AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳನ್ನು ಮದುವೆ ಮಾಡಿಕೊಡುವುದಾಗಿ ಹೇಳಿ ಯುವಕನಿಂದ 25 ಲಕ್ಷ ರೂ. ಪಡೆದು ವಂಚಿಸಿದ ಯುವತಿ ಕುಟುಂಬ

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಡೆಮನುಗನಹಳ್ಳಿ ಗ್ರಾಮದ ವೆಂಕಟೇಶ್​ ಮತ್ತು ಲಕ್ಷ್ಮಿ ದಂಪತಿ, ನಮ್ಮ ಮಗಳು ಸಿಂಚನಳನ್ನು ನಿಮ್ಮ ಮಗ ಅಶೋಕನಿಗೆ ಮದುವೆ ಮಾಡಿಕೊಡುತ್ತೇವೆ ಎಂದು ಯುವಕನ ಮನೆಗೆ ಬಂದಿದ್ದಾರೆ. ಇದಕ್ಕೆ ಅಶೋಕ್​ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದು, ಮದುವೆ ಮಾತುಕಥೆಯೂ ಆಗಿದೆ. ಇದಾದ ಬಳಿಕ ಯುವತಿ ಕುಟುಂಬಸ್ಥರು ವ್ಯವಸಾಯದಲ್ಲಿ ಲಾಸ್​ ಆಗಿದೆ, ನಮಗೆ ಹಣದ ಸಹಾಯ ಮಾಡುವಂತೆ ಅಶೋಕ್​​ಗೆ ಹೇಳಿದ್ದಾರೆ. ಮುಂದೇನಾಯ್ತು? ಈ ಸ್ಟೋರಿ ಓದಿ

ಮಗಳನ್ನು ಮದುವೆ ಮಾಡಿಕೊಡುವುದಾಗಿ ಹೇಳಿ ಯುವಕನಿಂದ 25 ಲಕ್ಷ ರೂ. ಪಡೆದು ವಂಚಿಸಿದ ಯುವತಿ ಕುಟುಂಬ
ಸಿಂಚನ, ಅಶೋಕ್​
ದಿಲೀಪ್​, ಚೌಡಹಳ್ಳಿ
| Edited By: ವಿವೇಕ ಬಿರಾದಾರ|

Updated on:Feb 02, 2024 | 8:41 AM

Share

ಮೈಸೂರು, ಫೆಬ್ರವರಿ 02: ಮಗಳನ್ನು ಮದುವೆ (Marriage) ಮಾಡಿಕೊಡುವುದಾಗಿ ಆಸೆ ತೋರಿಸಿ, ಯುವಕನಿಂದ ಬರೋಬ್ಬರಿ 25 ಲಕ್ಷ ರೂ. ಹಣವನ್ನು ಪಡೆದು ಯುವತಿ ಕುಟುಂಬಸ್ಥರು ವಂಚಿಸಿರುವ (Fraud) ಘಟನೆ ಹುಣಸೂರು (Hunsur) ತಾಲೂಕಿನ ಕಡೆಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕುಟುಂಬಸ್ಥರು ಇತ್ತ ಕನ್ಯೆ ಕೊಡಲಿಲ್ಲ, ಸಾಲದ ರೂಪದಲ್ಲಿ ಕೊಟ್ಟ ಹಣವನ್ನು ಕೊಡದೆ ಮೋಸ ಮಾಡಿದ್ದಾರೆ ಎಂದು ಯುವಕ ದೂರು ದಾಖಲಿಸಿದ್ದು, ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾನೆ. ಅಶೋಕ್ ಹಣ ಕಳೆದುಕೊಂಡ ಯುವಕ. ಯುವತಿ ತಂದೆ ವೆಂಕಟೇಶ್ ಮತ್ತು ತಾಯಿ ಲಕ್ಷ್ಮಿ. ಮಗಳು ಸಿಂಚನ ಮೋಸ ಮಾಡಿದ್ದಾರೆ ಎಂದು ಯುವಕ ದೂರು ದಾಖಲಿಸಿದ್ದಾನೆ.

ಯುವಕ ಅಶೋಕ್​ ಮತ್ತು ಆತನ ತಂದೆ-ತಾಯಿ ಹುಣಸೂರು ತಾಲೂಕಿನ, ಕಡೆಮನುಗನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದಾರೆ. ಅಶೋಕ್​ ಬಿಸ್‌ನೆಸ್ ಕರೆಸ್ಪಾಂಡಿಂಗ್ಸ್ ಮತ್ತು ವ್ಯವಸಾಯ ಮಾಡಿಕೊಂಡಿದ್ದಾನೆ. ಇದೇ ಗ್ರಾಮದ ವೆಂಕಟೇಶ್ ಮತ್ತು ಅವರ ಪತ್ನಿ ಲಕ್ಷ್ಮಿಯವರು ತಮ್ಮ ಮಗಳಾದ ಸಿಂಚನ ಅವರನ್ನು ಮದುವೆಯಾಗುವಂತೆ 2022ರ ಜನವರಿ ತಿಂಗಳಿನಲ್ಲಿ ಅಶೋಕ್​ ಅವರ ಮನೆಗೆ ಹೋಗಿದ್ದರು. ಇದಕ್ಕೆ ಅಶೋಕ್​ ಹಾಗೂ ಆತನ ತಂದೆ-ತಾಯಿ ಒಪ್ಪಿದ್ದರು.

