KCET 2022 Revised Result: CET ಪರೀಕ್ಷೆಯ ಪರಿಷ್ಕೃತ ರ‍್ಯಾಂಕ್ ಪಟ್ಟಿ ಪ್ರಕಟ, ಪಟ್ಟಿಯನ್ವಯ UGCET-2022ರ ಸೀಟು ಹಂಚಿಕೆ: ಸಚಿವ ಡಾ. ಅಶ್ವಥ್ ನಾರಾಯಣ
KEA: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರಿಷ್ಕೃತ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಶ್ರೇಯಾಂಕಗಳನ್ನು ಇಂದು (ಅಕ್ಟೋಬರ್ 1 ರಂದು) ಪ್ರಕಟಿಸಿದೆ. KCET 2022 ಪರಿಷ್ಕೃತ ಫಲತಾಂಶವನ್ನು ಚೆಕ್ ಮಾಡಲು ಅಭ್ಯರ್ಥಿಗಳು karresults.nic.in ಗೆ ಭೇಟಿ ನೀಡಬಹುದು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರಿಷ್ಕೃತ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಶ್ರೇಯಾಂಕಗಳನ್ನು ಇಂದು (ಅಕ್ಟೋಬರ್ 1 ರಂದು) ಪ್ರಕಟಿಸಿದೆ. KCET 2022 ಪರಿಷ್ಕೃತ ಫಲತಾಂಶವನ್ನು ಚೆಕ್ ಮಾಡಲು ಅಭ್ಯರ್ಥಿಗಳು karresults.nic.in ಗೆ ಭೇಟಿ ನೀಡಬಹುದು. ಇಲ್ಲಿ ಕರ್ನಾಟಕ UGCET ನೋಂದಣಿ ಸಂಖ್ಯೆಗಳನ್ನು ಮತ್ತು ಹೆಸರುಗಳ ಮೊದಲ ನಾಲ್ಕು ಅಕ್ಷರಗಳನ್ನು ಬಳಸಬೇಕಾಗುತ್ತದೆ.
2020-21ರಲ್ಲಿ ಯುಜಿಸಿಇಟಿ ಶ್ರೇಯಾಂಕವನ್ನು ಸಿದ್ಧಪಡಿಸುವಾಗ 2020-21 ರಲ್ಲಿ ಪ್ರಿ-ಯೂನಿವರ್ಸಿಟಿ ಕೋರ್ಸ್‌ಗೆ (ಪಿಯುಸಿ) ಅರ್ಹತೆ ಪಡೆದ ಅನೇಕ ಕೆಸಿಇಟಿ ಪರೀಕ್ಷೆ ಪುನರಾವರ್ತಿತರು ಮಾಡಿದ ಅಂಕವನ್ನು ಅನುಸರಿಸಿ ಎಂದು ಕರ್ನಾಟಕ ಹೈಕೋರ್ಟ್ ಕೆಇಎಗೆ ಸೂಚಿಸಿದ ಸೂತ್ರವನ್ನು ಅನುಸರಿಸಲು ಸೂಚಿಸಿತು.
2021ರ ಪಿಯು ಬ್ಯಾಚ್ ವಿದ್ಯಾರ್ಥಿಗಳ ಅರ್ಹತಾ ಅಂಕಗಳನ್ನು ಭೌತಶಾಸ್ತ್ರದಲ್ಲಿ ಸರಾಸರಿ 6 ಅಂಕಗಳು, ರಸಾಯನಶಾಸ್ತ್ರದಲ್ಲಿ 5 ಅಂಕಗಳು ಮತ್ತು ಗಣಿತದಲ್ಲಿ 7 ಅಂಕಗಳನ್ನು ಕಡಿತಗೊಳಿಸಲಾಗಿದೆ, ಇದು ಕೆಸಿಇಟಿ 2022 ರ ಪರಿಷ್ಕೃತ ಶ್ರೇಣಿಗೆ ಬರಲು 100 ಅರ್ಹತಾ ಅಂಕಗಳಿಗೆ ಒಟ್ಟು 6 ಅಂಕಗಳನ್ನು ಕಡಿತಗೊಳಿಸುತ್ತದೆ.
KCET 2022 ಫಲಿತಾಂಶ ಹೇಗೆ ಪರಿಶೀಲಿಸುವುದು?
1. ಅಧಿಕೃತ ವೆಬ್‌ಸೈಟ್‌ಗೆ ಹೋಗಿ – karresults.nic.in ಗೊತ್ತುಪಡಿಸಿದ KCET ಫಲಿತಾಂಶ 2022 ಲಿಂಕ್ ಅನ್ನು ಕ್ಲಿಕ್ ಮಾಡಿ.
