AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲು ನಿಲ್ದಾಣದ ಟಾಯ್ಲೆಟ್ ಹೊರಗೆ ಹಸುಗೂಸನ್ನು ಎಸೆದು ಹೋದ ತಾಯಿ

ಉತ್ತರ ಪ್ರದೇಶದ ಆಗ್ರಾದಲ್ಲಿ ಆಗ ತಾನೇ ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಕ್ಯಾಂಟ್ ರೈಲು ನಿಲ್ದಾಣದಲ್ಲಿ ಶೌಚಾಲಯದ ಹೊರಗೆ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದಾಳೆ. ಆ ಮಗುವನ್ನು ಮಹಿಳಾ ಪೊಲೀಸರು ತೆಗೆದುಕೊಂಡು ಹೋಗಿ ಆರೈಕೆ ಮಾಡಿದ್ದಾರೆ. ನಿರೀಕ್ಷಣಾ ಕೊಠಡಿಯಲ್ಲಿ ನೆಲದ ಮೇಲೆ ಬಿದ್ದಿದ್ದ ಮಗುವಿನ ಹೊಕ್ಕುಳಬಳ್ಳಿ ಇನ್ನೂ ಹಾಗೇ ಇದ್ದ ಕಾರಣ ಮಗು ಆಗ ತಾನೇ ಜನಿಸಿದೆ ಎಂದು ಗೊತ್ತಾಗಿದೆ. ಮಗುವಿನ ತಾಯಿ ನವಜಾತ ಶಿಶುವನ್ನು ನಿಲ್ದಾಣದಲ್ಲಿ ಮಗುವನ್ನು ನೆಲದ ಮೇಲೆ ಬಿಟ್ಟು ನಾಪತ್ತೆಯಾಗಿದ್ದಾಳೆ.

ರೈಲು ನಿಲ್ದಾಣದ ಟಾಯ್ಲೆಟ್ ಹೊರಗೆ ಹಸುಗೂಸನ್ನು ಎಸೆದು ಹೋದ ತಾಯಿ
ರೈಲು ನಿಲ್ದಾಣದ ಟಾಯ್ಲೆಟ್ ಹೊರಗೆ ಹಸುಗೂಸನ್ನು ಎಸೆದು ಹೋದ ತಾಯಿ
Follow us
ಸುಷ್ಮಾ ಚಕ್ರೆ
|

Updated on:Dec 02, 2024 | 10:44 PM

ಆಗ್ರಾ: ಉತ್ತರ ಪ್ರದೇಶದ ಆಗ್ರಾ ಕ್ಯಾಂಟ್ ರೈಲು ನಿಲ್ದಾಣದಲ್ಲಿ ಇಂದು ನವಜಾತ ಶಿಶುವನ್ನು ರೈಲ್ವೆ ನಿಲ್ದಾಣದ ಟಾಯ್ಲೆಟ್ ಹೊರಗೆ ಬಿಟ್ಟು ಹೋದ ಅಮಾನವೀಯ ಘಟನೆ ಪತ್ತೆಯಾಗಿದೆ. ನಿರೀಕ್ಷಣಾ ಕೊಠಡಿಯಲ್ಲಿ ನೆಲದ ಮೇಲೆ ಬಿದ್ದಿದ್ದ ಮಗುವನ್ನು ಜನರು ಕಂಡು ಹೊಕ್ಕುಳಬಳ್ಳಿ ಇನ್ನೂ ಹಾಗೇ ಇದ್ದ ಕಾರಣ ಮಗು ಕೆಲವೇ ಕ್ಷಣಗಳ ಹಿಂದೆ ಜನಿಸಿದೆ ಎಂದು ಪತ್ತೆಹಚ್ಚಿದ್ದಾರೆ. ಮಗುವಿನ ತಾಯಿ ನವಜಾತ ಶಿಶುವನ್ನು ನಿಲ್ದಾಣದಲ್ಲಿ ಮಗುವನ್ನು ನೆಲದ ಮೇಲೆ ಬಿಟ್ಟು ನಾಪತ್ತೆಯಾಗಿದ್ದಾಳೆ.

