ವಿಕಸಿತ ಭಾರತದ ಗುರಿ ತಲುಪಲು 23 ಅಂಶಗಳ ಕಾರ್ಯಯೋಜನೆ; ಕ್ರಮ ಕೈಗೊಳ್ಳಲು ಎಲ್ಲಾ ಸಚಿವಾಲಯಗಳಿಗೆ ನಿರ್ದೇಶನ

Viksit Bharat 2047, government frames 23 important action points: 2047ಕ್ಕೆ ಮುಂದುವರಿದ ದೇಶವಾಗಿಸುವ ವಿಕಸಿತ ಭಾರತ 2047 ಕನಸ್ಸನ್ನು ಸಾಕಾರಗೊಳಿಸಲು ಸರ್ಕಾರವು 23 ಅಂಶಗಳ ಕಾರ್ಯಯೋಜನೆ ತಯಾರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಅಂಶಗಳನ್ನು ರೂಪಿಸಲಾಗಿದೆ. ಈ ಕಾರ್ಯಯೋಜನೆಯನ್ನು ಜಾರಿಗೆ ತರುವಂತೆ ಕೇಂದ್ರ ಕ್ಯಾಬಿನೆಟ್ ಸೆಕ್ರಟರಿಯವರು ಎಲ್ಲಾ ಸಚಿವಾಲಯಗಳಿಗೆ ನಿರ್ದೇಶನ ನೀಡಿದ್ದಾರೆ.

ವಿಕಸಿತ ಭಾರತದ ಗುರಿ ತಲುಪಲು 23 ಅಂಶಗಳ ಕಾರ್ಯಯೋಜನೆ; ಕ್ರಮ ಕೈಗೊಳ್ಳಲು ಎಲ್ಲಾ ಸಚಿವಾಲಯಗಳಿಗೆ ನಿರ್ದೇಶನ
ನರೇಂದ್ರ ಮೋದಿ
Image Credit source: PTI

Updated on: Aug 21, 2026 | 6:38 PM

ನವದೆಹಲಿ, ಆಗಸ್ಟ್ 21: ಭಾರತ ಸರ್ಕಾರವು ‘ವಿಕಸಿತ ಭಾರತ @2047’ (Viksit Bharat) ಗುರಿಯನ್ನು ಸಾಧಿಸಲು ಪ್ರಧಾನಮಂತ್ರಿಯವರ ನೇತೃತ್ವದಲ್ಲಿ 23 ಪ್ರಮುಖ ಅಂಶಗಳ ಕಾರ್ಯಯೋಜನೆಯನ್ನು ಸಿದ್ಧಪಡಿಸಿದೆ. ಕೇಂದ್ರ ಸಂಪುಟ ಕಾರ್ಯದರ್ಶಿಗಳು ಈ ಕುರಿತಂತೆ ಎಲ್ಲಾ ಸಚಿವಾಲಯಗಳಿಗೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದಾರೆ. ಇವುಗಳಲ್ಲಿ ಕೆಲ ಮುಖ್ಯವಾದವು ಈ ಕೆಳಕಾಣಿಸಿದಂತಿವೆ:

ಜನರ ಚಳುವಳಿ: ವಿಕಸಿತ ಭಾರತದ ಗುರಿಯನ್ನು ಕೇವಲ ಸರ್ಕಾರದ ಗುರಿಯಾಗಿ ನೋಡದೆ, ಸ್ವಾತಂತ್ರ್ಯ ಸಂಗ್ರಾಮದಂತೆ ಇದೊಂದು “ಜನರ ಚಳುವಳಿ”ಯಾಗಿ ಪರಿವರ್ತಿಸಬೇಕು. ಇದಕ್ಕಾಗಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಯುವ ಆಂದೋಲನಗಳನ್ನು ಹಮ್ಮಿಕೊಳ್ಳಬೇಕು.

ಯುವಜನತೆ ಮತ್ತು ಕ್ರೀಡೆ: 2036ರ ಒಲಿಂಪಿಕ್ಸ್‌ಗೆ ಈಗಿನಿಂದಲೇ ಸಿದ್ಧತೆ ನಡೆಸಲು ಶಾಲೆಗಳಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸಬೇಕು. ಕ್ರೀಡಾ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಕ್ರೀಡಾ ಮತ್ತು ಪ್ರವಾಸೋದ್ಯಮ ಸಚಿವಾಲಯಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕು.

