು ಉತ್ಪನ್ನತೆ: 1,702 ಕೋಟಿ ರೂ

ಜಾನುವಾರುಗಳ ಆರೋಗ್ಯ ಪಾಲನೆ, ಹೈನುಗಾರಿಕೆ ಉತ್ಪಾದನೆ ಹೆಚ್ಚಿಸುವುದು, ಜಾನುವಾರಿನ ತಳಿ ಅಭಿವೃದ್ಧಿ, ಜಾನುವಾರುಗಳಿಗೆ ಅವಶ್ಯಕ ಪೌಷ್ಟಿಕಾಂಶ ಇತ್ಯಾದಿಯನ್ನು ದೃಢಪಡಿಸಲು ಈ ಯೋಜನೆ ಇದೆ.

5. ತೋಟಗಾರಿಕೆ ಅಭಿವೃದ್ಧಿಗೆ 860 ಕೋಟಿ ರೂ

ತರಕಾರಿ, ಹೂವು, ಹಣಬೆ, ಔಷಧ ಸಸ್ಯ, ಸಾಂಬಾರು ಬೆಳೆ ಇತ್ಯಾದಿ ಬೆಳೆಗಳ ಸುಸ್ಥಿರ ಅಭಿವೃದ್ಧಿಯತ್ತ ಗಮನ ಹರಿಸಲಾಗುತ್ತದೆ.

6. ಕೃಷಿ ವಿಜ್ಞಾನ ಕೇಂದ್ರಕ್ಕೆ 1,202 ಕೋಟಿ ರೂ

7. ನೈಸರ್ಗಿ ಸಂಪನ್ಮೂಲ ನಿರ್ವಹಣೆಗೆ 1,202 ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