AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prepayment: ಹೋಮ್ ಲೋನ್ ಪಡೆದಿದ್ದೀರಾ? ಪ್ರೀಪೇಮೆಂಟ್ ಸೂತ್ರ ಅನುಸರಿಸಿ, ಲಕ್ಷಾಂತರ ರೂ ಬಡ್ಡಿ ಉಳಿಸಿ

Home Loan Tips: ಗೃಹಸಾಲ ಯಾರಿಗೇ ಆದರೂ ಬಹಳ ದೊಡ್ಡ ಹೊರೆ. ಸಾಲದ ಮೊತ್ತ ಹೆಚ್ಚು, ಕಂತು ಅವಧಿ ಸುದೀರ್ಘ ಇರುತ್ತದೆ. ಕೆಲ ಗೃಹಸಾಲಗಳು (Home Loan) 30 ವರ್ಷದವರೆಗೂ ಇರುತ್ತವೆ. ಅಷ್ಟು ವರ್ಷ ಪ್ರತೀ ತಿಂಗಳು ಸಾಲದ ಕಂತುಗಳನ್ನು ಕಟ್ಟುವಷ್ಟರಲ್ಲಿ ನಿತ್ರಾಣಗೊಂಡಿರುತ್ತೇವೆ. ಲೋನ್ ಯಾವಾಗ ಮುಗಿಯುತ್ತಪ್ಪಾ ಎಂದು ಹತಾಶೆಯಿಂದ ಕಾಯುತ್ತಿರುತ್ತೇವೆ.

Prepayment: ಹೋಮ್ ಲೋನ್ ಪಡೆದಿದ್ದೀರಾ? ಪ್ರೀಪೇಮೆಂಟ್ ಸೂತ್ರ ಅನುಸರಿಸಿ, ಲಕ್ಷಾಂತರ ರೂ ಬಡ್ಡಿ ಉಳಿಸಿ
ಗೃಹ ಸಾಲ
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Oct 08, 2026 | 8:06 AM

Share

ಗೃಹಸಾಲ ಯಾರಿಗೇ ಆದರೂ ಬಹಳ ದೊಡ್ಡ ಹೊರೆ. ಸಾಲದ ಮೊತ್ತ ಹೆಚ್ಚು, ಕಂತು ಅವಧಿ ಸುದೀರ್ಘ ಇರುತ್ತದೆ. ಕೆಲ ಗೃಹಸಾಲಗಳು (Home Loan) 30 ವರ್ಷದವರೆಗೂ ಇರುತ್ತವೆ. ಅಷ್ಟು ವರ್ಷ ಪ್ರತೀ ತಿಂಗಳು ಸಾಲದ ಕಂತುಗಳನ್ನು ಕಟ್ಟುವಷ್ಟರಲ್ಲಿ ನಿತ್ರಾಣಗೊಂಡಿರುತ್ತೇವೆ. ಲೋನ್ ಯಾವಾಗ ಮುಗಿಯುತ್ತಪ್ಪಾ ಎಂದು ಹತಾಶೆಯಿಂದ ಕಾಯುತ್ತಿರುತ್ತೇವೆ. ನಾವು ತೆಗೆದುಕೊಂಡ ಸಾಲಕ್ಕಿಂತ ಬಹಳ ಹೆಚ್ಚು ಮೊತ್ತದ ಹಣವನ್ನು ಬಡ್ಡಿ ರೂಪದಲ್ಲೇ ಕಟ್ಟಿಬಿಡುತ್ತೇವೆ. ಆದ್ದರಿಂದ ಗೃಹ ಸಾಲ ಪಡೆದವರು ತಮ್ಮ ಹೊರೆಯನ್ನು ಸಾಧ್ಯವಾದಷ್ಟೂ ಬೇಗ ಇಳಿಸುವತ್ತ ಗಮನ ಕೊಡಬೇಕು. ಈ ನಿಟ್ಟಿನಲ್ಲಿ ಪ್ರೀಪೇಮೆಂಟ್, ಅಥವಾ ಮುಂಗಡ ಪಾವತಿ ಅವಕಾಶ ಬಳಕೆ ಮಾಡಿಕೊಳ್ಳಬೇಕು.

ನೀವು ಗೃಹ ಸಾಲ ಪಡೆಯುವ ಮುನ್ನ ಪ್ರೀಪೇಮೆಂಟ್ ಬಗ್ಗೆ ವಿಚಾರಿಸಿ ಖಚಿತಪಡಿಸಿಕೊಳ್ಳಿ. ಎಲ್ಲಾ ಬ್ಯಾಂಕ್​ಗಳು ಪ್ರೀಪೇಮೆಂಟ್ ಸೌಕರ್ಯ ಒದಗಿಸುವುದಿಲ್ಲ. ನಿಮಗೆ ಆ ಅವಕಾಶ ಇದ್ದರೆ ಖಂಡಿತವಾಗಿ ಉಪಯೋಗಿಸಿಕೊಳ್ಳಿ. ನಿಮ್ಮ ನಿಯಮಿತ ಕಂತಿನ ಜೊತೆ ಹೆಚ್ಚುವರಿಯಾಗಿ ಸಾಧ್ಯವಾದಷ್ಟೂ ಹಣವನ್ನು ಪಾವತಿಸುತ್ತಾ ಹೋಗಿ. ಆಗ ಸಾಲದ ಅವಧಿ ಕಡಿಮೆ ಆಗಿ ನೀವು ಬೇಗ ಸಾಲದಿಂದ ಮುಕ್ತರಾಗಬಹುದು.