ಮಗುವಿನ ಅಳುವಿನ ಶಬ್ದ ಕೇಳಿ ರೈಲ್ವೇ ನಿಲ್ದಾಣದಲ್ಲಿದ್ದ ಜನರು ಆಶ್ಚರ್ಯಚಕಿತರಾದರು. ಅವರು ಮಗುವನ್ನು ಹುಡುಕಲು ಪ್ರಾರಂಭಿಸಿದರು. ಆದರೆ ರೈಲು ನಿಲ್ದಾಣದ ಟಾಯ್ಲೆಟ್ ಹೊರಗೆ ಮಗು ಮಲಗಿರುವುದನ್ನು ನೋಡಿ ಅವರು ಆಘಾತಕ್ಕೊಳಗಾದರು. ನಂತರ ಮಹಿಳಾ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಗುವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಇದನ್ನೂ ಓದಿ: ರಸ್ತೆಯಲ್ಲಿ ಆಟವಾಡುತ್ತಿದ್ದಾಗ ಟ್ರಕ್ ಅಡಿ ಸಿಲುಕಿ ಮಗು ಸಾವು; ಶಾಕಿಂಗ್ ವಿಡಿಯೋ ವೈರಲ್

ಅವರು ಮಗುವನ್ನು ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು, ಅಲ್ಲಿ ಶಿಶುವಿನ ಹೊಕ್ಕುಳ ಬಳ್ಳಿಯನ್ನು ಕತ್ತರಿಸಲಾಯಿತು. ಮಗುವನ್ನು ಆಸ್ಪತ್ರೆಯ ಐಸಿಯು ವಾರ್ಡ್​ಗೆ ದಾಖಲಿಸಲಾಗಿದ್ದು, ನವಜಾತ ಶಿಶು ಆರೋಗ್ಯವಾಗಿದೆ.

ಭಾನುವಾರ ರಾತ್ರಿ ಅಪರಿಚಿತ ಮಹಿಳೆ ನಿರೀಕ್ಷಣಾ ಕೊಠಡಿಯ ಶೌಚಾಲಯದ ಹೊರಗೆ ಮಗುವಿಗೆ ಜನ್ಮ ನೀಡಿದ ಘಟನೆ ಸಂಭವಿಸಿದೆ ಎಂದು ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನವಜಾತ ಶಿಶುವಿನ ತಾಯಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗಳು ಮಗುವನ್ನು ತಮ್ಮ ಆರೈಕೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಮಗುವಾದ ನಂತರವೂ ಬಂಜೆತನ ಸಮಸ್ಯೆ ಉಂಟಾಗಬಹುದು, ದ್ವಿತೀಯ ಬಂಜೆತನ ಎಂದರೇನು?

ಜಿಆರ್‌ಪಿ ಮಹಿಳಾ ಪೊಲೀಸ್ ಅಧಿಕಾರಿಗಳು ಮಗುವನ್ನು ತಮ್ಮ ತೋಳುಗಳಲ್ಲಿ ಹಿಡಿದುಕೊಂಡು ನವಜಾತ ಶಿಶುವನ್ನು ತಕ್ಷಣದ ವೈದ್ಯಕೀಯ ಸಹಾಯಕ್ಕಾಗಿ ಆಸ್ಪತ್ರೆಗೆ ಕೊಂಡೊಯ್ಯುತ್ತಿರುವ ವೀಡಿಯೊ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ರೈಲ್ವೇ ನಿಲ್ದಾಣದಲ್ಲಿ ನೆರೆದಿದ್ದ ಜನರು ಮಗುವಿನ ಆರೈಕೆಯಲ್ಲಿ ಆಸಕ್ತಿ ತೋರಿ ಮಗುವನ್ನು ತಮಗೆ ಒಪ್ಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಆದರೆ, ಆ ಮಗುವನ್ನು ಯಾರಿಗೂ ಕೊಡಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:19 pm, Mon, 2 December 24