ಕೃಷಿ, ಪರಿಸರ ಇತ್ಯಾದಿ ಬೇರೆ ಬೇರೆ ಕ್ಷೇತ್ರಗಳಿಗೂ ವಿಸ್ತರಿಸಿ: ಸ್ಪೇಸ್ ಸ್ಟಾರ್ಟಪ್ಗಳಿಗೆ ಪ್ರಧಾನಿ ಮೋದಿ ಕರೆ
PM Modi meets CEOs of 20 selected space startups of India: ರಾಷ್ಟ್ರರಾಜಧಾನಿಯ ಸೇವಾ ತೀರ್ಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರಮುಖ 20 ಸ್ಪೇಸ್ ಸ್ಟಾರ್ಟಪ್ಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು. ಸ್ಕೈರೂಟ್ ಏರೋಸ್ಪೇಸ್, ಅಗ್ನಿಕುಲ್, ಪಿಕ್ಸೆಲ್, ಧ್ರುವ್ ಇತ್ಯಾದಿ ಸ್ಟಾರ್ಟಪ್ಗಳ ಸಿಇಒಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಜನಸಾಮಾನ್ಯರ ಜೀವನ ಸುಲಭಗೊಳಿಸುವ ರೀತಿಯ ಅಪ್ಲಿಕೇಶನ್ಗಳು ಈ ಸ್ಪೇಸ್ ಟೆಕ್ನಾಲಜಿಯಿಂದ ಸಾಧ್ಯವಾಗುವಂತಾಗಬೇಕು ಎಂದು ಮೋದಿ ಕರೆ ನೀಡಿದರು.

ನವದೆಹಲಿ, ಆಗಸ್ಟ್ 21: ಪ್ರಪಂಚವು ಬಾಹ್ಯಾಕಾಶ ಕ್ಷೇತ್ರವನ್ನು ನೆನೆದಾಗ ಭಾರತದತ್ತ ನೋಡುವಂತಾಗಬೇಕು. ಭಾರತದ ಬಾಹ್ಯಾಕಾಶ ಕ್ಷೇತ್ರವು ಜಾಗತಿಕ ಪ್ರತಿಭೆಗಳು, ಕಂಪನಿಗಳು ಮತ್ತು ಹೂಡಿಕೆಗಳನ್ನು ಆಕರ್ಷಿಸುವ ಪ್ರಮುಖ ಕೇಂದ್ರವಾಗಬೇಕು. ಕೃಷಿ, ಶಿಕ್ಷಣ, ಪರಿಸರ ಇತ್ಯಾದಿ ಕ್ಷೇತ್ರಗಳಿಗೂ ತಂತ್ರಜ್ಞಾನ ವಿಸ್ತರಣೆ ಆಗಬೇಕು ಎಂದು ಪ್ರಧಾನಿ ಮೋದಿ (Narendra Modi) ಕರೆ ನೀಡಿದ್ದಾರೆ. ದೆಹಲಿಯ ಸೇವಾ ತೀರ್ಥದಲ್ಲಿ ದೇಶದ 20 ಪ್ರಮುಖ ಸ್ಪೇಸ್ ಸ್ಟಾರ್ಟ್‌ಅಪ್‌ಗಳ (ಬಹ್ಯಾಕಾಶ ಉದ್ಯಮಗಳ) ಸಿಇಒಗಳು ಮತ್ತು ಸಂಸ್ಥಾಪಕರೊಂದಿಗೆ ನಡೆಸಿದ ಸಂವಾದದ ವೇಳೆ ಪ್ರಧಾನಿಗಳು ಈ ಕರೆ ಕೊಟ್ಟಿದ್ದಾರೆ.
ಖಾಸಗಿ ವಲಯದ ಭಾಗವಹಿಸುವಿಕೆ: ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಭಾಗವಹಿಸುವಿಕೆಗೆ ಮುಕ್ತಗೊಳಿಸಿದ ನಿರ್ಧಾರವು ದೇಶದಲ್ಲಿ ಹೊಸ ನಾವೀನ್ಯತೆ ಹಾಗೂ ಅವಕಾಶಗಳನ್ನು ಸೃಷ್ಟಿಸಿದೆ ಎಂದು ಸಿಇಒಗಳು ಇದೇ ವೇಳೆ ಹರ್ಷ ವ್ಯಕ್ತಪಡಿಸಿದರು. ಇದಕ್ಕೆ ಪ್ರಧಾನಿಯವರು ಧೈರ್ಯದಿಂದ ಹೊಸ ಕ್ಷೇತ್ರದಲ್ಲಿ ಹೆಜ್ಜೆ ಇಟ್ಟ ಯುವ ಉದ್ಯಮಿಗಳನ್ನು ಶ್ಲಾಘಿಸಿದರು.