ಸಾಲದ ಆರಂಭದಲ್ಲಿ ನೀವು ಕಟ್ಟುವ ಕಂತಿನಲ್ಲಿ ಬಹುಪಾಲು ಮೊತ್ತವು ಬಡ್ಡಿಗೆ ಹೋಗುತ್ತದೆ. ಹೀಗಾಗಿ, ಆರಂಭದಲ್ಲೇ ನೀವು ಹೆಚ್ಚಿನ ಮೊತ್ತವನ್ನು ಕಂತಿನ ಜೊತೆ ಹೆಚ್ಚುವರಿಯಾಗಿ ಕಟ್ಟುವುದು ಸೂಕ್ತ.

ಇದನ್ನೂ ಓದಿ: HDFC: ಎಚ್​ಡಿಎಫ್​ಸಿ ಬ್ಯಾಂಕ್ ಹೊಸ ಎಫ್​ಡಿ ಸ್ಕೀಮ್; ಹೆಚ್ಚು ಬಡ್ಡಿ, ಸೀಮಿತ ಅವಕಾಶ; ಇಲ್ಲಿದೆ ಡೀಟೇಲ್ಸ್

ನೀವು 20 ವರ್ಷದ ಅವಧಿಗೆ ಗೃಹ ಸಾಲ ಪಡೆದಿದ್ದರೆ, ಪ್ರತೀ ವರ್ಷವೂ ಸಾಲದ ಬಾಕಿ ಮೊತ್ತದ ಶೇ. 5ರಷ್ಟು ಹಣವನ್ನು ಮುಂಗಡವಾಗಿ ಪಾವತಿಸಿದರೆ ನಿಮ್ಮ 20 ವರ್ಷದ ಸಾಲ 12 ವರ್ಷಕ್ಕೆ ಇಳಿದುಹೋಗುತ್ತದೆ.

ಅಥವಾ ನಿಮ್ಮ 20 ವರ್ಷದ ಸಾಲದಲ್ಲಿ ನೀವು ಪ್ರತೀ ವರ್ಷ ಒಂದು ಮಾಸಿಕ ಕಂತು ಹೆಚ್ಚುವರಿಯಾಗಿ ಪಾವತಿಸುತ್ತಾ ಹೋದರೂ ಸಾಕು ಸಾಲ 17 ವರ್ಷಕ್ಕೆ ಖತಂ ಆಗುತ್ತದೆ. ಅಥವಾ ನೀವು ಪ್ರತೀ ವರ್ಷವೂ ಸಾಲದ ಕಂತಿನ ಮೊತ್ತವನ್ನು ಶೇ. 5ರಷ್ಟು ಹೆಚ್ಚಿಸುತ್ತಾ ಹೋದರೂ ಸಾಕು 13 ವರ್ಷಕ್ಕೆ ಸಾಲ ತೀರಿಸಬಹುದು.

ಇದನ್ನೂ ಓದಿ: Investment: 1 ಲಕ್ಷ ಸೇರಿದಂತೆ ವಿವಿಧ ಹೂಡಿಕೆಗಳಿಗೆ ಸಿಗುವ ರಿಟರ್ನ್ ಎಷ್ಟು? ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಲೆಕ್ಕಾಚಾರ ಇಲ್ಲಿದೆ

ನೀವು ಜೀವನ ಸವೆಸಿದಂತೆಲ್ಲಾ ಅಗತ್ಯತೆಗಳು ಹೆಚ್ಚುತ್ತಿರುತ್ತವೆ. ಹೀಗಾಗಿ, ನಿಮ್ಮ ಗೃಹಸಾಲವು ಬೇರೆ ಅಗತ್ಯತೆಗಳಿಗೆ ಅಡ್ಡಿಯಾಗದಂತೆ ನಿಭಾಯಿಸಿ, ಸಾಧ್ಯವಾದಷ್ಟು ಸಂಪನ್ಮೂಲ ಬಳಸಿ ಸಾಲವನ್ನು ಬೇಗನೇ ತೀರಿಸುವತ್ತ ಗಮನ ಕೊಡಿ. ಒಂದು ವೇಳೆ ನೀವು ತೆಗೆದುಕೊಂಡಿರುವ ಗೃಹಸಾಲಕ್ಕೆ ಮುಂಗಡ ಪಾವತಿ ಸೌಲಭ್ಯ ಇಲ್ಲದೇ ಇದ್ದರೆ ಆಗ ನೀವು ಪರ್ಯಾಯವಾಗಿ ಇತರ ಹೂಡಿಕೆ ಯೋಜನೆಗಳಲ್ಲಿ ನಿಮ್ಮ ಉಳಿತಾಯ ಹಣವನ್ನು ಬೆಳೆಸುವತ್ತ ಗಮನ ಕೊಡಬೇಕಾಗುತ್ತದೆ. ಇದರಿಂದ ನಿಮ್ಮ ಇತರ ಅಗತ್ಯ ಖರ್ಚುಗಳಿಗೆ ಹಣ ಶೇಖರಿಸಿಡಲು ಸಾಧ್ಯವಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:40 pm, Mon, 29 May 23

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆಗೆ ಸಜ್ಜಾದ ಬಿಜೆಪಿ: ಟಾರ್ಗೆಟ್​​ ಏನು?
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಮೈಸೂರು ದಸರಾ ಯಶಸ್ವಿಗೊಳಿಸಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ ಗಜಪಡೆ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!