2. ಕರ್ನಾಟಕ UGCET ನೋಂದಣಿ ಸಂಖ್ಯೆಗಳು ಮತ್ತು ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ಒಳಗೊಂಡಂತೆ ರುಜುವಾತುಗಳನ್ನು ಸೇರಿಸಿ.
3. ಪರಿಷ್ಕೃತ KCET 2022 ಶ್ರೇಣಿಗಳನ್ನು ಸಲ್ಲಿಸಿ ಮತ್ತು ಪ್ರವೇಶಿಸಿ
ಪರಿಷ್ಕೃತ ರ್ಯಾಂಕಿಂಗ್ ಪಟ್ಟಿಯಲ್ಲಿ ಹೆಚ್ಚು ವ್ಯತ್ಯಾಸ ಆಗಿಲ್ಲ
ಪರಿಷ್ಕೃತ ರ್ಯಾಂಕಿಂಗ್ ಪಟ್ಟಿಯಲ್ಲಿ ಹೆಚ್ಚು ವ್ಯತ್ಯಾಸ ಆಗಿಲ್ಲ. 1 ರಿಂದ 500 ರ್ಯಾಂಕಿಂಗ್ ಪಡೆದವರ ಅಂಕ ಹಾಗೇ ಇದೆ, 500 ಮೇಲೆ ಇದ್ದವರ ರ್ಯಾಂಕಿಂಗ್ ನಲ್ಲಿ ಸ್ವಲ್ಪ ಏರುಪೇರಾಗಿದೆ. 7 ಸಾವಿರದಷ್ಟು ರ್ಯಾಂಕಿಂಗ್ ವ್ಯತ್ಯಾಸ ಬರೊಲ್ಲ ಸಾಧ್ಯವಿಲ್ಲ ಕೋರ್ಟ್ ಆದೇಶದನ್ವಯ ಫಾರ್ಮುಲಾ ಬಿ ಪ್ರಕಾರ ಪರಿಷ್ಕೃತ ಪಟ್ಟಿ ಪ್ರಕಟ ತಜ್ಞರು ಕೋರ್ಟ್ ಗೆ ಕೊಟ್ಟ ವರದಿಯ ಪ್ರಕಾರ ಫಲಿತಾಂಶ ನೀಡಲಾಗಿದೆ ಎಂದು ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯ ಹೇಳಿದ್ದಾರೆ.
ಈ ಬಾರೀ ಒಟ್ಟು 2,10,829 ಪರೀಕ್ಷೆ ಬರೆದಿದ್ದರು, ಈ ಪೈಕಿ 1,71,656 ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಅರ್ಹರು, ಇದರಲ್ಲಿ ಸುಮಾರು ಸಿಇಟಿ 24 ರಿಪೀಟರ್ಸ್ ವಿದ್ಯಾರ್ಥಿಗಳಿದ್ದಾರೆ. 500 ರಿಂದ 1.50 ಲಕ್ಷದವರೆಗೆ ರಿಪೀಟರ್ಸ್ ಎಂದು ಹೇಳಿದ್ದಾರೆ. ಮುಂದಿನ ವಾರದಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಟಿವಿ9ಗೆ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯ ಹೇಳಿಕೆ ನೀಡಿದ್ದಾರೆ.
2022ನೇ ಸಾಲಿನ CET ಪರೀಕ್ಷೆಯ ಪರಿಷ್ಕೃತ ರ‍್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯನ್ವಯ UGCET-2022ರ ಸೀಟು ಹಂಚಿಕೆ ಮಾಡಲಾಗುವುದು. 2022ರ ಪೂರಕ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಮೆರಿಟ್ ಪಟ್ಟಿಯನ್ನು ನಂತರದ ದಿನಗಳಲ್ಲಿ ಪ್ರಕಟಿಸಲು ಕ್ರಮವಹಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಟ್ವೀಟ್ ಮಾಡಿದ್ದಾರೆ.
2022ನೇ ಸಾಲಿನ CET ಪರೀಕ್ಷೆಯ ಪರಿಷ್ಕೃತ ರ‍್ಯಾಂಕ್ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಪಟ್ಟಿಯನ್ವಯ UGCET-2022ರ ಸೀಟು ಹಂಚಿಕೆ ಮಾಡಲಾಗುವುದು. 2022ರ ಪೂರಕ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಮೆರಿಟ್ ಪಟ್ಟಿಯನ್ನು ನಂತರದ ದಿನಗಳಲ್ಲಿ ಪ್ರಕಟಿಸಲು ಕ್ರಮವಹಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ: pic.twitter.com/keWCuLyCwu
— Dr. Ashwathnarayan C. N. (@drashwathcn) October 1, 2022
Published On - 3:10 pm, Sat, 1 October 22