ಇದನ್ನೂ ಓದಿ:ಪತಿಯಿಂದ ಖರೀದಿಸಿದ ಆಸ್ತಿಗೆ ಪತ್ನಿ ಟ್ಯಾಕ್ಸ್ ಎಕ್ಸೆಂಪ್ಷನ್ ಪಡೆಯಬಹುದಾ? ತೆರಿಗೆ ಪ್ರಾಧಿಕಾರದ ಮಹತ್ವದ ತೀರ್ಪು
ಸಾಮಾಜಿಕ ಹಾಗೂ ಇತರೆ ವಲಯಗಳೊಂದಿಗೆ ಸಹಯೋಗ
ಸಂಸ್ಥೆಗಳು ತಮ್ಮ ಸ್ಪೇಸ್ ಟೆಕ್ನಾಲಜಿಯನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಬಳಕೆಗೆ ಅವಕಾಶ ಮಾಡಿಕೊಡಬೇಕು. ಈ ತಂತ್ರಜ್ಞಾನಗಳು ಜನಸಾಮಾನ್ಯರ ಬದುಕನ್ನು ಇನ್ನಷ್ಟು ಸುಲಭಗೊಳಿಸಬೇಕು ಎಂದು ಪ್ರಧಾನಿಗಳು ಈ ವೇಳೆ ಸಲಹೆ ನೀಡಿದರು:
- ಕೃಷಿ: ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿ ರೈತರಿಗೆ ಸೂಕ್ತ ಮಾಹಿತಿ ನೀಡಿ ಇಳುವರಿ ಹೆಚ್ಚಿಸಲು ಕೃಷಿ ವಿಶ್ವವಿದ್ಯಾಲಯಗಳೊಂದಿಗೆ ಕೈಜೋಡಿಸಬಹುದು.
- ಪರಿಸರ: ಬಾಹ್ಯಾಕಾಶ ತ್ಯಾಜ್ಯವನ್ನು (Space Debris) ತೆರವುಗೊಳಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿರುವ ಸಂಸ್ಥೆಗಳು ಪರಿಸರ ಸಂಸ್ಥೆಗಳೊಂದಿಗೆ ಸಹಕರಿಸಬಹುದು.
- ಶಿಕ್ಷಣ: ಯುವಕರು ಮತ್ತು ಮಕ್ಕಳಲ್ಲಿ ಬಾಹ್ಯಾಕಾಶ ಕ್ಷೇತ್ರ ಆಸಕ್ತಿ ಹೆಚ್ಚಿಸಲು ‘ಅಟಲ್ ಟಿಂಕರಿಂಗ್ ಲ್ಯಾಬ್ಸ್’ ಜೊತೆ ಹೆಚ್ಚಿನ ಸಹಯೋಗ ಹೊಂದಬಹುದು.
ಇದನ್ನೂ ಓದಿ: 10 ಲಕ್ಷ ಟನ್ ಸಕ್ಕರೆ ಆಮದಿಗೆ ಸರ್ಕಾರ ಅನುಮತಿ; ಕುಸಿಯುತ್ತಿರುವ ಶುಗರ್ ಕಂಪನಿಗಳ ಷೇರುಬೆಲೆ
ಭಾಗವಹಿಸಿದ್ದ ಪ್ರಮುಖ ಸಂಸ್ಥೆಗಳು: ಸ್ಕೈರೂಟ್ ಏರೋಸ್ಪೇಸ್ (Skyroot Aerospace), ಅಗ್ನಿಕುಲ್ ಕಾಸ್ಮೋಸ್ (Agnikul Cosmos), ಪಿಕ್ಸೆಲ್ (Pixxel), ಧ್ರುವ ಸ್ಪೇಸ್ (Dhruva Space), ಗ್ಯಾಲಕ್ಸ್‌ಐ (GalaxEye), ಬೆಲ್ಲಾಟ್ರಿಕ್ಸ್ ಏರೋಸ್ಪೇಸ್ (Bellatrix Aerospace) ಮತ್ತು ದಿಗಂತರ (Digantara) ಸೇರಿದಂತೆ ರಾಕೆಟ್‌ಗಳು, ಉಪಗ್ರಹಗಳು ಹಾಗೂ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ತೊಡಗಿರುವ 20 ಕಂಪನಿಗಳ ಮುಖ್ಯಸ್ಥರು ಪ್ರಧಾನಿಗಳೊಂದಿಗಿನ ಈ ಸಭೆಯಲ್ಲಿ ಭಾಗವಹಿಸಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