ಇದನ್ನೂ ಓದಿ: ಕೃಷಿ, ಪರಿಸರ ಇತ್ಯಾದಿ ಬೇರೆ ಬೇರೆ ಕ್ಷೇತ್ರಗಳಿಗೂ ವಿಸ್ತರಿಸಿ: ಸ್ಪೇಸ್ ಸ್ಟಾರ್ಟಪ್​ಗಳಿಗೆ ಪ್ರಧಾನಿ ಮೋದಿ ಕರೆ

ಕೌಶಲ್ಯ ಅಭಿವೃದ್ಧಿ: ಐಟಿಐ (ITI) ಶಿಕ್ಷಣವನ್ನು ಮೇಲ್ದರ್ಜೆಗೇರಿಸುವುದು, ಕೌಶಲ್ಯ ಕೋರ್ಸ್‌ಗಳನ್ನು ಶಾಲಾ ಪಠ್ಯಕ್ರಮದೊಂದಿಗೆ ಜೋಡಿಸುವುದು ಮತ್ತು ನಿವೃತ್ತ ಹಿರಿಯ ನಾಗರಿಕರನ್ನು ಐಟಿಐಗಳಲ್ಲಿ ಮಾರ್ಗದರ್ಶಕರಾಗಿ ಬಳಸಿಕೊಳ್ಳುವಂತಹ ಕ್ರಮಗಳನ್ನು ಕೈಗೊಳ್ಳಬೇಕು.

ತಂತ್ರಜ್ಞಾನ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್: ದತ್ತಾಂಶ ಸುರಕ್ಷತೆಯನ್ನು ಖಾತ್ರಿಪಡಿಸಲು ‘ಝೋಹೊ’ (Zoho), ‘ಸರ್ವಂ’ (Sarvam), ‘ಅರಟ್ಟೈ’ (Arattai) ನಂತಹ ದೇಶೀಯ ಡಿಜಿಟಲ್ ಮತ್ತು ಎಐ ಪ್ಲಾಟ್‌ಫಾರ್ಮ್‌ಗಳ ಬಳಕೆಯನ್ನು ಸಚಿವಾಲಯಗಳು ಉತ್ತೇಜಿಸಬೇಕು.

ಆಡಳಿತಾತ್ಮಕ ಸುಧಾರಣೆ: ಸಚಿವಾಲಯಗಳು ಬಾಹ್ಯ ಸಲಹೆಗಾರರನ್ನು ನೇಮಿಸುವ ಬದಲು, ತಮ್ಮ ಅಧಿಕಾರಿಗಳಿಗೆ ಟೆಂಡರ್ ಡಾಕ್ಯುಮೆಂಟ್ ತಯಾರಿಕೆ, ಶಾಸನಗಳ ಕರಡು ರಚನೆ ಮತ್ತು ವಿವಾದ ನಿರ್ವಹಣೆಯಂತಹ ವಿಶೇಷ ಕೌಶಲ್ಯಗಳ ತರಬೇತಿಯನ್ನು ನೀಡಬೇಕು. ಫಾರ್ಮಾಸ್ಯುಟಿಕಲ್ ವಲಯದಲ್ಲಿ ಸುಲಭವಾಗಿ ವ್ಯವಹಾರ ನಡೆಸಲು ನಿಯಮಗಳಲ್ಲಿ ಸುಧಾರಣೆ ತರಬೇಕು.

ಉದ್ಯಮ ಮತ್ತು ಶಿಕ್ಷಣದ ಸಹಯೋಗ: ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿನ ಪಠ್ಯಕ್ರಮವನ್ನು ತಾಂತ್ರಿಕ ಬದಲಾವಣೆಗಳು ಮತ್ತು ಕೈಗಾರಿಕೆಗಳ ಅಗತ್ಯಕ್ಕೆ ಅನುಗುಣವಾಗಿ ನಿರಂತರವಾಗಿ ಪರಿಷ್ಕರಿಸಬೇಕು.

ಸಚಿವಾಲಯಗಳ ಸಮನ್ವಯ: ಇಲಾಖೆಯ ಗಡಿಗಳನ್ನು ಮೀರಿ, ‘ಸರ್ಕಾರವೇ ಒಂದು’ (Whole of Government) ಎಂಬ ಮನೋಭಾವದಿಂದ ಸ್ವಚ್ಛತೆ, ನಿರ್-ಅಪರಾಧೀಕರಣ (Decriminalization) ಮತ್ತು ನಿಯಂತ್ರಣ ಮುಕ್ತಗೊಳಿಸುವಿಕೆಯಂತಹ ವಿಷಯಗಳಲ್ಲಿ ಅಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸಬೇಕು.

ಇದನ್ನೂ ಓದಿ: ಪತಿಯಿಂದ ಖರೀದಿಸಿದ ಆಸ್ತಿಗೆ ಪತ್ನಿ ಟ್ಯಾಕ್ಸ್ ಎಕ್ಸೆಂಪ್ಷನ್ ಪಡೆಯಬಹುದಾ? ತೆರಿಗೆ ಪ್ರಾಧಿಕಾರದ ಮಹತ್ವದ ತೀರ್ಪು

ಈ ಕಾರ್ಯಯೋಜನೆಯು ಆಡಳಿತದಲ್ಲಿ ಪಾರದರ್ಶಕತೆ, ಕೌಶಲ್ಯ ಆಧಾರಿತ ಶಿಕ್ಷಣ ಮತ್ತು ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us