ಆದರೆ ಸಿಂಚನ ತಾನು ಇನ್ನು ಒಂದು ವರ್ಷ ವಿದ್ಯಾಭ್ಯಾಸ ಮಾಡಬೇಕು, ಓದು ಮುಗಿದು ಮೇಲೆ ಮದುವೆಯಾಗೋಣ ಎಂದು ಹೇಳಿದ್ದಾರೆ. ಇದಕ್ಕೆ ಅಶೋಕ್​ ಹಾಗೂ ಕುಟುಂಬಸ್ಥರು ಒಪ್ಪಿದ್ದಾರೆ. ಬಳಿಕ ಅಶೋಕ್​ ಮತ್ತು ಸಿಂಚನ ಅವರ ವಿವಾಹದ ಮಾತುಕಥೆ ಇಬ್ಬರ ಮನೆಯವರು ಸೇರಿ ನೆರವೇರಿಸಿದ್ದಾರೆ. ಬಳಿಕ ಅಶೋಕ್​ ಮತ್ತು ಸಿಂಚನ ಪ್ರತಿ ದಿನ ದೂರವಾಣಿ ಮೂಲಕ ಮಾತನಾಡಲು ಆರಂಭಿಸಿದ್ದಾರೆ. ಸಿಂಚನ ತಮ್ಮ ಮನೆಯ ಎಲ್ಲಾ ವಿಷಯಗಳನ್ನು ಹಾಗೂ ತಮ್ಮ ಮನೆಯ ಹಣಕಾಸಿನ ತೊಂದರೆಗಳನ್ನು ಅಶೋಕ್​ ಬಳಿ ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ: ಬೆಂಗಳೂರು: ವರ್ಕ್ ಫ್ರಂ ಹೋಂ ಕೆಲಸ ನೀಡೋದಾಗಿ ಸಾವಿರಾರು ಜನರನ್ನು ನಂಬಿಸಿ 158 ಕೋಟಿ ವಂಚನೆ ಮಾಡಿದ್ದ ದೊಡ್ಡ ಗ್ಯಾಂಗ್ ಅರೆಸ್ಟ್

ಅಲ್ಲದೆ ಸಿಂಚನ ಅವರ ತಂದೆ-ತಾಯಿಗಳು ಸಹ ಅಶೋಕ್​ಗೆ ಕರೆ ಮಾಡಿ ತಮಗೆ ಶುಂಠಿ ಬೆಳೆಯ ಬೇಸಾಯಕ್ಕಾಗಿ ಸುಮಾರು 15,00,000 ರೂ. ವರೆಗೆ ಖರ್ಚಾಗಿದ್ದು ಅಲ್ಲದೆ ಸುಮಾರು 8 ಎಕರೆ ಜಮೀನಿನಲ್ಲಿ ಮುಸಕಿನ ಜೋಳ ಮತ್ತು ಅಡಿಕೆ ಬೆಳೆಯ ಬೇಸಾಯಕ್ಕಾಗಿ ಗ್ರಾಮದ ಹಾಗೂ ಕೆಲವು ಸ್ನೇಹಿತರು ಹಾಗೂ ಸಂಭಂದಿಕರಿಂದ ಸಾಲ ಮಾಡಿ ಶುಂಠಿ ಬೆಳೆಯ ವ್ಯವಸಾಯ ಮಾಡಿದ್ದೇನೆ. ಆದರೆ ಶುಂಠಿ ಬೆಳೆಗೆ ರೋಗ ಉಂಟಾಗಿ ಬೆಳೆಯೂ ಸರಿಯಾಗಿ ಬಾರದೆ, ಶುಂಠಿಗೆ ಬೆಲೆಯು ಸರಿಯಾಗಿ ಸಿಗದೆ ತುಂಬಾ ಕಡಿಮೆ ಬೆಲೆಗೆ ಮಾರಾಟ ಮಾಡಿ ಸುಮಾರು 12,00,000 ಲಕ್ಷ ರೂ. ನಷ್ಟವಾಗಿದೆ. ಹೀಗಾಗಿ ತಮಗೆ ಹಣಕಾಸಿನ ನೆರವನ್ನು ನೀಡಿ, ಮದುವೆಯ ದಿನಾಂಕದೊಳಗಾಗಿ ತಾವು ಯಾವುದಾದರು ಜಮೀನನ್ನು ಮಾರಾಟ ಮಾಡಿ ಹಣವನ್ನು ವಾಪಸ್ಸು ಮಾಡುತ್ತೇವೆಂದು ಅಶೋಕ್​​ಗೆ ಹೇಳಿದ್ದಾರೆ.

ಬಳಿಕ ಅಶೋಕ್​, ವೆಂಕಟೇಶ್​ ಅವರಿಗೆ 15,00,000 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಮತ್ತು ಲಕ್ಷ್ಮಿ ಅವರಿಗೆ 8.00,000 ಲಕ್ಷ ರೂಪಾಯಿಗೂ ಅಧಿಕ ಹಣ ನೀಡಿದ್ದಾರೆ. ಅಲ್ಲದೆ ಸಿಂಚನ ಅವರಿಗೂ ಅಶೋಕ್​ 2,00,000 ಲಕ್ಷ ರೂಪಾಯಿಗೂ ಅಧಿಕ ಹಣ ನೀಡಿದ್ದಾರೆ. ಒಟ್ಟಾರೆಯಾಗಿ ಮೂವರು ಸುಮಾರು 25,00,000 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ನೀಡಿದ್ದಾರೆ. ಆದರೆ ಮೂವರು ಹಣ ನೀಡದೆ ನಂಬಿಸಿ ಮೋಸ ಮಾಡಿದ್ದಾರೆ ಎಂದು ಅಶೋಕ್ ಹುಣಸೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ​ ದೂರು ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:39 am, Fri, 2 February 24

Follow Us
Dileep CP
Dileep CP

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಅದನ್ನು ಹೊರತು ಪಡಿಸಿದರೆ ಒಂದಷ್ಟು ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!